ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ ವೇ- ದಟ್ಟ ಮಂಜಿನಿಂದಾಗಿ ವಿದೇಶಿ ಬೈಕರ್ ದುರ್ಮರಣ

ನೊಯ್ಡಾ ಮತ್ತು ಆಗ್ರಾ ನಡುವಿನ ಸಂಪರ್ಕ ಸೇತುವೆಯಾದ ಯಮುನಾ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಪ್ರಖ್ಯಾತಿಗಿಂತ ಕುಖ್ಯಾತಿ ಗಳಿಸಿದ್ದೆ ಹೆಚ್ಚು. ಯಾಕಪ್ಪ ಹೀಗೆ ಹೇಳ್ತಾ ಇದೀವಿ ಅನ್ಕೊಂಡ್ರಾ? ಮುಂದೆ ಓದಿ ನಿಮಗೇ ಎಲ್ಲಾ ತಿಳಿಯುತ್ತೆ..

By Praveen

ನೊಯ್ಡಾ ಮತ್ತು ಆಗ್ರಾ ನಡುವಿನ ಸಂಪರ್ಕ ಸೇತುವೆಯಾದ ಯಮುನಾ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಪ್ರಖ್ಯಾತಿಗಿಂತ ಕುಖ್ಯಾತಿ ಗಳಿಸಿದ್ದೆ ಹೆಚ್ಚು. ಯಾಕಪ್ಪ ಹೀಗೆ ಹೇಳ್ತಾ ಇದೀವಿ ಅನ್ಕೊಂಡ್ರಾ? ಮುಂದೆ ಓದಿ ನಿಮಗೇ ಎಲ್ಲಾ ತಿಳಿಯುತ್ತೆ..

ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ ವೇ

ಉತ್ತರ ಪ್ರದೇಶದ ಗ್ರೇಟರ್‌ ನೊಯಿಡಾ ಮತ್ತು ಆಗ್ರಾ ನಡುವಣ ಯಮುನಾ ಎಕ್ಸ್‌ಪ್ರೆಸ್‌ ವೇ ರಸ್ತೆಯು ಭಾರೀ ಪ್ರಮಾಣದ ಅಪಘಾತಗಳಿಂದಾಗಿ ಮೃತ್ಯುಕೂಪವಾಗಿ ಪರಿವರ್ತನೆಗೊಂಡಿದ್ದು, ದಿನವೊಂದಕ್ಕೆ ಸರಾಸರಿಯಾಗಿ 2 ರಿಂದ 3 ಅಪಘಾತ ಸಂಭವಿಸುತ್ತಲೇ ಇವೆ.

ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ ವೇ

ನಿನ್ನೇ ಕೂಡಾ ಎರಡು ಪ್ರಮುಖ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ಒಂದರಲ್ಲಿ ದಟ್ಟ ಮಂಜು ಹಿನ್ನೆಲೆ ಆಸ್ಟ್ರೇಲಿಯಾ ಮೂಲದ ಬೈಕರ್ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Recommended Video

Driverless Auto Rickshaw On Indian Highway
ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ ವೇ

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು 35 ವರ್ಷದ ಆ್ಯಂಟಿರೊಡ್ಲ್ ಎಂದು ಗುರುತಿಸಲಾಗಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ ವಿಶ್ವಪರ್ಯಟನೆ ನಿಮಿತ್ತ ಭಾರತಕ್ಕೆ ಬಂದಿದ್ದರ ಬಗ್ಗೆ ಪ್ರಮುಖ ಸುದ್ದಿಮಾಧ್ಯಮಗಳು ವರದಿ ಮಾಡಿವೆ.

ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ ವೇ

ಇನ್ನು ಮುನ್ನ ಆಗ್ರಾದತ್ತ ತೆರಳುತ್ತಿದ್ದ ಆ್ಯಂಟಿರೊಡ್ಲ್ ದಟ್ಟ ಮಂಜಿನಿಂದಾಗಿ ಬೈಕ್ ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲೇ ವೇಗವಾಗಿ ಚಲಿಸುತ್ತಿದ್ದ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ಗ್ರೇಟರ್ ನೋಯ್ಡಾದಲ್ಲಿರುವ ಕೈಲಾಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲೇ ಜೀವ ಬಿಟ್ಟಿದ್ದಾನೆ.

ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ ವೇ

ಇನ್ನು ರೂ.13 ಸಾವಿರ ಕೋಟಿ ವೆಚ್ಚದಲ್ಲಿ 2012ರಂದು ಈ ಪ್ರತಿಷ್ಠಿತ ಹೆದ್ದಾರಿ ಪೂರ್ಣಗೊಂಡಿದ್ದು, ಭಾರತದಲ್ಲಿರುವ ನಿಯಂತ್ರಿತ ಪ್ರವೇಶದ ಅತ್ಯಂತ ಉದ್ದದ ಹೆದ್ದಾರಿ ಎಂಬ ಹೆಗ್ಗಳಿಕೆಯ ಜೊತೆ ಜೊತೆಗೆ ಅಪಘಾತಗಳ ಹಾಟ್ ಸ್ಪಾಟ್ ಎಂಬ ಕುಖ್ಯಾತಿಗೂ ಒಳಗಾಗುತ್ತಿದೆ.

ತಪ್ಪದೇ ಓದಿ-ಕೆಟಿಎಂ ಬೈಕ್ ಸವಾರನ ಜೊತೆ ಪೊಲೀಸರ ಕಿರಿಕ್- ಪ್ರಶ್ನಿದ್ದಕ್ಕೆ ಬಿತ್ತು ಭಾರೀ ದಂಡ..!!

ಮೃತ್ಯುಕೂಪವಾದ ಯಮುನಾ ಎಕ್ಸ್‌ಪ್ರೆಸ್‌ ವೇ

ಇದಕ್ಕೆ ಕಾರಣ ಯಮುನಾ ಎಕ್ಸ್‌ಪ್ರೆಸ್ ನಿರ್ಮಾಣದ ದಿನದಿಂದ ಇದುವರೆಗೆ 4500 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 550ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದ್ರೆ ನಾವು ನಂಬಲೇಬೇಕು...

Picture credit: Cartoq

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on national highway accident
English summary
Read in Kannada about Australian biker on a Royal Enfield dies in a fog crash on the Delhi-Agra expressway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X