ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ಕಾರು, ಬೈಕ್, ಟ್ರಕ್ ಓಡಿಸುವಂತೆಯೇ ವಿಮಾನಗಳನ್ನು ಓಡಿಸಲು ಪರವಾನಗಿ ಅಗತ್ಯವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಬಹುಪಾಲು ವಿಮಾನಗಳನ್ನು ಹಾರಿಸಲು ನಿಮಗೆ ಪರವಾನಗಿ ಅಗತ್ಯವಿರುವಾಗ ಕೆಲವೇ ಕೆಲವು ಅಲ್ಟ್ರಾಲೈಟ್ ವಿಮಾನಗಳನ್ನು ನೀವು ಪರವಾನಗಿ ಇಲ್ಲದೆ ಹಾರಿಸಬಹುದು.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ನೀವು ಪರವಾನಗಿ ಇಲ್ಲದೆ ಹಾರಿಸಬಲ್ಲ ವಿಮಾನಗಳು ಸಣ್ಣ ಎಂಜಿನ್, ಕಡಿಮೆ-ವೇಗ ಮತ್ತು ಸಿಂಗಲ್-ಸೀಟ್‌ಗನೊಂದಿಗೆ ಸಣ್ಣ ವಿಮಾನಗಳಾಗಿರಬೇಕು. ಏಕೆಂದರೆ ಇವು ಕಾರ್ಯನಿರ್ವಹಿಸಲು ಸರಳ, ಕಡಿಮೆ ಎತ್ತರದಲ್ಲಿ ಹಾರುವುದರ ಜೊತೆಗೆ ದೊಡ್ಡ ವಿಮಾನಗಳಲ್ಲಿನ ಪೈಲಟ್ ಪರವಾನಗಿ ಅಗತ್ಯವಿರುವ ವಿಮಾನಗಳಿಗಿಂತ ನಿಧಾನವಾಗಿ ಹಾರುತ್ತವೆ. ಆದರೆ ನೀವು ಲೈಸೆನ್ಸ್ ಇಲ್ಲದೆ ದೊಡ್ಡ ಪ್ಯಾಸಿಂಜರ್ ಹಾಗೂ ಪ್ರೈವೇಟ್ ಜೆಟ್‌ಗಳನ್ನು ಹಾರಿಸಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ಪರವಾನಗಿ ಇಲ್ಲದೆ ವಿಮಾನವನ್ನು ಹಾರಿಸವುದು ಹೇಗೆ

ಫೆಡರಲ್ ಏವಿಯೇಷನ್ ​​ಅಥಾರಿಟಿ (FAA) ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಪರವಾನಗಿ ಇಲ್ಲದೆ ವಿಮಾನವನ್ನು ಹಾರಿಸಲು ಜನರಿಗೆ ಅನುಮತಿ ನೀಡುತ್ತದೆ. 14 CFR ಭಾಗ 103.1 ರಂತೆ ಕೆಳಗಿನ ಷರತ್ತುಗಳನ್ನು ಪೂರೈಸಿದರೆ ಒಬ್ಬ ವ್ಯಕ್ತಿಗೆ ಪರವಾನಗಿ ಇಲ್ಲದೆ ಹಾರಲು ಅನುಮತಿ ಇದೆ ಎಂದು ಹೇಳುತ್ತದೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

• ಕೇವಲ ಒಂದು ಆಸನವನ್ನು ಮಾತ್ರ ಅನುಮತಿಸಲಾಗಿರುವುದರಿಂದ ಒಬ್ಬ ವ್ಯಕ್ತಿ ಮಾತ್ರ ಹಾರಬಹುದು.

• ವಿಮಾನವನ್ನು ಮನರಂಜನೆ ಅಥವಾ ಕ್ರೀಡಾ ಉದ್ದೇಶಗಳಿಗಾಗಿ ಮಾತ್ರ ಹಾರಿಸಬಹುದು.

• ವಿಮಾನವು ಶಕ್ತಿಯಿಲ್ಲದಿದ್ದಲ್ಲಿ 155 ಪೌಂಡ್‌ಗಳಿಗಿಂತ ಕಡಿಮೆ ತೂಕವಿರಬೇಕು.

• ವಿಮಾನವು ಚಾಲಿತವಾಗಿದ್ದರೆ ಖಾಲಿಯಾಗಿರುವಾಗ 254 ಪೌಂಡ್‌ಗಳಿಗಿಂತ ಕಡಿಮೆ ತೂಕವಿರಬೇಕು.

• ವಿಮಾನದ ಇಂಧನ ಸಾಮರ್ಥ್ಯವು 5 US ಗ್ಯಾಲನ್‌ಗಳನ್ನು ಮೀರಬಾರದು.

• ಸಮತಲ ಹಾರಾಟದಲ್ಲಿ ವಿಮಾನವು ಪೂರ್ಣ ಶಕ್ತಿಯಲ್ಲಿ 55 ನಾಟ್ಸ್‌ಗಿಂತ (1 ನಾಟ್ 1.852 km/h ಗೆ ಸಮ) ಹೆಚ್ಚು ಹಾರುವಂತಿಲ್ಲ.

• ವಿಮಾನದ ಪವರ್-ಆಫ್ ಸ್ಟಾಲ್ ವೇಗವು 24 ನಾಟ್ಸ್‌ಗಿಂತ ವೇಗವಾಗಿರಬಾರದು.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ಪರವಾನಗಿ ಇಲ್ಲದೆ ನೀವು ಹಾರಬಲ್ಲ 4 ವಿಮಾನಗಳು

ನೀವು ಪರವಾನಗಿ ಇಲ್ಲದೆಯೇ ಈ ಕೆಳಗಿನ ವಿಮಾನಗಳನ್ನು ಹಾರಿಸಬಹುದು, ಏಕೆಂದರೆ ಇವೆಲ್ಲವೂ ಸಿಂಗಲ್-ಸೀಟಿನ ಅಲ್ಟ್ರಾಲೈಟ್ ವಿಮಾನಗಳಾಗಿದ್ದು, ಹೆಚ್ಚಾಗಿ ಮನರಂಜನಾ ಉದ್ದೇಶಗಳಿಗಾಗಿ ಇವುಗಳನ್ನು ಬಳಸಲಾಗುತ್ತದೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

1. ಏರೋಲೈಟ್ 103

ಏರೋಲೈಟ್ 103 ಎಂಬುದು ಅಮೇರಿಕನ್ ನಿರ್ಮಿತ ಸಿಂಗಲ್-ಸೀಟ್ ಪ್ಲೇನ್ ಆಗಿದ್ದು, ಇದನ್ನು 1997 ರಲ್ಲಿ ಏರೋ-ವರ್ಕ್ಸ್ ಇಂಕ್ ನಿರ್ಮಿಸಿದೆ. ಈ ವಿಮಾನವು 2005 ರಲ್ಲಿ ಉತ್ಪಾದನೆಯನ್ನು ನಿಲ್ಲಿಸಿತು, ಆದರೆ ಇದನ್ನು ಇಂದಿಗೂ ವ್ಯಾಪಕವಾಗಿ ಬಳಸಲಾಗುತ್ತದೆ. ಏರೋಲೈಟ್ 103 ವಿಮಾನವನ್ನು ನಿರ್ದಿಷ್ಟವಾಗಿ FAR 103 ಅಲ್ಟ್ರಾಲೈಟ್ ವೆಹಿಕಲ್ಸ್ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಇದನ್ನು ಪರವಾನಗಿ ಇಲ್ಲದೆ ಹಾರಿಸಬಹುದು.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

2. ದಿ ಕ್ವಿಕ್‌ಸಿಲ್ವರ್

ಕ್ವಿಕ್‌ಸಿಲ್ವರ್ ಸಿಂಗಲ್-ಎಂಜಿನ್ ಅಲ್ಟ್ರಾಲೈಟ್ ಏರ್‌ಪ್ಲೇನ್‌ಗಳಲ್ಲಿ ಒಂದಾಗಿದ್ದು, ಇದನ್ನು ಕ್ವಿಕ್‌ಸಿಲ್ವರ್ ಮ್ಯಾನುಫ್ಯಾಕ್ಚರಿಂಗ್ ಹಾಗೂ ಹ್ಯಾಂಗ್ ಗ್ಲೈಡರ್‌ಗಳಿಂದ ಅಭಿವೃದ್ಧಿಪಡಿಸಲಾಗಿದೆ. ಕಂಪನಿಯ ಸಂಸ್ಥಾಪಕ, ಡಿಕ್ ಈಪ್ಪರ್, ಗ್ಲೈಡರ್‌ಗೆ ಸಣ್ಣ ಎಂಜಿನ್, ಸೀಟ್ ಮತ್ತು ವೀಲ್‌ಗಳನ್ನು ಜೋಡಿಸಿ ಕ್ವಿಕ್‌ಸಿಲ್ವರ್ ಅಲ್ಟ್ರಾಲೈಟ್ ಪ್ಲೇನ್ ಅನ್ನು ಕಂಡುಹಿಡಿದರು. 1970 ರ ದಶಕದ ಉತ್ತರಾರ್ಧದಲ್ಲಿ ಕ್ವಿಕ್‌ಸಿಲ್ವರ್ ಅನ್ನು ಮೊದಲು ಉತ್ಪಾದಿಸಲಾಗಿದ್ದರೂ, ಇದನ್ನು ಅನೇಕ ವಾಯುಯಾನ ಉತ್ಸಾಹಿಗಳು ಮನರಂಜನಾ ಬಳಕೆಗಾಗಿ ಇಂದಿಗೂ ಬಳಸುತ್ತಿದ್ದಾರೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

3. ಹಮ್ಮೆಲ್ ಅಲ್ಟ್ರಾ ಕ್ರೂಸರ್

ಹಮ್ಮೆಲ್ ಅಲ್ಟ್ರಾ ಕ್ರೂಸರ್ ವಿಶ್ವದ ಏಕೈಕ ಆಲ್-ಮೆಟಲ್ ಅಲ್ಟ್ರಾಲೈಟ್ ವಿಮಾನವಾಗಿದೆ. ಇದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ 1999 ರಲ್ಲಿ ಹಮ್ಮೆಲ್ ಏವಿಯೇಷನ್ ಅಭಿವೃದ್ಧಿಪಡಿಸಿತು, ಆದರೆ ಇಂದಿಗೂ ಅದನ್ನು ಹಾರಿಸಲಾಗುತ್ತಿದೆ. ಹೆಚ್ಚಿನ ಪರ್ಫಾಮೆನ್ಸ್ ಒದಗಿಸುವ ಸುಲಭವಾದ ಹಾರಾಟದ ವಿಮಾನವೆಂದು ಇದನ್ನು ಪರಿಗಣಿಸಲಾಗಿದೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

4. ಫ್ಯಾಂಟಮ್ X1

ಫ್ಯಾಂಟಮ್ ಎಕ್ಸ್ 1 ಸಿಂಗಲ್ ಎಂಜಿನ್ ಟ್ರಾಕ್ಟರ್ ಕಾನ್ಫಿಗರೇಶನ್ ಟ್ರೈಸಿಕಲ್ ವಿಮಾನವಾಗಿದ್ದು, ಇದನ್ನು ಫ್ಯಾಂಟಮ್ ಏರೋನಾಟಿಕ್ಸ್ ಅಭಿವೃದ್ಧಿಪಡಿಸಿದೆ. ಇದನ್ನು ಮೊದಲು 1982 ರಲ್ಲಿ ಹಾರಿಸಲಾಯಿತು, ಈ ವಿಮಾನವನ್ನು ಇಂದಿಗೂ ಉತ್ಪಾದಿಸಲಾಗುತ್ತಿದೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ಇದನ್ನು ನಿಜವಾದ ಕ್ಲಾಸಿಕ್ ಹೈ-ವಿಂಗ್ ಟ್ರಾಕ್ಟರ್ ಕಾನ್ಫಿಗರೇಶನ್ ಅಲ್ಟ್ರಾಲೈಟ್ ಪ್ಲೇನ್ ಎಂದು ಪರಿಗಣಿಸಲಾಗಿದೆ. ಈ ವಿಮಾನವನ್ನು ಮೂಲತಃ ತರಬೇತಿಗಾಗಿ ವಿನ್ಯಾಸಗೊಳಿಸಲಾಗಿದ್ದರೂ, ಇದನ್ನು ವಾಯುಯಾನ ಉತ್ಸಾಹಿಗಳು ಮನರಂಜನಾ ಉದ್ದೇಶಗಳಿಗಾಗಿ ಹೆಚ್ಚಾಗಿ ಬಳಸುತ್ತಾರೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ಷರತ್ತುಗಳು

ಮೇಲೆ ತಿಳಿಸಿದಂತೆ FAA ಯ 14 CFR ಭಾಗ 103 ಅಲ್ಟ್ರಾಲೈಟ್ ವರ್ಗದ ಅಡಿಯಲ್ಲಿ ಪರವಾನಗಿ ಇಲ್ಲದೆ ವಿಮಾನವನ್ನು ಹಾರಿಸಲು ನಿಮಗೆ ಅನುಮತಿ ಇದೆ. ಈ ವರ್ಗವು ಗ್ಲೈಡರ್‌ಗಳ ಜೊತೆಗೆ ಅಲ್ಟ್ರಾಲೈಟ್ ಏರ್‌ಪ್ಲೇನ್‌ಗಳನ್ನು ಒಳಗೊಂಡಿದೆ. ಆದರೆ ನೀವು ವಿಮಾನವನ್ನು ಹಾರಿಸಲು ಪ್ರಾರಂಭಿಸುವ ಮೊದಲು ನಿಮಗೆ ತರಬೇತಿ ಅಗತ್ಯವಿರುತ್ತದೆ.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ಒಮ್ಮೆ ನೀವು ಅಂತಹ ಯಾವುದೇ ಅವಶ್ಯಕತೆಗಳನ್ನು ಪೂರೈಸಿದ್ದೀರಿ ಎಂದು ಖಚಿತಪಡಿಸಿಕೊಂಡ ನಂತರ, ನಿಮ್ಮ ವಿಮಾನವನ್ನು ಕಾನೂನುಬದ್ಧವಾಗಿ ಅನುಮತಿಸಿದ ಸ್ಥಳದಲ್ಲಿ ನೀವು ಹಾರಿಸಬಹುದು. ನಿಮ್ಮ ವಿಮಾನವನ್ನು ಎಲ್ಲಿ ಹಾರಿಸಬಹುದು ಎಂಬುದನ್ನು ನಿಮ್ಮ ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಶೀಲಿಸಬೇಕು.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ನೀವು ಎಲ್ಲಿ ವಾಸಿಸುತ್ತೀರಿ ಎಂಬುದರ ಆಧಾರದ ಮೇಲೆ, ನೀವು ಎಷ್ಟು ದೂರ ಮತ್ತು ಎಷ್ಟು ಸಮಯದವರೆಗೆ ಹಾರಾಟ ನಡೆಸಬಹುದು ಎಂಬುದರ ಕುರಿತು ಕಾನೂನು ಷರತ್ತುಗಳಿರುತ್ತವೆ. ಹಾಗಾಗಿ ಕೆಲವು ಮಾನದಂಡಗಳನ್ನು ಪೂರೈಸಿದರೆ ನೀವು ಪರವಾನಗಿ ಇಲ್ಲದೆ ವಿಮಾನಗಳನ್ನು ಹಾರಿಸಬಹುದು.

ಲೈಸೆನ್ಸ್ ಅಗತ್ಯವಿಲ್ಲದೆ ಪ್ರತಿಯೊಬ್ಬರು ಹಾರಿಸಬಹುದಾದ 4 ವಿಮಾನಗಳು: ಅರ್ಹತೆ, ಷರತ್ತುಗಳನ್ನು ತಿಳಿಯಿರಿ...

ಹೆಚ್ಚಿನ ಅಲ್ಟ್ರಾಲೈಟ್ ತೂಕದ ವಿಮಾನಗಳು 14 CFR ಭಾಗ 103 ಅವಶ್ಯಕತೆಗಳನ್ನು ಪೂರೈಸುತ್ತವೆ, ಇವು ಜನರಿಗೆ ಪರವಾನಗಿ ಇಲ್ಲದೆ ವಿಮಾನಗಳನ್ನು ಹಾರಿಸಲು ಅನುವು ಮಾಡಿಕೊಡುತ್ತವೆ. ನೀವು 14 CFR ಭಾಗ 103-ಹೊಂದಾಣಿಕೆಯ ವಿಮಾನವನ್ನು ಹಾರಿಸಿದರೆ ನೀವು ಯಾವುದೇ ಕಾನೂನು ಕ್ರಮಮಗಳನ್ನು ಎದುರಿಸಬೇಕಿಲ್ಲ. ಆದರೆ, ಈ ಅವಶ್ಯಕತೆಗಳನ್ನು ಪೂರೈಸದೆ ಪರವಾನಗಿ ಇಲ್ಲದೆ ನೀವು ವಿಮಾನವನ್ನು ಹಾರಿಸಿದರೆ ಕಠಿಣ ಕಾನೂನು ಕ್ರಮ ಹಾಗೂ ದಂಡವನ್ನು ಎದುರಿಸಬೇಕಾಗುತ್ತದೆ.

Most Read Articles

Kannada
Read more on ವಿಮಾನ plane
English summary
4 Airplanes Everyone Can Fly Without License Know Eligibility Conditions
Story first published: Monday, October 3, 2022, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X