ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

Posted By: Staff

ಇಡೀ ದೇಶವನ್ನೇ ನಡುಗಿಸಿದ ಟಾಟಾ ಮೋಟಾರ್ಸ್‌ನ ಕನಸಿನ ಕೂಸು 'ನ್ಯಾನೋ ಕಾರು' ಮತ್ತು ಸಿಂಗೂರು ಘಟಕದ ಬಗ್ಗೆ ಎದ್ದಿರುವ ವಿವಾದಗಳು ನಿಮಗೆ ತಿಳಿದೇ ಇದೆ. ಜಾಗತಿಕ ಮಟ್ಟದಲ್ಲೂ ಗಮನ ಸೆಳೆದ ಅತಿ ಅಗ್ಗದ ನ್ಯಾನೋ ಕಾರಿನ ಉತ್ಪಾದನಾ ಘಟಕವನ್ನು ಪಶ್ಚಿಮ ಬಂಗಾಳದ ಸಿಂಗೂರಿನ ಭೂ ಪ್ರದೇಶದಲ್ಲಿ ನಿರ್ಮಿಸಲು ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ನಿರ್ಧರಿಸಿತ್ತು.

ಇವನ್ನೂ ಓದಿ: ನ್ಯಾನೋ 'ಡಬ್ಬಾ ಪೀಸ್' ಅಂದವರು ಇದನ್ಮೊಮ್ಮೆ ಓದಿ

ಟಾಟಾ ಮೋಟಾರ್ಸ್ ಮಹತ್ತರ ಯೋಜನೆಗೆ ಸಹಮತ ವ್ಯಕ್ತಪಡಿಸಿದ್ದ ಅಂದಿನ ಸಿಪಿಎಂ ಮುಂದಾಳತ್ವದ ಪಶ್ಚಿಮ ಬಂಗಾಳ ಸರಕಾರ ಸಿಂಗೂರ್ ಭೂ ಪ್ರದೇಶದ 900 ಎಕರೆ ಜಮೀನನ್ನು ಟಾಟಾ ಸಂಸ್ಥೆಗೆ ಹಸ್ತಾಂತರಿಸಲು ನಿರ್ಧರಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ಥಳೀಯ ರೈತರು ಮತ್ತು ವಿಪಕ್ಷ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಕೃಷಿ ಭೂಮಿ ಸ್ವಾಧೀನ ಮಾಡುವುದರ ವಿರುದ್ಧ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹೂಡಿದ್ದರು. ಇದಾದ ಬೆನ್ನಲ್ಲೇ ಸಾಲು ಸಾಲು ಹಿಂಸಾಚಾರ ಮತ್ತು ಚಳುವಳಿ ಪ್ರಕರಣಗಳು ಘಟಿಸಿ ಹೋಗಿದ್ದವು.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ರೈತ ಮತ್ತು ವಿಪಕ್ಷಗಳಿಂದ ಭಾರಿ ಪ್ರತಿಭಟನೆ ಎದುರಾಗಿದ್ದರಿಂದ ಭಾರಿ ಮುಖಭಂಗಕ್ಕೊಳಗಾಗಿದ್ದ ರತನ್ ಟಾಟಾ ನೇತೃತ್ವದ ಟಾಟಾ ಮೋಟಾರ್ಸ್ ಕೊನೆಗೆ ತಮ್ಮ ಕನಸಿನ ಕಾರಿನ ಯೋಜನೆಯನ್ನು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿಶೇಷ ಆಹ್ವಾನದ ಮೆರೆಗೆ ಸನಂದ್ ಘಟಕಕ್ಕೆ ಸ್ಥಳಾಂತರಿಸಿದ್ದರು.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ಟಾಟಾ ಮೋಟಾರ್ಸ್ ಯೋಜನೆಯಂತೆ ಬಹುನಿರೀಕ್ಷಿತ ನ್ಯಾನೋ ಕಾರು 2008ನೇ ಇಸವಿಯಲ್ಲಿ ಹೊರಬರಬೇಕಿತ್ತು. ಮಮತಾ ಬ್ಯಾನರ್ಜಿ ಅವರ 'ಕೃಷಿ ಭೂಮಿ ಉಳಿಸಿ' ಆಂದೋಲನಕ್ಕೆ ಪರಿಸರ ಕಾರ್ಯಕರ್ತರಾದ ಮೇಧಾ ಪಟ್ಕಾರ್, ಅನುರಾಧಾ ತಲ್ವಾರ್ ಮತ್ತು ಆರುಂಧತಿ ರಾಯ್ ಅವರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ಸಿಂಗೂರು ಭೂಸ್ವಾಧೀನ ವಿವಾದ ಕೋರ್ಟ್ ಮೆಟ್ಟಿಲೇರಿದ ಬಳಿಕ ಅಂತಿಮವಾಗಿ 2008 ಅಕ್ಟೋಬರ್ 03ರಂದು ಘಟಕ ಸ್ಥಳಾಂತರ ಮಾಡಲು ಟಾಟಾ ನಿರ್ಧರಿಸಿತ್ತು. ಮಮತಾ ಬ್ಯಾನರ್ಜಿ ಮತ್ತು ಆಕೆಯ ಹಿಂಬಾಲಕರಿಂದ ವ್ಯಾಪಕ ಪ್ರತಿಭಟನೆ ಎದುರಾಗಿರುವುದು ಘಟಕ ಸ್ಥಳಾಂತರಕ್ಕೆ ಕಾರಣ ಎಂದು ರತನ್ ಟಾಟಾ ನೇರವಾಗಿ ಆರೋಪಿಸಿದರು. ಅಲ್ಲದೆ ಗುಜರಾತ್ ನಲ್ಲಿ ನೂತನ ನ್ಯಾನೋ ಘಟಕ ತೆರೆಯುವುದಾಗಿ ಘೋಷಿಸಿದ್ದರು.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ಭಾರಿ ಪ್ರತಿಭಟನೆಯ ನಡುವೆಯೂ 2007 ಜನವರಿ 21ರಂದು ಸಿಂಗೂರು ನ್ಯಾನೋ ಘಟಕ ನಿರ್ಮಾಣಕ್ಕೆ ಟಾಟಾ ಚಾಲನೆ ನೀಡಿತ್ತು. ಕೋಲ್ಕತ್ತಾ ಹೈ ಕೋರ್ಟ್ ಸಹ ಸಿಂಗೂರು ಭೂಸ್ವಾಧೀನವು ಕಾನೂನುಬದ್ಧವಾಗಿಲ್ಲ ಎಂಬ ತೀರ್ಪು ಹೊರಡಿಸಿರುವುದು ಟಾಟಾ ಮತ್ತು ಪಶ್ಚಿಮ ಬಂಗಾಳ ಸರಕಾರಕ್ಕೆ ದೊಡ್ಡ ಹೊಡೆತವನ್ನೇ ನೀಡಿತ್ತು.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ಸದ್ಯ ಸಿಂಗೂರಿನಿಂದ ಟಾಟಾ ಹೊರಟು ಹೋಗಿ ಎಂಟು ವರ್ಷಗಳೇ ಸಂದಿದ್ದು, ಇಲ್ಲಿನ ಟಾಟಾ ಘಟಕ ಹೇಳುವವರು ಕೇಳುವವರಿಲ್ಲದೆ ಬರಿದಾಗಿದೆ. ಸಂಸ್ಥೆ ಸ್ವಾಧೀನಪಡಿಸಿದ ಭೂಮಿಯು ಈಗ ನಿರ್ಜನ ಪ್ರದೇಶವಾಗಿ ಉಳಿದಿದೆ.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ಟಾಟಾ ಸಿಂಗೂರು ಘಟಕ ಎಷ್ಟು ಶೋಚನೀಯ ಅವ್ಯಸ್ಥೆಗೆ ತಲುಪಿದೆಯೆಂದರೆ ದನ ಮೇಯುವ ಪ್ರದೇಶವಾಗಿ ಘಟಕ ಮಾರ್ಪಟ್ಟಿರುವುದು ಖೇದಕರ ಸಂಗತಿಯಾಗಿದೆ.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ಸಿಂಗೂರು ಫಲವತ್ತಾದ ಭೂಮಿಯಲ್ಲಿ ವರ್ಷದಲ್ಲಿ ಮೂರು ಬಾರಿ ಇಳುವರಿಯನ್ನು ನೀಡಲಾಗುತ್ತದೆ. ಸಣ್ಣ ಪುಟ್ಟ ರೈತರೀಗ ಸರಕಾರ ಕೊಟ್ಟಿರುವ ಭರವಸೆಯ ಪ್ರಕಾರ ತಮ್ಮ ಭೂಮಿ ವಾಪಾಸು ಪಡೆಯುವುದಕ್ಕಾಗಿ ಕಾಯುತ್ತಿದ್ದಾರೆ.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ಒಟ್ಟಾರೆಯಾಗಿ ಸಿಂಗೂರಿನಲ್ಲಿ ಮೂಲಸೌಕರ್ಯಗಳಿಗೆ ಭಾರಿ ಹಾನಿ ಸಂಭವಿಸಿದ್ದು, ಘಟಕದಲ್ಲಿ ಪಾಳು ಬಿದ್ದಿರುವ ಟಾಟಾ ನ್ಯಾನೋ ಅವೇಶೇಷಗಳನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಕೋಟಿ ಗಟ್ಟಲೆ ರುಪಾಯಿಗಳ ಸ್ವತ್ತಿಗೆ ಹಾನಿ ಸಂಭವಿಸಿದೆ.

ಹೇಳುವವರು ಕೇಳುವವರಿಲ್ಲದೆ ಬರಿದಾದ ನ್ಯಾನೋ 'ಸಿಂಗೂರು' ಭೂಮಿ

ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಿಂಗೂರ್ ಪ್ರದೇಶವನ್ನು ಬಳಸಿದಾಗ ಸ್ಥಳೀಯ ರೈತರಿಗೀಗ ದಿಕ್ಕು ತೋಚದಂತಾಗಿದೆ. ಪ್ರಕರಣ ಈಗಲೂ ನ್ಯಾಯಾಲಯದ ಬಳಿಯಿದ್ದು, ಸಿಂಗೂರು ಘಟಕ ನಿರ್ಜನ ಭೂಮಿಯಾಗಿ ಮಾರ್ಪಾಟ್ಟಿದೆ.

ಇವನ್ನೂ ಓದಿ...

ಟಾಟಾ ನ್ಯಾನೋ: 15 ಆಸಕ್ತಿದಾಯಕ ಸತ್ಯಗಳು

ಭಾರತೀಯನಿಂದ ಡ್ರೈವರ್ ಲೆಸ್ ಕಾರು ನಿರ್ಮಾಣ

ಇವನ್ನೂ ಓದಿ...

ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್

ಸಣ್ಣ ಕಾರಿನ ದೊಡ್ಡತನ; ಇದುವೇ ಟಾಟಾ ನ್ಯಾನೋ ಜೆನ್ ಎಕ್ಸ್

Article Source: The Quint

Image Source :Ritam Sengupta

English summary
Abandoned Tata Nano Singur factory

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more