ಮಹೀಂದ್ರ ಕಾರು ಖರೀದಿಗಿದು ಸುವರ್ಣಾವಕಾಶ

Posted By:

ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ಮಾದರಿಗಳಿಗೆ ಭಾರಿ ಆಫರುಗಳ ಸುರಿಮಳೆಗೈದಿದೆ. ಈ ವರ್ಷಾಂತ್ಯದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಮಾರಾಟ ಗುರಿಯಿರಿಸಿಕೊಂಡಿರುವ ಮಹೀಂದ್ರ ತನ್ನೆಲ್ಲ ಪ್ರಮುಖ ಮಾಡೆಲ್‌ಗಳಿಗೆ ಆಫರ್ ಮುಂದಿರಿಸಿದೆ. ಈ ಮೂಲಕ ಮಾರಾಟವನ್ನು ಹುರಿದುಂಬಿಸುವ ಇರಾದೆ ಹೊಂದಿದೆ.

ನೀಲಗಿರಿ ತಪ್ಪಲಲ್ಲಿ ಉರುಳಿದ ಮಹೀಂದ್ರ ಎಸ್‌ಯುವಿ

ಮಹೀಂದ್ರದಿಂದ ಲಭ್ಯವಿರುವ ಈ 'Wish Yourself A Happy New Year' ಎಕ್ಸ್‌ಕ್ಲೂಸಿವ್ ಆಫರ್ 2013 ಡಿಸೆಂಬರ್ 4ರಿಂದಲೇ ಆರಂಭಗೊಂಡಿದ್ದು, 28ರ ವರೆಗೆ ಮುಂದುವರಿಯಲಿದೆ. ಈ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿರುವ ಮಹೀಂದ್ರ, 2014 ಜನವರಿ 1ರಿಂದ ದರ ಏರಿಕೆ ನೀತಿಯು ಜಾರಿಯಲ್ಲಿರುವುದರಿಂದ ಗ್ರಾಹಕರು ಆದಷ್ಟು ಬೇಗನೇ ಈ ಆಫರುಗಳ ಲಾಭ ಪಡೆಯಲು ವಿನಂತಿಸಿಕೊಳ್ಳಲಾಗಿದೆ. ಅಷ್ಟಕ್ಕೂ ಮಹೀಂದ್ರದ ಯಾವೆಲ್ಲ ಮಾದರಿಗಳಿಗೆ ಎಷ್ಟೆಷ್ಟು ಆಫರುಗಳಿವೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಮಹೀಂದ್ರ ವೆರಿಟೊ

ಮಹೀಂದ್ರ ವೆರಿಟೊ

ತಮ್ಮ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವ ಬಯಸುವ ಗ್ರಾಹಕರು ಈಗಾಗಲೇ ಮಹೀಂದ್ರ ವೆರಿಟೊ ತಮ್ಮದಾಗಿಸಿಕೊಳ್ಳಿ. ಪ್ರಸ್ತುತ ವೆರಿಟೊ ಖರೀದಿಯಲ್ಲಿ ರು. 55,000 ವರೆಗೆ ಲಾಭ ಪಡೆಯಬಹುದಾಗಿದೆ.

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಇನ್ನು ನೀವು ಬಯಸುವ ರೀತಿಯಲ್ಲಿ ಹೊಸ ವರ್ಷ ಆಚರಿಸಿಕೊಳ್ಳಲು ಮಹೀಂದ್ರ, ತನ್ನ ವೆರಿಟೊ ವೈಬ್ ಖರೀದಿಯಲ್ಲಿ ರು. 53000 ವರೆಗೆ ಉಳಿತಾಯ ಮಾಡಬಹುದಾಗಿದೆ.

ಮಹೀಂದ್ರ ಕ್ವಾಂಟೊ

ಮಹೀಂದ್ರ ಕ್ವಾಂಟೊ

ಅದೇ ಹೊತ್ತಿಗೆ ಮಹೀಂದ್ರ ಕ್ವಾಂಟೊ ಖರೀದಿಯಲ್ಲಿ 56,000 ರುಪಾಯಿ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಮಹೀಂದ್ರ ಎಕ್ಸ್‌‍ಯುವಿ500

ಮಹೀಂದ್ರ ಎಕ್ಸ್‌‍ಯುವಿ500

ಎಸ್‌ಯುವಿಗಳ ರಾಜ ಮಹೀಂದ್ರ ತನ್ನ ಜನಪ್ರಿಯ ಎಕ್ಸ್‌ಯುವಿ500 ಖರೀದಿ ವೇಳೆಯೂ ಭಾರಿ ಆಫರುಗಳನ್ನು ಮುಂದಿರಿಸಿದೆ. ಕಂಪನಿಯ ಪ್ರಕಾರ ಈ ಸ್ಟೈಲಿಷ್ ಎಸ್‌ಯುವಿ ಖರೀದಿ ವೇಳೆ 70,000 ರುಪಾಯಿ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಮಹೀಂದ್ರ ಕ್ಸೈಲೋ

ಮಹೀಂದ್ರ ಕ್ಸೈಲೋ

ಇನ್ನು ಅಚ್ಚರಿಯೆಂಬಂತೆ ತನ್ನ ಪ್ಲಾಪ್ ಮಾಡೆಲ್ ಮಹೀಂದ್ರ ಕ್ಸೈಲೋ ಖರೀದಿ ವೇಳೆ ಮಹೀಂದ್ರ 78000 ರುಪಾಯಿ ವರೆಗೆ ಪ್ರಯೋಜನ ಆಫರ್ ನೀಡುತ್ತಿದೆ.

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

ಅದೇ ರೀತಿ ದೇಶದ ಫೇಮಸ್ ಎಂಟ್ರಿ ಲೆವೆಲ್ ಎಸ್‌ಯುವಿ ಸ್ಕಾರ್ಪಿಯೊ ಖರೀದಿಯಲ್ಲಿ ರು. 55000 ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಮಹೀಂದ್ರ ಬೊಲೆರೊ

ಮಹೀಂದ್ರ ಬೊಲೆರೊ

ಕೊನೆಯದಾಗಿ ಮಹೀಂದ್ರ ಬೊಲೆರೊ ಖರೀದಿಯಲ್ಲೂ ರು. 30,000 ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಈ ಎಲ್ಲ ಮಹೀಂದ್ರ ಆವೃತ್ತಿಗಳಲ್ಲಿ ನಿಮ್ಮ ನೆಚ್ಚಿನ ಮಾಡೆಲ್ ಆಯ್ಕೆ ಮಾಡಿ ಹೊಸ ವರ್ಷವನ್ನು ನೀವು ಬಯಸಿದ ರೀತಿಯಲ್ಲಿ ಆಚರಿಸಿಕೊಳ್ಳಿರಿ...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark