ಸ್ವಿಫ್ಟ್‌ಗೆ ಟಕ್ಕರ್ - ಟಾಟಾ ಬೋಲ್ಟ್ ಭರ್ಜರಿ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮಗದೊಂದು ಆಕರ್ಷಕ ಬೋಲ್ಟ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಪೆಟ್ರೋಲ್ ಪ್ರಾರಂಭಿಕ ಬೆಲೆ 4.4 ಲಕ್ಷ ರು.ಗಳಾಗಿದೆ. ಅಂತೆಯೇ ಡೀಸೆಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 5.49 ಲಕ್ಷ ರು.ಗಳಾಗಿರಲಿದೆ.

ಟಾಟಾ ಬೋಲ್ಟ್ ಎಕ್ಸ್ ಕ್ಲೂಸಿವ್ ಟೆಸ್ಟ್ ಡ್ರೈವ್ ರಿವ್ಯೂ ಓದಿ

ಈಗಾಗಲೇ ವಾಹನ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಟಾಟಾ ಬೋಲ್ಟ್ ಕಳೆಗುಂದಿರುವ ವಿಸ್ಟಾ ಸ್ಥಾನವನ್ನು ತುಂಬಿಕೊಳ್ಳಲಿದ್ದು, ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಅಲ್ಲದೆ ದೇಶದ ಜನಪ್ರಿಯ ಮಾದರಿಗಳಾಗಿರುವ ಮಾರುತಿ ಸ್ವಿಫ್ಟ್ ಹಾಗೂ ಹ್ಯುಂಡೈ ಐ10 ಮಾದರಿಗಳಿಗೆ ನಿಕಟ ಸ್ಪರ್ಧೆಯನ್ನು ಒಡ್ಡಲಿದೆ.

ಹೊಸತಾದ ಹೊರಿಝೋನ್‌ನೆಕ್ಸ್ಟ್ ಸಿದ್ಧಾಂತದಲ್ಲಿ ರೂಪುಗೊಂಡಿರುವ ಹೊಸ ಬೋಲ್ಟ್‌ನಲ್ಲಿ 1.2 ಲೀಟರ್ ರೆವೊಟ್ರಾನ್ ಎಂಜಿನ್, ಒಂಬತ್ತನೇ ತಲೆಮಾರಿನ ಎಬಿಎಸ್ ಸಿಸ್ಟಂ, ಕನೆಕ್ಟ್ ನೆಕ್ಸ್ಟ್ ಹರ್ಮಾನ್ ಇನ್ಫೋನ್ಮೆಂಟ್ ಸಿಸ್ಟಂ ಮುಂತಾದ ವೈಶಿಷ್ಟ್ಯಗಳು ಪ್ರಮುಖವಾಗಿ 35 ವರ್ಷದೊಳಗಿನ ಯುವ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ.

ವೆರಿಯಂಟ್ ದರ ಮಾಹಿತಿ

ವೆರಿಯಂಟ್ ದರ ಮಾಹಿತಿ

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

  • ಟಾಟಾ ಬೋಲ್ಟ್ ಎಕ್ಸ್‌ಇ - 4.44
  • ಟಾಟಾ ಬೋಲ್ಟ್ ಎಕ್ಸ್‌ಎಂ - 5.15
  • ಟಾಟಾ ಬೋಲ್ಟ್ ಎಕ್ಸ್‌ಎಂಎಸ್ - 5.40
  • ಟಾಟಾ ಬೋಲ್ಟ್ ಎಕ್ಸ್‌ಟಿ - 6.05
  • ವೆರಿಯಂಟ್ ದರ ಮಾಹಿತಿ

    ವೆರಿಯಂಟ್ ದರ ಮಾಹಿತಿ

    ಡೀಸೆಲ್ (ಲಕ್ಷ ರು.ಗಳಲ್ಲಿ)

    • ಟಾಟಾ ಬೋಲ್ಟ್ ಎಕ್ಸ್‌ಇ - 5.49
    • ಟಾಟಾ ಬೋಲ್ಟ್ ಎಕ್ಸ್‌ಎಂ - 6.11
    • ಟಾಟಾ ಬೋಲ್ಟ್ ಎಕ್ಸ್‌ಎಂಎಸ್ - 6.34
    • ಟಾಟಾ ಬೋಲ್ಟ್ ಎಕ್ಸ್‌ಟಿ - 6.99
    • ಟಾಟಾ ಬೋಲ್ಟ್ ಎಂಜಿನ್

      ಟಾಟಾ ಬೋಲ್ಟ್ ಎಂಜಿನ್

      ಹೊಚ್ಚ ಹೊಸ ಟಾಟಾ ಬೋಲ್ಟ್ ಕಾರಿನಲ್ಲಿ ಮುಂದಿನ ಪೀಳಿಗೆಯ ರೆವೂಟ್ರಾನ್ (Revotron) 1.2 ಲೀಟರ್ ಟರ್ಬೊಚಾರ್ಜ್ಡ್ ಎಂಪಿಎಫ್‌ಐ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು, 88.8 ಅಶ್ವಶಕ್ತಿ ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಅದೇ ರೀತಿ 1248 ಸಿಸಿ ಡೀಸೆಲ್ 4 ಸಿಲಿಂಡರ್, ಟರ್ಬೊ ಇಂಟರ್ ಕೂಲ್ಡ್ ಎಂಜಿನ್ ಇರಲಿದೆ.

      ಮಲ್ಟಿ ಡ್ರೈವ್

      ಮಲ್ಟಿ ಡ್ರೈವ್

      ಹೊಸ ಬೋಲ್ಟ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಮಲ್ಟಿ ಡ್ರೈವ್ ಆಯ್ಕೆಯನ್ನು ನೀಡಲಾಗಿದೆ.

      ಎಸ್ - ಸ್ಪೋರ್ಟ್

      ಇ - ಇಕೊ

      ಸಿ - ಸಿಟಿ

      ಜನರೇಷನ್ ನೆಕ್ಸ್ಟ್‌ ಸೇಫ್ಟಿ

      ಜನರೇಷನ್ ನೆಕ್ಸ್ಟ್‌ ಸೇಫ್ಟಿ

      ಹಾಗೆಯೇ 9ನೇ ತಲೆಮಾರಿನ ಬಾಷ್ ಎಬಿಎಸ್, ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯಗಳನ್ನು ಇದರಲ್ಲಿ ನೀಡಲಾಗಿದೆ.

      ಸೆಗ್ಮೆಂಟ್ ಸುಪಿರೀಯರ್

      ಸೆಗ್ಮೆಂಟ್ ಸುಪಿರೀಯರ್

      ಹೊಸ ಬೋಲ್ಟ್ ಕಾರಿನಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ನೀಡಲಾಗಿದ್ದು ಸ್ಪೇಸ್ ಆಂಡ್ ಕಂಫರ್ಟ್ ಎನಿಸಿಕೊಂಡಿದೆ. ಹಾಗೆಯೇ ಡೈರಕ್ಟ್ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಕೂಡಾ ಇದರಲ್ಲಿರಲಿದೆ.

      ಕನೆಕ್ಟ್ ನೆಕ್ಸ್ಟ್

      ಕನೆಕ್ಟ್ ನೆಕ್ಸ್ಟ್

      ಇನ್ನು ಮಾಹಿತಿ ಮನರಂಜನಾ ವ್ಯವಸ್ಥೆ ಅತಿ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಇದರಲ್ಲಿ ಹರ್ಮಾನ್ ಕನೆಕ್ಟ್ ನೆಕ್ಸ್ಟ್ ಟಚ್ ಸ್ಕ್ರೀನ್ ಇನ್ಮೋಟೈನ್ಮೆಂಟ್ ಸಿಸ್ಟಂ/

      ಆಡಿಯೋ ಅಕೌಸ್ಟಿಕ್ ಸಿಸ್ಟಂ ಮತ್ತು ಮ್ಯಾಪ್ ಮೈ ಇಂಡಿಯಾ ನೆಕ್ಸ್ಟ್ ಜನರೇಷನ್ ನೇವಿಗೇಷನ್ ವ್ಯವಸ್ಥೆಯಿದೆ.

      ಸೌಲಭ್ಯಗಳು

      ಸೌಲಭ್ಯಗಳು

      • 5 ಇಂಚು ಟಚ್ ಸ್ಕ್ರೀನ್, ಮಲ್ಟಿಮೀಡಿಯಾ ಅನುಭವ
      • ವೀಡಿಯೋ ಪ್ಲೇಬ್ಯಾಕ್,
      • ಸ್ಮಾರ್ಟ್ ಫೋನ್ ಆಧಾರಿತ ನೇವಿಗೇಷನ್,
      • ಮುಂದುವರಿದ ಬ್ಲೂಟೂತ್ ತಂತ್ರಗಾರಿಕೆ,
      • ಸ್ಮಾರ್ಟ್ ಧ್ವನಿ ಗುರುತಿಸುವಿಕೆ,
      • ಮುಂದುವರಿದ ಸ್ಮಾರ್ಟ್ ಫೋನ್ ಏಕೀಕರಣ,
      • ಇನ್ ಕಮಿಂಗ್ ಎಸ್‌ಎಂಎಸ್ ನೋಟಿಫಿಕೇಷನ್ ಆಂಡ್ ರಿಡೌಟ್
      • ಪ್ಲಸ್ ಪಾಯಿಂಟ್

        ಪ್ಲಸ್ ಪಾಯಿಂಟ್

        • ಹೆಚ್ಚು ಸ್ಥಳಾವಕಾಶ,
        • ಚಾಲನಾ ಗುಣಮಟ್ಟತೆ,
        • ಆರಾಮದಾಯಕ ಆಸನ,
        • ನಿರ್ಮಾಣ ಗುಣಮಟ್ಟ, ಫಿಟ್ ಆಂಡ್ ಫಿನಿಶ್,
        • ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ (ಇಪಿಎಸ್),
        • ಮಲ್ಟಿ ಡ್ರೈವಿಂಗ್ ಸಿಸ್ಟಂ (ಸಿಟಿ, ಇಕೊ ಮತ್ತು ಸ್ಪೋರ್ಟ್),
        • ಹರ್ಮಾನ್ ಇನ್ಪೋಟೈನ್‌ಮೆಂಟ್/ ಆಡಿಯೋ ಅಕೌಸ್ಟಿಂಕ್

Most Read Articles

Kannada
English summary
Tata Bolt Launched in India. Here look at the price, Specs, Features and Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X