ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದಾದ್ರೂ ಯಾಕೆ.?

ದಲಿತ ಕಾರ್ಮಿಕನ ಮೇಲೆ ನಡೆದಿದ್ದ ಹಲ್ಲೆಯನ್ನು ವಿರೋಧಿಸಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿಯ 13 ಮಂದಿ ಕಾರ್ಮಿಕರಿಗೆ ಗುರುಗ್ರಾಮ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

By Praveen

2012ರಲ್ಲಿ ಮಾರುತಿ ಸುಜಕಿ ಮನೆಸಾರ್ ಕಾರು ಉತ್ಪಾದನಾ ಘಟಕದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಗ್ರಾಮ್ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಹಿಂಸಾಚಾರ ವೇಳೆ ಹಿರಿಯ ಅಧಿಕಾರಿಯನ್ನು ಸುಟ್ಟುಹಾಕಿದ್ದ 13 ಮಂದಿ ಕಾರ್ಮಿಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಕಳೆದ 5 ವರ್ಷಗಳಿಂದ ಹಿಂದೆ ಮಾರುತಿ ಸುಜುಕಿ ಮನೆಸಾರ್ ಕಾರು ಉತ್ಪಾದನಾ ಘಟಕದಲ್ಲಿ ಓರ್ವ ದಲಿತ ಕಾರ್ಮಿಕನ ಮೇಲೆ ಹಿರಿಯ ಅಧಿಕಾರಿಯೊಬ್ಬ ಹಲ್ಲೆ ಮಾಡಿದ್ದ. ಹಿರಿಯ ಅಧಿಕಾರಿಗಳ ವರ್ತನೆಯಿಂದ ಬೇಸತ್ತಿದ್ದ ಕಾರ್ಮಿಕರು, ಇದೇ ವೇಳೆ ನ್ಯಾಯಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಧರಣಿ ಶುರು ಮಾಡಿದ್ದರು.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಆದ್ರೆ ಕಾರ್ಮಿಕರ ಪ್ರತಿಭಟನೆಯನ್ನು ಸಹಿಸದ ಮಾರುತಿ ಸುಜುಕಿ ಹಿರಿಯ ಅಧಿಕಾರಿಗಳು, ಕೆಲ ಉದ್ಯೋಗಿಗಳನ್ನು ದುರ್ವತನೆ ಆಧಾರದ ಮೇಲೆ ಕೆಲಸದಿಂದ ವಜಾ ಮಾಡಿದ್ದರು. ಹೀಗಾಗಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಓರ್ವ ಅಧಿಕಾರಿಯನ್ನು ಜೀವಂತವಾಗಿ ಸುಡಲಾಗಿತ್ತು.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಕೇವಲ ನ್ಯಾಯಕ್ಕಾಗಿ ಆಗ್ರಹಿಸಿ ನಡೆದ ಪ್ರತಿಭಟನೆ ಕೆಲವೇ ಗಂಟೆಗಳಲ್ಲಿ ಉದ್ವಿಗ್ನಗೊಂಡು ಭಾರೀ ಅನಾಹುತವೇ ನಡೆದು ಹೊಗಿತ್ತು. ಇದೇ ವೇಳೆ ಹತ್ತಾರು ಕೋಟಿ ಪ್ರಮಾಣದ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಘಟನೆ ಕಾರಣರಾಗಿದ್ದ ಪ್ರಮುಖ 22 ಜನರನ್ನು ತೀವ್ರ ವಿಚಾರಣೆ ನಡೆಸಿತ್ತು.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಮಾರುತಿ ಸುಜುಕಿ ಮನೆಸಾರ್ ಘಟಕದ ಮಾನವ ಸಂಪನ್ಮೂಲ ಅಧಿಕಾರಿ ಅವಾನಿಶ್ ಕುಮಾರ್ ದೇವ್ ಎಂಬುವರನ್ನು ಹತ್ಯೆ ಮಾಡಿದ್ದ ಪ್ರಮುಖ ಆರೋಪಿಗಳನ್ನು ಕೋರ್ಟ್ ಹಾಜರು ಪಡಿಸಿದ್ದ ಪೊಲೀಸರು, ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷಾಧಾರ ಒದಗಿಸಿದ್ದರು.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಸುಮಾರು 4 ವರ್ಷಗಳ ಕಾಲ ನಡೆದ ವಿಚಾರಣೆ ನಂತರ ಆರೋಪಿಗಳ ವಿರುದ್ಧದ ಹತ್ಯೆ ಆರೋಪ ಸಾಬೀತಾಗಿತ್ತು. ಇದರಲ್ಲಿ 11 ಆರೋಪಿಗಳಿಗೆ ಆಸ್ತಿ-ಪಾಸ್ತಿ ಹಾನಿ ಆರೋಪ ಮೇಲೆ ದಂಡ ವಸೂಲಿ ಮಾಡಿ ಬಿಡುಗಡೆಗೊಳಿಸಲಾಗಿತ್ತು. ಇದಲ್ಲದೇ 18 ಮಂದಿ ಕಾರ್ಮಿಕರನ್ನು ಹತ್ಯೆಗೆ ಕುಮ್ಮಕ್ಕು ಆಧಾರ ಮೇಲೆ 5 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿತ್ತು.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಕಾರ್ಮಿಕ ಸಂಘಟನೆಯ ಯೂನಿಯನ್ ಅಧ್ಯಕ್ಷ ರಾಮ್ ಮೆಹಾರ್, ಸಂದೀಪ್ ದಿಲ್‌ಲಾನ್, ರಾಮ್ ಬಿಸ್ವಾಸ್, ಸಬರ್‌ಜಿತ್ ಸಿಂಗ್, ಪವನ್ ಕುಮಾರ್, ಸೋಹನ್ ಕುಮಾರ್, ಪ್ರದೀಪ್ ಕುಮಾರ್, ಅಜ್ಮೀರ್ ಸಿಂಗ್, ಜೀಯಾ ಲಾಲ್, ಅಮರ್‌ಜಿತ್, ಧನರಾಜ್ ಬಾಂಬಿ, ಯೋಗಿಶ್ ಕುಮಾರ್ ಮತ್ತು ಪ್ರದೀಪ್ ಗುಜ್ಜರ್ ಎಂಬುವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಹಿಂಸಾಚಾರ ಪ್ರಕರಣದ ಪ್ರಮುಖ 13 ಮಂದಿ ತಪ್ಪಿಸ್ಥರ ವಿರುದ್ಧ ಮಹತ್ವದ ತೀರ್ಪು ನೀಡಿರುವ ಗುರುಗ್ರಾಮ್ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಆದ್ರೆ ಕೋರ್ಟ್ ತೀರ್ಪು ಖಂಡಿಸಿರುವ ಕಾರ್ಮಿಕ ಸಂಘಟನೆಗಳು ಇದೇ ಮಾರ್ಚ್ 23ಕ್ಕೆ 'ಚಲೋ ಮನೆಸಾರ್' ಧರಣಿಗೆ ಮುಂದಾಗಿವೆ.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಕೇವಲ ನ್ಯಾಯಕ್ಕಾಗಿ ಆಗ್ರಹಿಸಿ ನಡೆದ ಪ್ರತಿಭಟನೆ ಇಂತದೊಂದು ಅನಾಹುತಕ್ಕೆ ಕಾರಣವಾಗುತ್ತೆ ಎಂದು ಯಾರು ಅಂದಕೊಂಡಿದ್ದಿಲ್ಲ. ಆದ್ರೆ ಹಿರಿಯ ಅಧಿಕಾರಿ ಮಾಡಿದ ಒಂದು ತಪ್ಪು ಇಡೀ ಮನೆಸಾರ್ ಕಾರು ಉತ್ಪಾದನಾ ಘಟಕವನ್ನು ಹೊತ್ತಿ ಉರಿಯುವಂತೆ ಮಾಡಿತ್ತು. ಇದಲ್ಲದೇ ಕೋರ್ಟ್ ಆದೇಶದ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಮಾರುತಿ ಸುಜುಕಿ ಸಂಸ್ಥೆಯ 13 ಮಂದಿ ಕಾರ್ಮಿಕರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರೂ ಯಾಕೆ.?

ಬಿಡುಗಡೆಗೊಂಡಿರುವ ಹೊಚ್ಚ ಹೊಸ ಹೋಂಡಾ WR-V ಕಾರಿನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿಯನ್ನು ವೀಕ್ಷಿಸಿ.

Most Read Articles

Kannada
Read more on ಮಾರುತಿ
English summary
13 ex-employees of Maruti Suzuki has been give a life sentence by a Gurgaon court in connection to the violence in Manesar plant in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X