ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

Written By:

ಇತ್ತೀಚೆಗಷ್ಟೇ ಉತ್ತರಾಖಂಡ್‌ನಲ್ಲಿ ಸಂಭವಿಸಿದ ಭೀಕರ ಜಲ ಪ್ರಳಯದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು. ಈ ನಡುವೆ ಎಲ್ಲ ವಿಭಾಗಗಳಿಂದಲೂ ಸಂತ್ರಸ್ತರಿಗೆ ಪರಿಹಾರ ನಿಧಿ ಹರಿದು ಬರುತ್ತಿದೆ.

ದೇಶದ ಪ್ರಖ್ಯಾತ ಆಟೋ ಕಂಪನಿಗಳು ಸಹ ಈಗಾಗಲೇ ಸಹಾಯ ಹಸ್ತವನ್ನು ಚಾಚಿದೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಆಫ್ ರೋಡ್ ದೈತ್ಯ ಪೊಲರಿಸ್ ಇಂಡಿಯಾ, ಐದು ವಾಹನಗಳನ್ನು ಕೊಡುಗೆಯಾಗಿ ನೀಡಿದೆ.

ಇದರಲ್ಲಿ ಸ್ಪೋರ್ಟ್ಸ್ ಮ್ಯಾನ್ ಬಿಗ್ ಬಾಸ್ 6X6 800, ಸ್ಪೋರ್ಟ್ಸ್ ಮ್ಯಾನ್ 550 ಹಂಟರ್ ಇಪಿಎಸ್, ಆರ್‌ಝಡ್‌ಆರ್ ಎಸ್ 800 ಇಎಫ್ಐ ಹಾಗೂ ಎರಡು ರೇಂಜರ್ 900 ಡೀಸೆಲ್ ಸೇರಿಕೊಂಡಿದೆ. ಈ ಎಲ್ಲ ಐದು ಆಲ್ ಟರೈನ್ ವೆಹಿಕಲ್‌ಗಳನ್ನು (ಎಟಿವಿ) ಉತ್ತರಾಖಂಡ್ ಮುಖ್ಯಮಂತ್ರಿ ಶ್ರೀ ವಿಜಯ್ ಬಹುಗುಣ ಅವರಿಗೆ ಹಸ್ತಾಂತರಿಸಲಾಗಿದೆ.

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಈ ವಾಹನಗಳಿಗೆ ಏನೇ ಸಮಸ್ಯೆ ಬಂದರೂ ಎರಡು ವರ್ಷಗಳ ತನಕ ಸಂಪೂರ್ಣ ನಿರ್ವಹಣಾ ವೆಚ್ಚ ಭರಿಸುವುದಾಗಿ ಪೊಲರಿಸ್ ಭರವಸೆ ನೀಡಿದೆ.

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಪ್ರಸ್ತುತ ಉತ್ತರಾಖಂಡ್ ಪ್ರಳಯ ಬಾಧಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಚರಣೆಗೆ ಪೊಲರಿಸ್ ಗಾಡಿಗಳು ಚುರುಕು ಮುಟ್ಟಿಸಲಿದೆ.

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಉತ್ತರಾಖಂಡ್ ಸಿಎಂ ಗೌರವಾನ್ವಿತ ಬಹುಗುಣ ಅವರಿಗೆ ಪೊಲರಿಸ್ ವಾಹನಗಳನ್ನು ಹಸ್ತಾಂತರಿಸುತ್ತಿರುವ ಪೊಲರಿಸ್ ಇಂಡಿಯಾ ಮಹಾ ನಿರ್ದೇಶಕ ಪಂಕಜ್ ದುಬೆ.

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಉತ್ತರಾಖಂಡ್‌ಗೆ 5 ಪೊಲರಿಸ್ ವಾಹನ ಕೊಡುಗೆ

ಉತ್ತರಾಖಂಡ್ ಪ್ರದೇಶದಲ್ಲಿ ಸಂಭವಿಸಿದ ಮಹಾ ಪ್ರಳಯದಲ್ಲಿ ಈ ವರೆಗೂ 1.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ 18 ರಾಜ್ಯಗಳ ಯಾತ್ರಿಗಳು ಸಾವನ್ನಪ್ಪಿರುವುದಾಗಿ ಖಚಿತಪಡಿಸಲಾಗಿದೆ.

English summary
Polaris India today handed over the keys of five ATVs to the Chief Minister of Uttarakhand, Vijay Baghuguna to aid in relief efforts. The five donated ATVs include a Sportsman Big Boss 6X6 800, a Sportsman 550 Hunter EPS, a RZR S 800 EFI and two Ranger 900 Diesel.
Story first published: Wednesday, July 24, 2013, 17:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark