ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಫಿಯೆಟ್‌ 500, ಚಿಕ್ಕ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರ್ ಅನ್ನು ಮನೆಯಂತಹ ಸೌಲಭ್ಯಗಳನ್ನು ಹೊಂದಿರುವ ವಾಹನವಾಗಿ ಮಾರ್ಪಡಿಸಲಾಗಿದೆ. ಇಂಗ್ಲೆಂಡಿನ ಯುವತಿಯೊಬ್ಬಳು ಈ ಕಾರ್ ಅನ್ನು ಮಾರ್ಪಾಡು ಮಾಡಿದ್ದಾಳೆ ಎಂಬುದು ಗಮನಾರ್ಹ ಸಂಗತಿ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಇದು ವಿಶ್ವದ ಅತಿ ಚಿಕ್ಕ ಕ್ಯಾಂಪರ್ ಮಾದರಿಯ ವಾಹನವಾಗಿದೆ. ಹನ್ನಾ ಹ್ಯೂಸ್ ಎಂಬ ಯುವತಿ ಫಿಯೆಟ್ 500 ಕಾರನ್ನು ಮನೆಯನ್ನಾಗಿ ಮಾರ್ಪಡಿಸಿದ್ದಾಳೆ. ಮಾರ್ಪಡಿನ ನಂತರ ಈ ಕಾರು ಕ್ಯಾಂಪರ್ ಮಾದರಿಯ ವಾಹನದಂತೆ ಬದಲಾಗಿದೆ. ಈ ಕಾರು ಮನೆಯಲ್ಲಿರುವಂತಹ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಕ್ಯಾಂಪರ್ ವಾಹನವನ್ನು ದೂರದ ಪ್ರಯಾಣಕ್ಕಾಗಿ ಹಾಗೂ ಚಾರಣಕ್ಕಾಗಿ ಬಳಸಲಾಗುತ್ತದೆ. ಹನ್ನಾ ಹ್ಯೂಸ್ ಕ್ಯಾಂಪರ್ ಮಾದರಿಯ ವಾಹನವನ್ನು ಖರೀದಿಸಲು ಬಯಸಿದ್ದಳು. ಆದರೆ ಆಕೆಯ ಹಣಕಾಸಿನ ಪರಿಸ್ಥಿತಿ ಇದಕ್ಕೆ ಅವಕಾಶ ನೀಡಲಿಲ್ಲ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಈ ಕಾರಣಕ್ಕೆ ಆಕೆ ತನ್ನ ಫಿಯೆಟ್ 500 ಕಾರ್ ಅನ್ನು ಕ್ಯಾಂಪರ್ ವಾಹನದಂತೆ ಮಾರ್ಪಡಿಸಿದ್ದಾಳೆ. ಈ ಮೂಲಕ ಆಕೆ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ತನ್ನ ಈ ಕನಸಿನ ಕ್ಯಾಂಪರ್ ವಾಹನದಲ್ಲಿ ತನ್ನನ್ನು ಹೊರತುಪಡಿಸಿ ಬೇರೆ ಯಾರಿಗೂ ಸ್ಥಳವಿಲ್ಲ ಎಂದು ಆಕೆ ತಿಳಿಸಿದ್ದಾಳೆ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ತನ್ನ ಬಾಯ್ ಫ್ರೆಂಡಿಗೂ ಸಹ ಈ ವಾಹನದಲ್ಲಿ ಸ್ಥಳವಿಲ್ಲವೆಂದು ಆಕೆ ಹೇಳಿದ್ದಾಳೆ. ಹನ್ನಾ ಹ್ಯೂಸ್ ತನ್ನ ಫಿಯೆಟ್ 500 ಕಾರ್ ಅನ್ನು ಕ್ಯಾಂಪರ್ ಆಗಿ ಪರಿವರ್ತಿಸಲು 150 ಪೌಂಡ್ ಹಣ ಖರ್ಚು ಮಾಡಿದ್ದಾಳೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ. 15,483 ಖರ್ಚು ಮಾಡಿದ್ದಾಳೆ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಇಷ್ಟು ಕಡಿಮೆ ವೆಚ್ಚದಲ್ಲಿ ಹನ್ನಾ ಹ್ಯೂಸ್'ಳ ಫಿಯೆಟ್ 500 ಕಾರು ಉತ್ತಮ ಕ್ಯಾಂಪರ್ ವಾಹನವಾಗಿ ಬದಲಾಗಿದೆ. ಆಕೆ ಈ ಕಾರಿನಲ್ಲಿ ಆರಾಮದಾಯಕವಾದ ಹಾಸಿಗೆ, ವಸ್ತುಗಳನ್ನು ಸಂಗ್ರಹಿಸಲು ಶೇಖರಣಾ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದ್ದಾಳೆ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡಿನಲ್ಲಿ ಕ್ಯಾಂಪರ್ ಮಾದರಿಯ ವಾಹನಗಳ ಸಂಸ್ಕೃತಿ ಹೆಚ್ಚುತ್ತಿದೆ. ಬಹುತೇಕ ಜನರು ಕ್ಯಾಂಪರ್ ಮಾದರಿಯ ವಾಹನಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದಾರೆ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಯುವಕರು ಕ್ಯಾಂಪರ್ ವಾಹನಗಳಿಗಾಗಿ 3 ಸಾವಿರ ಪೌಂಡ್'ಗಳಿಂದ 10 ಸಾವಿರ ಪೌಂಡ್'ಗಳವರೆಗೆ ಖರ್ಚು ಮಾಡುತ್ತಿದ್ದಾರೆ. ಸಾಮಾನ್ಯ ವಾಹನಗಳಿಗಿಂತ ಕ್ಯಾಂಪರ್ ವಾಹನಗಳಿಗೆ ಹೆಚ್ಚು ಖರ್ಚು ಮಾಡುವವರೂ ಇದ್ದಾರೆ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಇಂತಹ ಸನ್ನಿವೇಶದಲ್ಲಿ ಹನ್ನಾ ಕೇವಲ 150 ಪೌಂಡ್ ಖರ್ಚು ಮಾಡಿ ಚಿಕ್ಕ ಕ್ಯಾಂಪರ್ ವಾಹನವನ್ನು ಅಭಿವೃದ್ಧಿಪಡಿಸಿದ್ದಾಳೆ. ಹನ್ನಾ ತನ್ನ ವಿರಾಮದ ಸಮಯದಲ್ಲಿ ಫಿಯೆಟ್ 500 ಕಾರ್ ಅನ್ನು ಚಿಕ್ಕ ಕ್ಯಾಂಪರ್ ಆಗಿ ಪರಿವರ್ತಿಸಿದ್ದಾಳೆ.

ಮಿನಿ ಕ್ಯಾಂಪರ್ ವಾಹನವಾಗಿ ಬದಲಾದ ಫಿಯೆಟ್ 500 ಕಾರು

ಈ ಕ್ಯಾಂಪರ್ ಅನ್ನು ಅಭಿವೃದ್ಧಿ ಪಡಿಸಲು ಆಕೆ ನಾಲ್ಕು ವಾರ ತೆಗೆದುಕೊಂಡಿದ್ದಾಳೆ. ಕ್ಯಾಂಪರ್ ತಯಾರಾದ ನಂತರ ಆಕೆ ಇಂಗ್ಲೆಂಡಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ವೇಲ್ಸ್'ಗೆ ಪ್ರವಾಸಕ್ಕೆ ತೆರಳಿದ್ದಾಳೆ.

Most Read Articles

Kannada
English summary
British lady converts her Fiat 500 car into camper van. Read in Kannada.
Story first published: Thursday, July 29, 2021, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X