ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಕಾರು ಅಥವಾ ಬೈಕ್‍‍ಗಳಲ್ಲಿ ಅತಿ ವೇಗದಲ್ಲಿ ಪ್ರಯಾಣಿಸುವುದು ಕಷ್ಟವೇನಲ್ಲ. ಆದರೇ ಆ ವೇಗವನ್ನು ಕಂಟ್ರೋಲ್ ಮಾಡಲು ಬ್ರೇಕ್‍‍ಗಳು ತಪ್ಪದೇ ಇರಬೇಕು. ಬ್ರೇಕ್‍‍ಗಳು ಸರಿಯಾಗಿ ಕೆಲಸ ಮಾಡದಿರುವ ವಿಷಯವು ತಿಳಿದಲ್ಲಿ, ಆ ವಾಹನವನ್ನು ಬಳಸದಿರುವುದು ತುಂಬ

By Rahul Ts

ಕಾರು ಅಥವಾ ಬೈಕ್‍‍ಗಳಲ್ಲಿ ಅತಿ ವೇಗದಲ್ಲಿ ಪ್ರಯಾಣಿಸುವುದು ಕಷ್ಟವೇನಲ್ಲ. ಆದರೇ ಆ ವೇಗವನ್ನು ಕಂಟ್ರೋಲ್ ಮಾಡಲು ಬ್ರೇಕ್‍‍ಗಳು ತಪ್ಪದೇ ಇರಬೇಕು. ಬ್ರೇಕ್‍‍ಗಳು ಸರಿಯಾಗಿ ಕೆಲಸ ಮಾಡದಿರುವ ವಿಷಯವು ತಿಳಿದಲ್ಲಿ, ಆ ವಾಹನವನ್ನು ಬಳಸದಿರುವುದು ತುಂಬಾ ಒಳ್ಳೆಯದು.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಕೆಲವು ಬಾರಿ ಪ್ರಯಾಣದಲ್ಲಿರುವಾಗ ಬ್ರೇಕ್‍‍ಗಳು ಫೈಲ್ಯೂರ್ ಆಗುತ್ತವೆ. ಆದರೇ ಬ್ರೇಕ್ ಆಗುತ್ತಿರುವ ವಿಷಯವನ್ನು ನಾವು ಮೊದಲೇ ಗ್ರಹಿಸಬಹುದು. ಬ್ರೇಕ್ ಫೈಲ್ಯೂರ್ ಆಗುತ್ತಿದೆ ಎಂದು ತಿಳಿಸುವ ಸಂಕೇತಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯಿರಿ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಕರ್ಕಶ ಶಬ್ದ ಬರುವುದು..

ವಾಹನದಲ್ಲಿ ಬ್ರೇಕ್ ಹಿಡಿದಾಗ ಕರ್ಕಶವಾದ ಶಬ್ದ ಬಂದರೇ ಅದು ನಿಮ್ಮ ವಾಹನದ ಬ್ರೇಕ್ ಫೈಲ್ಯೂರ್ ಆಗುತ್ತಿದೆ ಎಂದು ಸಂಕೇತ. ನಿಜಕ್ಕೆ ಹಲವು ಕಂಪೆನಿಗಳಲ್ಲಿ ಸುರಕ್ಷತೆಗಾಗಿ ಈ ಶಬ್ದ ಬರುವ ಹಾಗೆ ವಾಹನಗಳಲ್ಲಿ ನೀಡಿರುತ್ತಾರೆ. ಬ್ರೇಕ್‍‍ಗಳನ್ನು ಕೊನೆಯವರೆಗು ಪ್ರೆಸ್ ಮಾಡಿದ್ದಲ್ಲಿ, ವೆಹಿಕಲ್ ನಿಲ್ಲದಿದ್ದರೆ ಚಾಲನೆಯಲ್ಲಿರುವ ಎರಡು ಭಾಗಗಳು ಒಂದರನ್ನೊಂದು ಅಂಟಿಕೊಂಡಾಗ ಇಂತಹ ಕರ್ಕಶ ಶಬ್ದ ಬರುತ್ತದೆ. ಅಂದರೇ ಬ್ರೇಕ್‍‍ಗಳನ್ನು ರಿಪೇರಿ ಮಾಡಿಸಬೇಕೆಂದು ಇದು ಸೂಚನೆ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಗರಗರ ಎನಿಸುವ ಶಬ್ದ ಬರುವುದು..

ಬ್ರೇಕನ್ನು ಅಪ್ಲೈ ಮಾಡಿದ್ದಲ್ಲಿ ಚಕ್ರಗಳ ನಡುವೆ ಇರುವ ಬ್ರೇಕ್ ಷೂ ಡ್ರಮ್ ಅನ್ನು ಗಟ್ಟಿಯಾಗಿ ಹಿಡಿದಿರುತ್ತದೆ. ಈ ಎರಡರ ಮಧ್ಯೆ ಬ್ರೇಕ್ ಲೈನಿಂಗ್ ಇರುತ್ತದೆ. ಅಧಿಕ ಕಾಲದವರೆಗೆ ಬ್ರೆಕ್ ಲೈನಿಂಗ್‍ಗಳನ್ನು ಬದಲಾಯಿಸದಿದ್ದಲ್ಲಿ, ಬ್ರೇಕ್ ಷೂ ಡ್ರಮ್‍‍ಗೆ ಅಂಟಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಆಗ ಗರಗರ ಎಂಬ ಶಬ್ದವು ಬರುತ್ತದೆ. ಇಂತಹ ಸಂದರ್ಭದಲ್ಲಿ ಬ್ರೇಕ್ ಷೂ ಕರಗಿ ಹೋದರೆ ಬ್ರೇಕ್ ಫೈಲ್ಯೂರ್ ಆಗುವುದು ಖಚಿತ. ಆದ್ದರಿಂದ ಬ್ರೇಕ್‍‍ಗಳನ್ನು ಒತ್ತಿದಾಗ ಇಂತಹ ಶಬ್ದವು ಬಂದರೇ ಸಮೀಪದಲ್ಲಿನ ಮೆಕಾನಿಕ್ ಹತ್ತಿರ ತಕ್ಷಣವೇ ಚೆಕ್ ಮಾಡಿಸಿ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಬ್ರೇಕ್ ಒತ್ತಿದಾಗ ವೈಬ್ರೇಟ್ ಆಗುವುದು

ಇದರಲ್ಲಿ ಎರಡು ಬಗೆಯಾದ ವೈಬ್ರೇಷನ್‍‍ಗಳಿರುತ್ತವೆ.

1. ಬ್ರೇಕ್ ಅಪ್ಲೈ ಮಾಡಿದಾಗ ಬ್ರೇಕ್ ಪೆಡಲ್ ವೈಬ್ರೇಟ್ ಆಗುವುದು, ಅಂದರೇ ಬ್ರೇಕ್‍‍ನಲ್ಲಿ ಸಮಸ್ಯೆ ಇದೆ ಎಂದು ಅರ್ಥ.

2. ಬ್ರೇಕ್ ಅಪ್ಲೈ ಮಾಡಿದಾಗ ಸಂಪೂರ್ಣ ವಾಹನವು ವೈಬ್ರೇಟ್ ಆಗುವುದು, ಅಂದರೇ ಬ್ರೇಕ್‍‍ಗಳು ದೊಡ್ಡ ಸಮಸ್ಯೆಗೆ ತುತ್ತಾಗಿದೆ ಎಂದು ಅರ್ಥ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಬ್ರೇಕ್ ಪೆಡಲ್‍‍ನ ಮೇಲೆ ಮತ್ತು ಕಾರು ಪೂರ್ಣವಾಗಿ ವೈಬ್ರೇಷನ್ ಬರುತ್ತಿದೆ ಎಂದರೇ ಬ್ರೇಕ್‍‍ಗಳ ತೊಂದರೆಯು ಅಧಿಕವಾಗಿದೆ ಎಂದು ಅರ್ಥ ಮತ್ತು ಬ್ರೇಕನ್ನು ಬದಲಾಯಿಸಿ ಬಹಳ ಕಾಲ ಆಗಿರುತ್ತದೆ. ಪರಿಮಿತ ವೇಗದ ನಂತರ ಇಂತಹ ವೈಬ್ರೇಷನ್ ಬರುತ್ತಿರುವುದಾದರೆ ತಕ್ಷಣವೇ ಮೆಕಾನಿಕ್ ಅನ್ನು ಸಂಪರ್ಕಿಸಿ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಬ್ರೇಕ್ ಪೆಡಲ್ ಅನ್ನು ಧೀರ್ಘಕಾಲ ಪ್ರೆಸ್ ಮಾಡುತ್ತಿದ್ದೀರಾ..?

ವಾಹನದ ವೇಗವನ್ನು ಪೂರ್ತಿಯಾಗಿ ಕಡಿಮೆಗೊಳಿಸಲು ಬ್ರೇಕ್ ಪೆಡಲ್ ಅನ್ನು ಧೀರ್ಘಕಾಲದ ವರೆಗು ಪ್ರೆಸ್ ಮಾಡುತ್ತಿದ್ದೀರಾ.? ಆದರೆ, ಆ ಬ್ರೇಕ್‍‍ಗಳು ಖಚಿತವಾಗಿಯು ಫೈಲ್ಯೂರ್ ಆಗುತ್ತದೆ. ಬ್ರೇಕ್ ಫ್ಲುಯ್ಡ್ ಕಡಿಮೆಯಾದಾಗ ಹೀಗಾಗುತ್ತದೆ. ನಿಜಕ್ಕೆ ಬ್ರೇಕ್ ಆಯಿಲ್ ಆವಿಯಾಗುವ ಅವಕಾಶಗಳು ಬಹಳ ಕಡಿಮೆ. ಆದ್ದರಿಂದ ಬ್ರೇಕ್ ಆಯಿಲ್ ಲೀಕ್ ಆಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಲೀಕ್ ಆಗುತ್ತಿದ್ದರೆ ತಕ್ಷಣವೇ ಸಮೀಪದಲ್ಲಿರುವ ಮೆಕಾನಿಕ್ ಅನ್ನು ಸಂಪರ್ಕಿಸಿ. ಬ್ರೇಕ್ ಫ್ಲೂಯ್ಡ್ ಇಲ್ಲದ ವಾಹನವನ್ನು ಚಲಾಯಿಸುವುದು ಪ್ರಾಣದ ಜೊತೆ ಆಟವಾಡಿದಂತೆ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಕಾರಿನ ಡ್ಯಾಶ್‍‍ಬೋರ್ಡ್‍‍ನಲ್ಲಿ ಬ್ರೇಕ್ ವಾರ್ನಿಂಗ್ ಲೈಟ್ ಇರ್ರುತ್ತದೆಯೆ.?

