ಬಾಜಾ 2016; ದೇಶದ ಪ್ರತಿಭಾವಂತ ಎಂಜಿನಿಯರ್ ಗಳ ಹುಡುಕಾಟ

Written By:

ದೇಶದ ಪ್ರತಿಭಾವಂತ ಎಂಜಿನಿಯರ್ ಗಳ ಹುಡುಕಾಟಕ್ಕಾಗಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ 9ನೇ ಆವೃತ್ತಿಯ ಬಾಜಾ ಎಸ್ಎಇ ಇಂಡಿಯಾ 2016, ಮಧ್ಯಪ್ರದೇಶದ ಇಂಧೋರ್ ನಲ್ಲಿ ಯಶಸ್ವಿಯಾಗಿ ನೆರವೇರಿದೆ.

ಸೊಸೈಟಿ ಆಫ್ ಆಟೋಮೋಟಿವ್ ಎಂಜಿನಿಯರ್ ಆಯೋಜನೆ ಮಾಡಿರುವ ಈ ಅಂತರ ಕಾಲೇಜು ಎಡ್ಯೂರನ್ಸ್ ರಾಲಿಗೆ ಮಹೀಂದ್ರ ರೈಸ್ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಇದೀಗ ದೇಶದ್ಯಾಂತ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಕಾರಣವಾಗಿದೆ.

ದೇಶದ ಎಂಜಿನಿಯರ್ ಗಳಿಗೆ ತಮ್ಮ ನೈಜ ಜೀವನದಲ್ಲಿ ಕೌಶಲ್ಯಗಳನ್ನು ಪ್ರದರ್ಶಿಸಲು ಬಾಜಾ ಎಸ್ ಎಇ ಇಂಡಿಯಾ 2016 ಅವಕಾಶವನ್ನು ಒದಗಿಸುತ್ತದೆ. ಈ ಬಾರಿ 390ಕ್ಕೂ ಹೆಚ್ಚು ಮಂದಿ ದಾಖಲಾತಿಯನ್ನು ಮಾಡಿದ್ದರು.

ಇ-ಬಾಜಾದಲ್ಲಿ ಕಳೆದ ವರ್ಷ 18 ತಂಡಗಳು ಭಾಗವಹಿಸಿದ್ದರೆ ಈ ಬಾರಿ 32 ತಂಡಗಳು ಪಾಲ್ಗೊಂಡಿದ್ದವು. ಅಲ್ಲದೆ ನಾವೀನ್ಯ ತಂತ್ರಗಾರಿಕೆಯ ಅವಿಷ್ಕಾರದಲ್ಲಿ ಎಂಜಿನಿಯರ್ ಗಳು ತೋರುತ್ತಿರುವ ಆಸಕ್ತಿಯು ನಿಜಕ್ಕೂ ಪ್ರಶಂಸನೀಯವಾಗಿದೆ.

ಪರ್ಯಾಯ ಶಕ್ತಿ ಮೂಲದ ಹುಡುಕಾಟ ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವುದರತ್ತ ಒಂದು ದೊಡ್ಡ ಹೆಜ್ಜೆ ಇದಾಗಿದೆ. ಅಂದ ಹಾಗೆ ಈ ಬಾರಿಯ ಅಭಿಯಾನವು ಇಂಧೋರ್ ಎನ್ ಟ್ರಿಪ್ ಘಟಕದಲ್ಲಿ ಆಯೋಜಿಸಲಾಗಿತ್ತು.

ಬಾಜಾ 2016: ಸಮಗ್ರ ವಿಜೇತರು

ಪ್ರಥಮ: ಕಾಲೇಜ್ ಆಫ್ ಎಂಜಿನಿಯರಿಂಗ್, ಪುಣೆ - ಟೀಮ್ ನೆಮಿಸಿಸ್ ರೇಸಿಂಗ್

ದ್ವಿತೀಯ: ಅಲಾರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್, ಪುಣೆ - ಸ್ಟಾಲಿನ್ಸ್ ರೇಸಿಂಗ್

ತೃತೀಯ: ಎಸ್‌ಆರ್ ಎಂ ಯುನಿವರ್ಸಿಟಿ, ಚೆನ್ನೈ - ದಿ ಕಾನ್‌ರೊಡ್ಸ್ ಆಫ್ ರೋಡ್ ರೇಸಿಂಗ್

English summary
2016 Baja SAE India: Pune's College Of Engineering Claims Top Spot
Story first published: Tuesday, February 23, 2016, 17:51 [IST]
Please Wait while comments are loading...

Latest Photos

X