ದೆಹಲಿ ಪೊಲೀಸ್ ತೆಕ್ಕೆಗೆ ಟಾಟಾ ನ್ಯಾನೋ

By Nagaraja

ವಿಶ್ವದ ಅತಿ ಅಗ್ಗದ ಕಾರು ನಿರ್ಮಾತ ಹಾಗೂ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನ ಎವರ್ ಗ್ರೀನ್ ಕಾರಾದ ಟಾಟಾ ನ್ಯಾನೋ ಸದ್ಯದಲ್ಲೇ ದೆಹಲಿ ಪೊಲೀಸ್ ತೆಕ್ಕೆಗೆ ಸೇರಲಿದೆ.

ಹೌದು ರಾಷ್ಟ್ರ ರಾಜಧಾನಿ ಪ್ರಗತಿ ಮೈದಾನದಲ್ಲಿ ಸಾಗುತ್ತಿರುವ ಭಾರತದ ಅಂತರಾಷ್ಟ್ರೀಯ ಭದ್ರತಾ ಪ್ರದರ್ಶನ ಮೇಳದಲ್ಲಿ (IISE) ಟಾಟಾ ನ್ಯಾನೋ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದೆ.

ಅಂದರೆ ನಿಕಟ ಭವಿಷ್ಯದಲ್ಲೇ ಟಾಟಾ ನ್ಯಾನೋ ದೆಹಲಿ ಪೊಲೀಸ್‌ ಕಂಟ್ರೋಲ್ ರೂಂನ (ಪಿಸಿಆರ್) ಭಾಗವಾಗಲಿದೆ. ಈ ಮೂಲಕ ನಗರದಲ್ಲಿ ತುರ್ತು ಸಂದರ್ಭದಲ್ಲಿ ಶಿಪ್ರಗತಿಯ ಕಾರ್ಯಾಚರಣೆ ನಡೆಸಲು ನೆರವಾಗಲಿದೆ.

ದೆಹಲಿ ಪೊಲೀಸ್ ತೆಕ್ಕೆಗೆ ಟಾಟಾ ನ್ಯಾನೋ

ದೆಹಲಿಯಲ್ಲಿ ನಡೆಯುತ್ತಿರುವ ಭಾರತದ ಅಂತರಾಷ್ಟ್ರೀಯ ಭದ್ರತಾ ಎಕ್ಸ್‌ಪೋದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಟಾಟಾ ನ್ಯಾನೋ ದೆಹಲಿ ಪಿಸಿಆರ್ ಕಾನ್ಸೆಪ್ಟ್ ಪ್ರದರ್ಶಿಸಿದ್ದಾರೆ.

ದೆಹಲಿ ಪೊಲೀಸ್ ತೆಕ್ಕೆಗೆ ಟಾಟಾ ನ್ಯಾನೋ

ವಿಶೇಷವಾಗಿ ರೂಪಿಸಲಾದ ಈ ನ್ಯಾನೋ ಭದ್ರತಾ ಕಾರನ್ನು 'ಗ್ರಾಂಡ್' ಎಂಬ ಸಂಸ್ಥೆ ಅಭಿವೃದ್ಧಿಪಡಿಸಿದೆ. ನಿಮ್ಮ ಮಾಹಿತಿಗಾಗಿ ಗ್ರಾಂಡ್ ಸಂಸ್ಥೆಯು ಸರ್ಕಾರಿ ವಾಹನಗಳಿಗೆ ಕೆಂಪು ಹಾಗೂ ನೀಲಿ ದೀಪ ಎಚ್ಚರಿಕೆ ಬಣ್ಣಗಳನ್ನು ವಿತರಣೆ ಮಾಡುತ್ತಿದೆ.

ದೆಹಲಿ ಪೊಲೀಸ್ ತೆಕ್ಕೆಗೆ ಟಾಟಾ ನ್ಯಾನೋ

ಪ್ರಮುಖವಾಗಿಯೂ ಮಹಿಳಾ ಪೊಲೀಸ್ ಚಾಲಕರಿಗೆ ನ್ಯಾನೋ ಬಳಕೆ ಮಾಡಲು ಸುಲಭವಾಗಿರಲಿದೆ. ಇದರಂತೆ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

ದೆಹಲಿ ಪೊಲೀಸ್ ತೆಕ್ಕೆಗೆ ಟಾಟಾ ನ್ಯಾನೋ

ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಂಡ್ ಭದ್ರತಾ ಸಂಸ್ಥೆಯ ಮಾಂಟಿ ಸಿಂಗ್, ತುರ್ತು ಪ್ರತಿಕ್ರಿಯೆ ವಾಹನಗಳಿಗೆ ನ್ಯಾನೋ ಸ್ಪರ್ಧಾಳುವೆನಿಸಿಕೊಳ್ಳಲಿದೆ. ಈ ಮೂಲಕ ದೊಡ್ಡ ವಾಹನಗಳ ಬದಲು ಸಣ್ಣ ವಾಹನಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ದೆಹಲಿ ಪೊಲೀಸ್ ತೆಕ್ಕೆಗೆ ಟಾಟಾ ನ್ಯಾನೋ

ಒಟ್ಟಿನಲ್ಲಿ ಎರಡು ಲಕ್ಷ ರು.ಗಳಲ್ಲಿ ಲಭ್ಯವಾಗುವ ನ್ಯಾನೋ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿದೆಯೇ? ಹಾಗೆಯೇ ಸದ್ಯದಲ್ಲೇ ದೆಹಲಿ ಪೊಲೀಸ್ ತೆಕ್ಕೆಗೆ ಸೇರಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The Tata Nano, draped in Delhi Police livery, that you see here in the pic above is a concept that has been showcased at the ongoing India International Security Expo, which is being held in Pragati Maidan, New Delhi.
Story first published: Friday, September 27, 2013, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X