ಹೌದು., ಈಗ ಬರುತ್ತಿರುವ ಬಹುತೇಕ ಕಾರುಗಳಲ್ಲಿ ಬ್ರೇಕ್ ವಾರ್ನಿಂಗ್ ಲೈಟ್‍‍ಗಳನ್ನು ಅಳವಡಿಸಿರುತ್ತಾರೆ. ಕಾರನಿಲ್ಲಿರುವ ಭದ್ರತಾ ವೈಶಿಷ್ಟ್ಯತೆಗಳ ಆಧಾರವಾಗಿ ಇವುಗಳನ್ನು ಸಂಸ್ಥೆಗಳು ಅಳವಡಿಸುತ್ತಾರೆ. ಒಂದು ಭಾಗ ಯಾಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಮ್ತ್ತೊಂದು ಕಡೆ ಬ್ರೇಕ್ ಸಿಸ್ಟಮ್ ಲೈಟ್‍‍ಗಳು ಇರುತ್ತವೆ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ವೆಹಿಕಲ್ ಮೂವಿಂಗ್‍‍ನಲ್ಲಿರುವಾಗ ಬ್ರೇಕ್ ಅಪ್ಲೈ ಮಾಡದ್ರೆ ಎಬಿಎಸ್ ಬ್ರೇಕಿಂಗ್ ಸಿಸ್ಟಮ್ ಆಕ್ಟಿವೇಟ್ ಆಗಿದ್ದಾಗ ಎಬಿಎಸ್ ಲೈಟ್ ಆನ್ ಆಗುತ್ತದೆ. ಬ್ರೇಕಿಂಗ್ ಮತ್ತು ಎಬಿಎಸ್ ವ್ಯವಸ್ಥೆಯಲ್ಲಿ ಲೋಪದೋಶವಿದ್ದರೇ ಬ್ರೇಕ್ ವಾರ್ನಿಂಗ್ ಲೈಟ್‍‍ಗಳು ಮಿನುಗುತ್ತದೆ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ವಾಹನದಲ್ಲಿ ಇತರೇ ಭಾಗದಲ್ಲಿ ಸಣ್ಣ ಅಡ್ಜಸ್ತ್ಮೆಂಟ್ ಮಾಡಿಕೊಳ್ಳುವ ವಿಧದಲ್ಲಿ ಬ್ರೇಕ್‍‍ಗಳನ್ನು ಅಡ್ಜಸ್ಟ್ ಮಾಡಿಕೊಂಡು ಹೋಗುವುದಕ್ಕೆ ಪ್ರಯತ್ನಿಸಲೇಬೇಡಿ.. ಏಕೆಂದರೇ ಅಧಿಕ ವೇಗದಲ್ಲಿ ಪ್ರಯಾಣಿಸುತ್ತಿರುವಾದ ಅಡ್ಜಸ್ಟ್ಮೆಂಟ್ಸ್ ಯಾವುದು ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದಾ ಮೇಲೆ ಹೇಳಿರುವ ಸಂಕೇತಗಳನ್ನು ವೆಹಿಕಲ್ ಡ್ರೈವ್ ಮಾಡುತ್ತಿರುವಾದ ಗಮನಿಸುತ್ತಿರಿ.

ಬ್ರೇಕ್ ಫೈಲ್ಯೂರ್ ಆಗಲಿದೆ ಎಂದು ತಿಳಿಸುವ ಸೂಚನೆಗಳಿವು..

ಆದರೇ ಒಂದು ವಿಷಯ ನೆನಪಿನಲಿಟ್ಟುಕೊಳ್ಳಿ.. "ವೇಗಕ್ಕಿಂತ ಪ್ರಾಣ ದೊಡ್ದದು". ಆದ್ದರಿಂದ ಎಲ್ಲಿಗಾದರೂ ಹೊರಡುವ ಮುನ್ನ ಕೊಂಚ ಬೇಗನೆ ಹೊರಡಿ ನೆಮ್ಮದಿಯಾಗಿ ರೈಡ್ ಮಾಡಿಕೊಂಡು ಸುರಕ್ಷಿತವಾಗಿ ಗಮ್ಯವನ್ನು ತಲುಪಿರಿ.

ಹ್ಯಾಪಿ & ಸೇಫ್ ಜರ್ನಿ..

Most Read Articles

Kannada
English summary
Signs of brakes trying fail.
Story first published: Tuesday, August 21, 2018, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X