ಕಾರಿನೊಳಗಿನ ಸ್ವಚ್ಛತೆಗೂ ಆದ್ಯತೆ ನೀಡಿ!

ಕಾರು ಚಾಲನೆ ಎಂಬುದು ಉತ್ತಮ ಕೌಶಲ್ಯವಾಗಿದ್ದು, ನಿಮ್ಮ ದೈನಿಂದಿನ ಪಯಣಗಳನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಆದರೆ ಡ್ರೈವಿಂಗ್ ಜತೆ ನಿಮ್ಮ ಪಯಣವನ್ನು ಮತ್ತಷ್ಟು ಚೆಂದವಾಗಿಸಲು ಇನ್ನೊಂದು ಮಹತ್ವಪೂರ್ಣ ಅಂಶವಿದೆ. ಅದೇನೆಂದರೆ ನಿಮ್ಮ ಕಾರಿನ ಒಳಗಿನ ವಾತಾವರಣ. ಕಾರಿನೊಳಗಿನ ಸುವಾಸನೆಯು ನಿಮ್ಮ ಯಾತ್ರೆಯನ್ನು ಇನ್ನಷ್ಟು ಮಧುರವಾಗಿಸಬಲ್ಲದ್ದು.

ಬಹುತೇಕ ಚಾಲಕರು ದೀರ್ಘ ಜಾಲಿ ರೈಡ್ ಇಷ್ಟಪಡುತ್ತಾರೆ. ಈ ರೀತಿ ಚಾಲನೆ ಮಾಡುತ್ತಿರುವಾಗ ಕೆಲವೊಂದು ಬಾರಿ ರಸ್ತೆ ಬದಿಯಿಂದ ಬರುವ ಕೊಳೆತ ವಾಸನೆಯು ಇಡೀ ಪ್ರಯಾಣದ ಆನಂದವನ್ನು ಕೆಡಿಸುತ್ತದೆ. ಈ ಪರಿಸ್ಥಿತಿಯಿಂದ ಬಚಾವಾಗಲು ಕಾರಿನ ವೇಗವನ್ನು ಹೆಚ್ಚಿಸುತ್ತೀರಾ. ಇವೆಲ್ಲವೂ ಓಕೆ, ಆದರೆ ದುರ್ಗಂಧವು ನಿಮ್ಮ ಕಾರಿನ ಒಳಗಿಂದಲೇ ಬುರುವುದಾದರೆ ನೀವು ಏನು ಮಾಡುವೀರಾ.?

ಹಾಗಾಗಿ ನಾವಿಂದು ಹೇಳುವ ವಿಚಾರವನ್ನು ಬಹಳ ಗಮನವಿಟ್ಟು ಕೇಳಿ. ನಾವಿಂದು ಕಾರಿನೊಳಗೆ ಹೇಗೆ ಸ್ವಚ್ಛವಾಗಿ ಇಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರಿಂದ ನಿಮ್ಮ ಚಾಲನೆಯನ್ನು ಇನ್ನಷ್ಟು ಆನಂದಿಸಬಹುದು.

ಕಾರು ಕ್ಲೀನಿಂಗ್‌ಗೆ ಮೊದಲ ಆದ್ಯತೆ

ಕಾರು ಕ್ಲೀನಿಂಗ್‌ಗೆ ಮೊದಲ ಆದ್ಯತೆ

ಇದೊಂದು ಮಾಮೂಲಿ ಪ್ರಕ್ರಿಯೆ. ಆದರೆ ಕೆಲವು ಚಾಲಕರಂತೂ ಅಷ್ಟೊಂದು ಉದಾಸೀನರಾಗಿರುತ್ತಾರೆ ಅಂದ್ರೆ ಕಾರನ್ನು ಕ್ರಮಬದ್ಧವಾಗಿ ತೊಳೆಯಲು ಇಷ್ಟಪಡುವುದಿಲ್ಲ. ಹಾಗಾಗಿ ಆರಂಭದಲ್ಲೇ ಕಾರು ಕ್ಲೀನಿಂಗ್ ಬಗ್ಗೆ ಮಹತ್ವ ನೀಡಬೇಕಾಗಿದೆ. ವಿಶೇಷವಾಗಿಯೂ ನೀವು ದೀರ್ಫ ಪಯಣಕ್ಕೆ ತೆರಳುವುದಾದರೆ ಕಾರನ್ನು ನಿರಂತರ ಅಂತರಾಳದಲ್ಲಿ ಕ್ಲೀನಿಂಗ್ ಮಾಡಬೇಕಾಗಿರುವುದು ಅತಿ ಅಗತ್ಯ.

ತಾತ್ಕಲಿಕ ಮ್ಯಾಟ್ ಇಡಲು ಮರೆಯದಿರಿ

ತಾತ್ಕಲಿಕ ಮ್ಯಾಟ್ ಇಡಲು ಮರೆಯದಿರಿ

ಮಳೆಗಾಲ ಸಂದರ್ಭದಲ್ಲಿ ಹೆಚ್ಚುವರಿ ಮ್ಯಾಟ್ ಇಡಲು ಮರೆಯದಿರಿ. ತಾತ್ಕಾಲಿಕ ಮ್ಯಾಟ್ ಎಂಬುದು ಪೇಪರ್ ರೀತಿಯಲ್ಲಿದ್ದು ಇದನ್ನು ಬಳಕೆ ಮಾಡಿದ ಬಳಿಕ ಎಸೆಯಬಹುದಾಗಿದೆ.

ಕಾರಿನೊಳಗೆ ಧೂಮಪಾನ, ಗುಟ್ಕಾ ನಿಷೇಧ

ಕಾರಿನೊಳಗೆ ಧೂಮಪಾನ, ಗುಟ್ಕಾ ನಿಷೇಧ

ನೀವು ಧೂಮಪಾನಿಯಾಗಿದ್ದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸತಕ್ಕದ್ದು. ಯಾಕೆಂದರೆ ಮರೆತು ಸಹ ನೀವು ಕಾರಿನೊಳಗೆ ಸಿಗರೇಟ್ ಇತ್ಯಾದಿ ಸೇವಿಸಬಾರದು. ಕಾರಿನೊಳಗೆ ಸಿಗರೇಟ್ ಸೇದುವುದರಿಂದ ಸಹ ಪ್ರಯಾಣಿಕರಿಗೂ ತೊಂದರೆಯುಂಟಾಗುವುದಲ್ಲದೆ ತುಂಬಾ ಸಮಯದ ವರೆಗೆ ಹೊಗೆಯಾಡುತ್ತಿರುತ್ತದೆ. ಇದರಿಂದ ಸಿಟ್ಟುಗೊಳ್ಳುವ ಸಹ ಪ್ರಯಾಣಿಕ ಮುಂದಿನ ಬಾರಿ ನಿಮ್ಮ ಜತೆಗಿನ ಪ್ರಯಾಣವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ. ಅಂದ ಹಾಗೆ ದೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಮರೆಯಬಾರದು.

ಕಾರಿನೊಳಗೆ ಉಪಹಾರ ಬೇಡ

ಕಾರಿನೊಳಗೆ ಉಪಹಾರ ಬೇಡ

ಕಾರಿನೊಳಗೆ ಕಾಫಿ, ತಿಂಡಿ ಇತ್ಯಾದಿ ಸೇವಿಸುವುದನ್ನು ಬಿಟ್ಟುಬಿಡುವುದು ಒಳ್ಳೆಯದು. ಸಾಮಾನ್ಯವಾಗಿ ಜನರು ತಮ್ಮ ಕುಟುಂಬದ ಜತೆ ಪಯಣಿಸುವ ಸಂದರ್ಭದಲ್ಲಿ ಕಾರಿನೊಳಗೆಯೇ ಉಪಹಾರ ಸೇವಿಸುತ್ತಾರೆ. ಆದರೆ ಇದು ತಪ್ಪಾದ ಕ್ರಮವಾಗಿದ್ದು, ಹಾಗೊಂದು ವೇಳೆ ಉಪಹಾರ ಸೇವಿಸಬೇಕಾದ್ದಲ್ಲಿ ಹತ್ತಿರದ ರೆಸ್ಟೋರೆಂಟ್ ಅಥವಾ ಹೋಟೆಲ್‌ಗಳ ಬಳಿ ಗಾಡಿ ನಿಲ್ಲಿಸಿ ತಿಂಡಿ ತಿನ್ನಬಹುದು. ಇದರಿಂದ ಕಾರಿನೊಳನೆ ಸ್ವಚ್ಛವಾಗಿರಲಿಲಿದೆ.

ಒದ್ದೆಯಾಗದಂತೆ ನೋಡಿಕೊಳ್ಳಿ

ಒದ್ದೆಯಾಗದಂತೆ ನೋಡಿಕೊಳ್ಳಿ

ಪ್ರಯಾಣಿಕರು ನೀರು ಅಥವಾ ತಂಪು ಪಾನೀಯ ಕುಡಿಯುವ ಸಂದರ್ಭದಲ್ಲಿ ಅಪ್ಪಿ ತಪ್ಪಿ ಕಾರಿನ ಸೀಟ್ ಇತ್ಯಾದಿ ಭಾಗಗಳು ಒದ್ದೆಯಾಗುವ ಸಾಧ್ಯತೆಯಿದೆ. ಕೆಲವೊಂದು ಬಾರಿ ಇದರಿಂದಲೂ ಕೆಟ್ಟ ವಾಸನೆ ಬರಬಹುದು. ಹಾಗಾಗಿ ಕಾರಿನಲ್ಲಿ ಪಯಣಿಸುವಾಗ ಸೀಟ್, ಲೆಗ್ ರೂ, ಡಿಕ್ಕಿ ಇತ್ಯಾದಿ ಭಾಗಗಳು ಒಣಗಿರುವುದಾಗಿ ಖಾತ್ರಿಪಡಿಸಿ.

ವಾಟರ್ ಪ್ರೂಪ್ ತುಂಬಾನೇ ಅಗತ್ಯ

ವಾಟರ್ ಪ್ರೂಪ್ ತುಂಬಾನೇ ಅಗತ್ಯ

ಕಾರಿನಲ್ಲಿ ವಾಟರ್ ಪ್ರೂಪ್ ಇರುವುದು ತುಂಬಾನೇ ಅಗತ್ಯವಾಗಿದ್ದು, ವಿಶೇಷವಾಗಿಯೂ ವಿಂಡೋಗಳಿಗೆ ಅಗತ್ಯವಾಗಿದೆ. ಇದರಿಂದ ಮಳೆಯಾದ ಸಂದರ್ಭದಲ್ಲಿ ಕಾರಿನೊಳಗೆ ನೀರು ಪ್ರವೇಶದಂತೆ ತಡೆಗಟ್ಟಬಹುದು.

ಗುಣಮಟ್ಟದ ಏರ್ ಫ್ರೆಶ್ನರ್ ಬಳಕೆ ಮಾಡಿ

ಗುಣಮಟ್ಟದ ಏರ್ ಫ್ರೆಶ್ನರ್ ಬಳಕೆ ಮಾಡಿ

ಕಾರಿನೊಳಗೆ ಗುಣಮಟ್ಟದ ಏರ್ ಫ್ರೆಶ್ನರ್ ಬಳಕೆ ಮಾಡಲು ಮರೆಯದಿರಿ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ರೀತಿಯ ಏರ್ ಫ್ರೆಶ್ನರ್ ಲಭಿಸುತ್ತಿದೆ. ಇದನ್ನು ನಿಮ್ಮ ಕಾರಿನ ಎಸಿ ವೆಂಟ್‌ಗಳಲ್ಲಿ ಪ್ರಯೋಗಿಸಬಹುದಾಗಿದೆ. ಇದರಿಂದ ಕಾರಿನೊಳಗೆ ಸುಗಂಧಮಯ ವಾತಾವರಣ ನೀರ್ಮಾಣವಾಗಲಿದ್ದು, ನಿಮ್ಮನ್ನು ತಂಪಾಗಿರಿಸುವಲ್ಲಿ ನೆರವಾಗಲಿದೆ.

Most Read Articles

Kannada
English summary
The smell of a brand new car is something that car lovers adore. But car's tend to loose their good smell over time. Here are a few tips to keep your car smelling fresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X