Just In
Don't Miss!
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಬಳಸುವಾಗ ಈ ತಪ್ಪುಗಳನ್ನು ಮಾಡದಿರಿ..!
ಆಟೋಮ್ಯಾಟಿಕ್ ಗೇರ್‍ಬಾಕ್ಸ್ ವಾಹನಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ಎಎಂಟಿ ಬಂದಿರುವುದರಿಂದ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಹೊಂದಿರುವ ಕಾರುಗಳು ಭಾರತದಲ್ಲಿ ಸುಲಭವಾಗಿ ಕೈಗೆಟುಕುವಂತಾಗಿವೆ. ಕೆಲವು ಮಾಸ್-ಸೆಗೆಮೆಂಟ್‍ಗಳ ವಾಹನಗಳಲ್ಲೂ ಕೂಡಾ ಡ್ಯುಯಲ್ ಕ್ಲಚ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗುತ್ತಿದೆ.

ಇದರಿಂದಾಗಿ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಹೊಂದಿರುವ ಕಾರುಗಳ ಮಾರಾಟವು ಹೆಚ್ಚಾಗಿವೆ. ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಜನಪ್ರಿಯತೆ ಹೆಚ್ಚುತ್ತಿದ್ದರೂ, ಈ ರೀತಿಯ ಗೇರ್‍ಬಾಕ್ಸ್ ಅನೇಕ ಖರೀದಿದಾರರಿಗೆ ಹೊಸದು ಮತ್ತು ಅಪರಿಚಿತವಾಗಿ ಉಳಿದಿದೆ ಎಂಬುವುದು ಕೂಡಾ ಸತ್ಯ. ಇದರಿಂದ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಬಳಸುವಾಗ ಸಾಮಾನ್ಯವಾಗಿ ತಪ್ಪುಗಳನ್ನು ಸಂಭವಿಸುತ್ತದೆ.

ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಹೊಂದಿರುವ ಕಾರುಗಳನ್ನು ಖರೀದಿಸಿ ಬಳಸುವಾಗ ತಪ್ಪುಗಳನ್ನು ಮಾಡಿದರೆ ಗೇರ್‍ಬಾಕ್ಸ್ ಹಾನಿಯಾಗುತ್ತದೆ ಮತ್ತು ವಾಹನದ ಮೇಲೆ ಪರಿಣಾಮ ಬೀರುತ್ತದೆ. ಇದ್ದರಿಂದ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿಷಯಗಳಿವೆ. ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಬಳಸುವವರು ಸಾಮಾನ್ಯವಾಗಿ ಮಾಡುವ ಐದು ದೊಡ್ಡ ತಪ್ಪುಗಳು ಮತ್ತು ಅವುಗಳನ್ನು ಹೇಗೆ ತಪ್ಪಿಸಬೇಕಂಬ ಮಹತ್ವಪೂರ್ಣ ಮಾಹಿತಿ ಇಲ್ಲಿದೆ.

ಇಳಿಜಾರಿನಲ್ಲಿ ಚಾಲನೆ ಮಾಡುವಾಗ ನ್ಯೂಟ್ರಲ್ ಮಾಡುವುದು
ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಜೊತೆ ಮ್ಯಾನುವಲ್ ಗೇರ್‍ಬಾಕ್ಸ್ ಹೊಂದಿರುವ ವಾಹನಗಳಲ್ಲಿ ಅನೇಕರು ಮಾಡುವ ಸಾಮಾನ್ಯ ತಪ್ಪು ಇದು. ಇಳಿಜಾರಿನಲ್ಲಿ ಹೋಗುವಾಗ ಕಾರನ್ನು ಎನ್(ನ್ಯೂಟ್ರಲ್) ಮಾಡುವುದು ಇಂಧನವನ್ನು ಉಳಿಸಲು ಅನೇಕ ಜನರು ಈ ಕೆಲಸ ಮಾಡುತ್ತಾರೆ.

ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನ್ಯೂಟ್ರಲ್ ಆದಾಗ ಅನೇಕ ಗೇರ್‍ಬಾಕ್ಸ್ ಸೆಟ್‍ಅಪ್‍ಗಳು ಗೇರ್‍ಬಾಕ್ಸ್ ನಲ್ಲಿ ಆಯಿಲ್ ಪೊರೈಕೆಯನು ಕಡಿತಗೊಳಿಸುತ್ತವೆ. ಇದು ಗೇರ್‍ಬಾಕ್ಸ್ ಅನ್ನು ಹೆಚ್ಚು ಬಿಸಿಯಾಗಿಸುತ್ತದೆ.

ಅಲ್ಲದೇ ವಾಹನವು ಗೇರ್‍ನಲ್ಲಿ ಇರದ ಕಾರಣ ಚಾಲಕನು ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಇಳಿಜಾರಿನಲ್ಲಿ ವಾಹನವು ಅನೇಕರು ಅಂದುಕೊಂಡಷ್ಟು ಇಂಧನವನ್ನು ಬಳಸುವುದಿಲ್ಲ ಎಂಬುವುದು ಅರಿತುಕೊಳ್ಳಬೇಕು.

ಫ್ರಂಟ್‍ಗೇರ್‍ನಿಂದ ರಿವರ್ಸ್ ಬದಲಾಯಿಸುವ ಮೊದಲು ಸಂಪೂರ್ಣ ನಿಲ್ಲಿಸಿ
ಕಾರು ಚಲಿಸುತ್ತಿರುವ ವೇಳೆಯಲ್ಲಿ ಹಲವರು ರಿರ್ವಸ್ ಗೇರ್ ಬದಲಾಯಿಸುತ್ತಾರೆ. ಹೀಗೆ ಮಾಡಿದರೆ ನಿಮ್ಮ ಕಾರಿನ ಗೇರ್‍ಬಾಕ್ಸ್ ಸಂಪೂರ್ಣವಾಗಿ ಹಾಳಾಗುತ್ತದೆ. ಗೇರ್‍ಬಾಕ್ಸ್ ಕಾರಿನ ಡ್ರೈವ್ ಅನ್ನು ಬದಲಾಯಿಸಲು ಗೇರ್‍ಬಾಕ್ಸ್ ಬ್ರ್ಯಾಂಡ್ ಅನ್ನು ಬಳಸುತ್ತಾರೆ. ಫ್ರಂಟ್ ಗೇರ್‍ನಿಂದ ರಿವರ್ಸ್ ಗೇರ್‍ಗೆ ಸ್ವಿಫ್ಟ್ ಮಾಡುವಾಗ ವಾಹನವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅತ್ಯಗತ್ಯ. ಚಾಲಕರು ಸಂಪೂರ್ಣ ನಿಲ್ಲಸದೇ ಫ್ರಂಟ್ ಗೇರ್‍ನಿಂದ ರಿರ್ವಸ್ ಗೇರ್ ಸ್ವಿಫ್ಟ್ ಮಾಡಬಾರದು.

ಲಾಂಚ್ ಕಂಟ್ರೋಲ್
ಅನೇಕ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಕಾರುಗಳು 'ಲಾಂಚ್ ಕಂಟ್ರೋಲ್' ವೈಶಿಷ್ಟ್ಯಗಳನ್ನು ಹೊಂದಿದೆ. ಇದು ವಾಹನವನ್ನು ತ್ವರಿತವಾಗಿ ಸ್ಟಾರ್ಟ್ ಮಾಡಲು ಅನುವು ಮಾಡಿಕೊಡುತ್ತದೆ.

ಇದು ಸ್ಪರ್ಧೆಯ ಸಮಯದಲ್ಲಿ ಮತ್ತು ಇತರರೊಂದಿಗೆ ಪೈಪೋಟಿಗೆ ಇಳಿದು ಚಾಲನೆ ಮಾಡುವಾಗ ಇದು ಸಾಕಷ್ಟು ಉಪಯುಕ್ತವಾಗಿದೆ. ಲಾಂಚ್ ಕಂಟ್ರೋಲ್ ಎಂಜಿನ್ ರೆವ್ ಅನ್ನು ಮೇಲಕ್ಕೆ ಹೋಗಲು ಅನುವು ಮಾಡಿಕೊಡುತ್ತದೆ ಇದರಿಂದ ವಾಹನವು ತ್ವರಿತವಾಗಿ ವೇಗದಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ.

ಕಾರು ಚಲಿಸುವ ಸಮಯದಲ್ಲಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಹೊಂದಿರುವ ಕಾರುಗಳು ಹೆಚ್ಚು ವೇಗವಾಗಿ ಸಾಗುತ್ತವೆ. ಆದರೆ ಮ್ಯಾನುವಲ್ ಗೇರ್‍ಬಾಕ್ಸ್ ನಲ್ಲಿ ನಾವು ಗೇರ್ ಅನ್ನು ಬದಲಾಯಿಸಿ ವೇಗವನ್ನು ಪಡೆಯಬೇಕು.

ಲಾಂಚ್ ಕಂಟ್ರೋಲ್ ಸಿಸ್ಟಂಯಿಲ್ಲದೆ ಕಾರನ್ನು ಚಾಲನೆ ಮಾಡುವ ಅನೇಕ ಜನರು ನ್ಯೂಟ್ರಲ್ ರೆವ್‍ಗಳನ್ನು ನಿರ್ಮಿಸುವ ಮೂಲಕ ಅದೇ ಪರಿಣಾಮವನ್ನು ಅನುಕರಿಸಲು ಪ್ರಯತ್ನಿಸುತ್ತಾರೆ ಮತ್ತು ನಂತರ ಇದ್ದಕಿದ್ದಂತೆ ಡ್ರೈವ್ ಅಥವಾ ಡಿ ಮೋಡ್‍ಗೆ ಬದಲಾಯಿಸುತ್ತಾರೆ.

ಇದು ಗೇರ್‍ಬಾಕ್ಸ್ ಅನ್ನು ಬಿಸಿಯಾಗಿಡಲು ಕಾರಣವಾಗುತ್ತದೆ ಮತ್ತು ಗೇರ್‍ಬಾಕ್ಸ್ ಮೇಲೆ ಪರಿಣಾಮ ಬಿರುತ್ತದೆ. ಇದನ್ನು ಸರಿಯಾಗಿ ನಿರ್ವಹಿಸುವುದು ಕಾರನ್ನು ಡ್ರೈವ್ ಮೋಡ್‍ನಲ್ಲಿ ಇಡುವುದು, ರೆವ್‍ಗಳನ್ನು ಬಳಸುವಾಗ ಬ್ರೇಕ್ ಅನ್ನು ಹೊತ್ತಿಕೊಂಡಿರಬೇಕು. ನಂತರ ಬ್ರೇಕ್ ಅನ್ನು ಬಿಡಬೇಕು. ಈ ರೀತಿಯಾಗಿ ಆಟೋಮ್ಯಾಟಿಕ್ ಕಾರನ್ನು ಪ್ರಾರಂಭಿಸುವುದರಿಂದ ವಾಹನಕ್ಕೆ ಕನಿಷ್ಠ ಹಾನಿಯಾಗುತ್ತದೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಕಾರ್ ತಿರುಗುವುದನ್ನು ತಡೆಯಲು ಗೇರ್‍ಬಾಕ್ಸ್ ಯುನಿಟ್ ಪಾರ್ಕಿಂಗ್ ಪಾವ್ಲ್ ಅನ್ನು ಬಳಸುತ್ತದೆ. ಇದು ವಾಹನದ ಚಾಲನೆಯನ್ನು ನಿಷ್ಕ್ರಿಯಗೊಳಿಸುತ್ತದೆ. ಕಾರು ಚಲಿಸುತ್ತಿರುವಾಗ ಪಾರ್ಕ್ ಮೂಡ್‍ಗೆ ಬದಲಾಯಿಸಿದ್ದರೆ ಗೇರ್‍ಬಾಕ್ಸ್ ಅನ್ನು ಬೇಗ ಹಾನಿಯಾಗುತ್ತದೆ.

ಚಲಿಸುತ್ತಿರುವಾಗ ಪಾರ್ಕ್ ಮೋಡ್‍ಗೆ ಬದಲಾಯಿಸುವುದು
ವಾಹನವು ಚಲಿಸುತ್ತಿರುವಾಗ ಇದ್ದಕಿದ್ದಂತೆ ಕಾರನ್ನು 'ಪಿ' ಅಥವಾ ಪಾರ್ಕ್ ಮೋಡ್‍ಗೆ ಬದಲಿಸುವುದರಿಂದ ಗೇರ್‍ಬಾಕ್ಸ್ ಗೆ ಅಪಾರ ಹಾನಿಯುಂಟಾಗುತ್ತದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಟ್ರಾಫಿಕ್ ಸಿಗ್ನಲ್‍ಗಳಲ್ಲಿ ನ್ಯೂಟ್ರಲ್ ಮಾಡುವುದು
ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕಾಯುತ್ತಿರುವ ವೇಳೆಯಲ್ಲಿ ಕಾರನ್ನು ಬಹಳಷ್ಟು ಜನ ನ್ಯೂಟ್ರಲ್‍ನಲ್ಲಿ ಇಡುತ್ತಾರೆ. ಇದು ಹಾನಿಕಾರಕವಲ್ಲವಾದರೂ ದೀರ್ಘಾವಧಿಯಲ್ಲಿ ಇದು ಗೇರ್‍ಬಾಕ್ಸ್ ಮೇಲೆ ಪರಿಣಾಮ ಬೀರುತ್ತದೆ.

ಗೇರ್ ಅನ್ನು ಬದಲಾಯಿಸಲು ಲಿವರ್ ಅನ್ನು ಬಳಸುವುದರಿಂದ ವಾಹನದ ಮೇಲೆ ಪರಿಣಾಮ ಬೀರುತ್ತದೆ. ಗೇರ್‍ಬಾಕ್ಸ್ ಡಿ ಮೋಡ್‍ನಲ್ಲಿರುವಾಗ ಮಾತ್ರ ಆಟೋಮ್ಯಾಟಿಕ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಹೊಂದಿರುವ ವಾಹನಗಳು ಕಾರ್ಯನಿರ್ವಹಿಸುತ್ತವೆ. ಇದಕ್ಕಾಗಿಯೇ ನೀವು ಸಿಗ್ನಲ್‍ಗಳಲ್ಲಿ ಅಲ್ಪಾವಧಿಗಾಗಿ ವಾಹನವನ್ನು ನ್ಯೂಟ್ರಲ್ ಮಾಡಬಾರದು.