ಕಾರಿನ ಮೈಲೇಜ್ ಹೆಚ್ಚಿಸಲು ಸುಲಭ ವಿಧಾನಗಳು

Posted By:
To Follow DriveSpark On Facebook, Click The Like Button
ಕಾರು ಖರೀದಿ ಸಂದರ್ಭದಲ್ಲಿ ಎಲ್ಲರನ್ನೂ ಕಾಡುವ ಪ್ರಶ್ನೆ ಮೈಲೇಜ್. ದೇಶದಲ್ಲಿ ಕಾರು ಖರೀದಿಯಲ್ಲಿ ದರ ಮತ್ತು ಮೈಲೇಜ್ ಅತ್ಯಂತ ಪ್ರಮುಖ ಪ್ರಶ್ನೆ. ಇತ್ತೀಚೆಗೆ ಇಂಧನ ದರಗಳು ಗಗನಕ್ಕೇರುತ್ತಿರುವುದರಿಂದ ಮೈಲೇಜ್ ಕಾರುಗಳಿಗೆ ಹೆಚ್ಚಿನ ಜನರು ಆದ್ಯತೆ ನೀಡುತ್ತಿದ್ದಾರೆ.

ಕಾರು ಕಂಪನಿಗಳು ತಿಳಿಸಿದಷ್ಟು ನಿಮ್ಮ ಕಾರು ಮೈಲೇಜ್ ನೀಡುತ್ತಿರುವುದೇ? ಹೆಚ್ಚಿನವರ ಪ್ರಕಾರ "ಇಲ್ಲ". ಕೆಲವು ಅದೃಷ್ಟವಂತರಿಗೆ ಕಾರು ಕಂಪನಿ ತಿಳಿಸಿದಷ್ಟೇ ಮೈಲೇಜ್ ಸಿಗಬಹುದು. ಕೆಲವರು ಕಾರು ಕಂಪನಿಗಳು ಹೇಳಿದಕ್ಕಿಂತಲೂ ಹೆಚ್ಚು ಮೈಲೇಜ್ ಪಡೆಯುತ್ತಾರೆ!

ಕೆಲವರು ತಮ್ಮ ಕಾರುಗಳಲ್ಲಿ ಅಷ್ಟೊಂದು ಮೈಲೇಜ್ ಹೇಗೆ ಪಡೆಯುತ್ತಾರೆ? ಈ ಕುರಿತು ಕೆಲವು ಅನುಭವಿ ಚಾಲಕರನ್ನು ಡ್ರೈವ್ ಸ್ಪಾರ್ಕ್ ಮಾತನಾಡಿಸಿತ್ತು. ಅವರಿಂದ ಪಡೆದ ಸಲಹೆಗಳನ್ನು ಇಲ್ಲಿ ನೀಡಿದ್ದೇವೆ. ಇದು ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು ನೆರವಾದೀತು.

ಹನಿಹನಿ ಸೇರಿ ಹಳ್ಳ. ಚಿಲ್ಲರೆ ಚಿಲ್ಲರೆ ಸೇರಿಯೇ ಸಾವಿರಾರು ರುಪಾಯಿಗಳಾಗುತ್ತವೆ. ಅದೇ ರೀತಿ ಪ್ರತಿ ಹನಿಹನಿ ಇಂಧನ ಉಳಿಸಿ ಪೆಟ್ರೋಲ್ ಅಥವಾ ಡೀಸೆಲಿಗೆ ಸುರಿವ ಹಣ ಉಳಿಸಬಹುದು. ಕಾರಿನ ಮೈಲೇಜ್ ಹೆಚ್ಚಿಸಲು ನೀವು ಇಚ್ಚಿಸಿದರೆ ಎರಡು ವಿಷ್ಯವನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.

