ಕಾರಿನ ಮೈಲೇಜ್ ಹೆಚ್ಚಿಸಲು ಹದಿನೇಳು ಸಲಹೆ

ಕಾರುಗಳ ಮೈಲೇಜ್ ಹೆಚ್ಚಿಸೋದು ಹೇಗೆ? ಅದಕ್ಕೂ ಕನ್ನಡ ಡ್ರೈವ್ ಸ್ಪಾರ್ಕ್ ಬಳಿ ಸಾಕಷ್ಟು ಬಿಟ್ಟಿ ಸಲಹೆಗಳಿವೆ. ಇದನ್ನು ಪಾಲಿಸಿದರೆ ಖಂಡಿತಾ ನೀವು ದುಡ್ಡು ಉಳಿಸಬಹುದು. ಈ ಕೆಳಗೆ ಸೂಚಿಸಿರುವ ಸಲಹೆಗಳನ್ನು ಪಾಲಿಸಿದರೆ ಖಂಡಿತಾ ನಿಮ್ಮ ಕಾರು ಮೈಲೇಜ್ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ.
* ಸ್ಮೂತಾಗಿ ಡ್ರೈವ್ ಮಾಡಿ: ಅಗ್ರೆಸಿವ್ ಆಗಿ ಆಕ್ಸಿಲರೇಷನ್ ಮತ್ತು ಬ್ರೇಕ್ ಹಾಕುವುದು ಇಂಧನ ಅನುಭೋಗ ಹೆಚ್ಚಿಸುತ್ತದೆ. ಆದಾಷ್ಟು ಸ್ಮೂತಾಗಿ ವಾಹನ ಚಾಲನೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಿರಿ.
* ಕ್ಲಚ್ ರೈಡ್ ಅವಾಯ್ಡ್ ಮಾಡಿ: ಕ್ಲಚ್ ಮೇಲೆ ಸಂಪೂರ್ಣವಾಗಿ ಅವಲಂಬಿಸಿಕೊಂಡು ಡ್ರೈವ್ ಮಾಡುವ ಕ್ರಮ ಬಿಟ್ಟು ಬಿಡಿ. ಅನಗತ್ಯವಾಗಿ ಕ್ಲಚ್ ಬಳಸುತ್ತಿದ್ದರೆ ಎಂಜಿನ್ ಪವರ್ ಸುಮ್ಮನೆ ವ್ಯರ್ಥವಾಗುತ್ತದೆ.
* ಸ್ವಲ್ಪ ಹೊತ್ತು ಕಾರು ಬಿಟ್ಟು ಪಕ್ಕದ ಅಂಗಡಿಗೆ ಹೋಗುತ್ತಿರಿ ಅಂದುಕೊಳ್ಳಿ. ಎಂಜಿನ್ ಆಫ್ ಮಾಡಿಯೇ ಕಾರು ಇಳಿಯಿರಿ.
* ಸರಿಯಾಗಿ ಗೇರ್ ಹಾಕಿ, ಸಮರ್ಪಕ ಗೇರ್ ಬಳಸಿ: ಕಡಿಮೆ ವೇಗಕ್ಕೆ ಹೈಯರ್ ಗೇರ್ ಬಳಸುವುದು ಅಥವಾ ಅತ್ಯಧಿಕ ವೇಗಕ್ಕೆ ಲೋ ಗೇರ್ ಬಳಸುವುದರಿಂದ ಇಂಧನ ಅನುಭೋಗ ಹೆಚ್ಚಾಗುತ್ತದೆ. ಎಂಜಿನಿಗೆ ಹೆಚ್ಚು ಆಯಾಸವಾಗದಂತೆ ಆದಷ್ಟು ಬೇಗ ಗೇರ್ ಶಿಫ್ಟ್ ಮಾಡಿ.
* ನಿಗದಿತ ವೇಗದಲ್ಲಿ ಪ್ರಯಾಣ ಮಾಡಿ.
* ಕಾರಿನ ವೇಗಕ್ಕೆ ಅಡ್ಡಿ ಉಂಟು ಮಾಡುವ ಅಡೆತಡೆಗಳ ಬಗ್ಗೆ ಗಮನವಿರಲಿ. ವೇಗದಲ್ಲಿ ಪ್ರಯಾಣಿಸುವಾಗ ಕಾರಿನ ಕಿಟಕಿ ತೆರೆದಿದ್ದರೆ ವೇಗ ಕಡಿಮೆಯಾಗುತ್ತದೆ. ಇಂಧನ ಅಪವ್ಯಯವಾಗುತ್ತದೆ.
* ನಿಮ್ಮ ಕಾರಿಗೂ ರಸ್ತೆಯಲ್ಲಿರುವ ಇತರ ವಾಹನದ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಿ.
* ಹತ್ತಿರದ ಭೇಟಿಗೆ ಕಾರು ಬಳಸದಿರುವುದು ಒಳ್ಳೆಯದು. ಅಂದರೆ ಕಾಲ್ನಡಿಗೆಯಲ್ಲಿ ಹೋಗಬಹುದಾದ ಸ್ಥಳಕ್ಕೆ ಕಾರಲ್ಲಿ ಹೋಗಬೇಡಿ.
ಕಾರು ಮೈಲೇಜ್ ಹೆಚ್ಚಿಸುವ ಇತರ ಅಂಶಗಳು
* ನಂಬಿಕಸ್ಥ ಪೆಟ್ರೋಲ್ ಪಂಪ್ ನಲ್ಲಿ ಇಂಧನ ತುಂಬಿಸಿ. ಅಳತೆಯಲ್ಲಿ ಮೋಸಮಾಡುವರೂ ಇರುತ್ತಾರೆ. ಕಂಪನಿ ಮಾಲಿಕತ್ವದ ಪೆಟ್ರೋಲ್ ಪಂಪ್ ಒಳ್ಳೆಯದು. ಕೆಲವು ಖಾಸಗಿ ಪೆಟ್ರೋಲ್ ಪಂಪ್ ಗಳು ಗ್ರಾಹಕರ ಕಿಸೆಗೆ ಕತ್ತರಿ ಹಾಕಲು ಯತ್ನಿಸುತ್ತವೆ.
* ಟೈರ್ ಪ್ರೆಷರ್ ಸಮರ್ಪಕವಾಗಿರಲಿ.
* ಸಮರ್ಪಕವಾಗಿ ಕಾರಿನ ನಿರ್ವಹಣೆ ಮಾಡಿ. ಟ್ಯೂನ್, ಏರ್ ಫಿಲ್ಟರ್ ಸ್ವಚ್ಛತೆ, ಎಂಜಿನ್ ಆಯಿಲ್ ಬದಲಾಯಿಸುವಿಕೆ ಇತ್ಯಾದಿಗಳ ಮೇಲೆ ಅಸ್ಥೆ ವಹಿಸಿ.
* ಕಾರು ಹಗುರವಾಗಿರಲಿ: ಓವರ್ ಲೋಡ್ ಮಾಡದಿರಿ. ಅನವಶ್ಯಕ ವಸ್ತುಗಳನ್ನು ಕಾರಿನಲ್ಲಿ ಇಡಬೇಡಿ. ಕಾರು ಹಗುರವಾಗಿದ್ದಷ್ಟು ಮೈಲೇಜ್ ಜಾಸ್ಥಿ.
ಇನ್ನಷ್ಟು ಸಲಹೆ: ನೀವು ಮನಸ್ಸು ಮಾಡಬೇಕಷ್ಟೇ!
* ಕಾರ್ ಪೂಲ್: ನಿಮ್ಮ ದೊಡ್ಡಕಾರಲ್ಲಿ ಒಬ್ಬರೇ ಯಾಕೆ ಹೋಗುತ್ತೀರಿ. ನಿಮ್ಮ ಪಕ್ಕದ ಮನೆಯವರನ್ನು, ಸ್ನೇಹಿತರನ್ನು, ಸಹೋದ್ಯೋಗಿಗಳನ್ನು ಕರೆದುಕೊಂಡು ಹೋಗಿ.
* ನಿತ್ಯ ಬಳಕೆಗೆ ಸ್ಪೋರ್ಟ್ಸ್ ಕಾರು ಬಳಕೆ ಕಡಿಮೆ ಮಾಡಿ. ಮಾಮೂಲು ಕಾರು ಬಳಸಿರಿ.
* ಆದಷ್ಟು ಸಂಚಾರ ದಟ್ಟಣೆ ಹೆಚ್ಚಿರುವ ಸಮಯ ಅವಾಯ್ಡ್ ಮಾಡಿ. ಟ್ರಾಫಿಕ್ ನಲ್ಲಿ ಹೆಚ್ಚು ಇಂಧನ ವ್ಯರ್ಥವಾಗುತ್ತದೆ.
* ಹತ್ತಿರದ ಸ್ಥಳಗಳಿಗೆ ವಾಕ್ ಹೋಗಿ. ಆರೋಗ್ಯಕ್ಕೂ ಒಳ್ಳೆಯದು.
ಓದಿ: ಬೈಕ್ ಮೈಲೇಜ್ ಹೆಚ್ಚಿಸುವ ಸುಲಭ ತಂತ್ರಗಳು


Click it and Unblock the Notifications








