2015 ಸ್ಕೋಡಾ ಸೂಪರ್ಬ್ ಭಾರತಕ್ಕೆ ಬರುತ್ತಾ?

By Nagaraja

ಜೆಕ್ ಗಣರಾಜ್ಯದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಸ್ಕೋಡಾ, ತವರೂರಿನಲ್ಲಿ ನೂತನ 2015 ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಮಾದರಿಯನ್ನು ಪ್ರದರ್ಶಿಸಿದೆ. ಇದು ಹಿಂದಿನ ಮಾದರಿಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಗಿಟ್ಟಿಸಿಕೊಂಡಿದೆ.

ಜೆಕ್ ಗಣರಾಜ್ಯದ ರಾಜಧಾನಿ ಹಾಗೂ ಅತಿ ದೊಡ್ಡ ನಗರವಾಗಿರುವ ಪ್ರೇಗ್‌ನಲ್ಲಿ ಹೊಸ ಸ್ಕೋಡಾ ಸೂಪರ್ಬ್ ಕಾರು ಅನಾವರಣೆಗೊಂಡಿದೆ. ಇಲ್ಲಿ ಹೆಚ್ಚು ಮೊನಚಾದ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ. ಆಟೋ ವಿಶ್ಲೇಷಕರ ಪ್ರಕಾರ ನೂತನ ಸ್ಕೋಡಾ ಹೆಚ್ಚಿನ ಜನಮನ್ನಣೆಗೆ ಪಾತ್ರವಾಗಲಿದೆ. ಪ್ರಸ್ತುತ ಕಾರು ಯಾವಾಗ ಭಾರತವನ್ನು ತಲುಪಲಿದೆ ಎಂಬುದು ಇನ್ನಷ್ಟೇ ಬಯಲಾಗಬೇಕಿದೆ.

2015 ಸ್ಕೋಡಾ ಸೂಪರ್ಬ್ ಭಾರತಕ್ಕೆ ಬರುತ್ತಾ?

ಹೊಸ ಸ್ಕೋಡಾ ಸೂಪರ್ಬ್ ಪರಿಷ್ಕೃತ ಫ್ರಂಟ್ ಗ್ರಿಲ್ ಪಡೆದುಕೊಳ್ಳಲಿದೆ. ಇದರಲ್ಲಿ ಪ್ರೊಜೆಕ್ಟರ್ ಹೆಡ್ ಲೈಟ್ ಜೊತೆಗೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಕೂಡಾ ಇರಲಿದೆ. ಈ ಐಷಾರಾಮಿ ಸೆಡಾನ್‌ಗೆ ಕೂಪೆ ಶೈಲಿಯ ವಿನ್ಯಾಸ ಕಲ್ಪಿಸಲಾಗಿದೆ. ಅಂತೆಯೇ ಕಾರಿನ ಹಿಂದುಗಡೆಯು ಸಿ ಆಕಾರದ ಡಿಟೈಲಿಂಗ್ ಜೊತೆಗೆ ಎಲ್‌ಇಡಿ ಟೈಲ್ ಲೈಟ್ಸ್ ಇರಲಿದೆ.

ಫೀಚರ್

ಫೀಚರ್

ಡೈನಾಮಿಕ್ ಚಾಸೀ ಕಂಟ್ರೋಲ್, ಡ್ರೈವಿಂಗ್ ಮೋಡ್, ರೈನ್ ಸೆನ್ಸಾರ್, ಲೈಟ್ ಸೆನ್ಸಾರ್, ವಿಂಡ್ ಶೀಲ್ಡ್, ಹೀಟಡ್ ಸೀಟು, ತ್ರಿ ಝೋನ್ ಕ್ಲೈಮೇಟ್ ಕಂಟ್ರೋಟ್ ಮತ್ತು ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಪ್ಯಾನರೋಮಿಕ್ ಟಿಲ್ಟ್ ಹಾಗೂ ಸ್ಲೈಡ್ ರೂಫ್ ಇರಲಿದೆ.

2015 ಸ್ಕೋಡಾ ಸೂಪರ್ಬ್ ಭಾರತಕ್ಕೆ ಬರುತ್ತಾ?

ಸ್ಕೋಡಾ ಸಿಇಒ ಡಾ. ಎಚ್.ಸಿ ವಿನ್‌ಫ್ರೆಡ್ ವಾಹ್ ಲ್ಯಾಂಡ್ ಪ್ರಕಾರ "ಇದು ಸ್ಕೋಡಾ ಪಾಲಿಗೆ ಹೊಸ ಆರಂಭವಾಗಲಿದೆ. ಇತ್ತೀಚಿಗಿನ ಕೆಲವು ವರ್ಷಗಳಿಂದ ನಾವು ಸ್ಕೋಡಾ ಶ್ರೇಣಿಯ ವಾಹನಗಳನ್ನು ಪರಿಷ್ಕೃತಗೊಳಿಸಿದ್ದು, ಮಧ್ಯಮ ಗಾತ್ರದ ಸೆಡಾನ್ ಗ್ರಾಹಕರಿಗಿದು ಹೊಸ ಅನುಭವವಾಗಲಿದೆ" ಎಂದಿದ್ದಾರೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಐದು ಪೆಟ್ರೋಲ್ ಹಾಗೂ ಮೂರು ಡೀಸೆಲ್ ಎಂಜಿನ್

ಪೆಟ್ರೋಲ್

1.4 ಲೀಟರ್ ಟಿಎಸ್‌ಐ - 123 ಅಶ್ವಶಕ್ತಿ, 200 ತಿರುಗುಬಲ

1.4 ಲೀಟರ್ ಟಿಎಸ್‌ಐ - 147.88 ಅಶ್ವಶಕ್ತಿ, 250 ತಿರುಗುಬಲ

1.8 ಲೀಟರ್ ಟಿಎಸ್‌ಐ - 177.47 ಅಶ್ವಶಕ್ತಿ, 250 ತಿರುಗುಬಲ

2.0 ಲೀಟರ್ ಟಿಎಸ್‌ಐ - 126.90 ಅಶ್ವಶಕ್ತಿ, 350 ತಿರುಗುಬಲ

2.0 ಲೀಟರ್ ಟಿಎಸ್‌ಐ - 276 ಅಶ್ವಶಕ್ತಿ, 350 ತಿರುಗುಬಲ

 ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಡೀಸೆಲ್

1.6 ಲೀಟರ್ ಟಿಡಿಐ - 118.31 ಅಶ್ವಶಕ್ತಿ, 250 ತಿರುಗುಬಲ

2.0 ಲೀಟರ್ ಟಿಡಿಐ - 147.88 ಅಶ್ವಶಕ್ತಿ, 340 ತಿರುಗುಬಲ

2.0 ಲೀಟರ್ ಟಿಡಿಐ - 187.32 ಅಶ್ವಶಕ್ತಿ, 400 ತಿರುಗುಬಲ

Most Read Articles

Kannada
English summary
Czech automobile manufacturer has unveiled its redesigned Superb in Prague. The luxury sedan now looks more bolder and sharper than its predecessors.
Story first published: Wednesday, February 18, 2015, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X