Just In
- 1 hr ago
ಕೈಗೆಟುಕುವ ಬೆಲೆ, ಹಲವು ಫೀಚರ್ಸ್ಗಳೊಂದಿಗೆ ಲಭ್ಯವಿರುವ ಟಾಪ್ 5 ಅಡ್ವೆಂಚರ್ ಬೈಕ್ಗಳಿವು!
- 1 hr ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ಟೊಯೊಟಾ ಹೈರೈಡರ್ ಎಸ್ಯುವಿ
- 2 hrs ago
ಎಂಜಿ ಮೊದಲ ಕಮ್ಯೂನಿಟಿ ಇವಿ ಚಾರ್ಜರ್ ಆರಂಭ- 1 ಸಾವಿರ ನಿಲ್ದಾಣಗಳನ್ನು ಆರಂಭಿಸುವ ಗುರಿ..
- 3 hrs ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
Don't Miss!
- News
ಬಿಬಿಎಂಪಿ 1000 ಗುಂಡಿ ಇವೆ ಎಂದರೆ, ಪೊಲೀಸರು ಪ್ರಕಾರ 2000 ರಸ್ತೆ ಗುಂಡಿಗಳು
- Education
KIMS Kodagu Recruitment 2022 : 35 ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ನಿವೃತ್ತಿಯ ಚಿಂತನೆಯಲ್ಲಿ ಇಂಗ್ಲೆಂಡ್ ಕಂಡ ಶ್ರೇಷ್ಠ ನಾಯಕ!: ವಾರದೊಳಗೆ ನಿವೃತ್ತಿ ಘೋಷಿಸಲಿರುವ ಕ್ರಿಕೆಟಿಗ ಯಾರು?
- Finance
ರಷ್ಯಾದಿಂದ ಹಳದಿ ಲೋಹ ಆಮದಿಗೆ ಜಿ7 ನಿರ್ಬಂಧ ಹೇರಿಕೆ: ಚಿನ್ನದ ದರ ಏರಿಕೆ
- Movies
ಬಾಕ್ಸಾಫೀಸ್ ಉಳಿಸಿಕೊಳ್ಳಲು ಬಾಲಿವುಡ್ ಹರಸಾಹಸ: ಸಾಲು ಸಾಲು ಸಿನಿಮಾ ರಿಲೀಸ್!
- Lifestyle
ಆರೋಗ್ಯಕರ ಮಗುವನ್ನು ಪಡೆಯಲು ಪುರುಷರಿಗೆ ಸರಿಯಾದ ವಯಸ್ಸು ಯಾವುದು?
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಕಾರ್ ಬ್ಯಾಟರಿಯ ಜೀವಿತಾವಧಿ ಹೆಚ್ಚಿಸುವ 5 ಸರಳ ವಿಧಾನಗಳಿವು!
ಕಾರಿನ ಪ್ರಮುಖ ಭಾಗಗಳಲ್ಲಿ ಬ್ಯಾಟರಿ ಕೂಡ ಒಂದು. ವಾಹನದಲ್ಲಿನ ತಾಂತ್ರಿಕ ವೈಶಿಷ್ಟ್ಯಗಳು ಕೆಲಸಮಾಡಬೇಕಾದರೆ ಬ್ಯಾಟರಿ ಉತ್ತಮವಾಗಿರಬೇಕು, ಇಲ್ಲದಿದ್ದರೆ ಕಾರಿಗೆ ಸಮಸ್ಯೆಗಳು ತಪ್ಪಿದ್ದಲ್ಲ. ಇಂತಹ ಪ್ರಮುಖ್ಯತೆ ಪಡೆದುಕೊಂಡಿರುವ ಬ್ಯಾಟರಿಯ ಜೀವಿತಾವಧಿಯನ್ನು ಹೆಚ್ಚಿಸಲು ಹಲವು ಮಾರ್ಗಗಳಿವೆ.

ಈ ಲೇಖನದಲ್ಲಿ ಕಾರ್ ಬ್ಯಾಟರಿಗಳ ಜೀವಿತಾವಧಿಯನ್ನು ಹೆಚ್ಚಿಸಲು ನೀವು ಅನುಸರಿಸಬೇಕಾದ ಸರಳ ವಿಧಾನಗಳನ್ನು ತಿಳಿಸಿದ್ದೇವೆ. ಈ ಸಲಹೆಗಳು ನಿಮ್ಮ ಕಾರ್ ಬ್ಯಾಟರಿಗಳಿಗೆ ಉಪಯುಕ್ತವಾಗಿದ್ದು, ಕಾರಿನ ಬ್ಯಾಟರಿ ಲೈಫ್ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿವೆ. ಪ್ರತಿಯೊಂದನ್ನು ತಪ್ಪದೇ ಪಾಲಸುವುದರಿಂದ ಸಂಭಾವ್ಯ ಖರ್ಚುಗಳನ್ನು ತಪ್ಪಿಸಬಹುದು.

ಎಂಜಿನ್ ಸ್ಟಾರ್ಟ್ ಮಾಡದೆ ಲೈಟ್ ಆನ್ ಮಾಡಬೇಡಿ
ಎಂಜಿನ್ ಚಾಲನೆಯಲ್ಲಿಲ್ಲದಿದ್ದಾಗ ಯಾವುದೇ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬಳಸಬೇಡಿ. ಏಕೆಂದರೆ ಎಂಜಿನ್ ಆನ್ ಮಾಡದೇ ಹೆಡ್‌ಲೈಟ್‌ಗಳು ಅಥವಾ ಇಂಟೀರಿಯರ್ ಲೈಟ್‌ಗಳನ್ನು ಆನ್ ಮಾಡಿದರೆ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಮೂಲ ಕಾರಣ ಎಂಜಿನ್ ಸ್ವಿಚ್ ಆಫ್ ಆಗಿರುವಾಗ ನಿಮ್ಮ ಕಾರ್ ಆಲ್ಟರ್ನೇಟರ್ ಶಟ್ ಡೌನ್ ಆಗುತ್ತದೆ.

ನೀವು ಕಾರನ್ನು ನಿಲ್ಲಿಸಿದಾಗಲೆಲ್ಲಾ ಎಲ್ಲವೂ ಸ್ವಿಚ್ ಆಫ್ ಆಗಿದೆಯೇ? ಪರಿಶೀಲಿಸುವ ಅಭ್ಯಾಸವನ್ನು ಮಾಡಿಕೊಳ್ಳಿ (ಅತ್ಯಂತ ಮುಖ್ಯವಾಗಿ ಲೈಟ್‌ಗಳು). ಇದು ಕಾರ್ ಬ್ಯಾಟರಿಯು ವ್ಯರ್ಥವಾಗಿ ಒಣಗುವುದನ್ನು ತಡೆಯುತ್ತದೆ. ಅಂತೆಯೇ ಕಾರನ್ನು ಬಿಡುವಾಗ ಲಾಕ್ ಮಾಡುವುದನ್ನು ಮರೆಯಬೇಡಿ. ಒಂದು ವೇಳೆ ಮರೆತರೂ ನೆನಪಾದ ಕೂಡಲೆ ಎಷ್ಟೇ ದೂರದಲ್ಲಿದ್ದರೂ ಕಾರ್ ಬಳಿ ಹೋಗೊ ಆಫ್ ಮಾಡಿ.

ಇದನ್ನು ಕೇವಲ ಭದ್ರತೆಗಾಗಿ ಹೇಳುತ್ತಿಲ್ಲ. ಬದಲಾಗಿ ಇದರ ಹಿಂದೆ ಇನ್ನೊಂದು ಕಾರಣವೂ ಇದೆ. ನಿಮ್ಮ ಕಾರನ್ನು ನೀವು 'ತೆರೆದು' ಅದನ್ನು ಮೆಮೊರಿಯಲ್ಲಿಟ್ಟರೆ, ಕಾರಿನ 'ಕಂಪ್ಯೂಟರ್ ಸಿಸ್ಟಮ್' ಚಾಲನೆಯಲ್ಲಿ ಮುಂದುವರಿಯಬಹುದು. ಇದು ನಿಮಗೆ ತಿಳಿಯದಂತೆ ನಿಮ್ಮ ಕಾರಿನ ಬ್ಯಾಟರಿ ಒಣಗಲು ಕಾರಣವಾಗುತ್ತದೆ.

ಕಾರಿಗೂ ವಿರಾಮ ಬೇಕು
ನಿಮ್ಮ ಕಾರನ್ನು ದೀರ್ಘಕಾಲದವರೆಗೆ ಬಳಸದಿದ್ದರೆ ಬ್ಯಾಟರಿಯನ್ನು 'ರೀಚಾರ್ಜ್' ಮಾಡಲು ಕಷ್ಟವಾಗಬಹುದು. ಹಾಗಾಗಿ ಕಾರನ್ನು ಬಹಳ ದಿನಗಳ ಕಾಲ ಬಳಸದೇ ಇಡಬೇಡಿ. ನಿಮ್ಮ ಕಾರು ನಿರಂತರ ಬಳಕೆಯಲ್ಲಿದ್ದಾಗ ಮಾತ್ರ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ವಾರಕ್ಕೊಮ್ಮೆಯಾದರೂ ಕನಿಷ್ಠ 30 ನಿಮಿಷಗಳ ಕಾಲ ವಾಹನ ಚಲಾಯಿಸಿ. ಇದು ನಿಮ್ಮ ಕಾರ್ ಎಂಜಿನ್ ಅನ್ನು ವಾರ್ಮ್-ಅಪ್ ಮಾಡುತ್ತದೆ. ಕಾರಿನಲ್ಲಿ ಬಳಸಿರುವ ಕೆಲವು ದ್ರವಗಳು ಉತ್ತಮವಾಗಿ ಪರಿಚಲನೆಗೊಳ್ಳುವಂತೆ ಮಾಡುತ್ತದೆ. ನೀವು ವಾರಗಟ್ಟಲೆ ಕಾರನ್ನು ಬಳಸದಿದ್ದರೆ, ಮುಂದಿನ ಬಾರಿ ನೀವು ಕಾರನ್ನು ಓಡಿಸುವಾಗ ಬ್ಯಾಟರಿ ಸಮಸ್ಯೆ ಎದುರಾಗಬಹುದು.

ಬ್ಯಾಟರಿಯನ್ನು ಆಗಾಗ್ಗೆ ಸ್ವಚ್ಛಗೊಳಿಸಿ
ಕೊಳಕು ಮತ್ತು ತೇವಾಂಶವು ಸೋರಿಕೆಗೆ ಕಾರಣವಾಗಬಹುದು. ಅವು 'ಶಾರ್ಟ್ ಸರ್ಕ್ಯೂಟ್'ಗಳಿಗೂ ಕಾರಣವಾಗಬಹುದು. ಹಾಗಾಗಿ ತಿಂಗಳಿಗೊಮ್ಮೆಯಾದರೂ ಕಾರಿನ ಬ್ಯಾಟರಿಯನ್ನು ಸ್ವಚ್ಛಗೊಳಿಸಿ. ಸ್ಪಾಂಜ್ ಅಥವಾ ಒಣ ಬಟ್ಟೆಯಿಂದ ಬ್ಯಾಟರಿಯನ್ನು ಸ್ವಚ್ಛಗೊಳಿಸುವುದು ಉತ್ತಮ. ಇದರಿಂದ ಬ್ಯಾಟರಿಯ ಹೊರಭಾಗದ ಸಮಸ್ಯೆಗಳನ್ನು ತಡಿಯಬಹುದು.

ಕಡಿಮೆ ದೂರದ ಪ್ರಯಾಣಕ್ಕೆ ಕಾರನ್ನು ಬಳಸದಿರಿ
ಪ್ರತಿ ಬಾರಿ ನೀವು ಕಾರನ್ನು ಸ್ಟಾರ್ಟ್ ಮಾಡಿದಾಗ, ಬ್ಯಾಟರಿ ಕೆಲಸ ಮಾಡಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಎಂಜಿನ್ ನಿಂದ ರೀಚಾರ್ಜ್ ಆಗುತ್ತದೆ. ಹಾಗಾಗಿ ಕಡಿಮೆ ದೂರದವರೆಗೆ ಮಾತ್ರ ಕಾರನ್ನು ಓಡಿಸಿದರೆ, ಬ್ಯಾಟರಿಯಿಂದ ಖರ್ಚಾದ ವಿದ್ಯುತ್ ಅನ್ನು ಮರುಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಿರಂತರವಾಗಿ ಹತ್ತಿರದ ಸ್ಥಳಗಳಿಗೆ ಕೊಂಡೊಯ್ಯುವುದರಿಂದ ಬ್ಯಾಟರಿ ವೋಲ್ಟೇಜ್ ತೀವ್ರವಾಗಿ ಕಡಿಮೆಯಾಗುತ್ತದೆ.

