ಅಣ್ಣಾ ಸ್ಕಾರ್ಪಿಯೊ ಹರಾಜು; ಮುಂದಿನ ಕಾರು ಇನ್ನೋವಾ?

By Nagaraja

ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಅಪ್ಪಟ ಗಾಂಧಿವಾದಿ ಅಣ್ಣಾ ಹಜಾರೆ ಅವರು ಬಳಕೆ ಮಾಡುತ್ತಿದ್ದ ಮಹೀಂದ್ರ ಸ್ಕಾರ್ಪಿಯೊ ಕಾರನ್ನು ಹರಾಜು ಮಾಡಲಾಗಿದೆ. ಈಗ ಇದರಿಂದ ಸಂಗ್ರಹವಾದ ಮೊತ್ತದಿಂದ ಹೆಚ್ಚಿನ ಸೌಲಭ್ಯದ ಹೊಸ ಇನ್ನೋವಾ ಕಾರನ್ನು ಖರೀದಿ ಮಾಡಲಿದ್ದಾರೆ.

ಅಷ್ಟಕ್ಕೂ ಅಣ್ಣಾ ಕಾರನ್ನು ಮಾರಾಟ ಮಾಡಿರುವ ಹಿಂದಿನ ಕಾರಣಗಳೇನು? ಖರೀದಿ ಮಾಡಿದವರು ಯಾರು? ಹರಾಜಿನಲ್ಲಿ ಒಟ್ಟು ಎಷ್ಟು ಮೊತ್ತವನ್ನು ಸಂಗ್ರಹಿಸಲಾಗಿತ್ತು? ಇವೆಲ್ಲ ಪ್ರಶ್ನೆಗಳ ಉತ್ತರಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಆರೋಗ್ಯ ಸಮಸ್ಯೆ

ಆರೋಗ್ಯ ಸಮಸ್ಯೆ

77ರ ಹರೆಯದ ಅಣ್ಣಾ ಅವರಿಗೆ ಪದೇ ಪದೇ ಬೆನ್ನು ನೋವು ಕಾಣಿಸಿಕೊಳ್ಳುತ್ತಿದ್ದು, ದೂರ ಪ್ರಯಾಣದ ವೇಳೆ ಸಮಸ್ಯೆ ಇನ್ನಷ್ಟು ಉಲ್ಪಣಗೊಂಡಿದೆ. ಇದರಿಂದಾಗಿ ಸ್ಕಾರ್ಪಿಯೊ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.

ಖರೀದಿ ಮಾಡಿದವರು ಯಾರು?

ಖರೀದಿ ಮಾಡಿದವರು ಯಾರು?

ಇದರಂತೆ ಕಳೆದ ಭಾನುವಾರ (ಮೇ 21, 2015) ತಮ್ಮ ಹುಟ್ಟೂರಾದ ಮಹಾರಾಷ್ಟ್ರ ರಾಲೇಗಾಂವ್ ಸಿದ್ಧಿಯಲ್ಲಿ ಹರಾಜಿಗಿಡಲಾಗಿತ್ತು. ಪ್ರಸ್ತುತ ಕಾರನ್ನು ಅಣ್ಣಾ ಅವರ ನಿಕಟವರ್ತಿ ಹಾಗೂ ಬೆಂಬಲಿಗರಾಗಿರುವ ಅತುಲ್ ಲೋಕಂಡೆ (Lokhande) ಎಂಬವರು ಖರೀದಿಸಿದ್ದಾರೆ.

ಎಷ್ಟು ಮೊತ್ತಕ್ಕೆ ಹರಾಜು?

ಎಷ್ಟು ಮೊತ್ತಕ್ಕೆ ಹರಾಜು?

ಹರಾಜಿನಲ್ಲಿ ಬರೋಬ್ಬರಿ 9.11 ಲಕ್ಷ ರು.ಗಳನ್ನು ಸಂಗ್ರಹಿಸಲಾಗಿದೆ. ಅಹ್ಮೆದ್ ನಗರದ ದೇವ್‌ದೇಥನ್ ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಅತುಲ್ ರಾಲೇಗಾಂವ್ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ.

ಒಟ್ಟು ಎಷ್ಟು ಮಂದಿ ಭಾಗಿ

ಒಟ್ಟು ಎಷ್ಟು ಮಂದಿ ಭಾಗಿ

ಮೂಲಗಳ ಪ್ರಕಾರ ಹರಾಜಿನಲ್ಲಿ ಒಟ್ಟು 14 ಮಂದಿ ಭಾಗವಹಿಸಿದ್ದರು. ಈಗ ಬಿಡ್‌ನಲ್ಲಿ ಅಣ್ಣಾ ಅವರ ಸ್ವಾಮಿ ವಿವೇಕಾನಂದ ಕೃತುದಂತ ನಿಧಿಗೆ ಸೇರಿದ ಕಾರನ್ನು ಗೆಲ್ಲುವಲ್ಲಿ ಅತುಲ್ ಯಶಸ್ವಿಯಾಗಿದ್ದಾರೆ.

ಜನಲೋಕಪಾಲ ಮಸೂದೆ

ಜನಲೋಕಪಾಲ ಮಸೂದೆ

ಜನಲೋಕಪಾಲ ಮಸೂದೆ ರುವಾರಿಯಾಗಿರುವ ಅಣ್ಣಾ ಹಜಾರೆ ಇದೇ ಕಾರಿನಲ್ಲಿ ಸಂಚರಿಸುವ ಮೂಲಕ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ್ದರು. ಅಲ್ಲದೆ 2007 ಹಾಗೂ 2009ರಲ್ಲಿ ಮಹಾರಾಷ್ಟ್ರ ಭ್ರಷ್ಟ ಸಚಿವರ ವಿರುದ್ಧದ ಹೋರಾಟಕ್ಕೂ ಸ್ಕಾರ್ಪಿಯೊ ಬಳಕೆ ಮಾಡಿದ್ದರು. ಈ ಎಲ್ಲದರ ಮೂಲಕ ಅಣ್ಣಾ ಜೊತೆ ಜೊತೆಗೆ ಸ್ಕಾರ್ಪಿಯೊ ಸಹ ಚರಿತ್ರೆಯ ಭಾಗವಾಗಿದೆ.

ಇನ್ನೋವಾ ಖರೀದಿ?

ಇನ್ನೋವಾ ಖರೀದಿ?

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಅಣ್ಣಾ ಅವರು ಸದ್ಯದಲ್ಲೇ ಹೆಚ್ಚು ಸೌಲಭ್ಯದ ಇನ್ನೋವಾ ಕಾರನ್ನು ಖರೀದಿ ಮಾಡಲಿದ್ದಾರೆ. ಈ ಮೂಲಕ ತಮ್ಮ ಮುಂದಿನ ಪಯಣವನ್ನು ಮತ್ತಷ್ಟು ಅನುಕೂಲ ಹಾಗೂ ಆರಾಮದಾಯಕವಾಗಿಸಲಿದ್ದಾರೆ.

Most Read Articles

Kannada
English summary
Anna Hazare's Mahindra Scorpio car Auctioned
Story first published: Thursday, May 21, 2015, 12:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X