ಪ್ರೀತಿಸಿದವಳನ್ನು ಉಳಿಸಿಕೊಳ್ಳಲು ಈ ಯುವಕ ಮಾಡಿದ್ದು ಏನ್ ಗೊತ್ತಾ?

Written By:

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಜೋರಾಗಿಯೇ ನಡೆದಿದ್ದವು. ಆದ್ರೆ ಒಂದೇ ಮಾದರಿಯಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳನೊಬ್ಬ ಮಾತ್ರ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುವ ಮೂಲಕ ರಾಜಾರೋಷವಾಗಿ ಕಳ್ಳತನ ಮಾಡುತ್ತಲೇ ಇದ್ದಾ. ಆದ್ರೆ ಇದೀಗ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಕಳ್ಳ ಸಿಕ್ಕಿಬಿದ್ದಿದ್ದು, ಕಳ್ಳತನದ ಹಿಂದಿನ ಅಸಲಿ ಕಥೆ ಎಲ್ಲರನ್ನು ಚಕಿತಗೊಳಿಸಿದೆ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಈ ಚಿತ್ರದಲ್ಲಿ ಕಾಣುತ್ತಿರುವ ಇವನ ಹೆಸರು ಮನೋಹರ್ ಅಂತಾ ಹುಟ್ಟಿಬೆಳದಿದ್ದು ಆಂಧ್ರಪ್ರದೇಶದ ಆನಂದನಪುರ. ಆದ್ರೆ ಕಳ್ಳತನಕ್ಕೆ ಆಯ್ದುಕೊಂಡಿದ್ದು ಮಾತ್ರ ಸಿಲಿಕಾನ್ ಸಿಟಿ ಬೆಂಗಳೂರು.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಕಳೆದ ಕೆಲ ದಿನಗಳ ಹಿಂದೆ ಆನಂದಪುರದಿಂದ ಬೆಂಗಳೂರಿಗೆ ಬಂದಿದ್ದ ಮನೋಹರ್, ನೇರವಾಗಿ ಬೈಕ್ ಕಳ್ಳತನಗಳಲ್ಲಿ ಭಾಗಿಯಾಗುವ ಮೂಲಕ ಲಕ್ಷ ಲಕ್ಷ ಸಂಪಾದನೆಯ ಯೋಜನೆ ರೂಪಿಸಿದ್ದಾ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಹೀಗೆ ಬೆಂಗಳೂರಿಗೆ ಬಂದ ಕೆಲ ದಿನಗಳಲ್ಲೇ ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ 50ಕ್ಕೂ ಹೆಚ್ಚು ಬೈಕ್ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ, ಜೊತೆಗೆ ಪ್ರಮುಖ ಬೈಕ್ ಕಳ್ಳತನ ಗ್ಯಾಂಗ್‌ಗಳೊಂದಿಗೆ ಕೈ ಜೋಡಿಸಿದ್ದ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಕೇವಲ 2 ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಟು ಬೈಕ್ ಕಳ್ಳತನಗಳ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮನೋಹರ್, ಸದ್ಯ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದು ಕಂಬಿ ಎಣಿಸುತ್ತಿದ್ದಾನೆ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಕಳ್ಳತನ ಹಿಂದಿದೆ ರೊಮ್ಯಾಂಟಿಕ್ ಲವ್ ಸ್ಟೋರಿ

ಹೌದು...ಕಳೆದ 2 ತಿಂಗಳಿನಿಂದ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ಮನೋಹರ್ ಸಿಕ್ಕಿಬಿದ್ದಿದ್ದು, ಕಳ್ಳತನ ಹಿಂದಿನ ಅಸಲಿ ಸ್ಟೋರಿ ಬಿಚ್ಚಿಟ್ಟಿದ್ದಾನೆ. ಅದು ಪ್ರೀತಿಸಿ ಹುಡುಗಿಯ ಜೀವ ಉಳಿಸಿಕೊಳ್ಳಲು ನಾನು ಕಳ್ಳತನ ಹಾದಿ ಹಿಡಿದ್ದಾಗಿ ಬಾಯಿಬಿಟ್ಟಿದ್ದಾನೆ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಅಷ್ಟಕ್ಕೂ ಬೈಕ್ ಕಳ್ಳತನ ಮಾಡುವಂತದ್ದು ಮನೋಹರ್ ಎನಾಗಿತ್ತು ಅನ್ನೋದೇ ಇಂಟ್ರಸ್ಟಿಂಗ್. ಯಾಕೇಂದ್ರೆ ಮನೋಹರ್ ಪ್ರೀತಿಸಿದ ಯುವತಿ ಸದ್ಯ ಆಂಧ್ರದಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದು, ಚಿಕಿತ್ಸೆಗಾಗಿ ಲಕ್ಷ ಲಕ್ಷ ಅವಶ್ಯಕತೆ ಇದೆ. ಹೀಗಾಗಿ ದೊಡ್ಡ ಮೊತ್ತ ಹೊಂದಿಸಲು ಮುಂದಾದ ಮನೋಹರ್‌ಗೆ ಕಂಡಿದ್ದೆ ಬೈಕ್ ಕಳ್ಳತನದ ಹಾದಿ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಸದ್ಯ ಮಾನಸಿಕ ಖಾಯಲೆಯಿಂದ ಬಳಲುತ್ತಿರುವ ಮನೋಹರ್ ಪ್ರೀತಿಸಿದ ಯುವತಿ ಹಾಗೂ ಮನೋಹರ್ ಇಬ್ಬರು ಗಾರ್ಮೆಂಟ್ ಫ್ಯಾಕ್ಟರಿಯ ಒಂದರ ಉದ್ಯೋಗಿಗಳು. ಅಲ್ಲಿಯೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ 6 ತಿಂಗಳ ಹಿಂದಷ್ಟೇ ವಿವಾಹ ಕೂಡಾ ಆಗಿದ್ದರು.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಆದ್ರೆ ದುರ್ದೈವ ಎನ್ನುವಂತೆ ಮನೋಹರ್ ಪತ್ನಿ ಮಾಸಿಕ ಖಾಯಲೆಗೆ ತುತ್ತಾಗಿದ್ದು, ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಬೈಕ್ ಕಳ್ಳತನ ಹಾದಿ ತುಳಿದಿದ್ದಾನೆ. ಆದ್ರೆ ಪ್ರೀತಿಸಿದವನ್ನು ಉಳಿಸಿಕೊಳ್ಳುಲು ಬೇರೆಯವರ ಬೈಕ್ ಕಳ್ಳತನ ಮಾಡುವುದು ಎಷ್ಟು ಸರಿ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಕಳ್ಳ ಸಿಕ್ಕಿದ್ದು ಹೇಗೆ?

ಕಳೆದ ವಾರವಷ್ಟೇ ಬೈಕ್ ಒಂದನ್ನು ಕಳ್ಳತನ ಮಾಡುವಾಗ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಪೊಲೀಸರು, ಮನೋಹರ್‌ನನ್ನು ಸುಲಭವಾಗಿ ಪತ್ತೆಹಚ್ಚಿದ್ದಾರೆ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಈಗಾಗಲೇ ಮನೋಹರ್ ಕಳ್ಳತನ ಮಾಡಿರುವ ಹಲವು ಬೈಕ್‌ಗಳನ್ನು ವಶಕ್ಕೆ ಪಡೆದಿರುವ ಬೆಂಗಳೂರು ಪೊಲೀಸರು, ಪ್ರಕರಣ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುವುದನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿ ತನಿಖೆ ಮುಂದುವರಿಸಿದ್ದಾರೆ.

ಸಿಕ್ಕಿಬಿದ್ದ ಈ ಬೈಕ್ ಕಳ್ಳನ ಹಿಂದಿದೆ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ..!!

ಆದ್ರೆ ಪ್ರೀತಿಸಿದ ಹುಡುಗಿ ಕಷ್ಟದಲ್ಲಿದ್ದಾಗ ದುಡ್ಡು ಹೊಂದಿಸಲು ಮುಂದಾಗಿದ್ದ ಮನೋಹರ್‌ ಪ್ರಯತ್ನ ಸರಿಯೇ ಆದ್ರೂ, ದುಡ್ಡಿಗಾಗಿ ಕಳ್ಳತನ ಮಾಡಿದ್ದು ಮಾತ್ರ ಕಾನೂನು ಪ್ರಕಾರ ತಪ್ಪು. ಜೊತೆಗೆ ಅವನು ಮಾಡಿದ ತಪ್ಪಿಗೆ ಸರಿಯಾಗಿ ಶಿಕ್ಷೆ ಆಗಲೇಬೇಕೇಂಬದು ಬೈಕ್ ಕಳೆದುಕೊಂಡವರ ಆಗ್ರಹವಾಗಿದೆ.

Read more on ಕಳ್ಳತನ crime
English summary
The bike thief who was forced to go to sleep in the police for several months was caught by police.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark