ರೆನೊ ಡಸ್ಟರ್ ಮೀರಿಸಿತೇ ನಿಸ್ಸಾನ್ ಟೆರನೊ ಎಸ್‌ಯುವಿ?

Written By:

ನಿಸ್ಸಾನ್ ಇಂಡಿಯಾ ನೂತನ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಅನಾವರಣ ಮಾಡಲಿರುವಂತೆಯೇ ಕಾರು ಪ್ರಿಯರಲ್ಲಿ ಕುತೂಹಲ ಮನೆ ಮಾಡಿಬಿಟ್ಟಿದೆ. ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ನಿಸ್ಸಾನ್ ಟೆರೆನೊ ಮುಖಾಂತರ ಹೆಚ್ಚು ಪ್ರೀಮಿಯಂ ವಿನ್ಯಾಸದೊಂದಿಗೆ ಸದ್ಯದಲ್ಲೇ ಭಾರತ ರಸ್ತೆಗೆ ಪ್ರವೇಶಿಸಲಿದೆ.

ಹಾಗಾಗಿ ಜಾಗತಿಕವಾಗಿ ರೆನೊದ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ಡಸ್ಟರನ್ನು ನೂತನ ನಿಸ್ಸಾನ್ ಟೆರನೊ ಎಸ್‌ಯುವಿ ಹಿಮ್ಮೆಟ್ಟಿಸಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರಂತೆ ನಿಸ್ಸಾನ್ ಟೆರನೊ ಎಕ್ಸ್‌ಕ್ಲೂಸಿವ್ ಚಿತ್ರಗಳನ್ನು ಟ್ವಿಟರ್‌ನಲ್ಲಿ ಆಟೋ ಅಭಿಮಾನಿಯೊಬ್ಬ ಬಿಡುಗಡೆ ಮಾಡಿರುವುದು ಇನ್ನಷ್ಟು ಆಸಕ್ತಿದಾಯಕವೆನಿಸಿದೆ.

ಎಂಜಿನ್

ಎಂಜಿನ್

ಡಸ್ಟರ್‌ನಲ್ಲಿ ಸದ್ಯ ಲಭ್ಯವಿರುವ ಪೆಟ್ರೋಲ್ ಹಾಗೂ ಡೀಸೆಲ್‌ಗೆ ಸಮಾನವಾದ ಎಂಜಿನ್ ಆಯ್ಕೆಗಳಲ್ಲಿ ನಿಸ್ಸಾನ್ ಟೆರೆನೊ ಆಗಮನವಾಗಲಿದೆ.

ದುಬಾರಿ

ದುಬಾರಿ

ಇನ್ನು ದರ ಹೋಲಿಸಿದರೆ ಡಸ್ಟರ್‌ಗಿಂತ ಪ್ರೀಮಿಯಂ ಲುಕ್ ಪಡೆದಿರುವ ಟೆರನೊ ದುಬಾರಿಯೆನಿಸಲಿದೆ. ದರ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಕಾರಿನ ಗುಣಮಟ್ಟದಲ್ಲೂ ವೃದ್ಧಿ ಕಾಣಲಿದೆ.

ವಿನ್ಯಾಸ

ವಿನ್ಯಾಸ

ಮೊದಲ ನೋಟದಲ್ಲಿ ನಿಸ್ಸಾನ್ ಟೆರನೊ ಆಕರ್ಷಕವಾಗಿ ಗೋಚರಿಸುತ್ತಿದೆ. ಇದರ ಮುಂಭಾಗ ಸೇರಿದಂತೆ ಹಿಂಭಾಗದಲ್ಲೂ ವಿಶಾಲವಾದ ವಿನ್ಯಾಸ ಪಡೆದುಕೊಂಡಿದೆ. ಹಾಗೆಯೇ ಉತ್ತಮ ಗ್ರೌಂಡ್ ಕ್ಲಿಯರನ್ಸ್ ಹೊಂದಿದೆ.

ಸದ್ಯದಲ್ಲೇ ಲಾಂಚ್

ಸದ್ಯದಲ್ಲೇ ಲಾಂಚ್

ಅಂದ ಹಾಗೆ ನಿಸ್ಸಾನ್ ಮುಂಬೈನಲ್ಲಿ ನಾಳೆ (ಮಂಗಳವಾರ) ಅನಾವರಣಗೊಳ್ಳಲಿದ್ದು, ದರ ಸೇರಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಡಸ್ಟರ್ ಮೀರಿಸಿತೇ?

ಡಸ್ಟರ್ ಮೀರಿಸಿತೇ?

ನೂತನ ನಿಸ್ಸಾನ್ ಟೆರನೊ ಭಾರತೀಯ ಗ್ರಾಹಕರನ್ನು ಆಕರ್ಷಿಸಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಲಭ್ಯವಾಗಲಿದೆ.

English summary
Nissan India will unveil a new compact SUV tomorrow, 20th Aug in Mumbai. Named Terrano, it is based on Renault‘s best selling car globally, Duster.
Story first published: Monday, August 19, 2013, 11:51 [IST]
Please Wait while comments are loading...

Latest Photos