ರೋಡ್ ರೇಜ್: ಕಾರಿನ ಮೇಲೆ ಗುಂಡಿನ ಸುರಿಮಳೆ

ದೆಹಲಿಯ ಕತ್ರಿ ರಸ್ತೆಯಲ್ಲಿ ಐ10 ಕಾರಿಗೆ ದಾರಿಬಿಡುವಂತೆ ಸ್ಕಾರ್ಪಿಯೊ ಚಾಲಕ ಜೋರಾಗಿ ಹಾರ್ನ್ ಮಾಡಿದ್ದ. ರಸ್ತೆ ಕಿರಿದಾಗಿದ್ದ ಕಾರಣ ಐ10 ಕಾರಿನವನಿಗೆ ದಾರಿಬಿಡಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ ಐ10 ಕಾರಿನವನ್ನು ಓವರ್ ಟೇಕ್ ಮಾಡಿದ ಸ್ಕಾರ್ಪಿಯೊ ಈ ಕಾರಿಗೆ ಅಡ್ಡವಾಗಿ ನಿಂತಿತ್ತು. ಅದರಿಂದ ಕೆಳಗಿಳಿದ ಏಳೆಂಟು ಯುವಕರು ಕಾರಿನ ಮೇಲೆ ಗುಂಡು ಹಾರಿಸತೊಡಗಿದರು.
"ಗುಂಡು ಹಾರಿಸತೊಡಗಿದಾಗ ಭಯದಿಂದ ಕಾರಿನೊಳಗೆ ಅಡಗಿಕುಳಿತೆ" ಎಂದು ಐ10 ಕಾರಿನ ಚಾಲಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಗುಂಡಿನ ಸದ್ದಿಗೆ ಬೆಚ್ಚಿದ ಜನರು ಸುತ್ತಮುತ್ತ ಸೇರಿದ ಕಾರಣ ಅಪರಿಚಿತರು ಕಾರು ಹತ್ತಿ ಪರಾರಿಯಾದರು. ಚಾಲಕ ನೀಡಿದ ದೂರಿನ್ವಯ ಅಪರಿಚಿತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ರೋಡ್ ರೇಜ್: ಇದು ಪ್ರತಿನಿತ್ಯ ರಸ್ತೆಯಲ್ಲಿ ಕಾಣುವ ದೃಷ್ಯ. ಕೆಲವರು ಇಂತಹ ಸಮಯದಲ್ಲಿ ಹಣ ವಸೂಲಾತಿಗಾಗಿ ರೌದ್ರವತಾರದ ಅಭಿನಯ ಮಾಡುತ್ತಾರೆ. ಅದು ನಾವು ತುಂಬಾ ಪ್ರೀತಿಸುವ ವಾಹನವಾಗಿರಬಹುದು. ಆದರೆ ಅದಕ್ಯಾಕೆ ಅಷ್ಟು ಮೈಬಿದ್ದು ಹೋಗುತ್ತೇವೆ? ನಮ್ಮ ವಾಹನಕ್ಕೆ ಚಿಕ್ಕ ಗೀರು ಬಿದ್ದರೂ ಹೊಡೆದಾಟ, ಬಡಿದಾಟಕ್ಕೆ ನಾವ್ಯಾಕೆ ಇಳಿಯಬೇಕು? ತಪ್ಪು ಮಾಡದಿದ್ದರೂ ಕೆಲವೊಮ್ಮೆ ರಸ್ತೆಯಲ್ಲಿ ಅಮಾಯಕರು ಯಾಕೆ ಒದೆ ತಿನ್ನುತ್ತಾರೆ?
ಓದಿ: ರೋಡ್ ವಿಲನ್ ನೀನಾಗಬೇಡ ಗೆಳೆಯ..


Click it and Unblock the Notifications








