ಮಹೀಂದ್ರದಿಂದ ಮತ್ತೊಂದು ಎಸ್‌ಯುವಿ ಬಂಪರ್
ದಕ್ಷಿಣ ಕೊರಿಯಾದ ಎಸ್‌ಯುವಿ ಸ್ಪೆಷಲಿಸ್ಟ್ ಸ್ಯಾಗ್ಯೊಂಗ್ ರೆಕ್ಸ್ಟಾನ್ ಮಾಲಿಕತ್ವ ಹೊಂದಿರುವ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಮಹೀಂದ್ರ ಆಂಡ್ ಮಹೀಂದ್ರ ಸದ್ಯದಲ್ಲೇ ದೇಶದ ಗ್ರಾಹಕರಿಗೆ ಎಸ್‌ಯುವಿ ಬಂಪರ್ ಒದಗಿಸಲಿದೆ.
ಪ್ರಸ್ತುತ ದೇಶದ ಗ್ರಾಹಕರು ಎಸ್‌ಯುವಿ ಕಾರು ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಇದು ರೆಕ್ಸ್ಟಾನ್ ಬಳಿಕ ಸ್ಯಾಗ್ಯೊಂಗ್‌ನಿಂದ ಬಿಡುಗಡೆಯಾಗಲಿರುವ ಎರಡನೇ ಎಸ್‌ಯುವಿ ಕಾರು ಆಗಿರಲಿದೆ. ದೇಶದ ರಸ್ತೆಗಿಳಿಯಲಿರುವ ಈ ಹೊಸ ಕಾರು ಸ್ಯಾಗ್ಯೊಂಗ್ ಕೊರಂಡೊ ಪ್ರೀಮಿಯಂ ಎಸ್‌ಯುವಿ ಎಂದು ಅರಿಯಲ್ಪಡಲಿದೆ.
ದೇಶದ ಮಾರುಕಟ್ಟೆಯಲ್ಲಿ ಮಹೀಂದ್ರ ನಡೆಸಿರುವ ಅಧ್ಯಯನದ ಆಧಾರದಲ್ಲಿ ಸ್ಯಾಗ್ಯೊಂಗ್ ಕೊರಂಡೊ ಬಿಡುಗಡೆ ದಿನಾಂಕ ನಿಗದಿಯಾಗಲಿದೆ. ಒಂದು ವೇಳೆ ಪೂರಕ ಮಾರುಕಟ್ಟೆ ಪರಿಸ್ಥಿತಿ ಕಂಡುಬಂದ್ದಲ್ಲಿ ಸ್ಯಾಗ್ಯೊಂಗ್ ಎಸ್‌ಯುವಿ ಲಾಂಚ್ ಆಗಲಿದೆ. ಅಂದ ಹಾಗೆ ಕಳೆದ ವರ್ಷ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಸ್ಯಾಂಗ್ಯೊಂಗ್ ಕೊರಂಡೊ ಅನಾವರಣಗೊಳಿಸಲಾಗಿತ್ತು.

1983ನೇ ಇಸವಿಯಲ್ಲಿ ಸ್ಯಾಗ್ಯೊಂಗ್ ಕೊರಂಡೊ ದಕ್ಷಿಣ ಕೊರಿಯದಲ್ಲಿ ಮೊದಲ ಬಾರಿ ಲಾಂಚ್ ಆಗಿತ್ತು.

ಪ್ರಸ್ತುತ ಮೂರನೇ ಜನರೇಷನ್ ಸ್ಯಾಗ್ಯೊಂಗ್ ಕೊರಂಡೊ ಮಾದರಿ ಭಾರತವನ್ನು ಪ್ರವೇಶಿಸಲು ಸಿದ್ಧವಾಗಿದೆ. ಈ ಮಾದರಿ 2010ರಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿತ್ತು.

ಕೊರಂಡೊ 2008 ಪ್ಯಾರಿಸ್ ಮೋಟಾರ್ ಶೋದಲ್ಲಿ ಅನಾವರಣಗೊಂಡಿದ್ದ ಸ್ಯಾಂಗ್ಯೊಂಗ್ ಸಿ 200 ಕಾನ್ಸೆಪ್ಟ್ ಕಾರುಗಳು ಉತ್ಪಾದನ ಆವೃತ್ತಿಯಾಗಿದೆ.

ಸ್ಯಾಗ್ಯೊಂಗ್ ಕೊರಂಡೊ ಫೈವ್ ಡೋರ್ ಎಸ್‌ಯುವಿ ಕಾರಾಗಿದೆ. ಈ ಹಿಂದಿನ ಮಾದರಿಯು ಐದು ಹಾಗೂ ಮೂರು ಡೋರ್‌ಗಳಲ್ಲಿ ಲಭ್ಯವಿತ್ತು.

ವಿಶಾಲವಾದ ಇಂಟಿರಿಯರ್ ಸ್ಯಾಗ್ಯೊಂಗ್ ಕೊರಂಡೊ ಸ್ಪೆಷಾಲಿಟಿ ಆಗಿದೆ.

ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದಾಗ ಸ್ಯಾಗ್ಯೊಂಗ್ ಕೊರಂಡೊ ಹೆಚ್ಚು ಸ್ಟೈಲಿಷ್ ಲುಕ್ ಹೊಂದಿದೆ.

2 ಲೀಟರ್ ಪೆಟ್ರೋಲ್ ಹಾಗೂ 2 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಕೊರಂಡೊ ಲಭ್ಯವಿರಲಿದೆ. ಹಾಗೆಯೇ ಇದರ ಎಂಜಿನ್ 6 ಸ್ಪೀಡ್ ಆಟೋಮ್ಯಾಟಿಕ್ ಸಹಿತ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ದೇಶದಲ್ಲಿ ಸ್ಕೋಡಾ ಯೆಟಿ ಕಾರಿಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ. ಹಾಗಿದ್ದರೂ ದರದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲವಾದರೂ 15 ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ.

ಇಂಟಿರಿಯರ್ ವ್ಯೂ

ಇಂಟಿರಿಯರ್ ವ್ಯೂ

ಇಂಟಿರಿಯರ್ ವ್ಯೂ

ಇಂಟಿರಿಯರ್ ವ್ಯೂ

ಇಂಟಿರಿಯರ್ ವ್ಯೂ


Click it and Unblock the Notifications








