ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

By Nagaraja

ಬಹುನಿರೀಕ್ಷಿತ ಆಲ್ಟೊ ಕೆ10 ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಇನ್ನೇನು ಕೆಲವೇ ದಿನಗಳಲ್ಲಿ ಎಂಟ್ರಿ ಕೊಡಲಿದೆ. ಇದರಂತೆ ಸಂಸ್ಥೆಯು ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ವರದಿಗಳ ಪ್ರಕಾರ ಮಾರುತಿ ವಿತರಕರಗಳ ಬಳಿ 10,000 ರುಪಾಯಿ ಪಾವತಿಸಿದರೆ ಹೊಸ ಆಲ್ಟೊಗಾಗಿ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ. ಒಟ್ಟಿನಲ್ಲಿ ಮಾರುತಿ ಪಾಲಿಗೆ ಹೊಸ ಆಲ್ಟೊ10 ಬಹುಮುಖ್ಯ ಮಾದರಿಯಾಗಿರಲಿದೆ.

ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

ಸೆಲೆರಿಯೊ, ಸಿಟಿ ಸೆಡಾನ್ ಬಳಿಕ ಪ್ರಸಕ್ತ ಸಾಲಿನಲ್ಲಿ ಮಾರುತಿಯಿಂದ ಬಿಡುಗಡೆಯಾಗಲಿರುವ ಮೂರನೇ ಆತಿ ದೊಡ್ಡ ಮಾದರಿಯಾಗಿದೆ ಆಲ್ಟೊ ಕೆ10. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಸೆಲೆರಿಯೊದಲ್ಲಿರುವ ಎಎಂಟಿ ತಂತ್ರಜ್ಞಾನವನ್ನು ಇದರಲ್ಲೂ ಆಳವಡಿಸಲಾಗುವುದು.

ವೆರಿಯಂಟ್

ವೆರಿಯಂಟ್

ಹೊಸ ಆಲ್ಟೊ ಕೆ10 ಎಲ್‌ಎಕ್ಸ್ ಎಲ್‌ಎಕ್ಸ್‌ಐ, ವಿಎಕ್ಸ್‌ಐ ಮತ್ತು ವಿಎಕ್ಸ್‌ಐ(ಒ) ಗಳೆಂಬ ನಾಲ್ಕು ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ.

ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

ಇದರ ಬೇಸ್ ವೆರಿಯಂಟ್ ಮ್ಯಾನುವಲ್ ಎಸಿ ಜೊತೆ ಹೀಟರ್, ಮುಂದುಗಡೆ ಇಂಟೆಗ್ರೇಟಡ್ ಹೆಡ್ ರೆಸಿಸ್ಟ್, ಹಿಂದುಗಡೆ ಫ್ಯಾಬ್ರಿಕ್ ಹೋದಿಕೆ ಇರಲಿದೆ. ಹಾಗಿದ್ದರೂ ಪವರ್ ಸ್ಟೀರಿಂಗ್ ಕೊರತೆ ಕಾಡಲಿದೆ.

ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

ಇದಕ್ಕಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿರುವ ಎಲ್‌ಎಕ್ಸ್‌ಐ ವೆರಿಯಂಟ್ ಒಳಭಾಗದಿಂದಲೇ ಹೊಂದಾಣಿಸಬಹುದಾದ ಹೊರಭಾಗದ ಮಿರರ್, ಚಾಲಕ ಸೀಟು ಕೆಳಗಡೆ ಟೈಲ್‌ಗೇಟ್ ಓಪನರ್ ಮತ್ತು ಹಿಂದುಗಡೆ ಬಾಗಿಲಿನಲ್ಲಿ ಚೈಲ್ಡ್ ಲಾಕ್ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

ಇನ್ನು ಹೊಸ ಆಲ್ಟೊ10 ವಿಎಕ್ಸ್‌ಐ ವೆರಿಯಂಟ್, ಮ್ಯೂಸಿಕ್ ಸಿಸ್ಟಂ ಜೊತೆ ಸಿಡಿ, ಆಕ್ಸ್ ಇನ್, ಯುಎಸ್‌ಬಿ ಇನ್‌ಪುಟ್, ಟು ಸ್ಪೀಕರ್, ಫ್ರಂಟ್ ಪವರ್ ವಿಂಡೋ, ಸೆಂಟ್ರೋಲ ಲಾಕಿಂಗ್, ಟ್ಯಾಕೋಮೀಟರ್, ರಿಯರ್ ಪಾರ್ಸೆಲ್ ಟ್ರೇ ಮತ್ತು ಸಂಪೂರ್ಣ ವೀಲ್ ಕವರ್ ಪಡೆಯಲಿದೆ.

ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

ಅಂತಿಮವಾಗಿ ಹೈ ಎಂಡ್ ಆಲ್ಟೊ ಕೆ10 ಮಾದರಿಯು ಫ್ರಂಟ್ ಫಾಗ್ ಲ್ಯಾಂಪ್, ಕೀಲೆಸ್ ಎಂಟ್ರಿ ಮತ್ತು ಚಾಲಕ ಬದಿಯ ಏರ್ ಬ್ಯಾಗ್ ವ್ಯವಸ್ಥೆಯನ್ನು ಪಡೆಯಲಿದೆ.

ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಬಹು ಮುಖ್ಯ ವೈಶಿಷ್ಟ್ಯವೆಂದರೆ ಟಾಪ್ ಎಂಡ್ ವೆರಿಯಂಟ್ ಸೆಲೆರಿಯೊ ತರಹನೇ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ವ್ಯವಸ್ಥೆಯನ್ನು ಐಚ್ಛಿಕವಾಗಿ ಪಡೆಯಲಿದೆ. ಅಲ್ಲದೆ ಸಿಎನ್‌ಜಿ ಮಾದರಿಗಳಲ್ಲೂ ಇದು ಬಿಡುಗಡೆಯಾಗಲಿದೆ.

ಹೊಸ ಆಲ್ಟೊ ಕೆ10 ನೋಡಲು ಮರೆಯದಿರಿ

ಪರಿಷ್ಕೃತ ಫ್ರಂಟ್ ಬಂಪರ್, ಹೊಸ ಎಂಜಿನ್ ಗ್ರಿಲ್ ಮತ್ತು ಸ್ಟೈಲಿಷ್ ಹೆಡ್ ಲ್ಯಾಂಪ್ ಎಲ್ಲವೂ ಮಾರುತಿ ಆಲ್ಟೊವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ. ಇದು 3ರಿಂದ 4.2 ಲಕ್ಷ ರು.ಗಳ ದರ ರೇಂಜ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Most Read Articles

Kannada
English summary
New Maruti Alto K10 exterior and interior revealed, launch next month.
Story first published: Monday, October 27, 2014, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X