ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

Written By:

ಮಾರುತಿ ಸುಜುಕಿ ಎ-ಸ್ಟಾರ್ ಹಾಗೂ ಎಸ್ಟಿಲೊ ಆವೃತ್ತಿಗಳಿಗೆ ಬದಲಿ ಕಾರೆಂದೇ ಬಿಂಬಿಸಲ್ಪಟ್ಟಿರುವ ಬಹುನಿರೀಕ್ಷಿತ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

2014 ಆಟೋ ಎಕ್ಸ್ ಪೋ

ಪ್ರಸಕ್ತ ಸಾಗುತ್ತಿರುವ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಮಾರುತಿ ಸೆಲೆರಿಯೊ ದೇಶಿಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದರ ಪ್ರಾರಂಭಿಕ ದರ 3.90 ಲಕ್ಷ ರು.ಗಳಾಗಿವೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ನೂತನ ಮಾರುತಿ ಸೆಲೆರಿಯೊ ಒಟ್ಟು ಆರು ವೆರಿಯಂಟ್‌ಗಳಲ್ಲಿ ಲಭ್ಯವಾಗಿರಲಿದೆ. ಈ ಪೈಕಿ ನಾಲ್ಕು ಆವೃತ್ತಿಗಳು ಮ್ಯಾನುವಲ್ ಹಾಗೂ ಉಳಿದರೆಡು ಆಟೋಮ್ಯಾಟಿಕ್ (ಎಎಂಟಿ) ಇಝಡ್ ಡ್ರೈವ್ ವ್ಯವಸ್ಥೆ ಹೊಂದಿರಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಇಝಡ್ ಡ್ರೈವ್ ವೆರಿಯಂಟ್‌ಗಳು ಎಲ್‌ಎಕ್ಸ್‌ಐ ಮತ್ತು ವಿಎಕ್ಸ್‌ಐ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿರಲಿದೆ. ಇದರ ದರ 4.29 ಲಕ್ಷ ರು.ಗಳಿಂದ ಆರಂಭವಾಗಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಇತರ ಮಾರುತಿ ಕಾರುಗಳಂತೆಯೇ ಸೆಲೆರಿಯೊ ಸಹ ಎಲ್‌ಎಕ್ಸ್‌ಐ, ವಿಎಕ್ಸ್‌ಐ, ಝಡ್‌ಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಆಪ್ಷನ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಇದು ಪ್ರಮುಖವಾಗಿಯೂ ಮಾರಾಟ ಸ್ಥಗಿತಗೊಂಡಿರುವ ಎ-ಸ್ಟಾರ್ ಹಾಗೂ ಎಸ್ಟಿಲೊ ಆವೃತ್ತಿಗಳಿಗೆ ಬದಲಿ ಕಾರಾಗಿರಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ನಿಮಗೆ ತಿಳಿದಿರುವಂತೆಯೇ ಮಾರುತಿ ಸೆಲೆರಿಯೊ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭವಗೊಂಡಿದ್ದು, ವಿತರಣೆ ಕಾರ್ಯವು 2014 ಮೇ ತಿಂಗಳಿಂದ ಪ್ರಾರಂಭವಾಗಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಪ್ರಸ್ತುತ ಕಾರು 1.0 ಲೀಟರ್, 3 ಸಿಲಿಂಡರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಗರಿಷ್ಠ 67 ಬಿಎಚ್‌ಪಿ ಉತ್ಪಾದಿಸುವ (90 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮುಖಾಂತರ ಪವರ್ ರವಾನೆಯಾಗಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಸೆಲೆರಿಯೊದ ಎಲ್‌ಎಕ್ಸ್‌ಐ ವೆರಿಯಂಟ್ ಪವರ್ ಸ್ಟೀರಿಂಗ್ ಸೌಲಭ್ಯ ಪಡೆದಲಿದೆ. ಅಷ್ಟೇ ಅಲ್ಲದೆ ಎಸಿ ಸೌಲಭ್ಯವೂ ಇರಲಿದೆ. ಇನ್ನೊಂದೆಡೆ ವಿಎಕ್ಸ್‌ಐ ಪವರ್ ವಿಂಡೋ, ಫ್ರಂಟ್ ಗ್ರಿಲ್, ಕ್ರೋಮ್ ಲೈನಿಂಗ್ ಜತೆಗೆ ಔಟ್‌ಸೈಡ್ ರಿಯರ್ ವ್ಯೂ ಮಿರರ್ ಪಡೆಯಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಇನ್ನುಳಿದಂತೆ ಝಡ್‌ಎಕ್ಸ್‌ಐ ವೆರಿಯಂಟ್ ಫಾಗ್ ಲ್ಯಾಂಗ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸೌಲಭ್ಯವನ್ನು ಪಡೆಯಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ನೂತನ ಸೆಲೆರಿಯೊ ದೇಶದ ಮೊದಲ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ತಂತ್ರಗಾರಿಕೆ ಹೊಂದಿರುವ ಕಾರಾಗಿರಲಿದೆ. ಇದು ಇಝಡ್ ಡ್ರೈವ್ ಎಂದು ಹೆಸರಿಸಿಕೊಳ್ಳಲಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಇದರ ಒಟ್ಟು ಭಾರ 830 ಕೆ.ಜಿ.ಗಳಾಗಿದ್ದು, 3600ಎಂಎಂ ಉದ್ದ, 1600 ಎಂಎಂ ಅಗಲ ಮತ್ತು 2425 ಎಂಎಂ ವೀಲ್ ಬೇಸ್ ಹೊಂದಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್; ಬೆಲೆ 3.90 ಲಕ್ಷ ರು.

ಅದೇ ರೀತಿ ಸ್ಟೈಲಿಷ್ ಇಂಟಿರಿಯರ್ ಲುಕ್ ಕೂಡಾ ಸೆಲೆರಿಯೊದ ವೈಶಿಷ್ಟ್ಯವಾಗಿರಲಿದೆ.

ದರ ಮಾಹಿತಿ:

ದರ ಮಾಹಿತಿ:

  • ಮಾರುತಿ ಸೆಲೆರಿಯೊ ಎಲ್‌ಎಕ್ಸ್‌ಐ ಮ್ಯಾನುವಲ್ ಟ್ರಾನ್ಸ್‌ಮಿಷನ್ - 3.90 ಲಕ್ಷ ರು.
  • ಮಾರುತಿ ಸೆಲೆರಿಯೊ ವಿಎಕ್ಸ್‌ಐ ಮ್ಯಾನುವಲ್ ಟ್ರಾನ್ಸ್‌ಮಿಷನ್ - 4.20 ಲಕ್ಷ ರು.
  • ಮಾರುತಿ ಸೆಲೆರಿಯೊ ವಿಎಕ್ಸ್‌ಐ ಮ್ಯಾನುವಲ್ ಟ್ರಾನ್ಸ್‌ಮಿಷನ್ - 4.20 ಲಕ್ಷ ರು.
  • ಮಾರುತಿ ಸೆಲೆರಿಯೊ ಝಡ್ಎಕ್ಸ್‌ಐ ಮ್ಯಾನುವಲ್ ಟ್ರಾನ್ಸ್‌ಮಿಷನ್ - 4.50 ಲಕ್ಷ ರು.
  • ಮಾರುತಿ ಸೆಲೆರಿಯೊ ಝಡ್ಎಕ್ಸ್‌ಐ (ಆಪ್ಷನಲ್) ಮ್ಯಾನುವಲ್ ಟ್ರಾನ್ಸ್‌ಮಿಷನ್ - 4.96 ಲಕ್ಷ ರು.
  • ಮಾರುತಿ ಸೆಲೆರಿಯೊ ಎಲ್ಎಕ್ಸ್‌ಐ ಆಟೋ ಮ್ಯಾನುವಲ್ ಟ್ರಾನ್ಸ್‌ಮಿಷನ್ - 4.29 ಲಕ್ಷ ರು.
  • ಮಾರುತಿ ಸೆಲೆರಿಯೊ ವಿಎಕ್ಸ್‌ಐ ಆಟೋ ಮ್ಯಾನುವಲ್ ಟ್ರಾನ್ಸ್‌ಮಿಷನ್ - 4.59 ಲಕ್ಷ ರು.
English summary
Maruti Celerio launched at 2014 Auto Expo
Story first published: Thursday, February 6, 2014, 14:53 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark