ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ತನ್ನ ಗ್ರಾಹಕರಿಗೆ ಔಟ್ಲೆಟ್ ನಲ್ಲಿ ಉತ್ತಮ ಅನುಭವವನ್ನು ನೀಡಲು ಆಟೋಮ್ಯಾಟಿಕ್ ಆಗಿ ಇಂಧನ ತುಂಬುವ ತಂತ್ರಜ್ಞಾನ ಯುಫಿಲ್ (UFill) ಅನ್ನು ಆರಂಭಿಸಿದೆ. ಈ ತಂತ್ರಜ್ಞಾನದಿಂದಾಗಿ ಝೀರೊ ಅಥವಾ ಫೈನಲ್ ರೀಡಿಂಗ್ ನೋಡುವ ಅಗತ್ಯ ಹಾಗೂ ಮಾನವರ ಹಸ್ತಕ್ಷೇಪದ ಅಗತ್ಯವಿಲ್ಲವೆಂದು ಬಿಪಿಸಿಎಲ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಯುಫಿಲ್ ಕಾರ್ಯವನ್ನು ತ್ವರಿತ, ಸುರಕ್ಷಿತ ಹಾಗೂ ಸ್ಮಾರ್ಟ್ ಆಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ತಂತ್ರಜ್ಞಾನವನ್ನು 65 ನಗರಗಳಲ್ಲಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ದೇಶದಾದ್ಯಂತ ಪ್ರಾರಂಭಿಸಲಾಗುವುದು. ಯುಫಿಲ್ ತಂತ್ರಜ್ಞಾನಕ್ಕೆ ಯಾವುದೇ ಆಪ್ ಡೌನ್ ಲೋಡ್ ಅಗತ್ಯವಿಲ್ಲ. ಈ ತಂತ್ರಜ್ಞಾನವನ್ನು ಯಾವುದೇ ಯುಪಿಐ ಆಪ್ ನಿಂದ ಬಳಸಬಹುದು.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಗ್ರಾಹಕರು ತಮ್ಮ ಫೋನ್‌ನಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿರುವ ಗೂಗಲ್ ಪೇ, ಪೇಟಿಎಂ, ಫೋನ್ ಪೇ ಸೇರಿದಂತೆ ಯಾವುದೇ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಈ ತಂತ್ರಜ್ಞಾನವನ್ನು ಬಳಸಬಹುದು. ಈ ತಂತ್ರಜ್ಞಾನವು ಎಸ್‌ಎಂಎಸ್ ಮೂಲಕ ನೈಜ ಸಮಯದಲ್ಲಿ ಕ್ಯೂಆರ್ ಹಾಗೂ ವೋಚರ್ ಕೋಡ್‌ಗಳನ್ನು ಒದಗಿಸುತ್ತದೆ. ಯುಫಿಲ್ ಹೊಂದಿರುವ ಎಲ್ಲಾ ಬಿಪಿಸಿಎಲ್ ಇಂಧನ ಕೇಂದ್ರಗಳಲ್ಲಿ ಇದನ್ನು ಸ್ವೀಕರಿಸಲಾಗುತ್ತದೆ.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹೇಳಿರುವ ಮೊತ್ತವನ್ನು ಮುಂಗಡವಾಗಿ ಪಾವತಿಸಿದರೆ, ಉಳಿದ ಮೊತ್ತವನ್ನು ತಕ್ಷಣವೇ ಗ್ರಾಹಕರ ಬ್ಯಾಂಕ್ ಖಾತೆಗೆ ಹಿಂತಿರುಗಿಸಲಾಗುತ್ತದೆ. ಇದನ್ನು 48 ಗಂಟೆಗಳ ಒಳಗೆ ಬಳಸದಿದ್ದರೆ, ಡೆಬಿಟ್ ಮಾಡಲಾದ ಮುಂಗಡ ಹಣವನ್ನು ಬ್ಯಾಂಕ್ ಖಾತೆಗೆ ಆಟೋಮ್ಯಾಟಿಕ್ ಆಗಿ ಮರು ಪಾವತಿಸಲಾಗುತ್ತದೆ.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಈ ತಂತ್ರಜ್ಞಾನವು ಗ್ರಾಹಕರಿಗೆ ಇಂಧನ ತುಂಬುವ ನಿಯಂತ್ರಣದೊಂದಿಗೆ ಟಚ್ ಲೆಸ್ ಪ್ರೀ ಪೇಯ್ಡ್ ಪರಿಹಾರವನ್ನು ಒದಗಿಸುತ್ತದೆ. ವಿತರಣಾ ಘಟಕವು ಆಟೋಮ್ಯಾಟಿಕ್ ಆಗಿ ಇಂಧನ ಬೆಲೆಯನ್ನು ಗ್ರಾಹಕರು ಮುಂಗಡವಾಗಿ ಪಾವತಿಸುತ್ತದೆ. ಇದರಿಂದ ಮಾರಾಟದ ಸ್ಥಳದಲ್ಲಿ ಯಾವುದೇ ಹಸ್ತಚಾಲಿತ ಹಸ್ತಕ್ಷೇಪದ ಅಗತ್ಯವಿರುವುದಿಲ್ಲ. ಇದರಿಂದ ಇಂಧನ ತುಂಬುವ ಮೊದಲು ಹಾಗೂ ನಂತರ ಝೀರೊ ಪರೀಕ್ಷಿಸುವ ಅಗತ್ಯವಿಲ್ಲ.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಇಂಧನ ವಿತರಿಸುವ ಘಟಕವು ಸ್ವಯಂಚಾಲಿತವಾಗಿ ಇಂಧನದ ನಿಖರವಾದ ಮೊತ್ತವನ್ನು ನೀಡುತ್ತದೆ. ಈ ತಂತ್ರಜ್ಞಾನವು ಕಂಪನಿಯ ಕಾರ್ಯನಿರ್ವಾಹಕರು, ಡೀಲರ್‌ಗಳು, ಮ್ಯಾನೇಜರ್‌ಗಳು ಹಾಗೂ ಡ್ರೈವ್‌ವೇ ಸೇಲ್ಸ್‌ಮೆನ್‌ಗಳು ಸೇರಿದಂತೆ ಹಲವರಲ್ಲಿ ಪರಿಣಾಮಕಾರಿಯಾಗಲಿದೆ. ಯುಫಿಲ್ ನ ಪ್ರಮುಖ ಉದ್ದೇಶವು ಇಂಧನ ಮಳಿಗೆಗಳಲ್ಲಿ ಗ್ರಾಹಕರ ತಿರುಗಾಟದ ಸಮಯವನ್ನು ತಪ್ಪಿಸುವುದು ಹಾಗೂ ವಹಿವಾಟಿನ ಪಾರದರ್ಶಕತೆಯನ್ನು ಹೆಚ್ಚಿಸುವುದು.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಈ ಮೂಲಕ ಗ್ರಾಹಕರ ರಿಟೇಲ್ ಅನುಭವವನ್ನು ಹೆಚ್ಚಿಸುವುದು ಎಂದು ಬಿಪಿಸಿಎಲ್ ಕಂಪನಿ ಮಾಹಿತಿ ನೀಡಿದೆ. ಈ ಬಗ್ಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಒಮ್ಮೆ ಇಂಧನ ಭರ್ತಿ ಮಾಡಿದ ನಂತರ, ಪಾವತಿ ಮಾಡಲು ಕಾಯಬೇಕಾಗಿಲ್ಲ. ಬಿಪಿಸಿಎಲ್ ನ ಯುಫಿಲ್ ಪ್ರಿಪೇಯ್ಡ್ ಕೋಡ್‌ನೊಂದಿಗೆ ವಾಹನ ಚಲಾಯಿಸಿ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಎಂದು ಟ್ವೀಟ್ ಮಾಡಿದೆ.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ದೇಶದ ಎರಡನೇ ಅತಿ ದೊಡ್ಡ ಪೆಟ್ರೋಲಿಯಂ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲ ಸೌಕರ್ಯವನ್ನು ಸ್ಥಾಪಿಸಲು ತನ್ನ ಪೆಟ್ರೋಲ್ ಬಂಕ್ ಗಳನ್ನು ಬಳಸಲಿದೆ. ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವುದಕ್ಕಾಗಿ ರೂ. 1 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಕೆಲ ದಿನಗಳ ಹಿಂದಷ್ಟೇ ಘೋಷಿಸಿತ್ತು.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಬಿಪಿಸಿಎಲ್ ದೇಶದಾದ್ಯಂತ 19,000ಕ್ಕೂ ಹೆಚ್ಚು ರಿಟೇಲ್ ಮಾರಾಟ ಮಳಿಗೆಗಳನ್ನು ಹೊಂದಿದೆ. ಈ ರಿಟೇಲ್ ಮಳಿಗೆಗಳಲ್ಲಿ ಭವಿಷ್ಯದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ, ಫ್ಲೆಕ್ಸ್ ಇಂಧನ ಹಾಗೂ ಹೈಡ್ರೋಜನ್ ಗಳನ್ನು ನೀಡುವುದರ ಜೊತೆಗೆ ಸುಮಾರು 7,000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಕಂಪನಿ ನಿರ್ಧರಿಸಿದೆ. ಬಿಪಿಸಿಎಲ್ ಮುಂದಿನ ವರ್ಷಗಳಲ್ಲಿ ಸಮಗ್ರ ಹೂಡಿಕೆ ಯೋಜನೆಗಳನ್ನು ಮಾಡಲಿದೆ.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಬಿಪಿಸಿಎಲ್ ಕಂಪನಿಯು ಗ್ರೂಪ್ ಲೆವೆಲ್ ನಲ್ಲಿ ರೂ. 1 ಲಕ್ಷ ಕೋಟಿಗಳಷ್ಟು ಹೂಡಿಕೆ ಮಾಡಲಿದೆ. ಇದು ಮುಖ್ಯವಾಗಿ ಪೆಟ್ರೋಕೆಮಿಕಲ್ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಸಂಸ್ಕರಣಾ ಸಾಮರ್ಥ್ಯವನ್ನು ಸುಧಾರಿಸಲು ರೂ. 30,000 ಕೋಟಿ, ಗ್ಯಾಸ್ ಪೂರೈಕೆಗಾಗಿ ರೂ. 20,000 ಕೋಟಿ, ಗ್ಯಾಸ್ ಪರಿಶೋಧನೆ ಹಾಗೂ ಉತ್ಪಾದನೆಗಾಗಿ ರೂ. 18,000 ಕೋಟಿ ಮತ್ತು ಮಾರ್ಕೆಟಿಂಗ್ ಮೂಲ ಸೌಕರ್ಯಕ್ಕಾಗಿ ರೂ. 18,000 ಕೋಟಿ ವೆಚ್ಚ ಮಾಡುವ ಯೋಜನೆಗಳನ್ನು ಒಳಗೊಂಡಿದೆ.

ಇಂಧನ ತುಂಬಿಸುವ ಕಾರ್ಯವನ್ನು ಸುಲಭಗೊಳಿಸಲಿದೆ ಬಿಪಿಸಿಎಲ್'ನ ಈ ಹೊಸ ತಂತ್ರಜ್ಞಾನ

ಬಿಪಿಸಿಎಲ್ ಸದ್ಯಕ್ಕೆ ದೇಶದ ಪ್ರಮುಖ ನಗರಗಳ 44 ಪೆಟ್ರೋಲ್ ಬಂಕ್ ಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆಯನ್ನು 1,000 ಕ್ಕೆ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಬಿಪಿಸಿಎಲ್ ಕಂಪನಿಯು ಕೊಚ್ಚಿ ಹಾಗೂ ಲಕ್ನೋ ನಗರಗಳಲ್ಲಿ ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ಪ್ರಯೋಗಗಳನ್ನು ಆರಂಭಿಸಿದೆ. ಬಿಪಿಸಿಎಲ್ ಭಾರತದಲ್ಲಿ ಇವಿ ಅಭಿವೃದ್ಧಿಯ ಮೇಲೆ ಕಣ್ಣಿಟ್ಟಿದ್ದು, ದೇಶದಲ್ಲಿ ದ್ವಿಚಕ್ರ ವಾಹನಗಳು ಹಾಗೂ ತ್ರಿಚಕ್ರ ವಾಹನಗಳು ಎಲೆಕ್ಟ್ರಿಕ್'ಗೆ ಬದಲಾಗುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಬಿಪಿಸಿಎಲ್ ಅಧ್ಯಕ್ಷರು ಹೇಳಿದ್ದಾರೆ.

Most Read Articles

Kannada
Read more on ಇಂಧನ fuel
English summary
Bpcl launches ufill automated technology to make fuel filling easier details
Story first published: Tuesday, October 19, 2021, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X