1. ಕಾರಿನ ನಿರ್ವಹಣೆ

2. ಚಾಲನೆ ಶೈಲಿ

ಸಾವಿರಾರು ಕಿ.ಮೀ. ಕಾರು ಚಲಾಯಿಸುವುದು ಕಾರಿನ ಟೆಕ್ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ದಿನಕಳೆದಂತೆ ಮೈಲೇಜ್ ಕಡಿಮೆಯಾಗುತ್ತದೆ. ಕಾರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದರೆ, ಅತ್ಯುತ್ತಮ ಚಾಲನೆ ಅಭ್ಯಾಸ ನಿಮಗಿದ್ದರೆ ಖಂಡಿತವಾಗಿಯೂ ಮೈಲೇಜ್ ಹೆಚ್ಚಿಸಬಹುದು. ಇಲ್ಲೊಂದಿಷ್ಟು ಸಲಹೆಗಳಿವೆ.

ಏರ್ ಫಿಲ್ಟರ್ ಕ್ಲೀನಾಗಿಡಿ: ಏರ್ ಫಿಲ್ಟರ್ ಸ್ವಚ್ಛವಾಗಿದ್ದರೆ ಎಂಜಿನಿಗೆ ಶುದ್ಧಗಾಳಿ ದೊರಕುತ್ತದೆ. ಇದರಿಂದ ದಕ್ಷತೆ ಹೆಚ್ಚಿಸುತ್ತದೆ. ಕೊಳೆ ತುಂಬಿದ ಏರ್ ಫಿಲ್ಟರಿನಿಂದ ಇಂಧನ ವ್ಯರ್ಥವಾಗುತ್ತದೆ. ಏರ್ ಫಿಲ್ಟರ್ ಸ್ವಚ್ಛವಾಗಿಟ್ಟು ಕಾರಿನ ಮೈಲೇಜ್ ಹೆಚ್ಚಿಸಿ.

ಟೈರ್ ಪ್ರೆಷರ್ ನಿರ್ವಹಣೆ: ಕಾರಿನ ಟೈರಿಗೆ ಸಮರ್ಪಕವಾಗಿ ಗಾಳಿ ತುಂಬಿಸಿ. ಗಾಳಿ ಕಡಿಮೆಯಾಗಿದೆ ಎಂದೆನಿಸಿದಾಗ ಫಿಲ್ ಮಾಡಿ. ಗಾಲಿಯಲ್ಲಿ ಗಾಳಿ ಸಮರ್ಪಕವಾಗಿದ್ದರೆ ವಾಹನ ಹೆಚ್ಚು ಮೈಲೇಜ್ ನೀಡುತ್ತದೆ.

ಕಾರು ಹಗುರವಾಗಿರಲಿ: ಕಾರು ಓವರ್ ಲೋಡ್ ಮಾಡಬೇಡಿ. ಕಾರಿನ ತೂಕ ಕಡಿಮೆಯಿದಷ್ಟು ಮೈಲೇಜ್ ಹೆಚ್ಚಾಗುತ್ತದೆ.

ಮುಂಜಾನೆ ಇಂಧನ ತುಂಬಿಸಿ: ಆದಷ್ಟು ಮುಂಜಾನೆ ಸಮಯದಲ್ಲಿ ಪೆಟ್ರೋಲ್ ಬಂಕಿಗೆ ಹೋಗಿ ಇಂಧನ ತುಂಬಿಸಿ.

ಕಾರು ಸರ್ವಿಸ್: ಸೂಕ್ತ ಸಮಯಕ್ಕೆ ಕಾರು ಸರ್ವಿಸ್ ಮಾಡುತ್ತೀರಿ. ಸ್ಪಾರ್ಕ್ ಪ್ಲಗ್, ಏರ್ ಫಿಲ್ಟರ್, ಫ್ಯೂಯಲ್ ಫಿಲ್ಟರ್ ಇತ್ಯಾದಿಗಳ ಬದಲಾವಣೆ ಅಗತ್ಯವಿದ್ದರೆ ಮಾಡಿಬಿಡಿ. ಫ್ಲೂಯೆಡ್ಸ್, ಲ್ಯುಬ್ರಿಕೆಂಟ್ ಬದಲಾಯಿಸಿ. ಎಂಜಿನ್ ಮತ್ತು ಬ್ರೇಕ್ ಸಮರ್ಪಕವಾಗಿ ಕೆಲಸ ಮಾಡುವಂತೆ ಇರಲಿ.

ಅತ್ಯುತ್ತಮ ಚಾಲನೆ ಅಭ್ಯಾಸ ಕೂಡ ಕಾರಿನ ಮೈಲೇಜ್ ಹೆಚ್ಚಿಸಲು ನೆರವಾಗುತ್ತದೆ.

* ಅನಗತ್ಯವಾಗಿ ಗೇರ್ ಹಾಕದಿರಿ: ಹೆಚ್ಚು ಹೆಚ್ಚು ಗೇರ್ ಬಳಸಿದರೆ ಹೆಚ್ಚು ಇಂಧನ ವ್ಯಯವಾಗುತ್ತದೆ. ಅನಗತ್ಯವಾಗಿ ಗೇರ್ ಬದಲಾಯಿಸುವ ಅಭ್ಯಾಸ ಬಿಟ್ಟುಬಿಡಿ.

* ಎಂಜಿನ್ ಇಡ್ಲಿಂಗ್ ಆಗದಿರಲಿ. ಅಂದ್ರೆ ನೀವು ಟ್ರಾಫಿಕ್ ಜಾಮ್ ನಲ್ಲಿ ಕಾರು ನಿಲ್ಲಿಸಿದಾಗ ಹೆಚ್ಚು ಹೊತ್ತು ಎಂಜಿನ್ ಆನ್ ಮಾಡಿ ಇಡದಿರಿ.

* ಏರ್ ಕಂಡಿಷನ್ ಮೈಲೇಜ್ ತಗ್ಗಿಸುತ್ತದೆ: ಈಗ ಹೆಚ್ಚಿನ ಕಾರುಗಳು ಏರ್ ಕಂಡಿಷನರ್ ಹೊಂದಿರುತ್ತವೆ. ಕಾರು ಡ್ರೈವ್ ಮಾಡಲು ಆರಂಭಿಸಿದಾಗಲೇ ಏಸಿ ಆನ್ ಮಾಡದಿರಿ. ಕೆಲವು ನಿಮಿಷ ಕಳೆದು ಏಸಿ ಆನ್ ಮಾಡಿ. ಕಾರಿನ ಟೆಂಪರೇಚರ್ ಅತ್ಯಂತ ಕಡಿಮೆ ಮಾಡಿ ಇಡದಿರಿ. ಇದರಿಂದ ಕಂಪ್ರೆಷರ್ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ.

* ಅತಿವೇಗದ ಚಾಲನೆ ಬೇಡ: ಕಾರನ್ನು ಅತಿವೇಗದಲ್ಲಿ ಚಲಾಯಿಸಿದರೆ ಇಂಧನ ಕರಗಿ ಹೋಗುವುದು ಗೊತ್ತೆ ಆಗದು. ಹೆದ್ದಾರಿಯಲ್ಲಿ ಅತಿ ಕಡಿಮೆ ಅಥವಾ ಅತಿ ವೇಗದ ಸವಾರಿ ಬೇಡ.

* ಸ್ಮೂತಾಗಿ ಆಕ್ಸಿಲರೇಟರ್ ಕೊಡಿ: ಸಾಧಾರಣ ಸಂಚಾರ ದಟ್ಟಣೆಗಳ್ಲಲಿ ಹೆಚ್ಚು ಆಕ್ಸಿಲರೇಟರ್ ಕೊಡುವ ಅಗತ್ಯವಿಲ್ಲ. ಹೀಗಾಗಿ ಸ್ಮೂತಾಗಿ ಆಕ್ಸಿಲರೇಟರ್ ಅದುಮುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಖಂಡಿತವಾಗಿಯೂ ಮೈಲೇಜ್ ಹೆಚ್ಚಾಗುತ್ತದೆ.

English summary
Tips To Improve Your Car's Mileage. How will you achieve a high mileage in your car? There are two basic ares that you need to focus – the first one being maintenance and the other one being your driving style.
Story first published: Saturday, April 28, 2012, 11:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark