ಆಲ್ಟೊಗೆ ಟಕ್ಕರ್ ನೀಡಲು ಟಾಟಾದಿಂದ ದೊಡ್ಡ ನ್ಯಾನೋ

By Nagaraja

ಎಷ್ಟೇ ಕಸರತ್ತು ಮಾಡಿದರೂ ಒಂದು ವಿಭಾಗದ ಜನರನ್ನು ಹೊರತುಪಡಿಸಿದರೆ ಹೆಚ್ಚಿನ ಆಕರ್ಷಣೆ ಕಾಪಾಡುವಲ್ಲಿ ವಿಶ್ವದ ಅತಿ ಅಗ್ಗದ ಕಾರು ನ್ಯಾನೋ ವಿಫಲಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ನ್ಯಾನೋದಿಂದ ದೇಶದ ಜನಪ್ರಿಯ ಮಾರುತಿ ಆಲ್ಟೊ ಮಾರಾಟಕ್ಕೆ ಕಿಂಚಿತ್ತು ಸವಾಲೆಸಲು ಸಾಧ್ಯವಾಗಿರಲಿಲ್ಲ.

ಈಗ ಹೊಸ ಚಿಂತನೆಯೊಂದಿಗೆ ಮುಂದೆ ಬಂದಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನ್ಯಾನೋ ಘಟಕದಿಂದಲೇ ಮಗದೊಂದು ಆಲ್ಟೊ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ.

ಆಲ್ಟೊಗೆ ಟಕ್ಕರ್ ನೀಡಲು ಟಾಟಾದಿಂದ ದೊಡ್ಡ ನ್ಯಾನೋ

ನ್ಯಾನೋದ ಅದೇ ತಳಹದಿಯಲ್ಲಿ ದೊಡ್ಡ ಹ್ಯಾಚ್‌ಬ್ಯಾಕ್ ನಿರ್ಮಾಣ ಮಾಡುವುದು ಟಾಟಾ ಗುರಿಯಾಗಿದೆ. ಇದು ಗುಜರಾತ್‌ನ ಸನಂದ್ ಘಟಕದಿಂದಲೇ ನಿರ್ಮಾಣವಾಗಲಿದ್ದು, ಈಗಾಗಲೇ 'ಪೆಲಿಕನ್' (Pelican)ಎಂಬ ಕೋಡ್ ಪಡೆದುಕೊಂಡಿದೆ.

ಆಲ್ಟೊಗೆ ಟಕ್ಕರ್ ನೀಡಲು ಟಾಟಾದಿಂದ ದೊಡ್ಡ ನ್ಯಾನೋ

ನ್ಯಾನೋ ಅಪ್‌ಗ್ರೇಡ್ ವರ್ಷನ್ ಆಗಿರುವ ಇದು 'ಎಕ್ಸ್302' ಫ್ಲ್ಯಾಟ್‌ಫಾರ್ಮ್‌ನಲ್ಲಿ ಸಿದ್ಧಗೊಳ್ಳಲಿದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಂದರೆ ಒಂದು ಲೀಟರ್ ಪೆಟ್ರೋಲ್ ಜೊತೆಗೆ ಅತಿ ಚಿಕ್ಕ 800 ಸಿಸಿ ಡೀಸೆಲ್ ಎಂಜಿನ್ ಇದರಲ್ಲಿರಲಿದೆ.

ಆಲ್ಟೊಗೆ ಟಕ್ಕರ್ ನೀಡಲು ಟಾಟಾದಿಂದ ದೊಡ್ಡ ನ್ಯಾನೋ

ಈ ಅಗ್ಗದ ಡೀಸೆಲ್ ಕಾರನ್ನು ವಿದೇಶಕ್ಕೂ ರಫ್ತು ಮಾಡುವ ಯೋಜನೆಯನ್ನು ಟಾಟಾ ಹೊಂದಿರುತ್ತದೆ. ಅಂತೆಯೇ ತಿಂಗಳಲ್ಲಿ 2,500 ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿರುವ ಸಂಸ್ಥೆಯು ರಿ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

  • ನ್ಯಾನೋಗಿಂತಲೂ ದೊಡ್ಡ ಹ್ಯಾಚ್‌ಬ್ಯಾಕ್,
  • ಸ್ಪರ್ಧಾತ್ಮಕ ಬೆಲೆ,
  • ಎರಡು ಹೊಸ ಎಂಜಿನ್‌ಗಳು - 1 ಲೀಟರ್ ಪೆಟ್ರೋಲ್ ಮತ್ತು 800ಸಿಸಿ ಡೀಸೆಲ್,
  • ಗುಜರಾತ್‌ನ ಸನಂದ್ ಘಟಕದಲ್ಲಿ ನಿರ್ಮಾಣ,
  • ತಿಂಗಳಿಗೆ 20,000 ಯುನಿಟ್‌ಗಳ ನಿರ್ಮಾಣ ಗುರಿ,
  • ಮಾರುತಿ ಆಲ್ಟೊ, ಹ್ಯುಂಡೈ ಇಯಾನ್ ಟಾರ್ಗೆಟ್
  • ಆಲ್ಟೊಗೆ ಟಕ್ಕರ್ ನೀಡಲು ಟಾಟಾದಿಂದ ದೊಡ್ಡ ನ್ಯಾನೋ

    ಓದುಗರ ಗಮನಕ್ಕೆ: ಇಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಕೆ ಮಾಡಲಾಗಿದ್ದು, 2012 ಮೇ ತಿಂಗಳಲ್ಲಿ ನಡೆದ ಜಿನೆವಾ ಮೋಟಾರು ಶೋದಲ್ಲಿ ಟಾಟಾ ಪ್ರದರ್ಶಿಸಿರುವ ಮೆಗಾಫಿಕ್ಸೆಲ್ ಹೈಬ್ರಿಡ್ ಕಾನ್ಸೆಪ್ಟ್ ಚಿತ್ರಗಳನ್ನು ಉಪಯೋಗಿಸಲಾಗಿದೆ.

Most Read Articles

Kannada
English summary
Tata Motors is planning to launch a new vehicle, code named the Pelican, to take on the best selling car in India, the Maruti Suzuki Alto.
Story first published: Tuesday, January 20, 2015, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X