'ಗತಿಮಾನ್ ಎಕ್ಸ್‌ಪ್ರೆಸ್' ಸೆಮಿ ಬುಲೆಟ್ ರೈಲಿನ ವಿಶಿಷ್ಟತೆಗಳೇನು?

By Nagaraja

ವಿಶ್ವದಲ್ಲೇ ಅತಿ ದೊಡ್ಡ ರೈಲು ಜಾಲವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ರೈಲ್ವೆ ಇತಿಹಾಸದಲ್ಲಿ ಮಗದೊಂದು ಮೈಲುಗಲ್ಲನ್ನಿಟ್ಟಿದೆ. 2016 ಎಪ್ರಿಲ್ 05ರಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ದೇಶದ ಅತಿ ವೇಗದ 'ಗತಿಮಾನ್ ಎಕ್ಸ್ ಪ್ರೆಸ್' ಸೆಮಿ ಬುಲೆಟ್ ರೈಲಿಗೆ ಚಾಲನೆ ನೀಡಿದರು.

ನೂತನ ಗತಿಮಾನ್ ಎಕ್ಸ್ ಪ್ರೆಸ್ ಹಲವು ಪ್ರಾಯೋಗಿಕ ಹಂತಗಳನ್ನು ದಾಟಿ ಬಂದ ಬಳಿಕ ಎಪ್ರಿಲ್ 05ರಂದು ಲೋಕಾರ್ಪಣೆಯಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಆಗ್ರಾ ನಡುವಣ 200 ಕೀ.ಮೀ. ದೂರವನ್ನು ಕೇವಲ 100 ನಿಮಿಷಗಳಲ್ಲಿ ತಲುಪಲಿದೆ. ಈ ಸಂಬಂಧ ಕೆಲವು ಆಸಕ್ತಿದಾಯಕ ವಿಷಯಗಳನ್ನು ನಾವಿಲ್ಲಿ ಹಂಚಿಕೊಳ್ಳಲಿದ್ದೇವೆ.

ವೇಗ

ವೇಗ

ದೇಶದ ಅತ್ಯಂತ ವೇಗದ ಗತಿಮಾನ್ ಎಖ್ಸ್ ಪ್ರೆಸ್ ಗಂಟೆಗೆ 160 ಕೀ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಹೊಸ ಸೇವೆಯಿಂದಾಗಿ ದೆಹಲಿ-ಆಗ್ರಾಾ ನಡುವಣ ಪಯಣದ ಅವಧಿಯು 30 ನಿಮಿಷಗಳಷ್ಟು ಇಳಿಕೆಯಾಗಲಿದೆ.

ಎಲ್ಲಿಂದ ಎಲ್ಲಿಗೆ ?

ಎಲ್ಲಿಂದ ಎಲ್ಲಿಗೆ ?

ದೆಹಲಿಯ ಹಜರತ್ ನಿಜಾಮುದ್ದೀನ್ ಸ್ಟೇಷನ್ ನಿಂದ ಆರಂಭಿಸುವ ಪಯಣವು ಆಗ್ರಾದ ಕಂಟೋನ್ಮೆಂಟ್ ಸ್ಟೇಷನ್ ಬಂದು ತಲುಪಲಿದೆ.

ಎಂಜಿನ್

ಎಂಜಿನ್

ಗರಿಷ್ಠ 5,500 ಅಶ್ವಶಕ್ತಿ ಉತ್ಪಾದಿಸಬಲ್ಲ 'ವ್ಯಾಪ್ 5' ಎಲೆಕ್ಟ್ರಿಕ್ ಲೋಕೋಮೋಟಿವ್ ಎಂಜಿನ್ ಇದಕ್ಕೆ ಲಗತ್ತಿಸಲಾಗಿದೆ.

ರೈಲು ಸಖಿಯರು

ರೈಲು ಸಖಿಯರು

ಇನ್ನು ರೈಲಿನಲ್ಲಿ ಪ್ರಯಾಣಿಕರ ಸೇವೆಗಾಗಿ ರೈಲು ಸಖಿಯರನ್ನು ನಿಯೋಜಿಸಲಾಗುವುದು. ಇದು ಯಾತ್ರಿಕರಿಗೆ ಅತ್ಯುತ್ತಮ ಪ್ರಯಾಣ ಅನುಭವವನ್ನು ಒದಗಿಸಲಿದೆ.

ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ

ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ

ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರಬಲ್ಲ ಹೈ ಪವರ್ ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ ಇದರಲ್ಲಿದೆ.

ಸುರಕ್ಷತೆ

ಸುರಕ್ಷತೆ

ಇವೆಲ್ಲದರ ಜೊತೆಗೆ ಪ್ರಯಾಣಿಕರ ಭದ್ರತೆಗೂ ಅತಿ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆಟೋಮ್ಯಾಟಿಕ್ ಫೈರ್ ಅಲರಾಂ ವ್ಯವಸ್ಥೆಯಿರಲಿದೆ. ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಮತ್ತು ಬೋಗಿಗಳಲ್ಲಿ ಡೋರ್ ಗಳನ್ನು ಸರಿಸುವ ಅವಕಾಶವಿರುತ್ತದೆ.

ಬಣ್ಣ

ಬಣ್ಣ

ರಾಯಲ್ ಬ್ಲೂ ಮತ್ತು ಬೂದು ಬಣ್ಣಗಳ ಸಂಯೋಜನೆಯನ್ನು ಹೊಂದಿರುವ ಗತಿಮಾನ್ ಎಕ್ಸ್ ಪ್ರೆಸ್ ಮಧ್ಯದಲ್ಲಿ ಹಳದಿ ರೇಖೆಗಳನ್ನು ಬಳಿಯಲಾಗಿದೆ.

ದರ್ಜೆ

ದರ್ಜೆ

ಗತಿಮಾನ್ ಎಕ್ಸ್ ಪ್ರೆಸ್ ನಲ್ಲಿ ಎರಡು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ಸ್ ಮತ್ತು ಎಂಟು ಎಸಿ ಚೇರ್ ಕಾರ್ ಬೋಗಿಗಳ ಸೌಲಭ್ಯಗಳನ್ನು ಒದಗಿಸಲಾಗಿದೆ.

ಉಚಿತ ಸಿನೆಮಾ

ಉಚಿತ ಸಿನೆಮಾ

ಪ್ರಯಾಣಿಕರ ಆನಂದಕ್ಕಾಗಿ ಮಲ್ಟಿಮಿಡಿಯಾದಲ್ಲಿ ಉಚಿತ ಸಿನೆಮಾ, ವಾರ್ತಾ ಮತ್ತು ಕಾರ್ಟೂನ್ ಸೇವೆಗಳನ್ನು ಒದಗಿಸಲಾಗುವುದು.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಇನ್ನುಳಿದಂತೆ ಐಆರ್‌ಸಿಟಿಸಿಯಿಂದ ಉತ್ತಮ ಭೋಜನ ಸೇವೆ, ಸುಧಾರಿತ ಇಂಟಿರಿಯರ್, ಲಿಂಕ್-ಹಾಫ್‌ಮ್ಯಾನ್-ಬುಶ್ ಕೋಚ್ (Linke-Hofmann-Busch coaches) ಅಗಲವಾದ ವಿಂಡೋ, ಜೈವಿಕ ಶೌಚಾಲಯ ಇತ್ಯಾದಿ ಸೇವೆಗಳಿರಲಿದೆ.

ಹಾಟ್ ಸ್ಪಾಟ್

ಹಾಟ್ ಸ್ಪಾಟ್

ಇನ್ನು ಪ್ರಯಾಣಿಕರಿಗೆ ತಮ್ಮ ಸ್ಮಾರ್ಟ್ ಫೋನ್, ಟ್ಯಾಪ್ ಟಾಪ್ ಅಥವಾ ಲ್ಯಾಪ್ ಟಾಪ್ ಗಳಿಂದ ನಿರ್ವಹಿಸಬಲ್ಲ ಹಾಟ್ ಸ್ಪಾಟ್ ಡಿವೈಸ್ ಗಳನ್ನು ಲಗತ್ತಿಸಲಾಗಿದೆ.

ಆರಾಮದಾಯಕ ಪಯಣ

ಆರಾಮದಾಯಕ ಪಯಣ

ಸಂಚಾರದ ವೇಳೆ ಬ್ರೇಕಿಂಗ್ ವೇಳೆ ರೈಲಿನ ಎಳೆತವನ್ನು ಕಡಿಮೆ ಮಾಡಲು ಸಮತೋಲಿತ ಡ್ರಾಫ್ಟ್ ಗೇರ್ ಸಂಯೋಜಕಗಳನ್ನು ಬಳಕೆ ಮಾಡಲಾಗಿದೆ.

ಪ್ರಯಾಣ ದರ

ಪ್ರಯಾಣ ದರ

ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್: 1500 ರು.

ಎಸಿ ಚೇರ್ ಕಾರ್: 750 ರು.

ರಿಯಾಯಿತಿ ಇಲ್ಲ

ರಿಯಾಯಿತಿ ಇಲ್ಲ

ಶುಕ್ರವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳಲ್ಲಿ ಓಡಾಡುವ ಗತಿಮಾನ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ದರ ನೀಡಲಾಗುವುದಿಲ್ಲ.

ನಿರ್ಗಮನ ಸಮಯ

ನಿರ್ಗಮನ ಸಮಯ

ರೈಲು ವೇಳಾಪಟ್ಟಿ ಅನುಸಾರವಾಗಿ ನಿಜಾಮುದ್ದೀನ್ ನಿಂದ ಬೆಳಗ್ಗೆ 8.10ಕ್ಕೆ ಹೊರಡುವ ಗತಿಮಾನ್ ಎಕ್ಸ್ ಪ್ರೆಸ್ ಆಗ್ರಾಾವನ್ನು 9.50ರ ವೇಳೆಯಾಗುವಾಗ ತಲುಪಲಿದೆ. ಹಾಗೆಯೇ ಆಗ್ರಾಾದಿಂದ ಸಂಜೆ 5.50ಕ್ಕೆ ಹೊರಡುವ ರೈಲು 7.30ರ ವೇಳೆಗೆ ನಿಜಾಮುದ್ದೀನ್ ಹಿಂತಿರುಗಲಿದೆ.

ಯೋಜನೆ ವಿಸ್ತರಣೆ

ಯೋಜನೆ ವಿಸ್ತರಣೆ

ಗತಿಮಾನ್ ಎಕ್ಸ್ ಪ್ರೆಸ್ ಮುಂದಿನ ಯೋಜನೆಯ ಭಾಗವಾಗಿ ನಿಕಟ ಭವಿಷ್ಯದಲ್ಲಿ ಒಂಬತ್ತು ಹೊಸ ಮಾರ್ಗಗಳಲ್ಲಿ ಸಂಚಾರ ಆರಂಭಿಸಲಿದೆ. ಇವುಗಳಲ್ಲಿ ಕಾನ್ಪುರ-ದೆಹಲಿ, ಚಂಡೀಗಡ-ದೆಹಲಿ, ಹೈದರಾಬಾದ್-ಚೆನ್ನೈ, ನಾಗ್ಪುರ-ಬಿಸ್ಲಾಪುರ, ಗೋವಾ-ಮುಂಬೈ, ಗೋವಾ-ಮುಂಬೈ ಮತ್ತು ನಾಗ್ಪುರ-ಸಿಕಂಧರ್ ಬಾದ್ ಸೇರಿವೆ.

Most Read Articles

Kannada
Read more on ಭಾರತ india
English summary
All you want to know about indias fastest train 'Gatimaan Express'
Story first published: Wednesday, April 6, 2016, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X