ಈಗಲೂ ಅಸ್ತಿತ್ವದಲ್ಲಿರುವ 28 ಐತಿಹಾಸಿಕ ವಿಮಾನಗಳು

Written By:

ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಡುವ ವಿಮಾನಗಳನ್ನು ನೋಡುವುದೇ ಒಂಥರಾ ಖುಷಿ. ಆಧುನಿಕ ಸಂಚಾರ ವ್ಯವಸ್ಥೆಗಳಲ್ಲಿ ವಿಮಾನಗಳ ಪಾತ್ರ ಬಹು ದೊಡ್ಡದು. ಇದು ಸಮಯ ಲಾಭದ ಜೊತೆಗೆ ಹೆಚ್ಚಿನ ಸುರಕ್ಷಿತ ಚಾಲನೆಯನ್ನು ಪ್ರದಾನ ಮಾಡುತ್ತದೆ.

ಕೇವಲ ಸಂಚಾರದ ವಿಚಾರದಲ್ಲಿ ಮಾತ್ರವಲ್ಲದೆ ದೇಶವೊಂದರ ಭದ್ರತಾ ವ್ಯವಸ್ಥೆಯಲ್ಲಿ ವಿಮಾನಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಿರುವಾಗ ಬಹಳ ಹಿಂದಿನಿಂದಲೂ ವಿಮಾನಗಳ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಕಂಡುಬಂದಿದೆ. ಈಗ ನಿಮ್ಮ ಬೆರಗುಗೊಳಿಸುವ 20ನೇ ಶತಮಾನದ ಕೆಲವು ಅತಿ ವಿರಳ ವಿಮಾನಗಳ ಬಗ್ಗೆ ಚಿತ್ರ ಸಮೇತ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ. ಮಿಸ್ ಮಾಡದರಿ...

28. ಅಲೆಕ್ಸಾಂಡರ್ ಲಿಪ್ಪಿಷ್ ಅವರ ಏರೋಡೈನ್

28. ಅಲೆಕ್ಸಾಂಡರ್ ಲಿಪ್ಪಿಷ್ ಅವರ ಏರೋಡೈನ್

1968ರ ವಿಮಾನವಿದು. ಇದನ್ನು ಅಲೆಕ್ಸಾಂಡರ್ ಲಿಪ್ಪಿಷ್ ಎಂಬವರು ಹೊಂದಿದ್ದಾರೆ. ಇಲ್ಲಿಯ ವರೆಗೂ ಈ ಅದ್ಭುತ ಸೃಷ್ಟಿಯ ಅಸ್ತಿತ್ವವನ್ನು ಕಾಪಾಡಿಕೊಂಡು ಬರಲಾಗಿದೆ.

27. ಬ್ಲೋಮ್ ಆಂಡ್ ವಾಸ್ ಬಿವಿ 141

27. ಬ್ಲೋಮ್ ಆಂಡ್ ವಾಸ್ ಬಿವಿ 141

ಎರಡನೇ ಮಹಾಯುದ್ಧದಲ್ಲಿ ಜರ್ಮನಿಯಿಂದ ಬಳಕೆಯಾದ ಯುದ್ಧ ವಿಮಾನವಿದು. ಜರ್ಮನಿ ಯುದ್ಧ ತಂತ್ರದ ಭಾಗವಾಗಿ ವಿಶಿಷ್ಟ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು.

26. ಡಾರ್ನಿಯರ್ ಡು 31

26. ಡಾರ್ನಿಯರ್ ಡು 31

1967ರ ಸೂಜಿ ಮೂಗಿನಂತಹ ವಿನ್ಯಾಸವನ್ನು ಹೊಂದಿರುವ ಈ ವಿಮಾನವನ್ನು ಪಶ್ಚಿಮ ಜರ್ಮನಿಯು ನಿರ್ಮಿಸಿತ್ತು.

25. ಎಕ್ಸ್-29

25. ಎಕ್ಸ್-29

1980ರ ಕಾಲಘಟ್ಟದ ನಾಸಾದ ಈ ಪ್ರಾಯೋಗಿಕ ವಿಮಾನದ ರೆಕ್ಕೆಗಳು ಸಾಮಾನ್ಯಗಿಂತ ವಿರುದ್ಧವಾಗಿ ಮುಂದಕ್ಕೆ ಚಾಚಿಕೊಂಡಿದೆ.

24. ಎವ್ರೊ ಕೆನಡಾ ವಿಝಡ್-6 ಎವ್ರೊಕಾರ್

24. ಎವ್ರೊ ಕೆನಡಾ ವಿಝಡ್-6 ಎವ್ರೊಕಾರ್

1959ರಲ್ಲಿ ಅಮೆರಿಕ ವಾಯು ಸೇನೆಯಿಂದ ಬಳಕೆಯಾದ ರಹಸ್ಯ ಕಾರ್ಯಾಚರಣೆಯ ವಿಮಾನವಿದು.

23. ಹೈಪರ್ III

23. ಹೈಪರ್ III

1969ರಲ್ಲಿ ನಾಸಾದಿಂದ ನಿರ್ಮಾಣವಾಗಿರುವ ಮಗದೊಂದು ಪ್ರಾಯೋಗಿಕ ವಿಮಾನ ಇದಾಗಿದೆ.

22. ನಾರ್ಥ್ ರೋಪ್ ಎಕ್ಸ್ ಬಿ-35

22. ನಾರ್ಥ್ ರೋಪ್ ಎಕ್ಸ್ ಬಿ-35

ಎರಡನೇ ಮಹಾಯುದ್ಧದಲ್ಲಿ ಬಾಂಬ್ ದಾಳಿಗಾಗಿ ಬಳಕೆ ಮಾಡಲಾದ ಶಕ್ತಿಶಾಲಿ ವಿಮಾನವಾಗಿದೆ.

21. ಡೆ ಲ್ಯಾಂಕ್ ನರ್ ಎಚ್ ಝಡ್-1 ಏರೋಸೈಕಲ್ ಫ್ಲೈಯಿಂಗ್

21. ಡೆ ಲ್ಯಾಂಕ್ ನರ್ ಎಚ್ ಝಡ್-1 ಏರೋಸೈಕಲ್ ಫ್ಲೈಯಿಂಗ್

1954ರಲ್ಲಿ ವಿನ್ಯಾಸಗೊಳಿಸಲಾದ ಅಮೆರಿಕ ಸೇನೆಗೆ ಸೇರಿದ ಡ್ರೋನ್ ವಿಮಾನ.

20. ಕ್ಯಾಪ್ ರೋನಿ ಕಾ.60 ನೇವಿಪ್ಲಾನೊ

20. ಕ್ಯಾಪ್ ರೋನಿ ಕಾ.60 ನೇವಿಪ್ಲಾನೊ

1900ನೇ ಶತಮಾನದ ಪ್ರಾರಂಭದಲ್ಲಿ ಅಟ್ಲಾಂಟಾ ಸಾಗರದಲ್ಲಿ ಕಂಡುಬಂದ ವಿಮಾನದ ಮೊದಲ ಮಾದರಿ ಇದಾಗಿದೆ ಎಂದು ಹೇಳಲಾಗುತ್ತಿದೆ.

19. ಡಗ್ಲಾಸ್ ಎಕ್ಸ್ ಬಿ-42 ಮಿಕ್ಸ್ ಮಾಸ್ಟರ್

19. ಡಗ್ಲಾಸ್ ಎಕ್ಸ್ ಬಿ-42 ಮಿಕ್ಸ್ ಮಾಸ್ಟರ್

1944ರ ಅತಿ ವೇಗದ ಡಗ್ಲಾಸ್ ಎಕ್ಸ್ ಬಿ-42 ಮಿಕ್ಸ್ ಮಾಸ್ಟರ್ ವಿಮಾನ ಇದಾಗಿದೆ.

18. ಲಿಬೆಲುಲ್ಲಾ

18. ಲಿಬೆಲುಲ್ಲಾ

ಎರಡನೇ ಮಹಾಯುದ್ಧದ ಬಳಿಕ 1945ರಲ್ಲಿ ಬ್ರಿಟನ್ ರಚಿಸಿದ ಪ್ರಾಯೋಗಿಕ ವಿಮಾನ ಇದಾಗಿದೆ. ಇದು ದೊಡ್ಡದಾದ ರೆಕ್ಕೆಗಳನ್ನು ಹೊಂದಿದೆ.

17. ವೋಟ್ ವಿ-173

17. ವೋಟ್ ವಿ-173

1942ರಲ್ಲಿ ಅಮೆರಿಕ ನೌಕದಳದಿಂದ ನಿರ್ಮಾಣವಾದ ಪ್ರಾಯೋಗಿಕ ಯುದ್ಧ ವಿಮಾನ

16. ಏರ್ ಬಸ್ ಎ300-600ಎಸ್ ಟಿ

16. ಏರ್ ಬಸ್ ಎ300-600ಎಸ್ ಟಿ

ಇಲ್ಲಿ ಎಸ್ ಟಿ ಎಂಬುದು 'ಸೂಪರ್ ಟ್ರಾನ್ಸ್ ಪೋರ್ಟರ್' (ಸಾಗಿಸು) ಎಂಬ ಅರ್ಥವನ್ನು ನೀಡುತ್ತದೆ.

15. ಎಚ್ ಎಲ್-10

15. ಎಚ್ ಎಲ್-10

1960ರಲ್ಲಿ ನಾಸಾದಿಂದ 'ಲಿಫ್ಟಿಂಗ್ ಬಾಡಿ' ವಿನ್ಯಾಸದಲ್ಲಿ ರಚನೆಯಾದ ಮಗದೊಂದು ಆಕರ್ಷಕ ವಿಮಾನ

14. ನಾರ್ಥ್ ಅಮೆರಿಕ ಎಕ್ಸ್ ಎಫ್-82

14. ನಾರ್ಥ್ ಅಮೆರಿಕ ಎಕ್ಸ್ ಎಫ್-82

ಇಲ್ಲಿ ಎರಡು ಮಸ್ಟಾಂಗ್ ವಿಮಾನಗಳ ರೆಕ್ಕೆಗಳನ್ನು ಜೋಡಣೆ ಮಾಡಲಾಗಿದೆ. ಈ ಮೂಲಕ ಹೆಚ್ಚಿನ ವ್ಯಾಪ್ತಿಯ ವರೆಗೂ ಚಲಿಸುವ ಸಾಮರ್ಥ್ಯ ಪಡೆದುಕೊಂಡಿದೆ.

13. ಬೆರೀವ್ ಬೀ-200 ಸೀಪ್ಲೇನ್

13. ಬೆರೀವ್ ಬೀ-200 ಸೀಪ್ಲೇನ್

1988ರಲ್ಲಿ ನಿರ್ಮಾಣವಾದ ಈ ರಷ್ಯಾ ವಿಮಾನ ನೀರಲ್ಲೂ ಲ್ಯಾಂಡ್ ಮಾಡುವ ತಾಕತ್ತನ್ನು ಪಡೆದಿದೆ.

12. ಸ್ಟಿಪಾ ಕಾರ್ಪೋನಿ

12. ಸ್ಟಿಪಾ ಕಾರ್ಪೋನಿ

1932ರ ಇಟಲಿಯ ಪ್ರಾಯೋಗಿಕ ವಿಮಾನವಿದು.

11. ಕಾಸ್ಪಿಯನ್ ಸೀ ಮೊನಸ್ಟರ್

11. ಕಾಸ್ಪಿಯನ್ ಸೀ ಮೊನಸ್ಟರ್

ವೈ ಆಕಾರದ ರೆಕ್ಕೆಗಳನ್ನು ಹೊಂದಿರುವ ಈ ವಿಮಾನವನ್ನು 1966ರಲ್ಲಿ ಬ್ಯೂರೋ ಆಫ್ ರೊಸ್ಟಿಸ್ಲಾವ್ ಅಲೆಕ್ಸೆವೇವ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ.

10. ಬಾರ್ತಿನ್ ಬೆರೀವ್ ವಿವಿಎ-14

10. ಬಾರ್ತಿನ್ ಬೆರೀವ್ ವಿವಿಎ-14

ದೈತ್ಯಕಾರಾದ ಈ ವಿಮಾನವು ನೀರಲ್ಲೂ ಲ್ಯಾಂಡ್ ಮಾಡುವ ಸಾಮರ್ಥ್ಯ ಹೊಂದಿದೆ ಎಂಬ ಬಗ್ಗೆ ಮಾಹಿತಿಯಿದೆ.

09.ಮೆಕ್ ಡೊನೆಲ್ ಎಕ್ಸ್ ಎಫ್-85 ಗಾಬ್ಲಿನ್

09.ಮೆಕ್ ಡೊನೆಲ್ ಎಕ್ಸ್ ಎಫ್-85 ಗಾಬ್ಲಿನ್

1948ರಲ್ಲಿ ಈ ಚೊಕ್ಕದಾದ ಮೊದಲ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿತ್ತು.

08.ಅಮೆಸ್-ಡ್ರೈಡನ್ (ಎಡಿ)-1 ಓಬ್ಲಿಕ್ಯೂ ವಿಂಗ್

08.ಅಮೆಸ್-ಡ್ರೈಡನ್ (ಎಡಿ)-1 ಓಬ್ಲಿಕ್ಯೂ ವಿಂಗ್

ತೆರೆದಿರುವ ಪೈಲಟ್ ಕಾಕ್ ಪಿಟ್ ಅಥವಾ ಕ್ಯಾಬಿನ್ ಇದರ ವಿಶೇಷವಾಗಿದೆ.

07. ಬಿ377ಪಿಜಿ

07. ಬಿ377ಪಿಜಿ

ಅಂತರಿಕ್ಷ ಅಗತ್ಯಗಳಿಗಾಗಿ ನಾಸಾ ಅಭಿವೃದ್ಧಿಪಡಿಸಿದ ಬೃಹತ್ ವಿಮಾನ ಇದಾಗಿದೆ.

06. ಸ್ನೆಕ್ಮಾ ಫ್ಲೈಯಿಂಗ್ ಕೊಲಿಯೊಪ್ಟೆರ್

06. ಸ್ನೆಕ್ಮಾ ಫ್ಲೈಯಿಂಗ್ ಕೊಲಿಯೊಪ್ಟೆರ್

1958ರಲ್ಲಿ ಫ್ರಾನ್ಸ್ ನಿಂದ ರಾಕೆಟ್ ಶೈಲಿಯಲ್ಲಿ ನಿರ್ಮಾಣವಾದ ಪ್ರಾಯೋಗಿಕ ವಿಮಾನ ಇದಾಗಿದೆ.

05. ಲಾಕ್ ಹೀಡ್ ಎಕ್ಸ್ ಎಫ್ ವಿ

05. ಲಾಕ್ ಹೀಡ್ ಎಕ್ಸ್ ಎಫ್ ವಿ

1953ರಲ್ಲಿ ವಿನ್ಯಾಸಗೊಳಿಸಲಾದ ಫೈಟರ್ ಜೆಟ್

04. ಎಕ್ಸ್ 36 ಟೈಲ್ ಲೆಸ್ ಫೈಟರ್

04. ಎಕ್ಸ್ 36 ಟೈಲ್ ಲೆಸ್ ಫೈಟರ್

1996ರಲ್ಲಿ ನಾಸಾ ಅಭಿವೃದ್ಧಿಪಡಿಸಿದ ವಿನೂತನ ಫೈಟರ್ ಜೆಟ್

03.ಡಗ್ಲಾಸ್ ಎಕ್ಸ್-3 ಸ್ಟಿಲೆಟ್ಟೊ

03.ಡಗ್ಲಾಸ್ ಎಕ್ಸ್-3 ಸ್ಟಿಲೆಟ್ಟೊ

ಸೂಪರ್ ಸೋನಿಕ್ ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಇದು ಹೊಂದಿದೆ.

 02. ಮಾರ್ಟಿನ್ ಎಕ್ಸ್ ಬಿ-51

02. ಮಾರ್ಟಿನ್ ಎಕ್ಸ್ ಬಿ-51

1949ರಲ್ಲಿ ನಿರ್ಮಾಣವಾದ ಪ್ರಾಯೋಗಿಕ ವಿಮಾನ ಇದಾಗಿದೆ.

01. ಪ್ರೋಟೆಯಸ್

01. ಪ್ರೋಟೆಯಸ್

ವಿಚಿತ್ರವೆಂದರೆ ವಿಮಾನದ ಬಿಡಿಭಾಗಗಳ ಉಳಿದ ಭಾಗಗಳಿಂದ ಇದನ್ನು 1998ರಲ್ಲಿ ರಚಿಸಲಾಗಿತ್ತು.

 

Read more on ವಿಮಾನ plane
English summary
28 Aircraft We Can't Believe Exist
Please Wait while comments are loading...

Latest Photos