ಕಾರಿನಲ್ಲಿ ಉಸಿರುಗಟ್ಟಿ ಸತ್ತ 2 ವರ್ಷದ ಪಾಪು

Posted By:
To Follow DriveSpark On Facebook, Click The Like Button
ಇದು ಚೆನ್ನೈನಲ್ಲಿ ನಿನ್ನೆ(ಸೋಮವಾರ) ನಡೆದ ಘಟನೆ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸುವಂತೆ ಕಾಣುತ್ತಿಲ್ಲ. ಕೆಟ್ಟಮೇಲೆ ಬುದ್ದಿ ಎಂಬಂತೆ ಆಮೇಲೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಹೀಗಾಗಿ ಕನ್ನಡ ಡ್ರೈವ್ ಸ್ಪಾರ್ಕ್ ದಿನಕ್ಕೊಂದು ಸಲಹೆ ಮಾಲಿಕೆಯಲ್ಲಿ ಈ ಸತ್ಯಘಟನೆಯನ್ನೇ ನೀಡಲಾಗಿದೆ.

ನಿನ್ನೆ ಅಪರಾಹ್ನ ಹನ್ನೆರಡು ಗಂಟೆಯ ಸಮಯದಲ್ಲಿ ತುರ್ತು ಮೀಟಿಂಗ್ ನೆಪದಲ್ಲಿ ಕಾರಿನೊಳಗೆ ಎರಡು ವರ್ಷದ ಹಸುಳೆಯನ್ನು ಲಾಕ್ ಮಾಡಿ ತಂದೆಯೊಬ್ಬ ಹೊರಕ್ಕೆ ಹೋಗಿದ್ದ. ಆದರೆ ಒಂದು ಗಂಟೆ ಕಳೆದು ಕಾರಿನ ಲಾಕ್ ತೆಗೆದು ನೋಡಿದಾಗ ಮಗುವಿನ ದೇಹ ತಣ್ಣಗಾಗಿತ್ತು. ಕಾರಿನೊಳಗಿನ ವಾತಾವರಣಕ್ಕೆ ಉಸಿರುಗಟ್ಟಿ ಮಗು ಸತ್ತು ಹೋಗಿತ್ತು.

ಮಾರುತಿ ಹೆಸರಿನ ತಂದೆ ಎರಡು ವರ್ಷದ ಹಸುಳೆ ಇಳಮಾರನ್ ಸುರಕ್ಷಿತವಾಗಿರಲಿ ಎಂದು ಏರ್ ಕಂಡಿಷನರ್ ಆನ್ ಮಾಡಿ ಡೋರ್ ಲಾಕ್ ಮಾಡಿ ಹೋಗಿದ್ದರು. "ಹತ್ತು ನಿಮಿಷದಲ್ಲಿ ಮೀಟಿಂಗ್ ಮುಗಿಸಬಹುದೆಂದು ಭಾವಿಸಿದ್ದರು. ಆದರೆ ಅದು ಮುಗಿದಾಗ ಒಂದು ಗಂಟೆ ಕಳೆದಿತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆ ತಂದರೂ ಕಾಲಮಿಂಚಿತ್ತು" ಎಂದು ಡಾಕ್ಟರ್ ಮಾಹಿತಿ ನೀಡಿದ್ದಾರೆ.

"ಇದನ್ನು ಅನೈಸರ್ಗಿಕ ಸಾವು ಸಿಆರ್ ಪಿಸಿ ಸೆಕ್ಷನ್ 174 ಅಡಿ ಪ್ರಕರಣ ದಾಖಲಿಸಿಲ್ಲ. ಈ ಸಾವನ್ನು ವಿಶೇಷ ಪ್ರಕರಣ ಎಂದು ದಾಖಲಿಸಿ ಇಳಮಾರನ್ ತಂದೆ ಅಥವಾ ತಾಯಿ ಮೇಲೆ ಪ್ರಕರಣ ದಾಖಲಿಸಲಾಗುವುದು" ಎಂದು ಅಲ್ಲಿನ ಜಂಟಿ ಆಯುಕ್ತ ಕೆ ಶಂಕರ್ ಹೇಳಿದ್ದಾರೆ.

"ಕಾರಿನೊಳಗೆ ಮಕ್ಕಳು ಮೃತರಾಗುವುದು ಅಸಹಜವಲ್ಲ. ಇಂತಹ ಹತ್ತು ಹಲವು ಘಟನೆಗಳು ವರದಿಯಾಗುತ್ತಿವೆ. ಏರ್ ಕಂಡಿಷನರ್ ನಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೆ ಯಾವುದೇ ವಿಷಾನಿಲ ಬಿಡುಗಡೆಯಾಗುವುದಿಲ್ಲ. ಆದರೆ ಎಳೆಯ ಮಕ್ಕಳು ಕಾರಿನೊಳಗೆ ತುಂಬಾ ಲಾಕ್ ಆಗಿ ತುಂಬಾ ಸಮಯವಿದ್ದರೆ, ಕಾರಿನೊಳಗೆ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ" ಎಂದು ವಿಶ್ಲೇಷಕರೊಬ್ಬರು ಹೇಳುತ್ತಾರೆ.

ಕಾರಿನೊಳಗೆ ಉಸಿರುಗಟ್ಟುವಂತಹ ಪರಿಸ್ಥಿತಿ ಬಂದಾಗ ದೊಡ್ಡವರಾದರೆ ಬಾಗಿಲು ತೆರೆದು ಅಥವಾ ಕಿಟಕಿ ಒಡೆದು ಹೊರಕ್ಕೆ ಹೋಗಬಹುದು. ಆದರೆ ಚಿಕ್ಕ ಮಕ್ಕಳಿಗೆ ಇಂತಹ ಸಮಯದಲ್ಲಿ ಹೊರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯಾವತ್ತೂ ಕಾರಿನೊಳಗೆ ಮಗುವನ್ನು ಬಾಗಿಲು ಹಾಕಿ ಹೋಗಬೇಡಿ. ಇದೇ ಇಂದಿನ ದಿನಕ್ಕೊಂದು ಸಲಹೆ. ದಯವಿಟ್ಟು ಪಾಲಿಸಿ. ಮಕ್ಕಳ ಪ್ರಾಣ ಉಳಿಸಿ (ಕನ್ನಡ ಡ್ರೈವ್ ಸ್ಪಾರ್ಕ್)

English summary
A Two year old boy died under mysterious circumstances in Chennai after he was left inside the vehicle with air conditioner on for one hour. The police have not been able to ascertain the exact cause of death. Experts have opined the boy could have been killed by excess heat inside the car or by poisonous gases emanating from the air conditioner.
Story first published: Tuesday, March 13, 2012, 10:36 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark