ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

Written By:

ಮಿನಿ (Mini) ಇಂಡಿಯಾ ಬೆಂಗಳೂರಿನಲ್ಲಿ ನವ್‌ನಿತ್ ಮೋಟಾರ್ಸ್‌ನ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್ ತೆರೆಯುವ ಮೂಲಕ ಭಾರತದಲ್ಲಿ ತನ್ನ ಹಾಜರಿಯನ್ನು ವಿಸ್ತರಿಸಿದೆ. ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ನವ್‌ನಿತ್ ಮೋಟಾರ್ಸ್‌ನಿಂದ ಬೆಂಗಳೂರು ಐಧನೇ ಎಕ್ಸ್‌ಕ್ಲೂಸಿವ್ ಮಿನಿ ಡೀಲರ್‌ಶಿಪ್ ಆಗಿದ್ದು, ಶ್ರೀ ನವ್‌ನಿತ್ ಕಚಾಲಿಯಾ ನವ್‌ನಿತ್ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು.

ಬಿಎಂಡಬ್ಲ್ಯು (BMW) ಗ್ರೂಪ್ ಬುಧವಾರ ಮಿನಿ ಕಂಟ್ರಿಮ್ಯಾನ್‌ನ ಸ್ಥಳೀಯ ಉತ್ಪಾದನೆಗೆ ಬಿಎಂಡಬ್ಲ್ಯು ಚೆನ್ನೈನ ಘಟಕದಲ್ಲಿ ಚಾಲನೆ ನೀಡಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ಮಿನಿ ಕಂಟ್ರಿಮ್ಯಾನ್ ಎರಡು ಡೀಸೆಲ್ ವಿಧಗಳಲ್ಲಿ ಪರಿಚಯಿಸಲಾಗುತ್ತಿದ್ದು, ಪೆಟ್ರೋಲ್ ಮಾದರಿ ಮಿನಿ ಕಂಟ್ರಿಮ್ಯಾನ್ ಒನ್ ಕೂಡಾ ಪರಿಚಯಿಸಲಾಗುತ್ತಿದೆ.

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಪ್ರೆಸಿಡೆಂಟ್ ಶ್ರೀ ಫಿಲಿಫ್ ವೊನ್ ಸಹ್ರ್, ಮಿನಿ ಬಿಡುಗಡೆ ಮಾಡುವ ಮೂಲಕ ಬಿಎಂಡಬ್ಲ್ಯು ಗ್ರೂಪ್ ಪ್ರೀಮಿಯಂ ಸಣ್ಣ ಕಾರು ವಲಯಕ್ಕೆ ಭಾರತದಲ್ಲಿ ಪ್ರವೇಶ ಪಡೆದಿದೆ ಮತ್ತು ಅಂದಿನಿಂದಲೂ ನಿರಂತರವಾಗಿ ಇದು ಅತ್ಯಂತ ಉತ್ಸಾಹದ ಆಟೋಮೋಟಿವ್ ಬ್ರಾಂಡ್ ಆಗಿಸುವಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸಿದೆ. ಮಿನಿ ತನ್ನ ಮನೆಯನ್ನಾಗಿರಿಸಿಕೊಂಡಿರುವ 100ನೇ ದೇಶವಾಗಿ ಮೈಲುಗಲ್ಲು ತಲುಪಿದೆ. ಇಂದು ಮಿನಿ ಪ್ರಯಾಣದಲ್ಲಿ ಭಾರತದಲ್ಲಿ ಸ್ಥಳೀಯ ಉತ್ಪಾದನೆ ಮಾಡುವ ಮೂಲಕ ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನು ಪ್ರಕಟಿಸಲು ನಾವು ಹೆಮ್ಮೆಪಡುತ್ತೇವೆ. ವಿಶ್ವದ ಅತ್ಯಂತ ಬೆಳವಣಿಗೆಯ ಮಾರುಕಟ್ಟೆಯಾದ ಭಾರತದ ಮಿನಿ ಜಾಗತಿಕ ವೇಗ ವೃದ್ಧಿಸುವ ಮಹತ್ತರ ತಾಣ ಎಂದರು.

ಜನವರಿ 2012ರಿಂದ ಮಿನಿ ಭಾರತದಲ್ಲಿ ತನ್ನ ಬೆಳವಣಿಗೆಯನ್ನು ಮುಂದುವರೆಸಿದ್ದು, ಐದು ಎಕ್ಸ್‌ಕ್ಲೂಸಿವ್ ಔಟ್‌ಲೆಟ್‌ಗಳನ್ನು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ನವ್‌ನಿತ್ ಮೋಟಾರ್ಸ್‌ನೊಂದಿಗೆ ಬೆಂಗಳೂರಿನಲ್ಲಿ ಪ್ರಾರಂಭಿಸಿದೆ.

ಮಿನಿ ನಿಜಕ್ಕೂ ಪ್ರಸ್ತುತ ಹಾಗೂ ಭವಿಷ್ಯದ ಕಾರು. ಇದು ಇಂಧನ ಕ್ಷಮತೆ ಮತ್ತು ಪರಿಸರ ಸ್ನೇಹಿ ವಾಹನ ಬಯಸುವವರ ಸೂಕ್ತ ಆಯ್ಕೆಯಾಗಿದ್ದು ಚಾಲನೆ ಕೂಡಾ ಉತ್ಸಾಹಕರವಾಗಿದೆ. ಬೆಂಗಳೂರಿನಲ್ಲಿ ನವ್‌ನಿತ್ ಮೋಟಾರ್ಸ್ ಪ್ರಾರಂಭದಿಂದ ಭಾರತದಲ್ಲಿ ಮಿನಿಗೆ ವೇಗೆ ದೊರೆತಿದೆ. ಮಿನಿ ವಿಶಿಷ್ಟ ಬ್ರಾಂಡ್ ಆಗಿ ಅಭಿವೃದ್ಧಿ ಹೊಂದಿದ್ದು, ಸಂಪ್ರದಾಯ ಮತ್ತು ತಡೆಯಿರದ ಮೋಡಿ ಹೊಂದಿದೆ. ಮಿನಿಯೊಂದಿಗೆ ತನ್ನ ಪರಂಪರೆಯನ್ನು ನಿರ್ಮಿಸುವ ಅದೇ ಸಮಯಕ್ಕೆ ಬ್ರಾಂಡ್ ಅತ್ಯಂತ ಯೌವನಪೂರ್ಣ ಮತ್ತು ಸಮಕಾಲೀನವಾಗಿದ್ದು ಗ್ರಾಹಕರು ಕೂಡಲೇ ಉತ್ಸಾಹಿ, ವಿಶಿಷ್ಟ ಮಿನಿ ಸಮುದಾಯಕ್ಕೆ ಸೇರಿಕೊಳ್ಳುತ್ತಾರೆ ಎಂದು ಶ್ರೀ ಫಿಲಿಪ್ ವೊನ್ ಸಹ್ರ್ ಹೇಳಿದರು.

ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

3000 ಚದರ ಅಡಿ ವಿಸ್ತೀರ್ಣ ಹೊಂದಿರುವ ಮಿನಿ ನವ್‌ನಿತ್ ಮೋಟಾರ್ಸ್ ಬೆಂಗಳೂರು ಮಿನಿ ಎಕ್ಸ್‌ಕ್ಲೂಸಿವ್ ಡೀಲರ್‌ಶಿಪ್ ಆಗಿದ್ದು 4 ಮಿನಿ ಡಿಸ್‌ಪ್ಲೇ ಸೆಟ್-ಅಪ್ ಹೊಂದಿದೆ. ಬಹುಬಗೆಯ ಕಾರ್ಯದ ನಿರ್ಮಾಣ ಹೊಂದಿರುವ ಇದರಲ್ಲಿ ಮಿನಿ ಲೌಂಜ್, ಮಿನಿ ಲೈಫ್‌ಸ್ಟ್ರೈಲ್ ಕಲೆಕ್ಷನ್, ಮಿನಿ ಆಕ್ಸೆಸರೀಸ್ ಪ್ರದರ್ಶನದಲ್ಲಿವೆ.

ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

ನವ್‌ನಿತ್ ಮೋಟಾರ್ಸ್‌ನ ಹೊಸ ಮಿನಿ ಶೋ ರೂಂನ ಒಳಾಂಗಣ ವಿನೂತನ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು, ಆಧುನಿಕ ನಗರದ ಸ್ಪರ್ಶವನ್ನು ನೀಡುವುದಲ್ಲದೆ ಆಹ್ವಾನ ನೀಡುವ, ಸಂವಹನ ನಡೆಸುವ ಮಾದರಿಯಲ್ಲಿ ಐಕಾನಿಕ್ ಮಿನಿ ಲೈಫ್ ಸ್ಟೈಲ್ ಅನ್ನು ಪ್ರತಿನಿಧಿಸುತ್ತದೆ.

ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

ನವ್‌ನಿತ್ ಮೋಟಾರ್ಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ನವ್‌ನಿತ್ ಕಚಾಲಿಯಾ, ಬಿಎಂಡಬ್ಲ್ಯು ಗ್ರೂಪ್‌ನೊಂದಿನೆ ನವ್‌ನಿತ್ ಗ್ರೂಪ್‌ನ ಸಹಯೋಗ 1995ರಷ್ಟು ಹಳೆಯದು. ಈ ಸಹಯೋಗಕ್ಕೆ ಸೇಲ್ಸ್ ಮತ್ತು ಸರ್ವೀಸ್‌ನಲ್ಲಿ ಅತ್ಯುತ್ತಮ ಗುಟಮಟ್ಟವನ್ನು ತರುವ ತಮ್ಮ ಬದ್ಧತೆಯೇ ತಳಹದಿಯಾಗಿದೆ. ಈ ಯಶಸ್ವಿ ಹಾಗೂ ಉತ್ಸಾಹಿ ಸಹಯೋಗಕ್ಕೆ ಮತ್ತೊಂದು ಅಧ್ಯಾಯ ಸೇರಿಸುವ ನಿಟ್ಟಿನಲ್ಲಿ ಐಕಾನಿಕ್ ಮಿನಿಯನ್ನು ಬೆಂಗಳೂರಿಗೆ ತರಲು ನಮಗೆ ಬಹಳ ಉತ್ಸಾಹ ಬಂದಿದೆ. ಮಿನಿ ನವ್‌ನಿತ್ ಮೋಟಾರ್ಸ್ ಡೀಲ‌ರ್‌ಶಿಪ್ ಬಿಡುಗಡೆಯಿಂದ ಕರ್ನಾಟಕದ ಹೆಚ್ಚು ಗ್ರಾಹಕರನ್ನು ಮತ್ತು ಉತ್ಸಾಹದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೇವೆ ಎಂದರು.

ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

ಮಿನಿ ಗ್ರಾಹಕರಿಗೆ ನವ್‌ನಿತ್ ಮೋಟಾರ್ಸ್ ಆಪ್ಟರ್ ಸೇಲ್ಸ್ ನೆರವನ್ನು ತನ್ನ ಬೆಂಗಳೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯ ಬಳಿ ಇರುವ ವರ್ಕ್‌ಶಾಪ್ ಮೂಲಕ ಒದಗಿಸುತ್ತಿದೆ. ಮಿನಿ ಫೈನಾನ್ಸಿಯಲ್ ಸರ್ವಿಸಸ್‌ನೊಂದಿಗೆ ಗ್ರಾಹಕರು ಆಕರ್ಷಕ ಹಣಕಾಸು ಮತ್ತು ವಿಮಾ ಆಯ್ಕೆಗಳನ್ನು ಪಡೆಯಬಹುದು.

ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

ಇದರೊಂದಿಗೆ ಮಿನಿ ಫೈನಾನ್ಸಿಯಲ್ ಸರ್ವಿಸಸ್ ಸಮಗ್ರ ವಿಮಾ ಪ್ಯಾಕೇಜ್ ಅನ್ನು ಒದಗಿಸುತ್ತಿದೆ. ಮಿನಿ ಸ್ಟೈಲ್ (ಬಿಎಂಡಬ್ಲ್ಯು ಸೆಕ್ಯೂರ್ ರೀತಿಯಲ್ಲಿ) ಮಿನಿ ಗ್ರಾಹಕರಿಗೆ ಅವರ ಮೂಲ ಮೋಟಾರ್ ವಿಮೆಯಲ್ಲಿ ಮೌಲ್ಯಧಾರಿತ ಸೇವೆಯಾಗಿದೆ.

ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ
ಐಕಾನಿಕ್ ಮಿನಿ ಡೀಲರ್‌ಶಿಪ್ ಬೆಂಗಳೂರಿನಲ್ಲಿ ಪ್ರತ್ಯಕ್ಷ

English summary
Mini, the brand now has its presence in Bangalore. The Mini exclusive dealership in the city, Navnit Motors, was opened on April 17th, 2013. Other Mini outlets in India are in Delhi, Mumbai and Hyderabad.
Story first published: Thursday, April 18, 2013, 10:58 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more