ಕೆಲವು ಹಂತದಲ್ಲಿ ಕಾರು ಸ್ರಾರ್ಟ್ ಆಗಲು ಹೆಣಗಾಡುತ್ತದೆ. ಹಾಗಾಗಿ ಕಡಿಮೆ ದೂರದ ಪ್ರಯಾಣಕ್ಕೆ ಕಾರನ್ನು ತೆಗೆದುಕೊಳ್ಳಬೇಡಿ. ಅಂದರೆ ನೀವು ದೂರದ ಪ್ರಯಾಣ ಮಾಡುತ್ತಿದ್ದರೆ ಮಾತ್ರ ಕಾರನ್ನು ತೆಗೆದುಕೊಳ್ಳಿ. ಕಡಿಮೆ ದೂರಕ್ಕೆ ಹೋದರೆ ಸಾರ್ವಜನಿಕ ಸಾರಿಗೆಯಂತಹ ಪರ್ಯಾಯ ಮಾರ್ಗಗಳನ್ನು ನೋಡಿಕೊಳ್ಳುವುದು ಉತ್ತಮ.

ನಿಯಮಿತ ಸರ್ವಿಸ್ ಮುಖ್ಯ
ನಿಯಮಿತವಾಗಿ ಕಾರನ್ನು ಸರ್ವಿಸ್ ಮಾಡಿಸುವುದು ಸಹ ಪ್ರಯೋಜನಕಾರಿಯಾಗಿದೆ. ನೀವು ಅವಸರದಲ್ಲಿ ಪ್ರಯಾಣಿಸುವ ವೇಳೆ ಕಾರು ಇದ್ದಕ್ಕಿದ್ದಂತೆ ಬ್ರೇಕ್‌ಡೌನ್ ಆಗುವುದನ್ನು ತಡೆಯಲು ಬಯಸಿದರೆ, ಬ್ಯಾಟರಿಯನ್ನು 'ಟೆಸ್ಟ್' ಮಾಡುವುದು ಒಳ್ಳೆಯದು. ಮುಂದಿನ ಬಾರಿ ನೀವು ಸರ್ವಿಸ್‌ಗಾಗಿ ಕಾರನ್ನು ಬಿಟ್ಟಾಗ, ಬ್ಯಾಟರಿಯು ಉತ್ತಮವಾಗಿದೆಯೇ? ಬ್ಯಾಟರಿ ಸರಿಯಾಗಿ 'ರೀಚಾರ್ಜ್' ಆಗಿದೆಯೇ? ಮೆಕ್ಯಾನಿಕ್ ಅನ್ನು ಪರಿಶೀಲಿಸಲು ಕೇಳಿ.

ಈ ಮೂಲಕ ನಿಮ್ಮ ಕಾರಿನ ಕಂಡಿಷನ್ ತಿಳಿದು ಮುಂದಿನ ಪ್ರಕ್ರಿಯೆ ಮಾಡಿಕೊಳ್ಳಬಹುದು. ಎಷ್ಟೋ ಜನರು ಕಾರನ್ನು ಬಳಸುತ್ತಾರೆಯೇ ಹೊರತು ಬ್ಯಾಟರಿ ಬಗ್ಗೆ ಗಮನವಿರುವುದಿಲ್ಲ. ಆದರೆ ಕಾರಿಗೆ ಬ್ಯಾಟರಿ ಎಷ್ಟು ಮುಖ್ಯ ಎಂಬುದನ್ನು ಬ್ಯಾಟರಿ ನಿಷ್ಕ್ರಿಯಗೊಂಡಾಗ ಮಾತ್ರ ಅರಿವಾಗುತ್ತದೆ. ಹಾಗಾಗಿ ಮುಂಚಿತವಾಗಿ ಬ್ಯಾಟರಿ ಬಗ್ಗೆ ಕಾಳಜಿ ತೋರಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಲೇಖನದಲ್ಲಿ ನೀಡಲಾದ ಸರಳ ಸಲಹೆಗಳನ್ನು ಪಾಲಿಸುವುದರಿಂದ ನಿಮ್ಮ ಕಾರಿನ ಬ್ಯಾಟರಿ ಹೆಚ್ಚು ಕಾಲ ಉಳಿಯುತ್ತದೆ. ಹಾಗಾಗಿ ಸರಳ ವಿಧಾನಗಳನ್ನು ಅನುಸರಿಸಲು ಬೇಜವಾಬ್ದಾರಿ ತೋರಿದರೆ ಬ್ಯಾಟರಿ ಅಯುಷ್ಯ ಮುಗಿಯುವದರ ಜೊತೆಗೆ ಸಾವಿರಾರು ರೂ. ಖರ್ಚು ಮಾಡುವ ಅನಿವಾರ್ಯತೆ ಎದುರಾಗುತ್ತದೆ.