ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

Written By:

ಯಾವತ್ತಾದರೂ ಯೋಚಿಸಿ ನೋಡಿರುವೀರಾ, ನೀರಲ್ಲಿ ಬೋಟ್ ಬದಲಿಗೆ ಬಸ್ಸಿನಲ್ಲಿ ಸಂಚರಿಸುವ ಅವಕಾಶ ದೊರೆತ್ತಲ್ಲಿ ಹೇಗಿರಬಹುದು? ವಿದೇಶಗಳಲ್ಲಿ ಹೆಚ್ಚು ಕಾಣಸಿಗುವ ಇಂತಹ ವಾಹನಗಳ ಭಾರತ ಪ್ರವೇಶವೂ ಇನ್ನು ಹೆಚ್ಚು ದೂರವಿಲ್ಲ.

ನೆಲದಲ್ಲೂ, ನೀರಿನಲ್ಲೂ ಸಂಚರಿಸುವ ಉಭಯಚರ ಬಸ್ಸು ಭಾರತದಲ್ಲೂ ಓಡಾಡಲಿದೆ. ಈ ಸಂಬಂಧ ಸಾರಿಗೆ ಸಚಿವಾಲಯದಿಂದ ಹಸಿರು ನಿಶಾನೆ ದೊರಕಿದ್ದು, ಪ್ರಮುಖವಾಗಿಯೂ ಪ್ರವಾಸೋದ್ಯಮಕ್ಕಾಗಿ ಬಳಕೆ ಮಾಡಲಿದೆ.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ಜಲಾಶಯಗಳನ್ನು ಹೊಂದಿರುವ ಟೂರಿಸ್ಟ್ ಕೇಂದ್ರಗಳಲ್ಲಿ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ನೂತನ ಉಭಯಚರ ಬಸ್ಸಿನ ಯೋಜನೆಯನ್ನು ಹೊರಲಾಗುತ್ತಿದೆ.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ಭಾರತೀಯ ಸರಕಾರದ ಅಧೀನತೆಯಲ್ಲಿರುವ ಜವಹರ್ ಲಾಲ್ ನೆಹ್ರೂ ಪೋರ್ಟ್ ಟ್ರಸ್ಟ್ (ಜೆಎನ್ ಪಿಟಿ) ಮೊದಲ ಉಭಯಚರ ಗಾಡಿಯನ್ನು ತಮ್ಮದಾಗಿಸಿದೆ. ಇದು ಮುಂಬೈನಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಸಂಚರಿಸುವ ಬಗ್ಗೆಯೂ ಮಾಹಿತಿಯಿದೆ.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ಗೋವಾ ತಳಹದಿಯ ಸಂಸ್ಥೆಯು ಇಂತಹ 14 ಬಸ್ಸುಗಳನ್ನು ನಿರ್ಮಿಸಿ ಸಾರಿಗೆ ಸಚಿವಾಲಯಕ್ಕೆ ಹಸ್ತಾಂತರಿಸಲಿದೆ. ಅಲ್ಲದೆ ಸಂಚಾರ ಆರಂಭಕ್ಕಾಗಿ ಅನುಮತಿ ನೀಡುವಂತೆ ಬೇಡಿಕೊಂಡಿದೆ.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ಗಂಟೆಗೆ 40 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಉಭಯಚರ ಬಸ್ಸುಗಳನ್ನು ಸೂರ್ಯಸ್ತಮಾನದ ಬಳಿಕ ಬಳಕೆಗೆ ನಿರ್ಬಂಧ ಹೇರಲಾಗುವುದು.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ರಾಜ್ಯ ಸಾರಿಗೆ ಇಲಾಖೆಯು ಸೂಚಿಸಿದ ಆಯ್ದ ಮಾರ್ಗಗಳಲ್ಲಿ ಮಾತ್ರ ಸಂಚರಿಸಲಿದೆ. ಮುಖ್ಯವಾಗಿಯೂ ಪ್ರವಾಸಿಗರ ಉಲ್ಲಾಸದಾಯಕ ಸಂಚಾರಕ್ಕಾಗಿ ಬಳಕೆ ಮಾಡಲಾಗುವುದು.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ಇನ್ನು ಬಸ್ ಪ್ರಯಾಣ ದರ ಇತ್ಯಾದಿ ಅಂಶಗಳನ್ನು ಆಯಾ ಸ್ಥಳೀಯ ಇಲಾಖೆಯಷ್ಟೇ ನಿರ್ಧರಿಸಿದೆ ಎಂದು ಉನ್ನತ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ಅತ್ತ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಗೋವಾ, ಈಗಾಗಲೇ ನೆಲ ಮತ್ತು ಜಲದಲ್ಲಿ ಸಂಚರಿಸುವ ಬಸ್ಸುಗಳ ಘೋಷಣೆ ಮಾಡಿದೆ. ಆದರೆ ವಾಣಿಜ್ಯ ಬಳಕೆಯು ಇನ್ನಷ್ಟೇ ಆರಂಭವಾಗಬೇಕಿದೆ.

ಭಾರತದಲ್ಲೂ ನನಸಾಗುತ್ತಿದೆ ನೆಲದಲ್ಲೂ, ನೀರಲ್ಲೂ ಸಂಚರಿಸುವ ಬಸ್

ನಮ್ಮ ಕರ್ನಾಟಕಕ್ಕೆ ನೀರಲ್ಲಿ ಮತ್ತು ನೆಲದಲ್ಲಿ ಸಂಚರಿಸುವ ಬಸ್ ಆಗಮನವಾದ್ದಲ್ಲಿ ಹೇಗಿರಬಹುದು? ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

Read more on ಬಸ್ bus
English summary
A Bus That Travels On Water And Land - Now In India
Story first published: Saturday, April 30, 2016, 14:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark