ಗ್ರಾಹಕರು ಯಾಕೆ ಎರ್ಟಿಗಾ ಇಷ್ಟಪಡುತ್ತಾರೆ?

Written By:

ಆರಂಭದಿಂದಲೂ ಮಾರುತಿ ಸುಜುಕಿ ಎರ್ಟಿಗಾ ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಇವತ್ತಿಗೂ ನೂತನ ಎರ್ಟಿಗಾವೊಂದನ್ನು ಬುಕ್ ಮಾಡಿಸಿದ್ದಲ್ಲಿ ಕಾಯುವಿಕೆ ಅವಧಿಯಿರುತ್ತದೆ. ಇದು ಎರ್ಟಿಗಾ ಕಾರಿಗಿರುವ ಬೇಡಿಕೆಯನ್ನು ತೋರಿಸುತ್ತಿದೆ.

ಹೋಂಡಾ ಅಮೇಜ್ ವಾರ್ಷಿಕ ಎಡಿಷನ್

ಅಷ್ಟಕ್ಕೂ ದೇಶಿಯ ಮಾರುಕಟ್ಟೆಯಲ್ಲಿ ಎರ್ಟಿಗಾ ಮಲ್ಟಿ ಪರ್ಪಸ್ ವೆಹಿಕಲ್‌ಗೆ ಏಕೆ ಇಷ್ಟೊಂದು ಬೇಡಿಕೆ ಕಂಡುಬರುತ್ತಿದೆ? ಈ ಬಗ್ಗೆ ಸಹಜವಾಗಿಯೇ ನಿಮ್ಮಲ್ಲಿ ಕುತೂಹಲ ಮನೆ ಮಾಡಿರಬಹುದು. ಈ ನಿಟ್ಟಿನಲ್ಲಿ ಕೆಲವೊಂದು ಅಂಶಗಳನ್ನು ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಬ್ರಾಂಡ್ ಹೆಸರು

ಬ್ರಾಂಡ್ ಹೆಸರು

ನಿಸ್ಸಂಶವಾಗಿಯೂ ಮಾರುತಿ ಸುಜುಕಿ ಬ್ರಾಂಡ್ ಹೆಸರು ಎರ್ಟಿಗಾ ಎಂಪಿವಿ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಂತೆಯೇ ಜನರ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಮಾರುತಿ ಯಶಸ್ಸನ್ನು ಕಂಡಿದೆ.

ನಿರ್ವಹಣೆ

ನಿರ್ವಹಣೆ

ಮಹಾನಗರಗಳಿಂದ ಹಿಡಿದು ಸಣ್ಣ ಸಣ್ಣ ಪಟ್ಟಣ ಪ್ರದೇಶಗಳಲ್ಲೂ ಮಾರುತಿ ಸರ್ವೀಸ್ ಸೆಂಟರ್‌ಗಳಿವೆ. ಇದು ಗ್ರಾಹಕರಿಗೆ ಕಾರು ನಿರ್ವಹಣೆ ಮಾಡಲು ಸುಲಭವಾಗಿಸುತ್ತದೆ. ಹಾಗೆಯೇ ಬಿಡಿಭಾಗಗಳು ಸಹ ಕೈಗೆಟಕುವ ಬೆಲೆಗಳಲ್ಲಿ ನಿಮಗೆ ದೊರೆಯುತ್ತದೆ.

ಸ್ಥಳಾವಕಾಶ

ಸ್ಥಳಾವಕಾಶ

ಮಗದೊಂದು ಮುಖ್ಯ ಘಟಕವೆಂದರೆ ಎರ್ಟಿಗಾ ಎಂಪಿವಿ ಕಾರಲ್ಲಿ ಅತ್ಯಂತ ಹೆಚ್ಚು ಸ್ಥಳಾವಕಾಶ ದೊರೆಯುತ್ತದೆ. ಇದರಲ್ಲಿ ಮೂರು ಸಾಲಿನ ಆಸನ ವ್ಯವಸ್ಥೆಯಿದ್ದು, ಗರಿಷ್ಠ ಏಳು ಜನರಿಗೆ ಪ್ರಯಾಣಿಸಬಹುದಾಗಿದೆ. ಅಂದರೆ ವಾರಂತ್ಯದ ಪಯಣದಲ್ಲಿ ಎರ್ಟಿಗಾ ಬಳಕೆ ಯೋಗ್ಯವೆನಿಸುತ್ತದೆ. ಹಾಗೆಯೇ ದೊಡ್ಡ ಕುಟುಂಬಗಳ ಸಂಚಾರ ಸಮಸ್ಯೆಯನ್ನು ನಿವಾರಿಸುತ್ತದೆ.

ವಿನ್ಯಾಸ

ವಿನ್ಯಾಸ

ತಾಜಾ ವಿನ್ಯಾಸವನ್ನು ಎರ್ಟಿಗಾ ಹೊಂದಿದ್ದು, ಎಲ್ಲೂ ಭಾವಶೂನ್ಯವಾದಂತೆ ಭಾಸವಾಗುವುದಿಲ್ಲ. ಇದು ಸ್ಟೈಲಿಷ್ ಏರೋಡೈನಾಮಿಕ್ ವಿನ್ಯಾಸ ಕಾಪಾಡಿಕೊಂಡಿದೆ.

ರೈಡಿಂಗ್

ರೈಡಿಂಗ್

ದೊಡ್ಡ ಕಾರಾಗಿರುವ ಹೊರತಾಗಿಯೂ ಚಾಲನೆ ವೇಳೆ ಇಂತಹ ಅನುಭವವಾಗುವುದಿಲ್ಲ. ಇದನ್ನು ಹ್ಯಾಚ್‌ಬ್ಯಾಕ್ ಕಾರು ರೀತಿಯಲ್ಲೇ ಸುಲಭವಾಗಿ ಚಾಲನೆ ಮಾಡಬಹುದಾಗಿದೆ.

ಎಂಜಿನ್

ಎಂಜಿನ್

ಎರ್ಟಿಗಾದಲ್ಲಿ ಶಕ್ತಿಶಾಲಿ ಅದೇ ಹೊತ್ತಿಗೆ ಮಿತವ್ಯಯ ಎಂಜಿನ್ ಬಳಕೆ ಮಾಡಲಾಗಿದೆ. ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಈ ಎಂಯುವಿ ಲಭ್ಯವಿರುತ್ತದೆ. ಅವುಗಳೆಂದರೆ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ. ಇದರ ಪೆಟ್ರೋಲ್ ವೆರಿಯಂಟ್ 1373 ಸಿಸಿ ಕೆ ಸಿರೀಸ್ ವಿವಿಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 95 ಪಿಎಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ ಡೀಸೆಲ್ ಎಂಜಿನ್ 1248 ಸಿಸಿ ಡಿಡಿಐಎಸ್ (DDiS) ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 90 ಪಿಎಸ್ ಪವರ್ ಉತ್ಪಾದಿಸಲಿದೆ.

ಮೈಲೇಜ್

ಮೈಲೇಜ್

ಭಾರತ ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಮಾರುತಿ ಎರ್ಟಿಗಾ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 16.02 ಹಾಗೂ 20.77 ಕೀ.ಮೀ. ಮೈಲೇಜ್ ನೀಡಲಿದೆ.

ಸುರಕ್ಷತೆ

ಸುರಕ್ಷತೆ

ದರಕ್ಕೆ ಅನ್ವಯವಾಗುವಾಗುವಂತೆಯೇ ಎಬಿಎಸ್ ಹಾಗೂ ಇಬಿಡಿಗಳಂತಹ ಸುರಕ್ಷಾ ವೈಶಷ್ಟ್ಯಗಳನ್ನು ಎರ್ಟಿಗಾ ಪಡೆದುಕೊಂಡಿದೆ.

