ಮಾರುತಿಯಿಂದ 1.5 ಲಕ್ಷ ಸ್ವಿಫ್ಟ್ ಡಿಜೈರ್ ಹಿಂಪಡೆತ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಅತಿ ದೊಡ್ಡ ರಿಕಾಲ್‌ವೊಂದರಲ್ಲಿ 1.5 ಲಕ್ಷ ಯುನಿಟ್‌ಗಳಷ್ಟು ಮಾರುತಿ ಸ್ವಿಫ್ಟ್ ಡಿಜೈರ್ ಮಾದರಿಯನ್ನು ಹಿಂಪಡೆಯಲು ನಿರ್ಧರಿಸಿದೆ.

ದೇಶದ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು ಕಳೆದ ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟ ಕಾಯ್ದುಕೊಂಡಿದೆ. ಇನ್ನೊಂದೆಡೆ ಹೋಂಡಾ ಅಮೇಜ್ ಸವಾಲು ಎದುರಾಗಿದ್ದರೂ ಇವೆಲ್ಲವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿತ್ತು.

ಮಾರುತಿಯಿಂದ 1.5 ಲಕ್ಷ ಸ್ವಿಫ್ಟ್ ಡಿಜೈರ್ ವಾಪಾಸ್

2012 ಫೆಬ್ರವರಿ ತಿಂಗಳಲ್ಲಿ ಲಾಂಚ್ ಆಗಿದ್ದ ಹೊಸ ಸ್ವಿಫ್ಟ್ ಡಿಜೈರ್ ದರ 4.85 ಲಕ್ಷ ರು.ಗಳಿಂದ 7.32 ಲಕ್ಷ ರು.ಗಳಿಷ್ಟಿದೆ. ಇದೀಗ 1.5 ಲಕ್ಷ ಯುನಿಟ್‌ಗಳನ್ನು ಹಿಂಪಡೆಯಲಾಗುತ್ತಿದ್ದು, ಇದು ವಾರ್ಷಿಕ ನಿರ್ಮಾಣ ಸಾಮರ್ಥ್ಯಕ್ಕೆ ಸಮಾನವಾಗಿದೆ.

ಮಾರುತಿಯಿಂದ 1.5 ಲಕ್ಷ ಸ್ವಿಫ್ಟ್ ಡಿಜೈರ್ ವಾಪಾಸ್

2013ರಿಂದ 2014ನೇ ಸಾಲಿನಲ್ಲಿ ನಿರ್ಮಿಸಲಾದ ಸ್ವಿಫ್ಟ್ ಡಿಜೈರ್ ಮಾದರಿಗಳನ್ನು ವಾಪಾಸ್ ಪಡೆಯಲಾಗುತ್ತಿದೆ. ಇಂಧನ ಟ್ಯಾಂಕ್‌ಗೆ ಬಂಧಿಸಲ್ಪಟ್ಟಿರುವ ಫ್ಯೂಯಲ್ ನೆಕ್ ಫಿಲ್ಲರ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಈ ಸಾಮೂಹಿಕ ರಿಕಾಲ್ ನಡೆಯುತ್ತಿದೆ. ವಿತರಕರ ಪ್ರಕಾರ ಇದು ಮಾರುತಿ ಶೇಕಡಾ 29.28ರಷ್ಟು ಶೇರನ್ನು ಹೊಂದಿರುವ ಜೆಬಿಎಂನ ಫಟಕವಾಗಿದೆ.

ಮಾರುತಿಯಿಂದ 1.5 ಲಕ್ಷ ಸ್ವಿಫ್ಟ್ ಡಿಜೈರ್ ವಾಪಾಸ್

ವಾಹನೋದ್ಯಮದ ವರದಿಗಳ ಪ್ರಕಾರ ವಿತರಕರಿಗೆ ಈಗಾಗಲೇ ಮಾಹಿತಿ ಮುಟ್ಟಿಸಲಾಗಿದ್ದು, ಬದಲಾವಣೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಮಾರುತಿಯಿಂದ 1.5 ಲಕ್ಷ ಸ್ವಿಫ್ಟ್ ಡಿಜೈರ್ ವಾಪಾಸ್

ಇನ್ನು ಸ್ವಲ್ಪ ಹಿಂದಿನ ವರೆಗೆ ಗಮನ ಹರಿಸಿದಾಗ ಕಳೆದ ವರ್ಷ ನವೆಂಬರ್ ತಿಂಗಳಲ್ಲೂ ಸ್ಟ್ರೀರಿಂಗ್ ಕಾಲಂ ಸಮಸ್ಯೆಯಿಂದಾಗಿ 1492ರಷ್ಟು ಮಾರುತಿ ಡಿಜೈರ್, ಸ್ವಿಫ್ಟ್, ಎರ್ಟಿಗಾ ಹಾಗೂ ಎಸ್ಟಾರ್ ಮಾದರಿಗಳನ್ನು ಹಿಂಪಡೆಯಲಾಗಿತ್ತು. ಈ ಹಿಂದೆ ಮಾರುತಿಯಿಂದ ಉಂಟಾಗಿರುವ ಅತಿ ದೊಡ್ಡ ರಿಕಾಲ್ 2010ನೇ ಇಸವಿಯಲ್ಲಿ ಒಂದು ಲಕ್ಷದಷ್ಟು ಎಸ್ಟಾರ್ ಸಣ್ಣ ಕಾರನ್ನು ಹಿಂಪಡೆಯಲಾಗಿತ್ತು.

ಮಾರುತಿಯಿಂದ 1.5 ಲಕ್ಷ ಸ್ವಿಫ್ಟ್ ಡಿಜೈರ್ ವಾಪಾಸ್

ಅಂದ ಹಾಗೆ ಸ್ವಿಫ್ಟ್ ಡಿಜೈರ್‌ನಲ್ಲಿ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ (87 ಬಿಎಚ್‌ಪಿ, 114 ಎನ್‌ಎಂ ಟಾರ್ಕ್) ಹಾಗೂ 1.3 ಫಿಯೆಟ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್ (75 ಬಿಎಚ್‌ಪಿ, 190 ಎನ್‌ಎಂ ಟಾರ್ಕ್) ಆಳವಡಿಸಲಾಗಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
Maruti Suzuki to Recall 1.5 lakh Swift Dzires
Story first published: Tuesday, April 8, 2014, 16:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark