ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

Written By:

ಭಾರತೀಯ ಮಾರುಕಟ್ಟೆಯಲ್ಲಿ ಒಂದರ ಬಳಿಕ ಒಂದರಂತೆ ನೂತನ ಕಾರುಗಳ ಪರಿಚಯವಾಗುತ್ತಲೇ ಇದೆ. ಇದಕ್ಕೊಂದು ನೂತನ ಸೇರ್ಪಡೆಯೆಂಬಂತೆ ಎಲ್ಲ ಹೊಸತನದಿಂದ ಕೂಡಿರುವ ಟೊಯೊಟಾ ಎಟಿಯೋಸ್ ಕ್ರಾಸ್, ಮೇ 9ರಂದು ಭರ್ಜರಿ ಲಾಂಚ್ ಆಗಲಿದೆ.

ಕ್ರಿಕೆಟ್ ಸ್ಟಾರ್ ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

ನಾವು ಈಗಾಗಲೇ ಮಾಹಿತಿ ನೀಡಿರುವಂತೆಯೇ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಕಾರು ಇದಾಗಿರಲಿದೆ. ಇದರ ವಿನೂತನ ವಿನ್ಯಾಸ ಈಗಾಗಲೇ ವಾಹನ ಪ್ರಿಯರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಂತೆ ಮುಷ್ಕರ ಬಿಸಿ ತಟ್ಟಿದ ಟೊಯೊಟಾ ಚೇತರಿಸಿಕೊಂಡಿದ್ದು, ಎಟಿಯೋಸ್ ಕ್ರಾಸ್ ಬಿಡುಗಡೆ ದಿನಾಂಕವನ್ನು ಅಧಿಕೃತಗೊಳಿಸಿದೆ.

ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ನಿಮ್ಮ ಮಾಹಿತಿಗಾಗಿ, ಎಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ತಲಹದಿಯಲ್ಲಿ ರೂಪುಗೊಂಡಿರುವ ಆಕರ್ಷಕ ಕ್ರಾಸೋವರ್ ಮಾದರಿ ಇದಾಗಿದೆ.

ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ಇದರಂತೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಗೊಳಿಸಲಾಗಿದೆ. ಈ ಹಿಂದೆ ನವದೆಹಲಿಯ ಸಮೀಪದ ನೋಯ್ಡಾದಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಎಟಿಯೋಸ್ ಕ್ರಾಸ್ ಭರ್ಜರಿ ಪ್ರದರ್ಶನ ಕಂಡಿತ್ತು.

ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ತನ್ನ ವಿಶಿಷ್ಟ ನೋಟ ಎಟಿಯೋಸ್ ಕ್ರಾಸ್‌ನ ಪ್ಲಸ್ ಪಾಯಿಂಟ್ ಆಗಿರಲಿದೆ. ಕಾರಿನೊಳಗೂ ಹೆಚ್ಚಿನ ವೈಶಿಷ್ಟ್ಯಗಳಿಗೆ ಸಂಸ್ಥೆ ಆದ್ಯತೆ ಕೊಟ್ಟಿದೆ.

ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ಪರಿಷ್ಕೃತ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್, ರೂಫ್ ರೈಲಿಂಗ್, ಸೈಡ್ ಕ್ಲಾಡಿಂಗ್, ಔಟ್‌ಸೈಡ್ ವ್ಯೂ ರಿಯರ್ ಮಿರರ್, ಇಂಡಿಕೇಟರ್ ಹಾಗೂ ಡೈಮಂಡ್ ಕಟ್ ಅಲಾಯ್ ವೀಲ್ ಪ್ರಮುಖವಾಗಿರಲಿದೆ.

ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ಅಂದ ಹಾಗೆ ಮೂರು ಎಂಜಿನ್ ಆಯ್ಕೆಗಳಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಆಗಮನವಾಗಲಿದೆ. ಈ ಪೈಕಿ ಮೊದಲನೆಯದ್ದು 78 ಅಶ್ವಶಕ್ತಿ ಉತ್ಪಾದಿಸಬಲ್ಲ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಗಿರಲಿದೆ. ಹಾಗೆಯೇ ಹೆಚ್ಚು ಶಕ್ತಿಯುತ ಅಂದರೆ 88 ಅಶ್ವಶಕ್ತಿ ಉತ್ಪಾದಿಸಬಲ್ಲ 1.5 ಲೀಟರ್ ಪೆಟ್ರೋಲ್ ಇನ್ನುಳಿದಂತೆ 67 ಅಶ್ವಶಕ್ತಿ ಉತ್ಪಾದಿಸುವ 1.4 ಲೀಟರ್ ಡೀಸೆಲ್ ಎಂಜಿನ್ ಸಹ ಪಡೆದುಕೊಳ್ಳಲಿದೆ.

ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ಇನ್ನು ಕಾರಿನೊಳಗೂ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಇದು 2 ಡಿನ್ ಆಡಿಯೋ ಸಿಸ್ಟಂ ಜತೆ ಬ್ಲೂಟೂತ್, ಸ್ಟೀರಿಂಗ್ ವೀಲ್‌ನಲ್ಲೇ ಆಡಿಯೋ ಕಂಟ್ರೋಲ್, ಪೈಂಟ್ ಕಲರ್‌ಗೆ ಹೊಂದಿಕೆಯಾದ ಇಂಟಿರಿಯರ್ ಮತ್ತು ಪ್ರೀಮಿಯಂ ಫ್ಯಾಬ್ರಿಕ್ ಸೀಟುಗಳನ್ನು ಪಡೆಯಲಿದೆ.

ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಮತ್ತು ಇನ್ನಷ್ಟೇ ಆಗಮನವಾಗಲಿರುವ ಫಿಯೆಟ್ ಅವೆಂಚ್ಯುರಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಎಟಿಯೋಸ್ ಕ್ರಾಸ್, ಬೇಸ್ ವೆರಿಯಂಟ್ 5ರಿಂದ 6 ಲಕ್ಷ ರು.ಗಳ ಒಳಗಡೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಆರಾಮದಾಯಕತೆ

ಆರಾಮದಾಯಕತೆ

 • ಆಡಿಯೋ ಕಂಟ್ರೋನ್ ಆನ್ ಸ್ಟೀರಿಂಗ್ ವೀಲ್,
 • 2 ಡಿನ್ ಆಡಿಯೋ ವಿತ್ ಬ್ಲೂಟೂತ್, ಯುಎಸ್‌ಬಿ, ಆಕ್ಸ್-ಇನ್ ಆಂಡ್ ರಿಮೋಟ್,
 • ರಿಯರ್ ಡಿಫಾಗರ್ ವಿತ್ ವೈಪರ್,
 • ಕೂಲ್ಡ್ 13 ಲೀಟರ್ ಗ್ಲೋವ್ ಬಾಕ್ಸ್
 • ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ವಿತ್ ಟಿಲ್ಟ್ ಫಂಕ್ಷನ್
 ಆಯಾಯ

ಆಯಾಯ

 • ಉದ್ದ - 3895 ಎಂಎಂ
 • ಅಗಲ - 1735 ಎಂಎಂ
 • ಎತ್ತರ - 1555 ಎಂಎಂ
 • ವೀಲ್ ಬೇಸ್ - 2460 ಎಂಎಂ
 • ಟರ್ನಿಂಗ್ ಸರ್ಕಲ್ ರೇಡಿಯಸ್ - 4.8 ಮೀಟರ್
ಸುರಕ್ಷತೆ

ಸುರಕ್ಷತೆ

 • ಡ್ಯುಯಲ್ ಫ್ರಂಟ್ ಎಸ್‌ಆರ್‌ಎಸ್ ಏರ್‌ಬ್ಯಾಗ್
 • ಎಬಿಎಸ್ ಜತೆ ಇಬಿಡಿ
ಕಲರ್ ವೆರಿಯಂಟ್

ಕಲರ್ ವೆರಿಯಂಟ್

 • ಇನ್ಪೆರ್ನೊ ಓರೆಂಜ್,
 • ಅಲ್ಟ್ರಾಮರೈನ್ ಬ್ಲೂ,
 • ಕ್ಲಾಸಿಕ್ ಗ್ರೇ,
 • ಹಾರ್ಮನಿ ಬೀಜ್,
 • ಸೆಲೆಸ್ಟಿಯಲ್ ಬ್ಲ್ಯಾಕ್,
 • ವೆರ್ಮಿಲಿಯನ್ ರೆಡ್,
 • ಸಿಂಫನಿ ಸಿಲ್ವರ್,
 • ವೈಟ್
ಡಸ್ಟರ್, ಇಕೊಸ್ಪೋರ್ಟ್ ಪ್ರತಿಸ್ಫರ್ದಿ ಎಟಿಯೋಸ್ ಕ್ರಾಸ್ ಕಣಕ್ಕೆ

ಇದೀಗ ಟೊಯೊಟಾ ಎಟಿಯೋಸ್ ಕ್ರಾಸ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

 

English summary
The Indian Market is witnessing launches after launches of new vehicles. Toyota will be launching their new crossover the Etios Cross in India on the 9th of May. The crossover is based on their Etios Liva hatchback.
Story first published: Saturday, May 3, 2014, 10:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark