ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

Posted By:

ನೀಲಗಿರಿ ಬೆಟ್ಟದ ತಪ್ಪಲಲ್ಲಿ ನಡೆದ ಅಪಘಾತವೊಂದರಲ್ಲಿ ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ ಉರುಳಿದೆ. ಆದರೆ ಅದೃಷ್ಟವಶಾತ್ ಚಾಲಕ ಸೇರಿದಂತೆ ಇತರ ಪ್ರಯಾಣಿಕರು ಅಪಘಾತದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಫೋರ್ಡ್ ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್ ಹಾಗೂ ಅಪಘಾತ

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟೆಸ್ಟಿಂಗ್‌ಗಾಗಿ ಏರ್ಪಡಿಸಿದ್ದ ಮಹೀಂದ್ರ ನೂತನ ಕಾರು ಅಪಘಾತಕ್ಕೀಡಾಗಿತ್ತು. ನಿಮ್ಮ ಮಾಹಿತಿಗಾಗಿ, ದೇಶದ ಎಸ್‌ಯುವಿ ಸೆಗ್ಮೆಂಟ್ ಕೇಂದ್ರಿಕರಿಸಿರುವ ಮಹೀಂದ್ರ ನೂತನ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸಲು ಸನ್ನದ್ಧವಾಗುತ್ತಿದೆ. ಇದರಂತೆ ಪರೀಕ್ಷಾರ್ಥ ಪ್ರಯಾಣ ಆಳವಡಿಸಲಾಗಿತ್ತು. ಸಂಪೂರ್ಣ ಮುಚ್ಚುಮರೆಯಾದ ಕಾರು ಇದೀಗ ಅಪಘಾತಕ್ಕೀಡಾಗಿರುವುದು ಸ್ಥಳೀಯ ನಿವಾಸಿಗಳಲ್ಲಿ ಕುತೂಹಲಕ್ಕೆಡೆಮಾಡಿದೆ.

ಅಲ್ಲದೆ ಆಸಕ್ತ ಕಾರು ಪ್ರೇಮಿಗಳು ಫೋಟೊ ಕ್ಲಿಕ್ಕಿಸುವಲ್ಲಿ ಮಗ್ನವಾಗಿದ್ದರು. ಈ ರೋಚಕ ಫೋಟೊಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ..

To Follow DriveSpark On Facebook, Click The Like Button
ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

ಬಲ್ಲ ಮೂಲಗಳ ಪ್ರಕಾರ ಎಸ್101 ಕೋಡ್ ಹೆಸರು ಪಡೆದುಕೊಂಡಿರುವ ಮಹೀಂದ್ರ ನೂತನ ಕಾಂಪಾಕ್ಟ್ ಎಸ್‌ಯುವಿ ಕಾರು ಸದ್ಯದಲ್ಲೇ ಅನಾವರಣಗೊಳ್ಳಲಿದೆ. ಹಾಗಿರುವಂತೆಯೇ ಟೆಸ್ಟಿಂಗ್ ವೇಳೆ ಅಪಘಾತಕ್ಕೊಳಗಾಗಿದೆ.

ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

ನಾಲ್ಕು ಮೀಟರ್ ಪರಿಧಿಯೊಳಗೆ ಆಗಮನವಾಗಲಿರುವ ಈ ಕಾಂಪಾಕ್ಟ್ ಎಸ್‌ಯುವಿ ತೆರೆಗೆ ವಿನಾಯಿತಿ ಪಡೆದುಕೊಳ್ಳುವುದರೊಂದಿಗೆ ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲು ನೆರವಾಗಲಿದೆ.

ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

ದೇಶದಲ್ಲಿ ಅತಿ ಹೆಚ್ಚು ಎಸ್‌ಯುವಿ ಮಾರಾಟಗೈಯುತ್ತಿರುವ ಮಹೀಂದ್ರದ ನೂತನ ಕಾರು ಐದು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ, ರೆನೊ ಡಸ್ಟರ್ ಮತ್ತು ಫೋರ್ಡ್ ಇಕೊಸ್ಪೋರ್ಟ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರಲಿದೆ.

ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

ಅಷ್ಟೇ ಅಲ್ಲದೆ ದರ ಪರಿಗಣಿಸಿದರೆ ಬಿ ಸೆಗ್ಮೆಂಟ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಹೀಂದ್ರ ಸ್ಥಾನಪಲ್ಲಟಗೊಳಿಸಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ. ಇದು ಆರು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಸಂಚರಿಸುವ ಆಸನ ವ್ಯವಸ್ಥೆಯಿರಲಿದೆ.

ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಮತ್ತು 1.2 ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark