ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

Written By:

ಜಪಾನ್ ಮೂಲದ ಪ್ರತಿಷ್ಠಿತ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 2014 ಪ್ಯಾರಿಸ್ ಮೋಟಾರು ಶೋದಲ್ಲಿ ತನ್ನ ಹೊಸ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದೆ.

ಭಾರತದಂತಹ ಬೆಳೆದು ಬರುತ್ತಿರುವ ದೇಶಗಳಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಅಂತೆಯೇ ಸುಜುಕಿ ಪ್ರದರ್ಶಿಸಿರುವ ಹೊಸ ಮಾದರಿಯು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button
ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

ಸುಜುಕಿಯಿಂದ ಪ್ರದರ್ಶನಗೊಂಡಿರುವ ಹೊಸ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಕಾರು ಹಂಗೇರಿಯ ಘಟಕದಲ್ಲಿ ನಿರ್ಮಾಣವಾಗಲಿದೆ. ಇದು 2015 ವರ್ಷಾರಂಭದಲ್ಲಿ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ.

ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿರುವ ಹೊಸ ವಿಟಾರಾ ಭವಿಷ್ಯದಲ್ಲಿ ಮಾರುತಿ ಸುಜುಕಿ ಮುಖಾಂತರ ಭಾರತವನ್ನು ತಲುಪಲಿದೆ. ಇದು ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ನಿಸ್ಸಾನ್ ಟೆರನೊ, ರೆನೊ ಡಸ್ಟರ್ ಮತ್ತು ಹೋಂಡಾದಿಂದ ಇನ್ನಷ್ಟೇ ಬಿಡುಗಡೆಯಾಗಲಿರುವವ ಎಚ್‌ಆರ್-ವಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

ಮುಂದುಗಡೆಯ ನೋಟವು ಸುಜುಕಿ ವಿಟಾರಾಗೆ ಶಕ್ತಿಶಾಲಿ ವಿನ್ಯಾಸ ಕಲ್ಪಿಸುತ್ತಿದೆ. ಇದು ತನ್ನ ವಿಶಿಷ್ಟ ಕಾಂಪಾಕ್ಟ್ ಎಸ್‌ಯುವಿ ಶೈಲಿಯನ್ನು ಉಳಿಸಿಕೊಂಡಿದೆ. ಅದೇ ರೀತಿ ಆಧುನಿಕ ಹೆಡ್‌ಲೈಟ್ ಸಹ ಪಡೆದುಕೊಂಡಿದೆ.

ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

ಬದಿಯಿಂದ ನೋಡುವಾಗ ದೊಡ್ಡ ಎಸ್‌ಯುವಿ ತರಹನೇ ಭಾಸವಾಗುತ್ತಿದೆ. ಇಲ್ಲಿ ನೀಲಿ ಹಾಗೂ ಕಪ್ಪು ಬಣ್ಣಗಳ ಮಿಶ್ರಣವನ್ನು ಕಾಣಬಹುದಾಗಿದೆ. ಇದರ 5 ಸ್ಪೋಕ್ ಅಲಾಯ್ ವೀಲ್‌ಗಳು ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡಲಿದೆ.

ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

ಇನ್ನು ಹಿಂದುಗಡೆ ಸರಳ ವಿನ್ಯಾಸವನ್ನು ಸುಜುಕಿ ಕಾಪಾಡಿಕೊಂಡಿದೆ. ಇದು ಸಣ್ಣದಾದ ಟೈಲ್ ಲ್ಯಾಂಪ್ ಪಡೆದುಕೊಂಡಿದೆ. ಜಪಾನ್‌ನ ಈ ವಾಹನ ತಯಾರಿಕ ಸಂಸ್ಥೆಯು ಸ್ಕಿಡ್ ಪ್ಲೇಟ್ ಸಹ ಒದಗಿಸಲಿದೆ.

ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

ಅದೇ ರೀತಿ ಕಾರಿನ ಒಳಗಡೆ ಐಚ್ಛಿಕ ಆಯ್ಕೆಗಳೊಂದಿಗೆ ದೇಹಕ್ಕೆ ತಕ್ಕುದಾದ ಒಳಮೈಯನ್ನು ನೋಡಬಹುದಾಗಿದೆ. ಇಲ್ಲೂ ಚಾಲಕ ಸ್ನೇಹಿ ಸರಳ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕಾಪಾಡಿಕೊಳ್ಳಲಾಗಿದೆ.

ಪ್ಯಾರಿಸ್‌ನಲ್ಲಿ ಸುಜುಕಿ ವಿಟಾರಾ ಕಾಂಪಾಕ್ಟ್ ಎಸ್‌ಯುವಿ ಅನಾವರಣ

ಒಟ್ಟಾರೆಯಾಗಿ ವಿಟಾರಾ ಭಾರತ ಪ್ರವೇಶ ಯಾವಾಗ ಎಂಬುದು ಇನ್ನು ಖಚಿತವಾಗಿಲ್ಲ. ಹಾಗಿದ್ದರೂ ದೇಶದಲ್ಲಿ ಸ್ಮರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.

English summary
The compact SUV segment is growing all over this world. Manufacturers are coming up with new and exciting products to entice their buyers. At the recent 2014 Paris Motor Show Japanese automobile giant Suzuki revealed an interesting product.
Story first published: Monday, October 6, 2014, 9:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark