ಗ್ರಾಂಡ್ ಐ10 ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಾಯಿತೇ?

ಇತ್ತೀಚೆಗಷ್ಟೇ ಭಾರತ ಕಾರು ಮಾರುಕಟ್ಟೆಗೆ ಹ್ಯುಂಡೈ 'ಗ್ರಾಂಡ್ ಐ10' ಭರ್ಜರಿ ಎಂಟ್ರಿ ಕೊಟ್ಟಿತ್ತು. ಪ್ರಸ್ತುತ ಕಾರು ವಾಹನ ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಗಳನ್ನು ಮೂಡಿಸಿರುವಂತೆಯೇ ದೇಶದ ಇತರ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.

ದೇಶದ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಗ್ರಾಂಡ್ ಐ10 ಆರಂಭಿಕ ದರ 4.29 ಲಕ್ಷ ರು.ಗಳಾಗಿವೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಗ್ರಾಂಡ್ ಐ10, ಇರಾ, ಮ್ಯಾಗ್ನಾ, ಸ್ಪೋರ್ಟ್ಸ್ ಮತ್ತು ಆಸ್ಟಾ ಆಪ್ಷನ್ ಸೇರಿದಂತೆ ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

ಇದು 1.2 ಲೀಟರ್ ಕಪ್ಪ ಪೆಟ್ರೋಲ್ ಎಂಜಿನ್ ಮತ್ತು 1.1 ಲೀಟರ್ ಯು2 ಸಿಆರ್‌ಡಿಐ ಡೀಸೆಲ್ ಮೋಟಾರ್ ಎಂಜಿನ್‌ಗಳಲ್ಲಿ ಲಭ್ಯವಿರುತ್ತದೆ. ಅಷ್ಟಕ್ಕೂ ಹ್ಯುಂಡೈ ನೂತನ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರಿಗೆ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಾಯಿತೇ? ಗ್ರಾಂಡ್ ಐ10ಗೆ ಸವಾಲಾಗಿರುವ ಕಾರುಗಳು ಯಾವುವು? ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ಐ10 ಹಾಗೂ ಐ20 ನಡುವೆ ಕಾಣಿಸಿಕೊಂಡಿರುವ ನೂತನ ಗ್ರಾಂಡ್ ಐ10, ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಮುಂದಿನ ಸ್ಲೈಡರ್ ಮುಖಾಂತರ ಯಾವೆಲ್ಲ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಹ್ಯುಂಡೈ ಗ್ರಾಂಡ್ ಐ10 ಸವಾಲಾಗಲಿದೆ ಎಂಬುದನ್ನು ತಿಳಿದುಕೊಳ್ಳಿರಿ...

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 4.49 ಲಕ್ಷ ರು.ಗಳಿಂದ 6.88 ಲಕ್ಷ ರು.

ವಾಹನೋದ್ಯಮ ಮಾಹಿತಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಪೈಕಿ ಮಾರುತಿ ಸ್ವಿಫ್ಟ್ ಕೂಡಾ ಒಂದಾಗಿದೆ. ಉತ್ತಮ ನಿರ್ವಹಣೆ, ಮೈಲೇಜ್ ಹಾಗೂ ತನ್ನದೇ ಆದ ವಿಶೇಷ ವಿನ್ಯಾಸ ಪಡೆದುಕೊಂಡಿರುವ ಸ್ವಿಫ್ಟ್, ಗ್ರಾಂಡ್ ಐ10ಗೆ ಪ್ರಮುಖ ಪೈಪೋಟಿ ಎನಿಸಿಕೊಂಡಿದೆ.

ಫೋರ್ಡ್ ಫಿಗೊ

ಫೋರ್ಡ್ ಫಿಗೊ

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 3.91 ಲಕ್ಷ ರು.ಗಳಿಂದ 6.08 ಲಕ್ಷ ರು.

2010ರಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಿದ್ದ ಫೋರ್ಡ್ ಫಿಗೊ ಸಣ್ಣ ಕಾರು ವಿಭಾಗದಲ್ಲಿ ಪ್ರೀಮಿಯಂ ಲುಕ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಮಾರಾಟದಲ್ಲೂ ಪ್ರತಿಬಿಂಬಿಸುತ್ತಿದೆ.

ಟೊಯೊಟಾ ಲಿವಾ

ಟೊಯೊಟಾ ಲಿವಾ

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 4.46 ಲಕ್ಷ ರು.ಗಳಿಂದ 6.59 ಲಕ್ಷ ರು.

ಟಿಆರ್‌ಡಿ ಸ್ಪೋರ್ಟಿವೊ ವಿಶೇಷ ಆವೃತ್ತಿಯಲ್ಲಿ 90 ಪಿಎಸ್ ಪವರ್ ಉತ್ಪಾದಿಸುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟೊಯೊಟಾ ಲಿವಾ ಸದ್ಯ ದೇಶದಲ್ಲಿರುವ ಕಾರುಗಳ ಪೈಕಿ ಅತ್ಯಂತ ಶಕ್ತಿಶಾಲಿ ಹ್ಯಾಚ್‌ಬ್ಯಾಕ್ ಕಾರೆನಿಸಿಕೊಂಡಿದೆ.

 ನಿಸ್ಸಾನ್ ಮೈಕ್ರಾ

ನಿಸ್ಸಾನ್ ಮೈಕ್ರಾ

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 3.50 ಲಕ್ಷ ರು.ಗಳಿಂದ 7.14 ಲಕ್ಷ ರು.

ಹೊಸ ನಿಸ್ಸಾನ್ ಮೈಕ್ರಾ ಮುಂಭಾಗ ಹಾಗೂ ಹಿಂಭಾಗವನ್ನು ಪರಿಷ್ಕೃತಗೊಳಿಸಲಾಗಿದೆ. ಪ್ರಸ್ತುತ ಕಾರು ಪ್ರತಿ ಲೀಟರ್‌ಗೆ 19.49 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 3.90 ಲಕ್ಷ ರು.ಗಳಿಂದ 5.99 ಲಕ್ಷ ರು.

ದರದ ವಿಚಾರಕ್ಕೆ ಬಂದಾಗ ಗ್ರಾಹಕರಿಗೆ ಉತ್ತಮ ಆಯ್ಕೆಗಳನ್ನು ಒದಗಿಸುವಲ್ಲಿ ಷೆವರ್ಲೆ ಬೀಟ್ ಯಶಸ್ವಿಯಾಗಿದೆ. ಇದು ಕೂಡಾ ಹ್ಯುಂಡೈ ನೂತನ ಕಾರಿಗೆ ಸವಾಲು ಒಡ್ಡಲಿದೆ.

ಟಾಟಾ ಮೋಟಾರ್ಸ್ ಇಂಡಿಕಾ ವಿಸ್ಟಾ

ಟಾಟಾ ಮೋಟಾರ್ಸ್ ಇಂಡಿಕಾ ವಿಸ್ಟಾ

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 4.70 ಲಕ್ಷ ರು.ಗಳಿಂದ 6.86 ಲಕ್ಷ ರು.

ಫಿಯೆಟ್ ಜತೆ ಜೊತೆಗಾರಿಕೆ ಹೊಂದಿರುವ ಟಾಟಾ ಮೋಟಾರ್ಸ್, ಇಂಡಿಕಾದಲ್ಲಿ ಹೆಚ್ಚು ಸಾಮರ್ಥ್ಯವುಳ್ಳ ಎಂಜಿನ್ ಆಳವಡಿಸಿಕೊಂಡಿದೆ.

ಷೆವರ್ಲೆ ಸೈಲ್ ಯು-ವಿಎ

ಷೆವರ್ಲೆ ಸೈಲ್ ಯು-ವಿಎ

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 4.19 ಲಕ್ಷ ರು.ಗಳಿಂದ 6.71 ಲಕ್ಷ ರು.

ಪರಿಣಾಮಕಾರಿ 248 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಷೆವರ್ಲೆ ಸೈಲ್ ಯುವಿಎ ಕೂಡಾ ಪ್ರಮುಖ ಪ್ರತಿಸ್ಪರ್ದಿ ಎನಿಸಿಕೊಳ್ಳಲಿದೆ.

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 4.32 ಲಕ್ಷ ರು.ಗಳಿಂದ 6.34 ಲಕ್ಷ ರು.

ಮಾರುತಿ ಫ್ಯಾಮಿಲಿ ಪೈಕಿ ಎತ್ತರವಾದ ವಿನ್ಯಾಸ ಪಡೆದುಕೊಂಡಿರುವ ರಿಟ್ಜ್ ನಿರ್ದಿಷ್ಟ ಸಂಖ್ಯೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೋಂಡಾ ಬ್ರಿಯೊ

ಹೋಂಡಾ ಬ್ರಿಯೊ

ದರ ಮಾಹಿತಿ (ದೆಹಲಿ ಎಕ್ಸ್ ಶೋ ರೂಂ): 4.12 ಲಕ್ಷ ರು.ಗಳಿಂದ 6.13 ಲಕ್ಷ ರು.

2011ರಲ್ಲಿ ಲಾಂಚ್ ಆಗಿದ್ದ ಹೋಂಡಾ ಬ್ರಿಯೊದ ಹೊಸ ವೆರಿಯಂಟ್ 2013ರಲ್ಲಿ ಹಾಗೂ ಆಟೋಮ್ಯಾಟಿಕ್ ವರ್ಷನ್ 2012ರಲ್ಲಿ ಆಗಮನವಾಗಿತ್ತು. ಮೇಲೆ ತಿಳಿಸಿರುವ ಈ ಎಲ್ಲ ಕಾರುಗಳು ಮಾರುಕಟ್ಟೆಯಲ್ಲಿ ಗ್ರಾಂಡ್ ಐ10ಗೆ ಪ್ರಮುಖ ಸವಾಲಾಗಿರಲಿದೆ.

Most Read Articles

Kannada
English summary
Heating up the small car segment war, Hyundai has launched the Grand i10 hatchback at a starting price of Rs 4.29 lakh. The Grand is positioned between i10 and i20, and is targeted at the young professional aged between 25-35 years. In this space, cars like Maruti Suzuki Swift, Ford Figo, Toyota Liva and Nissan Micra are sold. We take a look at ten hatchbacks that Grand i10 will challenge.
Story first published: Wednesday, September 11, 2013, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X