ಆಟೋ ರಿಕ್ಷಾ ಚಾಲಕರು ನಿಂದಿಸಿದರೆ ಎಸ್ಎಂಎಸ್ ಮಾಡಿ

By Nagaraja

ನಮ್ಮ ದೈನಂದಿನ ಜೀವನದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸಲು ಆಟೋ ರಿಕ್ಷಾ ಅಥವಾ ಬಾಡಿಗೆ ಕಾರುಗಳ ಪಯಣ ಅಗತ್ಯವಾಗಿರುತ್ತದೆ. ಹಾಗಿರುವಾಗ ಆಟೋ ರಿಕ್ಷಾ ಚಾಲಕರ ಹೆಚ್ಚು ದುಡ್ಡು ವಸೂಲಿ ಮಾಡುವ ಬಗ್ಗೆ ಗ್ರಾಹಕರಿಂದ ದೂರು ಕೇಳುತ್ತಲೇ ಇವೆ.

ಇವೆಲ್ಲವನ್ನೂ ತಡೆಹಿಡಿಯಲು ಬೆಂಗಳೂರು ಸಂಚಾರ ಪೊಲೀಸ್ ಮುಂದೆ ಬಂದಿದ್ದು, ಇದರಂತೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ.

ಆಟೋ ರಿಕ್ಷಾ ಚಾಲಕರ ಹೆಚ್ಚಿನ ಮೊತ್ತ ವಸೂಲಿ ಮಾಡಿದರೆ ಅಥವಾ ಕರೆದ ಕಡೆ ಬರಲು ನಿರಾಕರಿಸಿದರೆ IVRSಗೆ (Interactive Voice Response System) ಕರೆ ಮಾಡಿ ದೂರು ದಾಖಲಿಸಿ. ಈ ಸಂಬಂಧ ಲೇಖನವೊಂದನ್ನು ಡ್ರೈವ್ ಸ್ಪಾರ್ಕ್ ಪ್ರಸ್ತುತ ಪಡಿಸುತ್ತಿದ್ದು, ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

For Refusal (ಕರೆದ ಕಡೆ ಬರಲು ನಿರಾಕರಿಸಿದರೆ)

For Refusal (ಕರೆದ ಕಡೆ ಬರಲು ನಿರಾಕರಿಸಿದರೆ)

ಒಂದು ವೇಳೆ ಆಟೋ ಚಾಲಕರು ಕರೆದ ಕಡೆ ಬರಲು ನಿರಾಕರಿಸಿದೆ ಈ ಕೆಳಗಡೆ ಕೊಡಲಾಗಿರುವ ನಂಬರ್‌ಗೆ ಎಸ್‌ಎಂಎಸ್ ಮಾಡಿರಿ.

AUTOREF AUTO NO.LOCATIONTIME OF REFUSAL

ಏರ್‌ಟೆಲ್ ಗ್ರಾಹಕರು: 52225

ಇತರೆ ಗ್ರಾಹಕರು: 9663952225

ಉದಾಹರಣೆಗೆ: AUTO REF KA01XY1234 MG ROAD TO KORMANGALA 5.30 PM

For Overcharging (ಅಧಿಕ ಮೊತ್ತ ಕೇಳಿದರೆ)

For Overcharging (ಅಧಿಕ ಮೊತ್ತ ಕೇಳಿದರೆ)

ಇನ್ನು ಅಧಿಕ ಮೊತ್ತ ಕೇಳಿದರೆ ಇದೇ ರೀತಿ REF ಬದಲು OVR ಎಂದು ಟೈಪ್ ಮಾಡಿ ಈ ಕೆಳಕಂಡಂತೆ ಮೆಸೇಜ್ ಕಳುಹಿಸಿ

AUTOOVRAUTO NO.LOCATIONTIME OF OVERCHARGING

ಏರ್‌ಟೆಲ್ ಗ್ರಾಹಕರು: 52225

ಇತರೆ ಗ್ರಾಹಕರು: 9663952225

ಉದಾಹರಣೆಗೆ: AUTO OVR KA01XY1234 MG ROAD TO KORMANGALA 5.30 PM

Report Auto Complaints

Report Auto Complaints

ಇನ್ನು ಆಟೋ ರಿಕ್ಷಾ ಚಾಲಕರು ಅಸಭ್ಯವಾಗಿ ವರ್ತಿಸಿದರೆ ನಿಂದಿಸಿದರೆ 24 ಗಂಟೆಯೂ ಹಾಟ್‌ಲೈನ್ ಸೇವೆ ಲಭ್ಯವಿರುವ ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಬಹುದು.

ಸಹಾಯವಾಣಿ ಸಂಖ್ಯೆ: 25588444 ಹಾಗೂ 25588555

Auto Meter Complaint

Auto Meter Complaint

ಇನ್ನು ಆಟೋ ರಿಕ್ಷಾ ಬಗ್ಗೆ ಸಂಹೇಹವಿದ್ದಲ್ಲಿ ಮುಂದಿನ ಕ್ರಮಕ್ಕಾಗಿ ಇ-ಮೇಲ್ ಮಾಡಿ

ಇಮೇಲ್: [email protected]

ಆಟೋ ರಿಕ್ಷಾ ಚಾಲಕರು ನಿಂದಿಸಿದರೆ ಎಸ್ಎಂಎಸ್ ಮಾಡಿ

ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನಂದಿನ ದಿನಕ್ಕೆ ಹೆಚ್ಚುತ್ತಲೇ ಇವೆ. ಹಾಗಿರುವಾಗ ಈ ಸಹಾಯವಾಣಿ ಸಂಖ್ಯೆ ಖಂಡಿತವಾಗಿಯೂ ನಗರದ ಸುರಕ್ಷಿತ ಪ್ರಯಾಣಕ್ಕೆ ನೆರವಾಗುವ ಭರವಸೆಯನ್ನು ಡ್ರೈವ್ ಸ್ಪಾರ್ಕ್ ಹೊಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ

Most Read Articles

Kannada
English summary
Dear friends you can use IVRS for Refusal or Demanding more. For abuse or indecent behavior, kindly report the matter to local law and order police.
Story first published: Monday, May 6, 2013, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X