ಮುಂದಿನ ತಿಂಗಳಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಲಾಂಚ್

Posted By:

ಒಂದೆಡೆ ಬೆಂಗಳೂರಿನಲ್ಲಿರುವ ಎರಡು ಘಟಕಗಳಲ್ಲಿನ ಕಾರ್ಮಿಕ ಮುಷ್ಕರದಿಂದ ತತ್ತರಿಸಿ ಹೋಗಿರುವ ಟೊಯೊಟಾ ಕಿರ್ಲೊಸ್ಕರ್ ಸಂಸ್ಥೆಯು, ಹಿನ್ನಡೆಯ ನಡುವೆಯೂ ಬಹುನಿರೀಕ್ಷಿತ ಎಟಿಯೋಸ್ ಕ್ರಾಸ್ ಬಿಡುಗಡೆ ದಿನಾಂಕ ನಿಗದಿಗೊಳಿಸಿದ್ದು, ಮೇ 7ರಂದು ದೇಶದ ಗ್ರಾಹಕರಿಗೆ ಪರಿಚಯಿಸಲಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿದ್ದ ಎಟಿಯೋಸ್ ಕ್ರಾಸ್, ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶ ಪಡೆಯಲಿದೆ. ಇದು ಸಾಮಾನ್ಯ ಎಟಿಯೋಸ್ ಲಿವಾಗಿಂತಲೂ 120 ಎಂಎಂ ಉದ್ದ, 40 ಎಂಎಂ ಅಗಲ ಹಾಗೂ 54 ಎಂಎಂ ಎತ್ತರವಿರಲಿದೆ.

ಮುಂದಿನ ತಿಂಗಳಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಲಾಂಚ್

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಕಾರಿನ ಸುತ್ತಲೂ ಕಪ್ಪು ಪ್ಲಾಸ್ಟಿಕ್ ಹೊದಿಕೆಯು ಭಾರತೀಯ ಗ್ರಾಹಕರಿಗೆ ಹೊಸತೆನಿಸಲಿದೆ. ಇದಕ್ಕೆ ಸೇರ್ಪಡೆಯೆಂಬಂತೆ ಕಾರಿನ ಬದಿಗಳಲ್ಲಿ ಬೆಳ್ಳಿ ಹೋದಿಕೆ ನೀಡಲಾಗಿದೆ. ಇನ್ನು ಮುಂದುಗಡೆ ಫ್ರಂಟ್ ಗಾರ್ಡ್ ರೂಪದಲ್ಲಿ ಸಿಲ್ವರ್ ಪ್ಲೇಟ್ ಲಗತ್ತಿಸಲಾಗಿದೆ. ಇದು ಫ್ರಂಟ್ ಗ್ರಿಲ್‌ ಇನ್ನಷ್ಟು ಸ್ಟೈಲಿಷ್ ಆಗಿ ಕಾಣಲು ನೆರವಾಗುತ್ತದೆ.

ಮುಂದಿನ ತಿಂಗಳಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಲಾಂಚ್

ಹೊರಂಗಣ ವಿನ್ಯಾಸದಲ್ಲಿರುವ ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ ಇದರಲ್ಲಿರುವ ರೂಫ್ ರೈಲ್, ಫಾಗ್ ಮೌಂಟೆಡ್ ಇಂಡಿಕೇಟರ್ ಲ್ಯಾಂಪ್, 15 ಇಂಚು ಡೈಮಂಡ್ ಕಟ್ ಅಲಾಯ್ ವೀಲ್ ಹಾಗೂ ರೂಫ್ ಮೌಂಟೆಡ್ ರಿಯರ್ ಸ್ಪಾಯ್ಲರ್ ಆಗಿದೆ.

ಮುಂದಿನ ತಿಂಗಳಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಲಾಂಚ್

ಇನ್ನು ಕಾರಿನೊಳಗೂ ಆಧುನಿಕ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಸುರಕ್ಷತೆಯ ದೃಷ್ಟಿಕೋನದಲ್ಲಿ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಹಾಗೂ ಇಬಿಡಿ ಇದರಲ್ಲಿರಲಿದೆ. ಇಟಿಯೋಸ್ ಕ್ರಾಸ್ ಬ್ಯಾಡ್ಜ್ ಕಾರಿನ ಒಳಗಡೆ ಹಾಗೂ ಹೊರಗಡೆಯೂ ಇರಲಿದೆ.

ಮುಂದಿನ ತಿಂಗಳಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಲಾಂಚ್

ಇದು ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. 1.2 (79 ಬಿಎಚ್‌ಪಿ) ಹಾಗೂ 1.5 ಲೀಟರ್ ಪೆಟ್ರೋಲ್ (89 ಬಿಎಚ್‌ಪಿ) ಮತ್ತು 1.4 ಡೀಸೆಲ್ (68 ಬಿಎಚ್‌ಪಿ) ಎಂಜಿನ್ ಪಡೆದುಕೊಳ್ಳಲಿದೆ.

ಮುಂದಿನ ತಿಂಗಳಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಲಾಂಚ್

ಪ್ರಮುಖವಾಗಿಯೂ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಹಾಗೂ ಮುಂಬರುವ ಫಿಯೆಟ್ ಅವೆಂಚ್ಯೂರಾ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಅಂದ ಹಾಗೆ ಎಟಿಯೋಸ್ ಕ್ರಾಸ್ 7.50 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಆಸಕ್ತ ಗ್ರಾಹಕರು ರು. 50,000 ಪಾವತಿಸಿ ತಮ್ಮ ಕಾರನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

• ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು,
• ಲೆಥರ್ ಹೋದಿಕೆಯ ಸ್ಟೀರಿಂಗ್,
• ಆಡಿಯೋ ಸಿಸ್ಟಂ ಜತೆ ಬ್ಲ್ಯೂಟೂತ್, ಯುಎಸ್‌ಬಿ, ಆಕ್ಸ್-ಇನ್,
• ಸ್ಟೀರಿಂಗ್‌ನಲ್ಲೇ ಆಡಿಯೋ ಕಂಟ್ರೋಲ್ ನಿಯಂತ್ರಣ,
• ಒವಿಆರ್‌ಎಂ ಜತೆ ಇಂಡಿಕೇಟರ್,
• ರಿಯರ್ ವಿಂಡೋ ಡಿಫಾಗರ್,
• ಸೆಂಟ್ರಲಿ ಮೌಂಟೆಡ್ ಟ್ಯಾಕೋಮೀಟರ್, ಸ್ಪೀಡೋಮೀಟರ್ ಜತೆಗೆ ಡಿಜಿಟಲ್ ಕ್ಲಾಕ್

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
Toyota Etios Cross, the rugged crossover version of the regular hatchback, will be launched in India on May 7, 2014. The Etios Cross was showcased at the Auto Expo 2014 where visitors took a liking to the tough looking hatchback, though the Etios Liva is not the most popular car.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more