ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತಲೂ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಹೊಸ ತಂತ್ರಜ್ಞಾನದ ಆಗಮನದೊಂದಿಗೆ ಮೋಟಾರ್‍ ಸೈಕಲ್‍‍ಗಳು ಹೆಚ್ಚು ಶಕ್ತಿಶಾಲಿ ಮತ್ತು ವೇಗವಾಗಿವೆ. ಈ ಹಿಂದೆ ಬೈಕ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದಕ್ಕಾಗಿ ಮಾತ್ರ ಖರೀದಿಸುತ್ತಿದ್ದರು ಆದರೆ ಈಗಿನ್ ಕಾಲದಲ್ಲಿ ಗ್ರಾಹಕ

By Manoj B.k

ಹೊಸ ತಂತ್ರಜ್ಞಾನದ ಆಗಮನದೊಂದಿಗೆ ಮೋಟಾರ್ ಸೈಕಲ್‍‍ಗಳು ಹೆಚ್ಚು ಶಕ್ತಿಶಾಲಿಯೊಂದಿಗೆ ವೇಗ ಮಾದರಿಗಳಾಗಿವೆ. ಈ ಹಿಂದೆ ಬೈಕ್ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವುದಕ್ಕಾಗಿ ಮಾತ್ರ ಖರೀದಿಸುತ್ತಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಗ್ರಾಹಕರು ಬೈಕ್ ಅನ್ನು ಖರೀದಿಸುವಾಗ ಅದರ ಫರ್ಫಾರ್ಮೆನ್ಸ್, ಸ್ಟೈಲ್ ಅನ್ನು ಗಮನಿಸಿ ಖರೀದಿಸುವುದು ಸದ್ಯದ ಟ್ರೆಂಡ್. ಹೀಗಾಗಿ ಬೈಕ್‌ಗಳಲ್ಲಿ ಸುರಕ್ಷಾ ಸೌಲಭ್ಯ ಕೂಡಾ ತುಂಬಾ ಮುಖ್ಯವಾದ ವಿಚಾರವಾಗಿದ್ದು, ಇಂದಿನ ಲೇಖನ ಕೆಲವು ಪ್ರಮುಖ ವಿಚಾರಗಳನ್ನು ಚರ್ಚಿಸೋಣ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಹೊಸ ಬೈಕ್‍‍ಗಳು ಹೆಚ್ಚು ಶಕ್ತಿಶಾಲಿಯಾಗುತ್ತಿರುವಾಗ ಅದರ ಬ್ರೇಕಿಂಗ್ ಸೌಲಭ್ಯ ಕೂಡಾ ಅಪ್‍‍ಗ್ರೇಡ್ ಆಗಬೇಕಿದೆ ಅಲ್ಲವೇ? ಆದ್ದರಿಂದ ಡ್ರಮ್ ಬ್ರೇಕ್‌ಗಳಿಗೆ ಸವಾಲು ನೀಡುವ ಡಿಸ್ಕ್ ಬ್ರೇಕ್‍ ಸಿಸ್ಟಂಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಹಾಗಾದ್ರೆ ಡ್ರಮ್ ಬ್ರೇಕ್ ಬಳಕೆಗಿಂತಲೂ ಡಿಸ್ಕ್ ಬ್ರೇಕ್ ಬಳಕೆ ಏಕೆ ಉತ್ತಮ ಎನ್ನುವ ಕುರಿತು ಇಲ್ಲಿ ಚರ್ಚಿಸೋಣ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍‍ನ ಇತಿಹಾಸವನ್ನು ನೋಡುವುದಾದರೆ, ಇವುಗಳನ್ನು ಮೊದಲಿಗೆ 1950ರ ಅವಧಿಯಲ್ಲಿ ರೇಸ್‍ ಕಾರುಗಳಲ್ಲಿ ಮಾತ್ರ ಬಳಸಲಾಗಿತ್ತು. ತದನಂತರ 1962ರಲ್ಲಿ ಪ್ರಥಮವಾಗಿ ಡಿಸ್ಕ್ ಬ್ರೇಕ್ ಅನ್ನು ದ್ವಿಚಕ್ರ ವಾಹನಗಳಿಗೂ ಅಳವಡಿಸಲು ಆರಂಭಿಸಲಾಯ್ತು.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಲ್ಯಾಂಬ್ರೆಟಾ ಟಿವಿ 175 ಸಿರೀಸ್‍‍ನ ಮೂರು ಸ್ಕೂಟರ್‍‍ಗಳಲ್ಲಿ ಇದನ್ನು ಮೊದಲಿಗೆ ಅಳವಡಿಸಲಾಗಿತ್ತು. ತದನಂತರ 1975ರಲ್ಲಿ ಹೋಂಡಾ ಸಿಬಿ750 ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಪಡೆಯುವ ಮೊದಲ ಬೈಕ್ ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಯಿತು.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಭಾರತದಂತಹ ದೇಶಗಳಲ್ಲಿ ಮೋಟಾರ್‍‍ಸೈಕಲ್ ಅನ್ನು ಚಲಾಯಿಸುವುದು ಸ್ವಲ್ಪ ಕಷ್ಟವೇ ಸರಿ. ಏಕೆಂದರೆ ಇಲ್ಲಿನ ರಸ್ತೆಗಳಲ್ಲಿ ಯಾವ ಸಮಯದಲ್ಲಿ ಏನಾಗುತ್ತೋ ಯಾರಿಗೆ ಗೊತ್ತು? ಆದ್ದರಿಂದ ಡಿಸ್ಕ್ ಬ್ರೇಕ್‍‍ ಹೊಂದಿರುವ ವಾಹನಗಳ ಬಳಕೆಯು ಪ್ರಮುಖವಾಗಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಮೇಲೆ ಹೇಳಿರುವ ಹಾಗೆ ಹೊಸ ಬೈಕ್‍‍ಗಳು ಹೆಚ್ಚು ಶಕ್ತಿಶಾಲಿಯಾಗಿ ಗುರುತಿಸಿಕೊಳ್ಳುತ್ತಿದ್ದು, ಗ್ರಾಹಕರು ಹೊಸ ಬೈಕ್ ಖರೀದಿಸುವಾಗ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಅಳವಡಿಸಲಾಗಿರುವ ಯಾವ ಮೋಟಾರ್‍‍ಸೈಕಲ್ ಅನ್ನು ಕೊಳ್ಳಬೇಕು ಎಂಬ ಗೊಂದಲ್ಲಕ್ಕೀಡಾಗುತ್ತಾರೆ. ಗರಿಷ್ಠ ಸುರಕ್ಷತೆಯಿಂದ ಗ್ರಾಹಕರು ಡಿಸ್ಕ್ ಬ್ರೇಕ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದ್ದು, ಡ್ರಮ್ ಬ್ರೇಕ್‍‍ಗಳಿಗಿಂತಲೂ ಡಿಸ್ಕ್ ಬ್ರೇಕ್‍‍ಗಳು ಏಕೆ ಉತ್ತಮ ಎಂಬ ಕುರಿತು ನಾವಿಲ್ಲಿ ಚರ್ಚಿಸಿದ್ದೇವೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್ ಸಿಸ್ಟಮ್ ಚಕ್ರ ಮತ್ತು ಕ್ಯಾಲಿಪರ್‍‍ನ ಎರಡೂ ಬದಿಗಳಲ್ಲಿ ಪ್ಯಾಡಲ್‍‍ಗಳನ್ನು ಹೊಂದಿದ ರೋಟರ್ ಅಥವಾ ಡಿಸ್ಕ್ ಅನ್ನು ಹೊಂದಿರುತ್ತದೆ. ಆಯಿಲ್ ಶೇಖರಣೆಯಿಂದ ಬರುವ ದ್ರವ ರೇಖೆಯೊಂದಿಗೆ ಈ ವ್ಯವಸ್ಥೆಯು ಸಂಪೂರ್ಣ ಕಾರ್ಯನಿರ್ವಹಣೆ ಮಾಡುತ್ತದೆ. ಮತ್ತು ತೈಲ ಶೇಖರಣೆಯು ಬ್ರೇಕ್ ಲಿವರ್ ಪಂಪ್‌ಗೆ ಸಂಪರ್ಕ ಹೊಂದಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಆದ್ದರಿಂದ, ನೀವು ಬ್ರೇಕ್ ಲಿವರ್ ಅನ್ನು ಎಳೆಯುವಾಗ ಆಯಿಲ್ ಕ್ಯಾಲಿಪರ್ಸ್ ಕಡೆಗೆ ತಳ್ಳಲಾಗುತ್ತದೆ ಮತ್ತು ಪ್ರತಿಯಾಗಿ, ಮೋಟಾರ್‍‍ಸೈಕಲ್ ನಿಧಾನಗೊಳಿಸಲು ಅಥವಾ ನಿಲ್ಲಿಸಲು ಡಿಸ್ಕ್ ನ ಘರ್ಷಣೆಯನ್ನು ರಚಿಸುವ ಪ್ಯಾಡ್‍‍ಗಳ ಮೇಲೆ ಅದು ಒತ್ತಡವನ್ನು ಅನ್ವಯಿಸುತ್ತದೆ. ಡಿಸ್ಕ್ ನಲ್ಲಿನ ಕ್ಯಾಲಿಪ್ರ್‍ಗಳ ಕಡಿತವು ಪ್ಯಾಡ್‍ಗಳ ಗಾತ್ರ ಅಥವಾ ಡಿಸ್ಕ್ ನ ಪ್ಯಾಡ್‍‍ಗಳ ಸಂಪರ್ಕದ ಪ್ರದೇಶವನ್ನು ಅವಲಂಬಿಸಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍ನ ಶಕ್ತಿಯನ್ನು ಹೆಚ್ಚಿಸಲು ಡ್ಯುಯಲ್ ಡಿಸ್ಕ್ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಈಗಿನ ಸೂಪರ್‍‍ಬೈಕ್‍‍ಗಳಲ್ಲಿ ದೊಡ್ದದಾದ ಮತ್ತು ಟ್ವಿನ್ ಡಿಸ್ಕ್ ಹಾಗೂ 4 ಪಾಡ್ ಕ್ಯಾಲಿಪರ್ ಅನ್ನು ಅಳವಡಿಸಲಾಗಿರುತ್ತದೆ. ಮಲ್ಟಿಪಲ್ ಪ್ಯಾಡ್‍‍ಗಳು ಡಿಸ್ಕ್ ನೊಂದಿಗೆ ಸಂಪರ್ಕಿಸುವ ಹಾಗೆ 4 ಪಾಡ್ ಕ್ಯಾಲಿಪರ್ ಅನ್ನು ತಯಾರಿಸಲಾಗುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍ನ ಅನುಕೂಲತೆಗಳು

ವಾಹನವನ್ನು ನಿಲ್ಲಿಸುವ ಶಕ್ತಿ

ಡ್ರಮ್ ಬ್ರೇಕ್‍‍ಗೆ ಹೋಲಿಸಿದರೆ ಡಿಸ್ಕ್ ಬ್ರೇಕ್‍‍ಗಳು ಹೆಚ್ಚು ಸ್ಟಾಪಿಂಗ್ ಪವರ್ ಅನ್ನು ಪಡೆದಿರಲಿದೆ. ಡಿಸ್ಕ್ ಬ್ರೇಕ್‍ನ ಶಕ್ತಿಯನ್ನು ಹೆಚ್ಚಿಸಲು ದೊಡ್ಡದಾದ ಮತ್ತು ಮಲ್ಟಿಪಲ್ ಪ್ಯಾಡ್‍‍ಗಳನ್ನು ಕೂಡಿಸಬಹುದಾಗಿದ್ದು, ನಿಮ್ಮ ಬೈಕ್‍‍ನ ಬ್ರೇಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಡ್ಯುಯಲ್ ಡಿಸ್ಕ್ ಬ್ರೇಕ್ ಅನ್ನು ಬಳಸುವುದು ಉತ್ತಮ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಶಾಖ ಪ್ರಸರಣ (Heat Dissipation)

ಡಿಸ್ಕ್ ಬ್ರೇಕ್ ವ್ಹೀಲ್‍‍ಗಳ ಹೊರಗೆ ಬಳಸಿರುವ ಕಾರಣದಿಂದಾಗಿ ಡ್ರಮ್ ಬ್ರೇಕ್‍‍ಗಳಿಗಿಂತ ಬೇಗನೆ ತಣ್ಣಗಾಗುತ್ತದೆ. ಡ್ರಮ್ ಬ್ರೇಕ್‍‍ಗಳು ವ್ಹೀಲ್ ಒಳಗಡೆ ಇರುವ ಕಾರಣ ಅವು ಬೇಗನೆ ಶಾಖಕ್ಕೆ ಒಳಗಾಗುವ ಅವಕಾಶಗಳಿರುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ವ್ಹೀಲ್‍‍ಗೆ ಹಾನಿ ಮಾಡುವುದಿಲ್ಲ

ಡ್ರಮ್ ಬ್ರೇಕ್‍ಗಳ ವಿಚಾರದಲ್ಲಿ ಅವು ಸ್ಪ್ರಿಂಗ್‍‍ನೊಂದಿಗೆ ವಿನ್ಯಾಸಗೊಳಿಸಲಾಗಿರುತ್ತದೆ. ಆದ್ದರಿಂದ ಅವುಗಳು ಹೆಚ್ಚು ಹೀಟ್ ಆಗಿ ವ್ಹೀಲ್‍‍ಗಳಿಗೆ ಹೆಚ್ಚು ಹಾನಿಯುಂಟು ಮಾಡುತ್ತದೆ. ಆದರೆ ಈ ತೊಂದರೆಯು ಡಿಸ್ಕ್ ಬ್ರೇಕ್‍‍ಗಳಲ್ಲಿ ಇರುವುದಿಲ್ಲ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ನಿರ್ವಹಣೆ

ಡಿಸ್ಕ್ ಬ್ರೇಕ್‍‍ನ ನಿರ್ವಹಣೆಯ ಕಾರ್ಯದಲ್ಲಿ ಕಡಿಮೆ ಶ್ರಮ ಹಾಕಬೇಕಾಗಿದ್ದು, ಅದನ್ನು ಶುದ್ಧಗೊಳಿಸುವಾಗ ಕೇವಲ ಡಿಸ್ಕ್ ಮತ್ತು ಪ್ಯಾಡ್‍‍ಗಳನ್ನು ಕೇವಲ ಪೇಪರ್‍‍ನಿಂದ ಒರೆಸಬಹುದು. ಆದರೆ ಡ್ರಮ್ ಬ್ರೇಕ್‍‍ನ ನಿರ್ವಹಣೆಯ ಸಮಯದಲ್ಲಿ ಹೆಚ್ಚು ಶ್ರಮ ಹಾಕಬೇಕಾಗಿದ್ದು ಅವುಗಳನ್ನು ಶುಚಿಗೊಳಿಸಲು ಪೂರ್ತಿ ವ್ಹೀಲ್ ಅನ್ನು ತೆಗೆಯಬೇಕಾಗುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಬಿಡಿಭಾಗಗಳು

ಡಿಸ್ಕ್ ಮತ್ತು ಬ್ರೇಕ್ ಪ್ಯಾಡ್‍‍ಗಳು ಖರೀದಿಯು ಹೆಚ್ಚು ದುಬಾರಿಯಲ್ಲ. ಆದರೆ ಡ್ರಮ್ ಬ್ರೇಕ್‍‍ನಲ್ಲಿ ದೋಷ ಕಂಡು‍‍ಬಂದಲ್ಲಿ ಅದು ವ್ಹೀಲ್‍‍ಗಳಿಗಳಿಗೂ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಡ್ಯಾಮೇಜ್ ಆದ ವ್ಹೀಲ್ ಅನ್ನು ಪೂರ್ತಿಯಾಗಿ ಬದಲಾಯಿಸಲು ಹೆಚ್ಚು ಖರ್ಚಾಗಬಹುದು.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡಿಸ್ಕ್ ಬ್ರೇಕ್‍‍ನ ಅನಾನುಕೂಲತೆಗಳು

ವ್ಹೀಲ್ ಲಾಕಪ್

ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಹಠಾತನೆ ಬ್ರೇಕ್ ಹಿಡಿದಾಗ ಕೆಲವು ಬಾರಿ ಡಿಸ್ಕ್ ಬ್ರೇಕ್‍‍ಗಳು ಸ್ಕಿಡ್ ಆಗಬಹುದಾಗಿದ್ದು, ಇವು ನೇರವಾಗಿ ಅಪಘಾತಕ್ಕೆ ಕಾರಣವಾಗಬಹುದು.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ದುಬಾರಿ ಬೆಲೆ

ಡಿಸ್ಕ್ ಬ್ರೇಕ್ ಆಧಾರಿತ ಬೈಕ್‍‍ಗಳ ಬೆಲೆಯು ಮಾರುಕಟ್ಟೆಯಲ್ಲಿ ಸದ್ಯ ಡ್ರಮ್ ಬ್ರೇಕ್ ಬೈಕ್‌ಗಳಿಂತಲೂ ತುಸು ದುಬಾರಿ ಎನ್ನಿಸಲಿವೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಬ್ರೇಕ್ ವೈಫಲ್ಯ

ಬ್ರೇಕ್‍‍ನ ಪೈಪ್ ಬಹಿರಂಗಗೊಂಡಲ್ಲಿ ಅಥವಾ ಕೆಟ್ಟು ಹೋದಲ್ಲಿ ಡಿಸ್ಕ್ ಬ್ರೇಕ್‍‍ಗಳು ವೈಫಲ್ಯವಾಗುತ್ತವೆ ಹಾಗೂ ಅಪಘಾತವನ್ನುಂಟು ಮಾಡುವ ಸಾಧ್ಯತೆಗಳಿವೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಬ್ರೇಕ್ ಫ್ಯುಯಲ್ ನಿರ್ವಹಣೆ

ಬ್ರೇಕ್ ಬಹಳ ದಿನಗಳ ತನಕ ಬಳಸದಿದ್ದಲ್ಲಿ ಅವು ಬ್ರೇಕ್‍‍ನಲ್ಲಿನ ಫ್ಯುಯಲ್ ಜಿಗುಟು ಕಟ್ಟುತ್ತದೆ ಆದ್ದರಿಂದ ಅದು ಜಿಗುಟು ಕಟ್ಟಿಕೊಳ್ಳದಂತೆ ಅದನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಡಿಸ್ಕ್ ಬ್ರೇಕ್‍‍ನ ಅನಾನುಕೂಲತೆಗಳು ತೀರಾ ಕಡಿಮೆ. ಡ್ರಮ್ ಬ್ರೇಕ್‍‍ಗಳಿಗಿಂತಲೂ ಯಾವಾಗಲೂ ಡಿಸ್ಕ್ ಬ್ರೇಕ್‍‍ಗಳು ಉತ್ತಮವಾಗಿರುತ್ತದೆ ಮತ್ತು ಹೆಚ್ಚು ಸುರಕ್ಷತೆಯನ್ನು ಖಾತ್ರಿ ಪಡಿಸುತ್ತವೆ. ಡಿಸ್ಕ್ ಬ್ರೇಕ್‍‍ಗಳು ಡ್ರಮ್ ಮಾದರಿಗಿಂತ ನಿಮಗೆ ಹೆಚ್ಚು ವೆಚ್ಚವಾಗಬಹುದು ಆದರೆ ಅದು ನೀಡುವ ಸಾಮರ್ಥ್ಯಕ್ಕೆ ಹಣವು ಅಷ್ಟೇ ನೀಡಬೇಕಾಗುತ್ತದೆ. ಪ್ಯಾನಿಕ್ ಬ್ರೇಕಿಂಗ್ ಸಂದರ್ಭದಲ್ಲಿ ನಿಮ್ಮನ್ನ ನೀವು ಅಪಘಾತದಿಂದ ತಪ್ಪಿಸಿಕೊಳ್ಳಲು ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಬೈಕ್‍‍ಗಳ ಖರೀದಿಯು ಉತ್ತಮ ಎನ್ನಬಹುದು.

Most Read Articles

Kannada
English summary
Why Are Disc Brakes Better Than Drum Brakes In Motorcycles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X