ಬೆಲೆ

ಬೆಲೆ

ಅಂತಿಮವಾಗಿ ಸ್ಮರ್ಧಾತ್ಮಕ ಬೆಲೆಗಳಲ್ಲಿ ಆಗಮನವಾಗಿರುವುದು ಎರ್ಟಿಗಾ ಹಿಂದಿರುವ ಯಶಸ್ಸಿನ ಗುಟ್ಟಾಗಿದೆ. ಇದರ ಬೆಂಗಳೂರು ಎಕ್ಸ್ ಶೋ ರೂಂ ದರ 6.21 ಲಕ್ಷ ರು.ಗಳಿಂದ ಆರಂಭವಾಗಿ 8.91 ಲಕ್ಷ ರು.ಗಳ ವರೆಗಿದೆ.

ವೈಶಿಷ್ಟ್ಯಗಳು - ಹೊರಮೈ

ವೈಶಿಷ್ಟ್ಯಗಳು - ಹೊರಮೈ

 • ಸ್ಟೈಲಿಶ್ ಕ್ಲಸ್ಟರ್ ಲ್ಯಾಂಪ್,
 • ಏರೋಡೈನಾಮಿಕ್ ಸ್ಟೈಲ್,
 • ಇನ್ ಬಿಲ್ಟ್ ಫಾಗ್ ಲ್ಯಾಂಪ್,
 • ಅಲಾಯ್ ವೀಲ್ಸ್,
 • ಸ್ಮಾರ್ಟ್ ಸೈಡ್ ವ್ಯೂ ಮಿರರ್,
 • ಕ್ಲಾಸಿ ಟೈಲ್ ಲೈಟ್
ವೈಶಿಷ್ಟ್ಯಗಳು - ಒಳಮೈ

ವೈಶಿಷ್ಟ್ಯಗಳು - ಒಳಮೈ

 • ಸ್ಪೋರ್ಟಿ ಡ್ಯಾಶ್‌ಬೋರ್ಡ್,
 • ಇನ್ ಬಿಲ್ಟ್ ಮ್ಯೂಸಿಕ್ ಸಿಸ್ಟಂ,
 • 2ನೇ ಸಾಲಿನಲ್ಲಿ ಎಸಿ ಹಾಗೂ ನಿಯಂತ್ರಣ,
 • ಕ್ರೋಮ್ ಡೋರ್ ಹ್ಯಾಂಡಲ್,
 • ಸ್ಟೈಲಿಷ್ ಮೀಟರ್ ಕ್ಲಸ್ಟರ್,
 • ಉನ್ನತ ಗುಣಮಟ್ಟದ ಅಪ್‌ಹೋಲ್‌ಸ್ಟ್ರೇ,
 • 2ನೇ ಸಾಲಿನಲ್ಲಿ ಆರ್ಮ್ ರೆಸ್ಟ್,
 • ಫ್ರಂಟ್ ಆಂಡ್ ರಿಯರ್ ಡೋರ್ ಪಾಕೆಟ್,
 • ಟ್ವೀಟರ್,
 • ಸ್ಟೀರಿಂಗ್ ಜತೆ ಆಡಿಯೋ ಕಂಟ್ರೋಲ್
ಬಣ್ಣಗಳು

ಬಣ್ಣಗಳು

 • ಸೆರೆನ್ ಬ್ಲೂ,
 • ಇಕ್ರೂ ಬೀಜ್,
 • ಫೈರ್ ಬ್ರಿಕ್ ರೆಡ್,
 • ಗ್ರಾನೈಟ್ ಗ್ರೇ,
 • ಸಿಲ್ಕಿ ಸಿಲ್ವರ್,
 • ಡಸ್ಕಿ ಬ್ರೌನ್,
 • ಸುಪಿರಿಯೊ ವೈಟ್
English summary
Maruti Suzuki's MUV, the Ertiga, has been on sale for a while now and has been doing well from the start. Even today there is a waiting period if you book a new Ertiga.
Story first published: Monday, April 21, 2014, 10:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark