ರಸ್ತೆ ಆಯ್ತು ಸಾಗರದಲ್ಲೂ ಆಸ್ಟನ್ ಮಾರ್ಟಿನ್ ಮೋಡಿ

By Nagaraja

ನೀವು ಇದುವರೆಗೆ ಆಸ್ಟನ್ ಮಾರ್ಟಿನ್ ದುಬಾರಿ ಸೂಪರ್ ಹಾಗೂ ಸ್ಪೋರ್ಟ್ಸ್ ಕಾರುಗಳನ್ನು ನೋಡಿರಬಹುದು. ಆದರೆ ಇವೆಲ್ಲದಕ್ಕಿಂತಲೂ ಮಿಗಿಲಾಗಿ ಜಗತ್ತಿನ ಪ್ರತಿಷ್ಥಿತ ಸಂಸ್ಥೆಯಾಗಿರುವ ಆಸ್ಟನ್ ಮಾರ್ಟಿನ್ ಐಷಾರಾಮಿ ಬೋಟ್ ವೊಂದನ್ನು ನಿರ್ಮಿಸಿದ್ದು, ಸಾಗರದಲ್ಲೂ ಮೋಡಿ ಮಾಡಲು ಹೊರಟಿದೆ.

ಜಗತ್ತಿನ ಅತ್ಯುತ್ತಮ ಕಾರು ತಯಾರಕ ಸಂಸ್ಥೆಯಾದ ಆಸ್ಟನ್ ಮಾರ್ಟಿನ್ ಇಂತಹದೊಂದು ಹೆಜ್ಜೆಯಿರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಆಸ್ಟನ್ ಮಾರ್ಟಿನ್ ಎಂಜಿನಿಯರ್ ತಂತ್ರಗಾರಿಕೆ ಹೇಗೆ ವಿಭಿನ್ನವಾಗಿದೆ ಬನ್ನಿ ನೋಡೋಣವೇ...

ವಿನ್ಯಾಸ

ವಿನ್ಯಾಸ

37 ಅಡಿಯ ಈ ಪವರ್ ಬೋಟ್ ಅನ್ನು ಗೇಡಾನ್ ನಲ್ಲಿರುವ ಸಂಸ್ಥೆಯ ಅಧ್ಯಯನ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆಸ್ಟನ್ ಮಾರ್ಟಿನ್ ಡಿಸೈನ್ ನಿರ್ದೇಶಕ ಮರೆಕ್ ರಿಚ್ ಮ್ಯಾನ್ (Marek Reichman) ನೇತೃತ್ವದಲ್ಲಿ ಇದನ್ನು ರಚಿಸಲಾಗಿದೆ.

 ಹಿಂದುಗಡೆ ವಿನ್ಯಾಸ

ಹಿಂದುಗಡೆ ವಿನ್ಯಾಸ

ಆಧುನಿಕ ಆಸ್ಟನ್ ಮಾರ್ಟಿನ್ ಕಾರುಗಳಿಗೆ ಹೋಲಿಕೆಯಾಗುವ ರೀತಿಯಲ್ಲಿ ಹಿಂದುಗಡೆ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಈ ಮುಖಾಂತರ ಆಸ್ಟನ್ ಕಾರು ತಂತ್ರಗಾರಿಕೆಯನ್ನು ಕಾಯ್ದುಕೊಳ್ಳಲಾಗಿದೆ.

ರಚನೆ

ರಚನೆ

ಆಸ್ಟನ್ ಮಾರ್ಟಿನ್ ಎಎಂ37 ನಿರ್ಮಾಣ ಕ್ಷಮತೆ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಬರ್ ಪರಿಕರಗಳ ಬಳಕೆಯನ್ನು ಜಾಸ್ತಿ ಮಾಡಲಾಗಿದೆ. ಇದರಂತೆ ಆರಾಮದಾಯಕತೆ ಹಾಗೂ ನಿರ್ವಹಣೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಮಾದರಿ

ಮಾದರಿ

ಎರಡು ಮಾದರಿಗಳಲ್ಲಿ ಆಸ್ಟನ್ ಮಾರ್ಟಿನ್ ಬೋಟ್ ಲಭ್ಯವಾಗಲಿದೆ. ಅದುವೇ ಎಎಂ 37 ಸ್ಟ್ಯಾಂಡರ್ಡ್ ಹಾಗೂ ಎಎಂ 37 ಎಸ್ ವರ್ಷನ್. ಇವರಡು ಅನುಕ್ರಮವಾಗಿ 92.6 ಹಾಗೂ 111.12 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಬಿಡುಗಡೆ

ಬಿಡುಗಡೆ

ಅಂದ ಹಾಗೆ ಬಹುನಿರೀಕ್ಷಿತ ಆಸ್ಟನ್ ಮಾರ್ಟಿನ್ ಬೋಟ್ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಮೊನಕೊ ಯಾಚ್ಟ್ ಶೋದಲ್ಲಿ ಬಿಡುಗಡೆಯಾಗಲಿದೆ.

ರಸ್ತೆ ಆಯ್ತು ಸಾಗರದಲ್ಲೂ ಆಸ್ಟನ್ ಮಾರ್ಟಿನ್ ಮೋಡಿ

ಒಟ್ಟಿನಲ್ಲಿ ಮುಂಬರುವ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಆಸ್ಟನ್ ಮಾರ್ಟಿನ್ ಕಾರುಗಳಂತೆಯೇ ಬೋಟ್ ಬಳಕೆಯಾಗಲಿದೆಯೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Most Read Articles

Kannada
English summary
Here is a look at what makes this boat not just special, but also an engineering beauty:
Story first published: Tuesday, May 5, 2015, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X