ಶಾಕಿಂಗ್ ವಿಡಿಯೋ- ಬುದ್ಧಿ ಹೇಳಿದ ಹಿರಿಯ ವ್ಯಕ್ತಿಗೆ ಥಳಿಸಿದ ಕ್ರಿಕೆಟರ್ ಅಂಬಾಟಿ ರಾಯುಡು..!

Written By:

ಒಬ್ಬ ಮನುಷ್ಯಗೆ ಹಣ ಮತ್ತು ಖ್ಯಾತಿ ಬಂದಾಕ್ಷಣ ಅಹಂಕಾರವು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಯಾಕೇಂದ್ರೆ ಬುದ್ಧಿ ಮಾತು ಹೇಳಿದ ಹಿರಿಯ ವ್ಯಕ್ತಿಯೊಬ್ಬರ ಮೇಲೆ ಕ್ರಿಕೆಟರ್ ಅಂಬಾಟಿ ರಾಯುಡು ಹಲ್ಲೆ ನಡೆಸಿದ್ದಾರೆ.

ಬುದ್ಧಿ ಹೇಳಿದ ಹಿರಿಯ ವ್ಯಕ್ತಿಗೆ ಥಳಿಸಿದ ಕ್ರಿಕೆಟರ್ ಅಂಬಾಟಿ ರಾಯುಡು

ಬೆಳ್ಳಂಬೆಳಗ್ಗೆ ಕ್ರಿಕೆಟರ್ ಅಂಬಾಟಿ ರಾಯುಡು ತಮ್ಮ ಲ್ಯಾಂಡ್ ರೋವರ್ ಕಾರಿನಲ್ಲಿ ವೇಗವಾಗಿ ಚಾಲನೆ ಮಾಡಿದ್ದರು. ಈ ವೇಳೆ ವಾಕಿಂಗ್ ಮಾಡುತ್ತಿದ್ದ ಹಿರಿಯ ವ್ಯಕ್ತಿಯ ಕೈಗೆ ವೇಗದಲ್ಲಿದ್ದ ಕಾರಿನ ರಿರ್ ಮಿರರ್ ತಾಗಿದ್ದು, ಈ ಸಂಬಂಧ ವಾಗ್ವಾದ ನಡೆದಿದೆ.

ಬುದ್ಧಿ ಹೇಳಿದ ಹಿರಿಯ ವ್ಯಕ್ತಿಗೆ ಥಳಿಸಿದ ಕ್ರಿಕೆಟರ್ ಅಂಬಾಟಿ ರಾಯುಡು

ತನ್ನದೇ ತಪ್ಪಿದ್ದರೂ ಕಾರಿನಿಂದ ಹೊರಬಂದು ವೃದ್ಧರ ಜೊತೆ ಮಾತಿನ ಚಕಮಕಿ ನಡೆಸುತ್ತಿದ್ದ ಅಂಬಾಟಿ ರಾಯುಡು, ವೇಳೆ ಬುದ್ಧಿವಾದ ಹೇಳಲು ಬಂದ ಹಿರಿಯ ವ್ಯಕ್ತಿಯೋರ್ವರಿಗೆ ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬುದ್ಧಿ ಹೇಳಿದ ಹಿರಿಯ ವ್ಯಕ್ತಿಗೆ ಥಳಿಸಿದ ಕ್ರಿಕೆಟರ್ ಅಂಬಾಟಿ ರಾಯುಡು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಅಂಬಾಟಿ ರಾಯುಡು ಕೋಪದ ಪರಮಾವಧಿ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತವಾಗಿವೆ.

ಬುದ್ಧಿ ಹೇಳಿದ ಹಿರಿಯ ವ್ಯಕ್ತಿಗೆ ಥಳಿಸಿದ ಕ್ರಿಕೆಟರ್ ಅಂಬಾಟಿ ರಾಯುಡು

ಸ್ಥಳದಲ್ಲಿದ್ದವರು ರಾಯುಡು ಅವರನ್ನು ಸಮಾಧಾನಪಡಿಸಿ ವಾಪಸ್ ಕಳುಹಿಸಿದ್ದು, ಹಲ್ಲೆಗೀಡಾದ ವೃದ್ಧರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಲ್ಲದೇ ಪ್ರಕರಣ ಕುರಿತು ಬಿಸಿಸಿಐಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ಅಂಬಾಟಿ ರಾಯುಡು ಹಲ್ಲೆಯ ವಿಡಿಯೋ ಇಲ್ಲಿದೆ ನೋಡಿ.

Read more on ವಿಡಿಯೋ video
English summary
Read in Kannada about Indian Cricketer Involved In Ugly Road Rage Fight With An Old Man.
Story first published: Tuesday, September 5, 2017, 16:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark