ರಸ್ತೆ ಅಪಘಾತ ತಾತ್ಕಾಲಿಕ ಪರಿಹಾರ- ಭಾಗ 2

Road Accident
ಅಪಘಾತ ಮಾಡಿದ ವಾಹನ ಮಾಲೀಕನ ತಪ್ಪಿಲ್ಲದೇ ಅಪಘಾತ ಸಂಭವಿಸಿದರೆ, ಅಂದರೆ ಅಪಘಾತಕ್ಕೆ ಈಡಾದವನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದರೆ ಅದಕ್ಕೆ ನ್ಯಾಯಮಂಡಳಿ ತಾತ್ಕಾಲಿಕ ಪರಿಹಾರ ನೀಡುವಂತೆ ತಿಳಿಸುತ್ತದೆ. ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯ ಕ್ಕೆ ಒಳಗಾದರೆ ನ್ಯಾಯಮಂಡಳಿಯು ಕಾಯಿದೆಯಲ್ಲಿ ತಿಳಿಸಿದ ತಾತ್ಕಾಲಿಕ ಪರಿಹಾರ ಧನವನ್ನು ನೀಡುವಂತೆ ವಾಹನ ಮಾಲೀಕನಿಗೆ ತಿಳಿಸುತ್ತದೆ.

ಕೆಲವೊಮ್ಮೆ ಅಪಘಾತಕ್ಕೆ ಈಡಾದತನದ್ದೇ ತಪ್ಪಿದರೂ, ವಾಹನ ಚಾಲಕನ ತಪ್ಪಲ್ಲದಿದ್ದರೂ ಆತ ವಕಾಲತ್ತು ಮಾಡುವಂತಿಲ್ಲ. ಎರಡು ಕಣ್ಣು ಕಳೆದುಕೊಳ್ಳುವುದು ಅಥವಾ ಕಿವಿ ಕೇಳಿಸದಾಗುವುದು ಅಥವಾ ದೇಹದ ಯಾವುದಾದರೂ ಅಂಗ ತುಂಡಾಗುವುದು ಇತ್ಯಾದಿಗಳು ಅಪಘಾತದಿಂದ ಉಂಟಾಗುವ ಶಾಶ್ವತ ಅಂಗವೈಕಲ್ಯಗಳಾಗಿವೆ.

ಅಪಘಾತದಿಂದ ಸಾವನ್ನಪ್ಪಿದರೆ ನೀಡಬೇಕಾದ ಪರಿಹಾರ ಧನ 50 ಸಾವಿರ ರೂ. ಅಥವಾ ಶಾಶ್ವತ ಅಂಗವೈಕಲ್ಯವುಂಟಾದರೆ 25 ಸಾವಿರ ರೂ. ಪರಿಹಾರ ಧನ ನೀಡಬೇಕಾಗುತ್ತದೆ. ರಸ್ತೆ ಅಪಘಾತ ಪರಿಹಾರ ಧನವನ್ನು ಕಡಿಮೆ ಮಾಡಲಾಗುವುದಿಲ್ಲ ಮತ್ತು ಕ್ಲೈಂ ಪಿಟಿಷನ್ ಗೆ ಅನುಗುಣವಾಗಿ ರಸ್ತೆ ಅಪಘಾತ ಪರಿಹಾರ ಧನ ಪಾವತಿಸುವ ಸ್ವಾತಂತ್ರ್ಯವಿದೆ. ಎಲ್ಲಾದರೂ ಅಂತಿಮವಾಗಿ ಕ್ಲೈಂ ಪಿಟಿಷನ್ ಡಿಸ್ ಮಿಸ್ ಮಾಡಿದರೆ ರಸ್ತೆ ಅಪಘಾತ ಪರಿಹಾರ ಧನವನ್ನು ಮತ್ತೆ ಮರುಪಾವತಿಸಲಾಗುವುದಿಲ್ಲ.

ಕ್ಲೈಂ ಪಿಟಿಷನ್ ನಲ್ಲಿ ಹೇಳಲಾದ ಮೊತ್ತವು ತಾತ್ಕಾಲಿಕ ಪರಿಹಾರ ಧನಕ್ಕಿಂತ ಅಧಿಕವಾಗಿದ್ದರೆ ತಾತ್ಕಾಲಿಕ ಪರಿಹಾರ ಧನವನ್ನು ಕಡಿಮೆ ಮಾಡಲಾಗುವುದು. ವಾಹನದ ಮಾಲೀಕನ ತಪ್ಪಿನಿಂದ ಅಪಘಾತ ಸಂಭವಿಸಿದೆ ಅಂತ ಅಪಘಾತಕ್ಕೆ ಈಡಾದ ವ್ಯಕ್ತಿ ರುಜುವಾತು ಮಾಡುವ ಅಗತ್ಯವಿಲ್ಲ.

Most Read Articles

Kannada
English summary
English Summary: If a person has died in an accident or has suffered permanent disablement, then the Act creates an obligation on the owner of the vehicle to pay an interim compensation fixed by the Act.
Story first published: Tuesday, June 19, 2012, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X