ಸೆಲೆರಿಯೊಗೆ ಹೆಚ್ಚಿದ ಬೇಡಿಕೆ; ನಿರ್ಮಾಣ ಸಾಮರ್ಥ್ಯ ದ್ವಿಗುಣ

Written By:

ಮಾರುತಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ದೇಶದ ಅತಿ ದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿರ್ಧರಿಸಿದೆ.

ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಹೊಂದಿರುವ ದೇಶದ ಮೊತ್ತ ಮೊದಲ ಕಾರೆಂಬ ಗೌರವಕ್ಕೆ ಪಾತ್ರವಾಗಿರುವ ಸೆಲೆರಿಯೊ ಆವೃತ್ತಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

To Follow DriveSpark On Facebook, Click The Like Button
ಸೆಲೆರಿಯೊಗೆ ಹೆಚ್ಚಿದ ಬೇಡಿಕೆ; ನಿರ್ಮಾಣ ಸಾಮರ್ಥ್ಯ ದ್ವಿಗುಣ

ದೇಶದ ವಾಹನ ಇತಿಹಾಸದಲ್ಲಿ ಸಾಮಾನ್ಯ ಮ್ಯಾನುವಲ್ ವೆರಿಯಂಟ್‌ಗಿಂತಲೂ ಆಟೋಮ್ಯಾಟಿಕ್ ಆವೃತ್ತಿಗಳಿಗೆ ಅತಿ ಹೆಚ್ಚಿನ ಬೇಡಿಕೆ ದಾಖಲಾಗಿದೆ. ಅಲ್ಲದೆ ಮಾರುತಿ ನಿರೀಕ್ಷೆಗೂ ಮೀರಿ ಜನಪ್ರಿಯತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸೆಲೆರಿಯೊಗೆ ಹೆಚ್ಚಿದ ಬೇಡಿಕೆ; ನಿರ್ಮಾಣ ಸಾಮರ್ಥ್ಯ ದ್ವಿಗುಣ

ಇದರಂತೆ ಈಗಿರುವ 5,000 ಯುನಿಟ್‌ಗಳಿಗೆ ಬದಲಾಗಿ ಮಾಸಿಕವಾಗಿ 10,000 ಯುನಿಟ್ ಉತ್ಪಾದಿಸಲು ಸಂಸ್ಥೆ ನಿರ್ಧರಿಸಿದೆ.

ಸೆಲೆರಿಯೊಗೆ ಹೆಚ್ಚಿದ ಬೇಡಿಕೆ; ನಿರ್ಮಾಣ ಸಾಮರ್ಥ್ಯ ದ್ವಿಗುಣ

ಅಷ್ಟಕ್ಕೂ ನಿರ್ಮಾಣ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ದೇಶದ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿಗೆ ಅಷ್ಟೊಂದು ತಾಕತ್ತಿದೆ. ಅಲ್ಲದೆ ಎಸ್ಟಾರ್ ಉತ್ಪಾದನೆ ಸ್ಥಗಿತವಾಗಿರುವುದರಿಂದ ಇದರ ಪ್ರಯೋಜನವನ್ನು ಪಡೆಯಲಿದೆ.

ಸೆಲೆರಿಯೊಗೆ ಹೆಚ್ಚಿದ ಬೇಡಿಕೆ; ನಿರ್ಮಾಣ ಸಾಮರ್ಥ್ಯ ದ್ವಿಗುಣ

ವರದಿಗಳ ಪ್ರಕಾರ ಹೆಚ್ಚುವರಿ ಬಿಡಿಭಾಗಗಳಿಗಾಗಿ ಥರ್ಡ್ ಪಾರ್ಟಿ ವೆಂಡರ್‌ಗಳ ಮೊರೆ ಹೋಗಬೇಕಾಗುತ್ತದೆ. ಈ ಸಂಬಂಧ ವೆಂಡರ್‌ಗಳು ಸಮ್ಮತಿ ಸೂಚಿಸಿರುವ ಬಗ್ಗೆಯೂ ಮಾಹಿತಿ ಲಭಿಸಿದ್ದು, ಇದು ಮಾರುತಿ ನಿರ್ಮಾಣ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದೆ.

ಸೆಲೆರಿಯೊಗೆ ಹೆಚ್ಚಿದ ಬೇಡಿಕೆ; ನಿರ್ಮಾಣ ಸಾಮರ್ಥ್ಯ ದ್ವಿಗುಣ

ಪ್ರಸ್ತುತ ಕೆಲವು ಶೋ ರೂಂಗಳಲ್ಲಿ ಟಾಪ್ ಎಂಡ್ ಮಾರುತಿ ಸೆಲೆರಿಯೊ ಆಟೋಮ್ಯಾಟಿಕ್ ಕಾರುಗಳ ಕಾಯುವಿಕೆ ಅವಧಿ ಆರು ತಿಂಗಳ ವರೆಗೂ ವಿಸ್ತರಿಸಿದೆ. ಹಾಗಿರುವಾಗ ನಿರ್ಮಾಣ ಸಾಮರ್ಥ್ಯ ದ್ವಿಗುಣಗೊಳಿಸುವುದರಿಂದ ಗ್ರಾಹಕರಿಗೆ ಬಹುಬೇಗನೇ ಕಾರು ವಿತರಿಸಬಹುದಾಗಿದೆ.

English summary
Maruti Celerio, which offer's India's first ever automated manual transmission (AMT), has been in particularly high demand in the country ever since its launch last month.
Story first published: Tuesday, March 25, 2014, 14:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark