ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸದ್ಯದಲ್ಲೇ ಭಾರತಕ್ಕೆ ನೂತನ ವ್ಯಾಗನಾರ್ ಕಾರಿನ ಪರಿಚಯ ಮಾಡಲಿದೆ. ಅಪ್‌ಗ್ರೇಡ್ ವರ್ಷನ್‌ನಲ್ಲಿ ಕಾಣಿಸಿಕೊಳ್ಳಲಿರುವ ನೂತನ ವ್ಯಾಗನಾರ್ ಆಕಾರದಲ್ಲಿ ಈಗಿನ ಆವೃತ್ತಿಗಿಂತ ಸ್ವಲ್ಪ ದೊಡ್ಡದಾಗಿರಲಿದೆ.

ಭಾರತ ಮಾರುಕಟ್ಟೆಯಲ್ಲಿ ವ್ಯಾನನಾರ್ ಸ್ಟಿನ್‌ಗ್ರೇ (stingray) ಎಂದು ಅರಿಯಲ್ಪಡುವ ನೂತನ ಆವೃತ್ತಿಯು ಕಾಸ್ಮೆಟಿಕ್ ಬದಲಾವಣೆ ಜತೆ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಆಗಮಿಸಲಿದೆ.

ನಿಮ್ಮ ಮಾಹಿತಿಗಾಗಿ, 2007ರಲ್ಲೇ ಮಾರುತಿ ವ್ಯಾಗನಾರ್ ಸ್ಟಿನ್‌ಗ್ರೇ ಜಪಾನ್ ಮಾರುಕಟ್ಟೆಗೆ ಪರಿಚಯವಾಗಿತ್ತು. ಇದೀಗ ಮೂರನೇ ಬಾರಿಗೆ ಅಪ್‌ಗ್ರೇಡ್ ವರ್ಷನ್ ಆಗಮನವಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮೂರನೇ ಜನರೇಷನ್ ವ್ಯಾಗನಾರ್ ಅನಾವರಣಗೊಳಿಸಲಾಗಿತ್ತು.

ನೂತನ ಸ್ಪೋರ್ಟಿಯರ್ ವರ್ಷನ್ ವ್ಯಾಗನಾರ್ ಪರಿಷ್ಕೃತ ಗ್ರಿಲ್, ದೊಡ್ಡದಾದ ಏರ್ ಡ್ರಮ್, ನ್ಯೂ (ಪ್ರೊಜೆಕ್ಟರ್) ಹೆಡ್‌ಲೈಟ್ ಡಿಸೈನ್ ಹಾಗೂ ಮರು ವಿನ್ಯಾಸಗೊಳಿಸಲಾದ ಅಲಾಯ್ ವೀಲ್ ಪಡೆದುಕೊಳ್ಳಲಿದೆ.

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ಭಾರತಕ್ಕೆ ಪರಿಚಯವಾಗಲಿರುವ ನೂತನ ವ್ಯಾಗನಾರ್ ಸ್ಟಿನ್‌ಗ್ರೇ ಆವೃತ್ತಿಯಲ್ಲೂ ಮೇಲೆ ಸೂಚಿಸಲಾದ ಎಲ್ಲ ನೂತನ ವೈಶಿಷ್ಟ್ಯಗಳು ಲಭ್ಯವಾಗಲಿದೆ ಎಂದು ಕಂಪನಿಯ ನಿಕಟ ಮೂಲಗಳು ತಿಳಿಸಿವೆ.

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ಜಪಾನ್‌ನಲ್ಲಿ ಪರಿಚಿತವಾಗಿರುವ ವ್ಯಾಗನಾರ್ ಹಾಗೂ ಸ್ಟಿನ್‌ಗ್ರೇ ಕಾರಿಗೆ ದೊಡ್ಡ ಬಂಪರ್‌ಗಳಿರುವುದರಿಂದ ಗ್ರೌಂಡ್ ಕ್ಲಿಯರನ್ಸ್ ಕಡಿಮೆಯಾಗಿದೆ. ಆದರೆ ಭಾರತೀಯ ರಸ್ತೆಯನ್ನು ಪರಿಗಣಿಸಿ ಬಂಪರ್‌ ಮರು ವಿನ್ಯಾಸಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ಇನ್ನು ಜಪಾನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಅದೇ ಸೌಲಭ್ಯಗಳು ದೇಶದ ಮಾರುಕಟ್ಟೆಯಲ್ಲೂ ವ್ಯಾಗನಾರ್ ನೂತನ ಆವೃತ್ತಿಗೆ ಲಭ್ಯವಾಗಲಿದೆ. ಹಾಗಿದ್ದರೂ ಕಾರನ್ನು ಇನ್ನಷ್ಟು ಆಕರ್ಷಣೆಗೊಳಿಸಲು ಮತ್ತಷ್ಟು ಹೆಚ್ಚಿನ ಫೀಚರ್ಸ್ ಆಳವಡಿಸುವ ಸಾಧ್ಯತೆಯಿದೆ.

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ಅಂತೆಯೇ ಎಂಜಿನ್ ಬಗ್ಗೆ ಮಾತನಾಡುವುದಾದರೆ ಹಿಂದಿನ ಆವೃತ್ತಿಗೆ ಸಮಾನವಾದ 1.0 ಲೀಟರ್ ತ್ರಿ ಸಿಲಿಂಡರ್ ಇರಲಿದೆ. ಇದು 90 ಎನ್ಎಂ ಟರ್ಕ್ಯೂನಲ್ಲಿ 67.9 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ಏತನ್ಮಧ್ಯೆ ವ್ಯಾಗನಾರ್ ಸ್ಟಿನ್‌ಗ್ರೇ ಸಿಎನ್‌ಜಿ ಆವೃತ್ತಿಯಲ್ಲೂ ಲಭ್ಯವಾಗುವ ಬಗ್ಗೆ ಮಾಹಿತಿಯಿದೆ.

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ಮಾರುತಿ ಸುಜುಕಿ ಸ್ಟಿನ್‌ಗ್ರೇ, ಸಾಮಾನ್ಯ ವ್ಯಾಗನಾರ್‌ಗಿಂತ 50 ಸಾವಿರದಷ್ಟು ದುಬಾರಿಯಾಗಲಿದೆ.

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

ಇದೀಗ ನಿಮ್ಮ ಅನಿಸಿಕೆ, ಸಲಹೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!
ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!
ನೂತನ ವ್ಯಾಗನಾರ್ ಬರಮಾಡಿಕೊಳ್ಳಲು ಸನ್ನದ್ಧರಾಗಿ!

Most Read Articles

Kannada
English summary
Maruti Suzuki may launch the Wagon R Stingray in the Indian market. we expect that Maruti Suzuki will continue with the 1.0-litre three-cylinder engine that churns out 67.9PS and 90Nm of torque.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X