ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್‍ಆರ್‍ಟಿಸಿ ; ಅಕ್ಕ ತಮ್ಮ ಸ್ಥಳದಲ್ಲಿಯೇ ಸಾವು

Written By:

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರ ಬಳಿ ಸ್ಕೂಟಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಅಕ್ಕ-ತಮ್ಮ ಇಬ್ಬರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ.

ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್‍ಆರ್‍ಟಿಸಿ ; ಅಕ್ಕ ತಮ್ಮ ಸ್ಥಳದಲ್ಲಿಯೇ ಸಾವು

ಬೆಳಗಿನ ಸಮಯದಲ್ಲಿ ಭಾಗ್ಯಮ್ಮ (35 ವರ್ಷ)ಅವರನ್ನು 30 ವರ್ಷದ ಮುರುಳಿಯವರು ಕೆಲಸಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತ ಭಾಗ್ಯಮ್ಮ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್‍ಆರ್‍ಟಿಸಿ ; ಅಕ್ಕ ತಮ್ಮ ಸ್ಥಳದಲ್ಲಿಯೇ ಸಾವು

ತನ್ನ ಸಹೋದರಿಯಾದ ಭಾಗ್ಯಮ್ಮ ಅವರನ್ನು ಎಂದಿನಂತೆ ತಮ್ಮ ಸ್ಕೂಟಿಯಲ್ಲಿ ವಿಜಯಪುರ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಮುರಳಿ ತೆರಳುತ್ತಿದ್ದರು, ಆದರೆ ನೆನ್ನೆ ಬೆಳಿಗ್ಗೆ ವಿಧಿಯಾಟವೇ ಬೇರೆಯಾಗಿತ್ತು ಎಂಬುದು ಸತ್ಯ ಸಂಗತಿಯಾಗಿದೆ.

Recommended Video - Watch Now!
[Kannada] Bajaj Pulsar NS200 ABS Launched In India - DriveSpark
ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್‍ಆರ್‍ಟಿಸಿ ; ಅಕ್ಕ ತಮ್ಮ ಸ್ಥಳದಲ್ಲಿಯೇ ಸಾವು

ಡ್ರಾಪ್ ಮಾಡುವ ವೇಳೆ ಎದುರಿನಿಂದ ಅತಿವೇಗವಾಗಿ ಬಂದ ಬಸ್, ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್‍ಆರ್‍ಟಿಸಿ ; ಅಕ್ಕ ತಮ್ಮ ಸ್ಥಳದಲ್ಲಿಯೇ ಸಾವು

ಕೆಎಸ್‌ಆರ್‌ಟಿಸಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಂಪೂರ್ಣ ಬಸ್‌ನ ಕೆಳಭಾಗಕ್ಕೆ ತೂರಿಕೊಂಡಿದೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ಗ್ರಾಮಸ್ಥರು ಕೋಲಾರ-ವಿಜಯಪುರ-ಚಿಕ್ಕಬಳ್ಳಾಪುರ ಮಾರ್ಗದ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಸ್ಕೂಟಿಗೆ ಡಿಕ್ಕಿ ಹೊಡೆದ ಕೆಎಸ್‍ಆರ್‍ಟಿಸಿ ; ಅಕ್ಕ ತಮ್ಮ ಸ್ಥಳದಲ್ಲಿಯೇ ಸಾವು

ಘಟನೆ ನೆಡೆದ ತಕ್ಷಣ ಬಸ್ ಚಾಲಕ ಪರಾರಿಯಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನೆಡೆಸಲು ಸಫಲವಾಗಿದ್ದಾರೆ ಎನ್ನಲಾಗಿದೆ.

Read more on accident ಅಪಘಾತ
English summary
Brother and siter dies in an accident near chikkaballapura district
Story first published: Monday, November 6, 2017, 11:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark