ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಕಾರು ಖರೀದಿಸಿದ ಜನಪ್ರಿಯ ಬಾಲಿವುಡ್ ನಟಿ

ಬಾಲಿವುಡ್ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿರುತ್ತದೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ಸ್ವಲ್ಪ ಹೆಚ್ಚೆ ಇದೆ. ಬಾಲಿವುಡ್ ಸೆಲಬ್ರಿಟಿಗಳು ಪೈಪೋಟಿಗೆ ಬಿದ್ದಂತೆ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಸಿನಿಮಾ ರಂಗದ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಕಾರು ಕ್ರೇಜ್ ಹೆಚ್ಚು ಇರುತ್ತದೆ.

ಸಿನಿಮಾ ನಟಿಯರು ಕೂಡ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ಮೆಚ್ಚಿನ ಐಷಾರಾಮಿ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸುತ್ತಾರೆ. ಅದರಲ್ಲಿ ಬಾಲಿವುಡ್ ಸೆಲಬ್ರಿಟಿಗಳಿಗೆ ಮರ್ಸಿಡಿಸ್ ಬೆಂಝ್ ಕಾರುಗಳ ಮೇಲೆ ಪ್ರೀತಿ ಹೆಚ್ಚು. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಇತ್ತೀಚೆಗೆ Mercedes-AMG GLE 53 ಕೂಪೆ ಕಾರನ್ನು ಖರೀದಿಸಿದ್ದಾರೆ. ಈ ಹೊಸ ಕಾರ್ಯಕ್ಷಮತೆಯ ಎಸ್‍ಯುವಿ, ಮರ್ಸಿಡಿಸ್-AMG GLE 53 ಕಾರು ಸುಶ್ಮಿತಾ ಸೇನ್ ಕಾರು ಗ್ಯಾರೇಜ್‌ಗೆ ಹೊಸ ಸೇರ್ಪಡೆಯಾಗಿದೆ.

ನಟಿ ಖರೀದಿಸಿದ ಮರ್ಸಿಡಿಸ್-AMG GLE 53 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.63 ಕೋಟಿಯಾಗಿದೆ. ಇನ್ನು ಈ ಐಷಾರಾಮಿ ಕಾರಿನ ಆನ್-ರೋಡ್ ಬೆಲೆಯು ರೂ.2 ಕೋಟಿಯಾಗಿದೆ. ಈ ಕಾರು ಅಬ್ಸಿಡಿಯನ್ ಬ್ಲ್ಯಾಕ್ ಬಣ್ಣದಲ್ಲಿದೆ. ಐಷಾರಾಮಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ಇ 53 ಕೂಪೆ ಕಾರಿನಲ್ಲಿ 4 ಮ್ಯಾಟಿಕ್ ಪ್ಲಸ್ ಆಲ್-ವೀಲ್ ಡ್ರೈವ್ (ಎಡಬ್ಲ್ಯೂಡಿ) ಸಿಸ್ಟಂ ಅನ್ನು ಹೊಂದಿದೆ. ಮರ್ಸಿಡಿಸ್-ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಭಾರತದಲ್ಲಿ ಜಿಎಲ್ಇ 43 ಎಎಂಜಿ ಕಾರಿನ ಉತ್ತರಾಧಿಕಾರಿಯಾಗಿದೆ.

ಈ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆಯಲ್ಲಿ 3.0 ಲೀಟರ್ ಆರು ಸಿಲಿಂಡರ್, ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ ಕಂಪನಿಯ 48-ವೋಲ್ಟ್ ಇಕ್ಯೂ ಬೂಸ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಈ ಎಂಜಿನ್ ಸುಮಾರು 429 ಬಿಹೆಚ್‌ಪಿ ಪವರ್ ಉತ್ಪಾದಿಸುವ ರೀತಿಯಲ್ಲಿ ಟ್ಯೂನ್ ಮಾಡಲಾಗಿದೆ. ಇನ್ನು ಇದು 520 ಎನ್‌ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಎಂಜಿನ್ ನೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಕೂಡ ನೀಡಲಾಗಿದೆ.

ಇಕ್ಯೂ ಬೂಸ್ಟ್ ಹೆಚ್ಚುವರಿ 22 ಬಿಹೆಚ್‌ಪಿ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 48-ವೋಲ್ಟ್ ಆನ್‌ಬೋರ್ಡ್ ಎಲೆಕ್ಟ್ರಿಕ್ ಸಿಸ್ಟಂನ್ನು ಸಹ ನೀಡುತ್ತದೆ. ಎಎಂಜಿ ಜಿಎಲ್ಇ 53 4 ಮ್ಯಾಟಿಕ್ ಪ್ಲಸ್ ಕೂಪೆಯಲ್ಲಿ ಸ್ಪೀಡ್‌ಶಿಫ್ಟ್ ಟಿಸಿಟಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಅನ್ನು ನೀಡಲಾಗಿದೆ. ಈ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಕೇವಲ 5.3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಇನ್ನು ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ವಿನ್ಯಾಸವು ಆಕರ್ಷಕವಾಗಿದೆ. ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಪನಾಮೆರಿಕಾನಾ ಗ್ರಿಲ್‌ನೊಂದಿಗೆ ಲಂಬ ಕ್ರೋಮ್ ಸ್ಲ್ಯಾಟ್‌ಗಳನ್ನು ಹೊಂದಿದೆ. ಈ ಕಾರಿನಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಸ್ವೀಪ್‌ಬ್ಯಾಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಈ ಕಾರಿನ ಮುಂಭಾಗದ ಏಪ್ರನ್‌ನಲ್ಲಿ ಸ್ಪೋರ್ಟಿ ಇನ್ಲೇಟ್ಸ್, ಪ್ರತಿಯೊಂದೂ ಸಿಲ್ವರ್ ಕ್ರೋಮ್‌ನಲ್ಲಿ ಎರಡು ಸೈಡ್ ಲೌವರ್‌ಗಳು ಮತ್ತು ಬ್ಲ್ಯಾಕ್ ಫ್ಲಿಕ್ಸ್‌ಗಳನ್ನು ಹೊಂದಿದೆ. ಎಎಮ್‌ಜಿ ಅಕ್ಷರಗಳನ್ನು ಹೊಂದಿರುವ 20 ಇಂಚಿನ ಲೈಟ್-ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಮರ್ಸಿಡಿಸ್ 20 ರಿಂದ 22 ಇಂಚು ಗಾತ್ರದ ಆರು ಇತರ ವ್ಹೀಲ್ ಆಯ್ಕೆಗಳ ಆಯ್ಕೆಯನ್ನು ಸಹ ನೀಡುತ್ತದೆ. ಹಿಂಭಾಗದಲ್ಲಿ ಸಿಲ್ವರ್ ಕ್ರೋಮ್‌ನಲ್ಲಿ ನೀವು ಸ್ಟ್ರೈಕಿಂಗ್ ಡಿಫ್ಯೂಸರ್ ಮತ್ತು ಟ್ರಿಮ್ ಸ್ಟ್ರಿಪ್ ಅನ್ನು ಹೊಂದಿದೆ. ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆಯ ಇಂಟಿರಿಯರ್ ಆಕರ್ಷಕವಾಗಿದೆ. ಇಂಟಿರಿಯರ್ ನಲ್ಲಿ ಕೆಂಪು ಕಾಂಟ್ರಾಸ್ಟ್ ಅಂಶಗಳನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳು ಕಾರ್ಬನ್ ಫೈಬರ್ ಅನ್ನು ಒಳಗೊಂಡಿದೆ. ಹೊಸ ತಲೆಮಾರಿನ 3-ಸ್ಪೋಕ್ ಎಎಮ್‌ಜಿ ಸ್ಟೀಯರಿಂಗ್ ವ್ಹೀಲ್ ಅನ್ನು ಅಲ್ಯೂಮಿನಿಯಂ ಶಿಫ್ಟ್ ಪ್ಯಾಡಲ್‌ಗಳೊಂದಿಗೆ ಹೊಂದಿದೆ.

ಇದರೊಂದಿಗೆ ದೊಡ್ಡ ಸಿಂಗಲ್ ಯುನಿಟ್ ಡಿಸ್ ಪ್ಲೇಯನ್ನು ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂದು ವಿಂಗಡಿಸಲಾಗಿದೆ. ಜಿಎಲ್ಇ 53 ಕೂಪೆ ಎಎಂಜಿ ರೈಡ್ ಕಂಟ್ರೋಲ್ ಪ್ಲಸ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ಕಂಫರ್ಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್ ಎಂಬ ಮೂರು ಮೋಡ್ ಗಳನ್ನು ಒಳಗೊಂಡಿದೆ. ಈ ಐಷಾರಾಮಿ ಮರ್ಸಿಡಿಸ್-ಎಎಂಜಿ ಜಿಎಲ್ಇ 53 ಕೂಪೆ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್6 ಎಂ ಮತ್ತು ಪೋರ್ಷೆ ಕೇಯೆನ್ ಕೂಪೆ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Actress sushmita sen bought new mercedes amg gle 53 coupe details in kannada
Story first published: Monday, January 23, 2023, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X