ವಿಶ್ವ ಪರಿಸರ ದಿನ; ಪರಿಸರ ಸ್ನೇಹಿ ಸಂಚಾರಕ್ಕೆ 5 ಟಿಪ್ಸ್

Written By:

ವಿಶ್ವ ಪರಿಸರ ದಿನದಂಗವಾಗಿ ಈ ವಿಶೇಷ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ. ದೇಶದ ಪ್ರತಿ ನಾಗರಿಕನೂ ಮಾಲಿನ್ಯ ಮುಕ್ತ ಸಂಚಾರಕ್ಕಾಗಿ ಪಣತೊಡಬೇಕಾದ ಕಾಲ ಆಗಲೇ ಮೀರಿ ಹೋಗಿದೆ. ಅಂತರಾಷ್ಟ್ರೀಯ ಸ್ವಚ್ಛ ಸಾರಿಗೆ ಮಂಡಳಿ (ICCT) ಅಧ್ಯಯನ ವರದಿ ಪ್ರಕಾರ, ಭಾರತದಲ್ಲಿನ ವಾಹನಗಳ ಸಂಖ್ಯೆ 2003ನೇ (10 ಮಿಲಿಯನ್) ಇಸವಿಗೆ ಹೋಲಿಸಿದರೆ 2013ರಲ್ಲಿ ಸರಿ ಸುಮಾರು ಮೂರು ಪಟ್ಟು (130 ಮಿಲಿಯನ್) ಹೆಚ್ಚಾಗಿದೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು 15 ಟಿಪ್ಸ್

ಇದರ ಪರಿಣಾಮವಾಗಿ ಅತ್ಯಂತ ಅಪಾಯಕಾರಿ ನೈಟ್ರಜನ್ ಆಕ್ಸೈಡ್ ಪ್ರಮಾಣ 2003ರಿಂದ ಶೇಕಡಾ 10ರಷ್ಟು ಹೆಚ್ಚಾಗಿದೆ. ಅಷ್ಟಕ್ಕೂ ಪರಿಸರ ಸಂರಕ್ಷಣಾ ಕಲೆಯನ್ನು ಯಾರೂ ಸಹ ನೈಸರ್ಗಿಕವಾಗಿ ಕರಗತ ಮಾಡಿಕೊಂಡಿಲ್ಲ. ಅಂದ ಮಾತ್ರಕ್ಕೆ ಸಂಚಾರ ಮಾಪಕವಾಗಿರುವ ಕಾರು ಸಂಚಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ಕೆಲವೊಂದು ಎಚ್ಚರಿಕಾ ಕ್ರಮಗಳನ್ನು ಅನುಸರಿಸಿದರೆ ಪರಿಸರಕ್ಕೆ ಆಗುವ ಅಪಾಯವನ್ನು ತಡೆಗಟ್ಟಬಹುದಾಗಿದೆ.

ವಿಶ್ವ ಪರಿಸರ ದಿನ; ಪರಿಸರ ಸ್ನೇಹಿ ಸಂಚಾರಕ್ಕೆ 5 ಟಿಪ್ಸ್

ಜೂನ್ 5ರಂದು ವಿಶ್ವದೆಲ್ಲೆಡೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಇದರಂತೆ ಮಾಲಿನ್ಯ ಮುಕ್ತ ಪರಿಸರಕ್ಕಾಗಿ ಪಣತೊಡಿರಿ. ಹಾಗೆ ಮಾಡಿದ್ದಲ್ಲಿ ಮಾತ್ರ ಉಜ್ವಲ ಭವಿಷ್ಯ ನಿಮ್ಮದಾಗುವುದು. ಹಾಗೊಂದು ವೇಳೆ ನೀವು ಕಾರು ಉತ್ಸಾಹಿಯಾಗಿದ್ದಲ್ಲಿ ಈ ಕೆಳಗಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಸರ ಉಳಿಸುವುದರಲ್ಲಿ ನಿಮ್ಮ ಕೊಡುಗೆಯನ್ನು ಸಲ್ಲಿಸಿರಿ..

1. ಕಾರನ್ನು ಚೆನ್ನಾಗಿ ನಿರ್ವಹಿಸಿರಿ

1. ಕಾರನ್ನು ಚೆನ್ನಾಗಿ ನಿರ್ವಹಿಸಿರಿ

ನಿಮ್ಮ ಕಾರನ್ನು ಚೆನ್ನಾಗಿ ನಿರ್ವಹಿಸುವ ಮೂಲಕ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ನೀವು ಭಾಗಿಯಾಗಬಹುದು. ನಿರಂತರ ಅಂತರಾಳದಲ್ಲಿ ಸರಿಯಾಗಿ ಸರ್ವೀಸ್ ಮಾಡಿಸಿದ ಕಾರುಗಳು ಕಡಿಮೆ ಹೊಗೆಯನ್ನು ಹೊರಸೂಸುತ್ತದೆ. ಇದು ನಿಮ್ಮ ಕಾರಿನ ಕ್ಷಮತೆಯನ್ನು ಶೇಕಡಾ 4ರಷ್ಟು ಹೆಚ್ಚಿಸಲಿದೆ. ಹಾಗೆಯೇ ಕೇಡು ಸಂಭವಿಸಿದ ಏರ್ ಫಿಲ್ಟರ್ ಬದಲಾಯಿಸುವ ಮೂಲಕ ಶೇಕಡಾ 10ರಷ್ಟು ಕಾರಿನ ಕ್ಷಮತೆ ವೃದ್ಧಿಸಬಹುದಾಗಿದೆ. ಹಾಗೆಯೇ ಕೆಟ್ಟು ಹೋದ ಆಕ್ಸಿಜನ್ ಸೆನ್ಸಾರ್‌ನಿಂದಾಗಿ ಕಾರಿನ ಮೈಲೇಜನ್ನು ಶೇಕಡಾ 40ರಷ್ಟು ಕುಂಠಿತವಾಗಲಿದೆ.

2. ಚಕ್ರಗಳಿಗೆ ಸರಿಯಾಗಿ ಗಾಳಿ ತುಂಬಿಸಿ

2. ಚಕ್ರಗಳಿಗೆ ಸರಿಯಾಗಿ ಗಾಳಿ ತುಂಬಿಸಿ

ಚಕ್ರಗಳಿಗೆ ಸರಿಯಾದ ಪ್ರಮಾಣದಲ್ಲಿ ಗಾಳಿ ತುಂಬಿಸದಿದ್ದಲ್ಲಿ ರೊಲಿಂಗ್ ರೆಸಿಸ್ಟಂಟ್ ಪವರ್ ಜಾಸ್ತಿಯಾಗಲಿದ್ದು, ಪರಿಣಾಮ ಕಾರು ಮುಂದಕ್ಕೆ ಚಲಿಸಲು ಎಂಜಿನ್ ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರಿಂದ ಹೆಚ್ಚು ಇಂಧನ ವ್ಯಯವಾಗಲಿದೆ. ಹಾಗಾಗಿ ಸರಿಯಾಗಿ ಗಾಳಿ ತುಂಬಿಸಿದ ಚಕ್ರಗಳು ಹೆಚ್ಚು ಸಮಯ ಬಾಳ್ವಿಕೆ ಬರಲಿದ್ದು, ಈ ಮೂಲಕ ಪರಿಸರ ಮೇಲಿನ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಹಣ ಉಳಿತಾಯ ಸಹ ಮಾಡಬಹುದು.

3. ಇಂಧನ ಕ್ಷಮತೆಗಾಗಿ ಚಾಲನಾ ಕೌಶಲ್ಯ ರೂಢಿಸಿಕೊಳ್ಳಿ

3. ಇಂಧನ ಕ್ಷಮತೆಗಾಗಿ ಚಾಲನಾ ಕೌಶಲ್ಯ ರೂಢಿಸಿಕೊಳ್ಳಿ

ಇಂಧನ ಕ್ಷಮತೆ ಹೆಚ್ಚಿಸಿಕೊಳ್ಳಲು ಸರಿಯಾದ ಚಾಲನಾ ಕೌಶಲ್ಯ ರೂಢಿಸಿಕೊಳ್ಳುವುದು ಅತಿ ಅಗತ್ಯ. ಸಡನ್ ಬ್ರೇಕ್, ತರಾತರಿಯ ಸ್ಟಾರ್ಟ್, ಹಠಾತ್ತಾಗಿ ಅಥವಾ ಅಜಾಗರೂಕತೆಯಲ್ಲಿ ಆಕ್ರಮಣಕಾರಿ ಶೈಲಿ ಚಾಲನೆ ಇಂಧನ ಉಳಿತಾಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಹಾಗಾಗಿ ಗೇರ್ ಬದಲಾವಣೆಗಳನ್ನು ನಯವಾಗಿ ಮಾಡಿರಿ. ಅದೇ ರೀತಿ 30 ಸೆಕೆಂಡುಗಿಂತಲೂ ಹೆಚ್ಚು ಸಮಯ ಗಾಡಿ ನಿಲ್ಲಿಸುವುದಾದ್ದಲ್ಲಿ ಎಂಜಿನ್ ಆಫ್ ಮಾಡಿಡಲು ಮರೆಯದಿರಿ.

4. ಕಾರನ್ನು ಹಗುರವಾಗಿರಿಸಿ

4. ಕಾರನ್ನು ಹಗುರವಾಗಿರಿಸಿ

ನಿಮ್ಮ ಕಾರನ್ನು ಸಾಧ್ಯವಾದಷ್ಟು ಹಗುರವಾಡಲು ಪ್ರಯತ್ನಸಿ. ಅಂದರೆ ಕ್ಯಾಬಿನ್ ಅಥವಾ ಬೂಟ್ ಸ್ಪೇಸ್‌ನಿಂದ ಅನಗತ್ಯ ವಸ್ತುಗಳನ್ನು ಹೊರದಬ್ಬಿರಿ. ನೆನಪಿಡಿ, ಹಗುರ ಕಾರು, ಸುಲಭ ಚಾಲನೆಯ ಜೊತೆಗೆ ಹೆಚ್ಚು ಇಂಧನ ಕ್ಷಮತೆಗೆ ನೆರವಾಗಲಿದೆ.

5. ಕಾರು ತೊಳೆಯುವಾಗ ಗಮನದಲ್ಲಿಡಬೇಕಾದ ವಿಚಾರಗಳು

5. ಕಾರು ತೊಳೆಯುವಾಗ ಗಮನದಲ್ಲಿಡಬೇಕಾದ ವಿಚಾರಗಳು

ಇನ್ನು ಕಾರು ತೊಳೆಯುವಾಗಲು ಮಿತವಾದ ನೀರನ್ನು ಬಳಕೆ ಮಾಡಿರಿ. ಇದು ಅಮೂಲ್ಯವಾದ ನೀರು ಉಳಿಸಲು ನೆರವಾಗಲಿದೆ. ಹಾಗೆಯೇ ಕಾರು ತೊಳೆಯುವ ವೇಳೆ ಜೈವಿಕ ಹಾಗೂ ಸಿಎಫ್‌ಸಿ ರಹಿತ ಕೊಳೆ ತೆಗೆಯುವ ಸೋಪ್ ಬಳಕೆ ಮಾಡಲು ಪ್ರಯತ್ನಿಸಿ. ಇದರಿಂದ ಮಣ್ಣಿಗೆ ಹಾನಿಕಾರಕವಲ್ಲ. ಸದ್ಯ ಇಂತಹ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

ವಿಶ್ವ ಪರಿಸರ ದಿನ; ಪರಿಸರ ಸ್ನೇಹಿ ಸಂಚಾರಕ್ಕೆ 5 ಟಿಪ್ಸ್

ಮೇಲೆ ತಿಳಿಸಲಾದ ಎಲ್ಲ ವಿಚಾರಗಳನ್ನು ಅನುಸರಿಸಿದ್ದಲ್ಲಿ ಪರಿಸರದ ಮೇಲಾಗುವ ಹಾನಿಯನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದಾಗಿದೆ. ಅಂತಿಮವಾಗಿ "ಗೊ ಗ್ರೀನ್ ಅಂದ್ರೆ ಸಾಲದು ಎಲ್ಲ ಅರ್ಥದಲ್ಲೂ ಇದನ್ನು ಸಾಕಾರಗೊಳಿಸಲು ಪ್ರತಿಯೊಬ್ಬರು ಪ್ರಮಾಣಿಕ ಪ್ರಯತ್ನ ಮಾಡಬೇಕು" ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

 

English summary
According to a recent survey conducted by the International Council of Clean Transportation or ICCT, the number of vehicles on the road in India has almost trebled to 130 million in 2013 from 50 million in 2003.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark