ದ್ವಿಚಕ್ರ ವಿಮೆ: ಪರಿಗಣನೆಗೆ ತೆಗೆದುಕೊಳ್ಳುವ ಅಂಶಗಳು

ದಿನಕ್ಕೊಂದು ವಾಹನ ಸಲಹೆ ವಿಭಾಗದಲ್ಲಿ ದ್ವಿಚಕ್ರ ವಾಹನ ವಿಮೆ ಕುರಿತು ಚರ್ಚಿಸುತ್ತಿದ್ದೇವು. ದ್ವಿಚಕ್ರ ವಾಹನ ವಿಮೆ ಪರಿಹಾರ ನೀಡುವಾಗ ಈ ಕೆಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಐಡಿವಿ:
ವಿಮಾ ಕಂಪನಿಗಳು ಘೋಷಿಸಿದಷ್ಟು ವಿಮಾ ಪರಿಹಾರ ನೀಡುವುದಕ್ಕೆ ಇನ್ಸ್ಯುರ್ಡ್ ಡಿಕ್ಲೇರ್ಡ್ ವ್ಯಾಲ್ಯು ಅಥವಾ ಐಡಿವಿ ಎನ್ನಲಾಗುತ್ತದೆ. ಇದು ಕೆಲವೊಮ್ಮೆ ವಿಮಾ ಪಾಲಿಸಿ ಅವಧಿಯ ಅನುಗುಣವಾಗಿ ಇರುತ್ತದೆ. ಅಂದರೆ ಒಂದು ವರ್ಷವಾದರೆ ಇಷ್ಟು ವಿಮೆ, ಎರಡು ವರ್ಷಕ್ಕೆ ಇಷ್ಟು ವಿಮೆ ಎಂದಿರುತ್ತದೆ. ನಿಮಗಿಷ್ಟವಾದ ಸಮಯದಲ್ಲಿ ವಿಮೆ ಕ್ಲೈಮ್ ಮಾಡಬಹುದಾಗಿದೆ. ಐದು ವರ್ಷದ ನಂತರ ಗ್ರಾಹಕ ಮತ್ತು ವಿಮಾ ಕಂಪನಿ ನಡುವೆ ನಿರ್ದಿಷ್ಟ ಹೋಂದಾಣಿಕೆ ಏರ್ಪಡಬಹುದು. ಅಂದರೆ ಐದು ವರ್ಷವಾದರೆ ಇಷ್ಟು ಮೊತ್ತ ನೀಡುತ್ತೇವೆ ಎಂದು ಕಂಪನಿ ಈ ಮೊದಲೇ ತಿಳಿಸಿಬಿಡಬಹುದು.

ದ್ವಿಚಕ್ರ ವಾಹನದ ಸಿಸಿಗೆ ಅನುಗುಣವಾಗಿ: ದ್ವಿಚಕ್ರ ವಾಹನದ ಸಿಸಿ ಪವರ್ ಗೆ ಅನುಗುಣವಾಗಿ ವಿಮಾ ಕಂತಿನ ದರ ಕೂಡ ಹೆಚ್ಚಾಗಬಹುದು. ಭಾರತದ ಮೋಟರ್ ಶುಲ್ಕದ ಅನ್ವಯ 150 ಸಿಸಿ ವರೆಗಿನ ದ್ವಿಚಕ್ರವಾಹನಗಳಿಗೆ, 350ಸಿಸಿವರೆಗಿನ ಮತ್ತು 350 ಸಿಸಿಗಿಂತ ಹೆಚ್ಚು ಸಿಸಿ ಇರುವ ದ್ವಿಚಕ್ರ ವಾಹನಗಳಿಗೆ ವಿಭಿನ್ನ ವಿಮಾ ಪಾಲಿಸಿ ಪ್ರೀಮಿಯಂ ದರ ಇರುತ್ತದೆ.

ಪ್ರಾದೇಶಿಕತೆಗೆ ಅನುಗುಣವಾಗಿ: ಮುಖ್ಯವಾಗಿ ದ್ವಿಚಕ್ರ ವಾಹನಗಳಿಗೆ ವಿಮೆ ಮಾಡುವಾಗ ನಗರ ಮತ್ತು ಗ್ರಾಮೀಣ ಎಂಬ ಎರಡು ಪ್ರಾದೇಶಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬೆಂಗಳೂರು, ಹೈದರಾಬಾದ್, ದೆಹಲಿ ಮುಂತಾದ ನಗರಗಳಿಗೆ ವಿಮಾ ಕಂತು ಹೆಚ್ಚಿರುತ್ತದೆ. ಸಣ್ಣಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರು ಪಾವತಿಸಬೇಕಾದ ವಿಮಾ ಕಂತು ಕಡಿಮೆ ಇರುತ್ತದೆ.

ವಾಹನದ ವಯಸ್ಸು:
ವಾಹನದ ವಯಸ್ಸು ಕೂಡ ದ್ವಿಚಕ್ರ ವಾಹನದ ವಿಮೆ ಪಾವತಿಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಹಳೆಯ ವಾಹನಗಳಿಗೆ ಹೆಚ್ಚು ಮೊತ್ತದ ವಿಮೆ ಪಾವತಿಸಬೇಕಾಗುತ್ತದೆ. ಹೊಸ ವಾಹನಗಳು ಶೀಘ್ರದಲ್ಲಿ ಹಾನಿಗೊಳಗಾಗುವ(ಅಪಘಾತ ಹೊರತುಪಡಿಸಿ) ಅಪಾಯ ಕಡಿಮೆ ಇರುವುದು ಇದಕ್ಕೆ ಮುಖ್ಯ ಕಾರಣ.

ಹೆಚ್ಚಿನ ಮಾಹಿತಿ ಮುಂದಿನ ದಿನಕ್ಕೊಂದು ಸಲಹೆಯಲ್ಲಿ ಮೂಡಿಬರಲಿದೆ.

Most Read Articles

Kannada
English summary
Two Wheeler Insurance India. How to claim 2 Wheeler Insurance in India. There are two types of policies available in India. To cover Act liability and to cover both own damage losses etc Package Policy.
Story first published: Thursday, March 15, 2012, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X