ಕಾದಿರಿ; ಭಾರತಕ್ಕೂ ಬರಲಿದೆಯಂತೆ ಸುಜುಕಿ ಗ್ರಾಂಡ್ ವಿಟರಾ
ದೇಶದಲ್ಲಿ ಲಭ್ಯಲಿರುವ ನಂಬಿಕೆಗ್ರಸ್ತ ಕಾರು ಬ್ರಾಂಡ್‌ಗಳ ಪೈಕಿ ಮಾರುತಿಯ ಅಂಗಸಂಸ್ಥೆಯಾಗಿರುವ ಸುಜುಕಿ ಮುಂಚೂಣಿಯಲ್ಲಿದೆ. ಪ್ರಸ್ತುತ ಈ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ನೂತನ ಗ್ರಾಂಡ್ ವಿಟರಾ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದೆ.
2014 ಆಟೋ ಎಕ್ಸ್ ಪೋ
2014 ಆಟೋ ಎಕ್ಸ್‌ಪೋದಲ್ಲಿ ಸುಜುಕಿ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ತಿಳಿಯ ಬಯಸುವುದೇನೆಂದರೆ ಈ ಕಾಂಪಾಕ್ಟ್ ಎಸ್‌ಯುವಿ ನಿಕಟ ಭವಿಷ್ಯದಲ್ಲಿ ಭಾರತಕ್ಕೂ ಪ್ರವೇಶಿಸಲಿದೆ ಎಂಬುದು ತಿಳಿದು ಬಂದಿದೆ. ಆದರೆ ಸದ್ಯಕ್ಕಂತೂ ಈ ಕನಸು ನನಸಾಗುವುದು ಅನುಮಾನವಾಗಿದೆ.

ಹಾಗೊಂದು ವೇಳೆ ಸುಜುಕಿ ಭಾರತ ಪ್ರವೇಶ ಪಡೆದ್ದಲ್ಲಿ ಐಷಾರಾಮಿ ವೈಶಿಷ್ಟ್ಯಗಳಲ್ಲಿ ಕೆಲವೊಂದು ಬದಲಾವಣೆ ಕಂಡುಬರುವ ಸಾಧ್ಯತೆಗಳಿವೆ.

ಪ್ರಸ್ತುತ ಸುಜುಕಿ ವಿಟರಾ ಶಕ್ತಿಯುತ ವಿನ್ಯಾಸ ಪ್ರದಾನ ಮಾಡುತ್ತಿದೆ. ಇದರ ಕ್ರೋಮ್ ಫಿನಿಶಿಂಗ್ ಪ್ರೀಮಿಯಂ ಲುಕ್ ನೀಡುತ್ತಿದೆ. ಹಾಗೆಯೇ ಫಾಗ್ ಲ್ಯಾಂಪ್ ಆಧುನಿಕತೆಯ ಸಂಕೇತವಾಗಿದೆ.

ಇನ್ನು ಹಿಂದುಗಡೆಯಿಂದ ನೋಡುವಾಗ ದೊಡ್ಡ ಎಸ್‌ಯುವಿ ಕಾರಿನಂತೆ ಭಾಸವಾಗುತ್ತಿದೆ.

ಹಾಗೆಯೇ ಇನ್ನಷ್ಟು ಪ್ರೀಮಿಯಂ ಆಗಿ ಗೋಚರಿಸಲು ವೀಲ್ ಆರ್ಚ್ ಮತ್ತು ಡೋರ್ ಹ್ಯಾಂಡಲ್ ಹಾಗೂ ಕೆಳಗಡೆ ಕ್ರೋಮ್ ಫಿನಿಶಿಂಗ್ ಟಚ್ ನೀಡಲಾಗಿದೆ.

ಕಾರಿನೊಳಗೂ ಐಷಾರಾಮಿ ಫೀಚರುಗಳನ್ನು ಲಗತ್ತಿಸಲಾಗಿದೆ. ಇದು ಚರ್ಮದ ಹೋದಿಕೆಯ ಡ್ಯಾಶ್ ಬೋರ್ಡ್ ಪಡೆದುಕೊಂಡಿದೆ. ಇದಕ್ಕೆ ಬಣ್ಣದ ಆಯ್ಕೆ ಕೂಡಾ ನೀಡಲಾಗಿದೆ.


Click it and Unblock the Notifications








